Belagavi News: ವಿದ್ಯಾರ್ಥಿಗಳೇ ಗಮನಿಸಿ, ಹಾಸ್ಟೆಲ್ ಸೌಲಭ್ಯಕ್ಕೆ ಈಗಲೇ ಅರ್ಜಿ ಸಲ್ಲಿಸಿ

ಪೋಷಕರೇ ನಿಮ್ಮ ಮಕ್ಕಳ ವಸತಿ ವ್ಯವಸ್ಥೆ ಬಗ್ಗೆ ತಲೆಬಿಸಿಯಲ್ಲಿದ್ದೀರಾ? ಹಾಗಾದರೆ ಈ ಆ ಯೋಚನೆ ಬಿಟ್ಟುಬಿಡಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ವಿದ್ಯಾರ್ಥಿಗಳೇ ನಿಮ್ಮ ವಿದ್ಯಾಭ್ಯಾಸಕ್ಕೆ ಉತ್ತಮ ವಸತಿ ಸೌಲಭ್ಯ ಸಿಗುತ್ತಿಲ್ಲವೇ? ಎಲ್ಲಿ ವಸತಿ ಮಾಡಿ ಶಾಲೆ ಕಾಲೇಜುಗಳಿಗೆ ಹೋಗುವುದು ಎಂಬ ಯೋಚನೆಯಲ್ಲಿದ್ದೀರಾ? ಪೋಷಕರೇ ನಿಮ್ಮ ಮಕ್ಕಳ ವಸತಿ ವ್ಯವಸ್ಥೆ ಬಗ್ಗೆ ತಲೆಬಿಸಿಯಲ್ಲಿದ್ದೀರಾ? ಹಾಗಾದರೆ ಈ ಆ ಯೋಚನೆ ಬಿಟ್ಟುಬಿಡಿ. ಬೆಳಗಾವಿ ಜಿಲ್ಲೆಯ (Belagavi News) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ (Student Hostel Facility) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಕಡ್ಡಾಯವಾಗಿ 2022-23ನೇ ಸಾಲಿನಲ್ಲಿ ಪ್ರವೇಶ ಪಡೆದಿರಬೇಕು.

    ಅರ್ಜಿ ಸಲ್ಲಿಕೆ ಬೇಕಾದ ದಾಖಲೆಗಳು
    ವಿದ್ಯಾರ್ಥಿಯ ಪೋಷಕರ ಆದಾಯ ಮಿತಿ ಪ್ರವರ್ಗ-1 ಎಸ್.ಸಿ ಮತ್ತು ಎಸ್.ಟಿ 1 ಲಕ್ಷ ರೂ. ಪ್ರವರ್ಗ 2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ ವರ್ಗ ಹಾಗೂ ಇತರೆ 44,500 ರೂಪಾಯಿಗಳು ಮಿತಿ ಹೊಂದಿರಬೇಕು.

    ಅರ್ಜಿ ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು?
    ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಆನ್ ಲೈನ್ ಮೂಲಕ ಜೂನ್ 30 ರೊಳಗೆ ಅರ್ಜಿ ಸಲ್ಲಿಸಬೇಕು. ವೆಬ್​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

    ತಾಲೂಕುವಾರು ಅರ್ಜಿ ಸಲ್ಲಿಸಬಹುದು
    ತಾಲೂಕುವಾರ ವಿದ್ಯಾರ್ಥಿ ನಿಲಯ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ , ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಇಲಾಖೆಯ  ವೆಬ್​ಸೈಟ್ ನೋಡಬಹುದು.

    ಇದನ್ನೂ ಓದಿ: Camera Home: ಹೇಗಿದೆ ಗೊತ್ತಾ ಕ್ಯಾಮರಾ ಮನೆ!? ಸೂಪರ್ ಫೋಟೊ ನೋಡಿ

    ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ ಹೀಗೆ ಮಾಡಿ
    ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ತಾಂತ್ರಿಕ ತೊಂದರೆ ಆದಲ್ಲಿ  ಇ ಮೇಲ್ ವಿಳಾಸಕ್ಕೆ ದೂರು ಸಲ್ಲಿಸಬಹುದು.

    ಇ ಮೇಲ್ ವಿಳಾಸ ಹೀಗಿದೆ:  bcwd.hostel@karnataka.govmin

    ಅಥವಾ  ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ:  8050370006

    ಇದನ್ನೂ ಓದಿ: Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ

    ಅಲ್ಲದೇ ಜಿಲ್ಲಾ, ತಾಲೂಕು ಅಧಿಕಾರಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
    Published by:guruganesh bhat
    First published: