ಬೆಳಗಾವಿ ನಗರದ ಕ್ಲಬ್ ರೋಡ್ ಸಮೀಪ ಇರುವ ಹ್ಯೂಮ್ ಪಾರ್ಕ್ನಲ್ಲಿ ಜುಲೈ 1 ರಿಂದ ಜುಲೈ 3 ರವರೆಗೆ ತೋಟಗಾರಿಕಾ ಇಲಾಖೆಯಿಂದ (Horticulture Department) ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಸ್ಯ ಸಂತೆ ಮತ್ತು ತೋಟಗಾರಿಕಾ ಮೇಳದಲ್ಲಿ ಉತ್ತಮ ಗುಣಮಟ್ಟದ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ವಿವಿಧ ಬಗೆಯ ಹಣ್ಣಿನ ಗಿಡಗಳು, ಅಣಬೆ ಪ್ರಯೋಗಾಲದಲ್ಲಿ ಉತ್ಪಾದನೆ ಮಾಡುತ್ತಿರುವ ಅಣಬೆ ಬೀಜ, ಅಣಬೆ ಬೆಳೆ ಮತ್ತು ಜೇನು ಉತ್ಪನ್ನಗಳು, ಜೈವಿಕ ಕೇಂದ್ರ, ಬೆಳಗಾವಿಯಲ್ಲಿ (Belagavi News) ಉತ್ಪಾದಿಸಿದ ವಿವಿಧ ಜೈವಿಕ ಗೊಬ್ಬರಗಳನ್ನು ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಏರೆ ಜಲ, ಎರೆಹುಳು ಗೊಬ್ಬರವನ್ನು ಇಲಾಖೆ ದರದಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮಾರಾಟಕ್ಕೆ ಲಭ್ಯವಿರುತ್ತವೆ.
ತೋಟಗಾರಿಕೆ ಅಭಿಯಾನ ಹಾಗೂ ಸಸ್ಯ ಸಂತೆ ಅಭಿಯಾನದಡಿ ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ವಿವಿಧ ಗಿಡಗಳು ದೊರೆಯಲಿವೆ.
ದೊರೆಯಲಿರುವ ಸಸ್ಯಗಳ ವಿವರ ಇಲ್ಲಿದೆ ಮಾವು, ಪೇರಲ, ಚಿಕ್ಕು, ಕರಿಬೇವು, ಲಿಂಬೆ, ನೇರಳೆ, ತೆಂಗು, ಇನ್ನಿತರ ಕಸಿ, ಸಸಿಗಳು, ಅಲಂಕಾರಿಕ ಸಸಿಗಳು, ಹೂವಿನ ಗಿಡಗಳು, ತರಕಾರಿ ಸಸಿಗಳನ್ನು ಇಲಾಖೆಯ ವತಿಯಿಂದ ಯೋಗ್ಯ ದರದಲ್ಲಿ ದೊರೆಯಲಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಕಾರ್ಯಕ್ರಮವನ್ನುಉದ್ಘಾಟಿಸಲಿದ್ದಾರೆ.
ಸಸ್ಯ ಸಂತೆ ನಡೆಯಲಿರುವ ಸ್ಥಳ: ಹ್ಯೂಮ್ ಪಾರ್ಕ್ ದಿನಾಂಕ: ಜುಲೈ 1 ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ: 08312451422
ಈ 9 ಸ್ಥಳಗಳಲ್ಲೂ ಲಭ್ಯವಿರಲಿವೆ
ಜಿಲ್ಲೆಯಲ್ಲಿ ಒಟ್ಟು 24 ತೋಟಗಾರಿಕೆ ಕ್ಷೇತ್ರಗಳ ಪೈಕಿ ಮುಖ್ಯವಾಗಿ 9 ಕಡೆ ಸಸ್ಯಾಭಿವೃದ್ಧಿ ಪಡಿಸಿದ್ದು ಶೇಡಗಳ್ಳಿ ತೋಟಗಾರಿಕೆ ಕ್ಷೇತ್ರ ಖಾನಾಪೂರ, ಹಿಡಕಲ್ ತೋಟಗಾರಿಕೆ ಕ್ಷೇತ್ರ ಹುಕ್ಕೇರಿ, ಧೂಪಧಾಳ ತೋಟಗಾರಿಕೆ ಕ್ಷೇತ್ರ ಗೋಕಾಕ, ಕಿತ್ತೂರ ತೋಟಗಾರಿಕೆ ಕ್ಷೇತ್ರ ಕಿತ್ತೂರ, ರಾಮದುರ್ಗ ಕಛೇರಿ ಸಸ್ಯಾಗಾರ ರಾಮದುರ್ಗ, ಮುನವಳ್ಳಿ, ಯಕ್ಕೇರಿ ಮತ್ತು ಉಗರಗೋಳ ತೋಟಗಾರಿಕೆ ಕ್ಷೇತ್ರಗಳು ಸವದತ್ತಿ ಹಾಗೂ ಹ್ಯೂಮ್ ಪಾರ್ಕ್ ಬೆಳಗಾವಿಗಳಲ್ಲಿ ಸಾರ್ವಜನಿಕರಿಗೆ, ರೈತರಿಗೆಂದೇ ಸುಮಾರು 2 ಲಕ್ಷ ವಿವಿಧ ಬಗೆಯ ಸಸಿ ಸಸಿಗಳು ಲಭ್ಯವಿರುತ್ತವೆ.
ಸಸ್ಯ ಸಂತೆಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕವಿರುವ ಕಸಿ, ಸಸಿಗಳನ್ನು ಆಯಾ ತಾಲ್ಲೂಕಿನ ತೋಟಗಾರಿಕೆ ಕ್ಷೇತ್ರಗಳಲ್ಲಿ ಬೇಟಿ ನೀಡಿ ಸದುಪಯೋಗ ಪಡಿಸಿಕೊಳ್ಳಲು ತೋಟಗಾರಿಕಾ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಬೆಳಗಾವಿ ಕಛೇರಿಗೆ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 08312451422 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕಾ ಉಪನಿರ್ದೇಶಕರು ತಿಳಿಸಿದ್ದಾರೆ.