Belagavi: ಜನರ ಜೊತೆಗೆ ಬೆರೆಯುವ ಗುಣ ನಿಮ್ಮಲ್ಲಿದೆಯೇ? ಇಲ್ಲಿದೆ ಒಳ್ಳೆಯ ಚಾನ್ಸ್!

ನಿಮಗೂ ಯುವ ಪರಿವರ್ತಕ ಹುದ್ದೆಗೆ ಅರ್ಜಿ ಹಾಕಬೇಕೇ? ಹೇಗೆ ಅರ್ಜಿ ಹಾಕುವುದು ಎಂದು ಯೋಚನೆ ಮಾಡುತ್ತಿದ್ದೀರಾ? ಚಿಂತೆ ಬಿಡಿ. ಇಲ್ಲಿದೆ ನೋಡಿ ಹಂತ ಹಂತದ ವಿವರ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಳಗಾವಿ: ಊರಲ್ಲೇ ಇದ್ದು ಕೆಲಸ ಮಾಡಬೇಕು ಎಂಬ ಅದಮ್ಯ ಇಚ್ಛೆ ಹೊಂದಿದ್ದೀರಾ? ಬೆಂಗಳೂರು ಅಥವಾ ಇನ್ಯಾವುದೋ ಸಿಟಿಗೆ ಹೋಗುವುದಕ್ಕಿಂತ ಸ್ವಂತ ಊರಲ್ಲೇ ಏನಾದರೂ ಮಾಡಬೇಕು, ಸಾಧನೆ ಮಾಡಿ ತೋರಿಸಬೇಕು ಎಂಬ ಆಸೆ ನಿಮ್ಮದಾಗಿದ್ದರೆ ನಿಮಗೆ ಎಂದೇ ಒಂದೊಳ್ಳೆ ಅವಕಾಶವೊಂದು ಹುಡುಕಿ ಬಂದಿದೆ.  ಬೆಂಗಳೂರಿನ ನಿಮ್ಹಾನ್ಸ್ (NIMHANS Bengaluru) ಜನ ಆರೋಗ್ಯ ಸಂಸ್ಥೆಯ ಎಪಿಡೀಮಿಯಾಲಜಿ ವಿಭಾಗ ಹಾಗೂ ಕರ್ನಾಟಕ ಸರ್ಕಾರದ (Karnataka Government)  ಸಹಭಾಗಿತ್ವದಲ್ಲಿ ನೀವು ಕೆಲಸ ಮಾಡಬಹುದು! ಯುವಜನರನ್ನು ತಲುಪಿ ಯುವಜನರಿಂದಲೇ ನಡೆಸಿ, ಯುವಜನರನ್ನು ಸಬಲೀಕರಣಗೊಳಿಸಿ (Youth Development) ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಪೂರಕಗೊಳಿಸುವುದು ಈ ಯೋಜನೆ ಉದ್ದೇಶವಾಗಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ ಯುವ ಪರಿವರ್ತಕರ ಹುದ್ದೆಗೆ ಗೌರವಧನ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

  ರಾಜ್ಯ ಸರ್ಕಾರದ ಅನುದಾನಿತ ಯುವಜನ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ದಿ ಮತ್ತು ಅನುಷ್ಠಾನ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕರ್ನಾಟಕ ಯುವನೀತಿ-2022 ರ ಅಡಿ ನಿಮ್ಮ ಊರಲ್ಲೇ ಇದ್ದು ನೀವು ಕೆಲಸ ಮಾಡಬಹುದಾಗಿದೆ.

  ಅಗತ್ಯವಿರುವ ಅರ್ಹತೆಗಳೆ ಏನು?
  ಅಭ್ಯರ್ಥಿಯು ಯಾವುದಾದರೂ ಸರಿ, ಒಂದು ಪದವಿಯನ್ನು ಹೊಂದಿರಬೇಕು. 18 ರಿಂದ 35 ವರ್ಷದ ಒಳಗಿನವರಾಗಿರಬೇಕು. ಸ್ಥಳೀಯ ಭಾಷೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು ಅವಶ್ಯಕ. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು.

  ಎಲ್ಲರ ಜೊತೆ ಬೆರೆತು ಕೆಲಸ ಮಾಡ್ತೀರಾ? ಇಲ್ಲಿದೆ ಅವಕಾಶ
  ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು. ಸಮುದಾಯದಲ್ಲಿ ಯುವಜನರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ಸಡೆಸಲು ಅರ್ಹರಾಗಿರಬೇಕು. ಸಮುದಾಯ ಅಥವಾ ಜನರ ಜೊತೆ ಬೆರೆತು ಕೆಲಸ ಮಾಡುವ ಇಚ್ಛೆ ಹೊಂದಿರುವವರು ಈ ಕೆಲಸಕ್ಕೆ ಉತ್ತಮವಾಗಿ ಸೂಟ್ ಆಗುತ್ತಾರೆ.

  ಎಲ್ಲೆಲ್ಲಿ ಖಾಲಿ ಇದೆ ಯುವ ಪರಿವರ್ತಕ ಹುದ್ದೆ?
  ಗೋಕಾಕ, ಸವದತ್ತಿ, ಕಾಗವಾಡ, ಮೂಡಲಗಿ, ಅಥಣಿ, ಬೈಲಹೂಂಗಲ, ಖಾನಾಪೂರ, ಕಿತ್ತೂರು ತಾಲೂಕಿಗೆ ಒಬ್ಬರಂತೆ ಯುವ ಪರಿವರ್ತಕ ಹುದ್ದೆಗೆ ಆಯ್ಕೆ ಮಾಡಲಾಗುವುದು. ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು. 

  ಇದನ್ನೂ ಓದಿ:Belagavi Farmers Alert: ಬೆಳಗಾವಿ ರೈತರೇ, ರಸಗೊಬ್ಬರ ಬಳಕೆ ಬಗ್ಗೆ ಮಹತ್ವದ ಸೂಚನೆ ತಿಳಿಯಿರಿ

  ಅರ್ಜಿ ಹಾಕುವುದು ಹೇಗೆ?
  ನಿಮಗೂ ಯುವ ಪರಿವರ್ತಕ ಹುದ್ದೆಗೆ ಅರ್ಜಿ ಹಾಕಬೇಕೇ? ಹೇಗೆ ಅರ್ಜಿ ಹಾಕುವುದು ಎಂದು ಯೋಚನೆ ಮಾಡುತ್ತಿದ್ದೀರಾ? ಚಿಂತೆ ಬಿಡಿ. ಇಲ್ಲಿದೆ ನೋಡಿ ಹಂತ ಹಂತದ ವಿವರ.

  ಮೂಲ ದಾಖಲಾತಿಗಳನ್ನು ಜೂನ್ 17ರ ಸಂಜೆ 5 ಗಂಟೆ ಒಳಗಾಗಿ ಅಂಚೆ ಮುಖಾಂತರ ಅಥವಾ ಖುದ್ದಾಗಿ ಈ ವಿಳಾಸಕ್ಕೆ ನಿಮ್ಮ ಅರ್ಜಿಗಳನ್ನು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸ್ಪಂದನ ಕೇಂದ್ರಕ್ಕೆ ಸಲ್ಲಿಸಬೇಕು. 

  ವಾಟ್ಸ್​ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಿ!
  ಅರ್ಜಿ ಸಲ್ಲಿಸಲು ಅದಕ್ಕಿಂತ ಸುಲಭ ವಿಧಾನವೂ ಇದೆ . 9741581256 ಈ ಸಂಖ್ಯೆಗೆ ವಾಟ್ಸ್​ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 0831- 2474101

  ಅಥವಾ ಯುವ ಸಮಾಲೋಚಕ ಬಾಳಯ್ಯಾ ಮಠಪತಿ: 9741581256

  ವೇಂಕೂಭಾ (ಕ್ಷೇತ್ರ ಸಂಪರ್ಕಾಧಿಕಾರಿ) : 9611069973

  ಇದನ್ನೂ ಓದಿ: Minority Loans: ಸರ್ಕಾರದ ಈ ಸಾಲ-ಸಹಾಯಧನ ಸೌಲಭ್ಯ ನಿಮಗೆ ಸಿಗಲಿದೆಯೇ? ಈಗಲೇ ಬಳಸಿಕೊಳ್ಳಿ!

  ನಿಮ್ಮೂರಲ್ಲೇ ಉಳಿದುಕೊಂಡು ಸಮಾಜಕ್ಕೂ ಸೇವೆ ಸಲ್ಲಿಸಿ ಉತ್ತಮ ಉದ್ಯೋಗ ಪಡೆಯುವ ಅವಕಾಶವಿದು. ಮತ್ತೇಕೆ ತಡ? ಈಗಲೇ ಅರ್ಜಿ ಸಲ್ಲಿಸಿ, ಆಲ್ ದಿ ಬೆಸ್ಟ್!
  Published by:guruganesh bhat
  First published: