Belagavi News: ಸ್ವ ಸಹಾಯ ಗುಂಪುಗಳಿಗೆ ಹಣಕಾಸು ನೆರವು; ಬೆಳಗಾವಿಯಲ್ಲಿ ಹೀಗೆ ಅರ್ಜಿ ಸಲ್ಲಿಸಿ

ಸ್ವ ಸಹಾಯ ಗುಂಪುಗಳು ತಮ್ಮ ಸಂಘಗಳ ಅಭಿವೃದ್ಧಿಗಾಗಿ ಆರ್ಥಿಕ ನೆರವಿಗಾಗಿ ಸರಕಾರದ ಯೋಜನೆಯೊಂದರಿಂದ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕೂಡಲೇ ಆಸಕ್ತರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಳಗಾವಿ: ಸ್ವ ಸಹಾಯ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ಹಣಕಾಸಿನ ನೆರವು ನೀಡಲು ಸರಕಾರವು ಮುಂದಾಗಿದೆ. ಯಾವುದೇ ಮಹಿಳಾ ಅಥವಾ ಪುರುಷ ಸದಸ್ಯರುಗಳುಳ್ಳ ಸ್ವ ಸಹಾಯ ಸಂಘಗಳು (Self Help Groups) ಧನ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. 2022-23 ನೇ ಸಾಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಸ್ವ ಸಹಾಯ ಗುಂಪುಗಳ ಸಾಮಾಜಿಕ ಕ್ರೋಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ ಬೆಳಗಾವಿಯ (Belagavi News) ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಅಗತ್ಯವಿದೆ? ಹೇಗೆ ಅರ್ಜಿ ಸಲ್ಲಿಸಬಹುದು? ಎಲ್ಲ ವಿವರ ಇಲ್ಲಿದೆ. 

  ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
  1. ಮಹಿಳಾ ಹಾಗೂ ಪುರುಷ ಸ್ವ ಸಹಾಯ ಗುಂಪುಗಳ ಪ್ರತಿಯೊಂದು ಮಹಿಳಾ ಸ್ವ - ಸಹಾಯ ಗುಂಪು 10-20 ಜನ ಸದಸ್ಯರುಗಳನ್ನು ಒಳಗೊಂಡಿರಬೇಕು.

  2. ವಿಕಲಚೇತನ ಪುರುಷರ ಸ್ವ-ಸಹಾಯ ಸಂಘಗಳನ್ನು ಹಾಗೂ ದುರ್ಬಲ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಮುಖ್ಯವಾಗಿ ಚಿಂದಿ ಆರಿಸುವುದು, ರಿಕ್ಷಾ ಎಳೆಯುವವರು, ನೈರ್ಮಲ್ಯ ಕೆಲಸಗಾರರು ಇತ್ಯಾದಿಗಳನ್ನೊಳಗೊಂಡ ಪುರುಷ ಸ್ವ-ಸಹಾಯ ಸಂಘಗಳನ್ನು ರಚಿಸಬಹುದಾಗಿರುತ್ತದೆ,‌ ಅರ್ಜಿ ಸಲ್ಲಿಕೆದಾರರು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ರಹವಾಸಿಯಾಗಿರಬೇಕು.

  3. ಹಣಕಾಸಿನ ಸೌಲಭ್ಯವನ್ನು ಪಡೆಯಲು ಸ್ವ-ಸಹಾಯ ಗುಂಪಿನವರು ಬಿ.ಪಿ.ಎಲ್ ರೇಷನ್ ಕಾರ್ಡ್ ಹೊಂದಿರಬೇಕು.

  4. ವಾರ್ಷಿಕ ಆದಾಯ ಮಿತಿ 1,20,000 ರೂಪಾಯಿ ಮೀರಬಾರದು.

  5. ಅರ್ಜಿ ಸಲ್ಲಿಸುವವರು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ರಹವಾಸಿಯಾಗಿರಬೇಕು.

  ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲಾತಿಗಳು

  1. ವಾರ್ಷಿಕ ಆದಾಯ ಪ್ರಮಾಣ ಪತ್ರ

  2. ಜಾತಿ ಪ್ರಮಾಣ ಪತ್ರ

  3. ದೃಢೀಕೃತ ಪ್ರಮಾಣ ಪತ್ರ

  4. ರಹವಾಸಿ ದಾಖಲೆಗಾಗಿ ರೇಷನ್ ಕಾರ್ಡ್

  5. ಆಧಾರ ಕಾರ್ಡ್

  6. ಚುನಾವಣೆ ಗುರುತಿನ ಚೀಟಿ ಸಲ್ಲಿಸುವುದು ಹಾಗೂ ಗುಂಪಿನ ಅರ್ಜಿ ಸಲ್ಲಿಸಬೇಕು.

  ಇದನ್ನೂ ಓದಿ: Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ

  ಹಣಕಾಸಿನ ನೆರವು
  ಈ ಯೋಜನೆಯಡಿಯಲ್ಲಿ 160 ಸ್ವ- ಸಹಾಯ ಗುಂಪುಗಳಿಗೆ ಒಂದು ಬಾರಿಗೆ 10 ಸಾವಿರ ಆವರ್ತಕ ನಿಧಿ ಸೌಲಭ್ಯವನ್ನು ನೀಡಲಾಗುವುದು.

  ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ
  ಆಸಕ್ತಿವುಳ್ಳವರು ಜುಲೈ 31 ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಮಹಾನಗರ ಪಾಲಿಕೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು.

  ಇದನ್ನೂ ಓದಿ: Vijayapura Jaggery Tea: ಕುಡಿದೋನೆ ಬಲ್ಲ ವಿಜಯಪುರ ಬೆಲ್ಲದ ಚಹಾದ ಸ್ವಾದ! ವಿಡಿಯೋ ನೋಡಿ

  ಹೆಚ್ಚಿನ ಮಾಹಿತಿಗಾಗಿ
  ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿ ವೇಳೆಯಲ್ಲಿ ‘ಡೇ- ನಲ್ಕ್ ಶಾಖೆ‘ ಇಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಮಹಾನಗರ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತರು ತಿಳಿಸಿದ್ದಾರೆ.
  Published by:guruganesh bhat
  First published: