Kittur Rani Chennamma Zoo: ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಹುಲಿ ಸಫಾರಿ! ವಿಡಿಯೋ ನೋಡಿ

X
ಬೆಳಗಾವಿಯಲ್ಲೂ ಇದೆ ಮೃಗಾಲಯ

"ಬೆಳಗಾವಿಯಲ್ಲೂ ಇದೆ ಮೃಗಾಲಯ"

ಬೆಳಗಾವಿಯಲ್ಲಿರುವ ರಾಣಿ ಚೆನ್ನಮ್ಮ ಮೃಗಾಲಯವು ಹಲವು ವನ್ಯಜೀವಿಗಳನ್ನು ಹೊಂದಿವೆ. ಕುಟುಂಬ ಸಮೇತರಾಗಿ ವಾರಾಂತ್ಯದಲ್ಲಿ ಕಾಲ ಕಳೆಯೋದಕ್ಕೆ ಕುಂದಾನಗರಿಯ ಈ ಝೂ ಹೆಚ್ಚು ಹಿತವೆನಿಸಲಿದೆ.

  • Share this:

ಬೆಳಗಾವಿ : ಝೂ ಅಂದಾಗ ಎಲ್ಲರ ಮನಸ್ಸಲ್ಲೂ ಮೈಸೂರು ನೆನಪಾಗುವುದು ಸಹಜ. ಆದರೆ ಕುಂದಾನಗರಿಯ ಬೆಳಗಾವಿಯ (Belagavi News) ಜನತೆಗೆ ಇದೀಗ ತಮ್ಮ ಊರಲ್ಲೇ ಝೂ ಕಣ್ತುಂಬಿಕೊಳ್ಳಬಹುದಾಗಿದೆ. ಬೆಳಗಾವಿಯಲ್ಲಿಯೇ ಈಚೆಗೆ ಪ್ರಾರಂಭವಾದ ಝೂನಲ್ಲಿ ಮೈಸೂರಿನ ಝೂನಲ್ಲಿ ನೋಡುವ ಎಲ್ಲ ಪ್ರಾಣಿ, ಪಕ್ಷಿಗಳನ್ನು ನೋಡಬಹುದಾಗಿದೆ.ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಾಣಿ ಚನ್ನಮ್ಮ ಮೃಗಾಲಯವಿದೆ. ಬೆಳಗಾವಿ ಜಿಲ್ಲಾ ಅರಣ್ಯ ಇಲಾಖೆಯ ಹಾಗೂ ಸ್ಥಳೀಯ ಸಂಸ್ಥೆಗಳ ಸಹಾಯದಿಂದ ನಿರ್ಮಾಣವಾಗಿರುವ ಮೃಗಾಲಯದಲ್ಲಿ (Kittur Rani Chennamma Zoo) ಪ್ರಮುಖವಾಗಿ ಹುಲಿ ಸಫಾರಿ, ಸಿಂಹಗಳು, ಚಿರತೆಗಳು, ಮೊಸಳೆಗಳು ಇಲ್ಲಿನ ಜನರನ್ನು ಆಕರ್ಷಿಸುತ್ತಿವೆ.


ವಿಶಾಲವಾದ ಸ್ಥಳದಲ್ಲಿ ನಿರ್ಮಾಣವಾದ ರಾಣಿ ಚನ್ನಮ್ಮ ಮೃಗಾಲಯವು ಬೆಳಗಾವಿ ನಗರದಿಂದ ಕೇವಲ 13 ಕಿ.ಮಿ ದೂರದಲ್ಲಿದೆ. ಬೆಳಗಾವಿಯಿಂದ ಹುಬ್ಬಳ್ಳಿ-ಪುಣೆ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸುಮಾರು 13 ಕಿ.ಮಿ ಸಾಗಿದಾಗ ನಗರದಿಂದ ಹೊರಡುವಾಗ ಬಲಗಡೆಯಲ್ಲಿ ರಾಣಿ ಚನ್ನಮ್ಮ ಮೃಗಾಲಯವಿದೆ. ಪ್ರಾರಂಭದಲ್ಲಿ ರಾಣಿ ಚನ್ನಮ್ಮ ಕೋಟೆಯಂತೆ ಕೆಂಪು ಕಲ್ಲುಗಳಿಂದ ಸುತ್ತಲೂ ಆಕರ್ಷಕ ಗೋಡೆ ನಿರ್ಮಿಸಿಲಾಗಿದೆ.


ಒಳ್ಳೆಯ ಪಾರ್ಕಿಂಗ್ ವ್ಯವಸ್ಥೆ
ಮೃಗಾಲಯವು ವಿಶಾಲವಾದ ಭೂಮಿ ಹೊಂದಿರುವುದರಿಂದ ಇಲ್ಲಿ ಒಳ್ಳೆಯ ಪಾರ್ಕಿಂಗ್ ವ್ಯವಸ್ಥೆಯಿಂದ ದ್ವಿಚಕ್ರ ವಾಹನ, ಕಾರುಗಳು, ಮಿನಿ ಬಸ್ ಗಳಿಂದ ಹಿಡಿದು ಬಸ್ ಗಳು ಬಂದರೂ ಸಹಿತ ಇಲ್ಲಿ ಪಾರ್ಕಿಂಗ್ ಮಾಡಲು ಸಾಕಷ್ಟು ಸ್ಥಳಾವಕಾಶ ಒದಗಿಸಲಾಗಿದೆ.


ಇದನ್ನೂ ಓದಿ: Vijayapura Jaggery Tea: ಕುಡಿದೋನೆ ಬಲ್ಲ ವಿಜಯಪುರ ಬೆಲ್ಲದ ಚಹಾದ ಸ್ವಾದ! ವಿಡಿಯೋ ನೋಡಿ

ಆಕರ್ಷಕ ಹುಲಿ ಸಫಾರಿ
ಕಳೆದ ಫೆಬ್ರವರಿಯಿಂದ ಹುಲಿ ಸಫಾರಿ ಪ್ರಾರಂಭಿಸಲಾಗಿದೆ.‌ ಮೂರು ಹುಲಿಗಳನ್ನು ಮೈಸೂರು ಮೃಗಾಲಯದಲ್ಲಿ ಎರವಲಾಗಿ ಪಡೆದು ಇಲ್ಲಿ ಸಫಾರಿಗೆಂದು ಬಿಡಲಾಗಿದೆ. ಅಲ್ಲದೇ ಎರಡು ಸಿಂಹಗಳು, 4 ಚಿರತೆಗಳು ಸೇರಿ ಅನೇಕ ವನ್ಯಜೀವಿಗಳಿವೆ. ಇದು ಮೃಗಾಲಯದ ಆಕರ್ಷಣೆಯು ಹೆಚ್ಚಿಸಿಕೊಳ್ಳುವಂತಾಗಿತು. ಅಲ್ಲದೇ ಮೊಸಳೆ, ನಾನಾ ಪ್ರಕಾರದ ಆಮೆಗಳು, ನಾನಾ ಜಾತಿ ಗಿಳಿಗಳು,‌ ಪಕ್ಷಿಗಳು, ಜಿಂಕೆಗಳು, ಸಾರಂಗಗಳು, ನಾನಾ ಬಗೆಯ ಸೇರಿದಂತೆ ಹತ್ತು ಹಲವು ಜಾತಿಯ ವನ್ಯಜೀವಿಗಳಿವೆ.


Kittur Rani Chennamma Zoo
ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ

ವಾರಾಂತ್ಯ ಕಳೆಯಲು ಸೂಕ್ತ ಸ್ಥಳ
ಕುಟುಂಬ ಸಮೇತ ವಾರಾಂತ್ಯ ಕಳೆಯಲು ಯೋಜನೆ ರೂಪಿಸುತ್ತಿದ್ದರೇ, ಭೂತರಾಮನಹಟ್ಟಿ ಗ್ರಾಮದಲ್ಲಿರುವ ಮೃಗಾಲಯಕ್ಕೆ ಭೇಟಿ ನೀಡಬಹುದು. ಇದೊಂದು ಅದ್ಬುತ ಸ್ಥಳವಾಗಿದ್ದೂ, ಇಲ್ಲಿಯೇ ಕುಟುಂಬ ಸಮೇತವಾಗಿ ಕಾಲ ಕಳೆಯಲು ಉತ್ತಮ ಸ್ಥಳವಾಗಿದೆ. ಕುಟುಂಬಸ್ಥರೆಲ್ಲರೂ ಕುಳಿತುಕೊಂಡು ಊಟ ತಿಂಡಿ ಮಾಡಲು ಪ್ರತ್ಯೇಕ ಸ್ಥಳಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೇ ಮಕ್ಕಳಿಗಾಗಿಯೇ ಜೋಕಾಳಿ, ಜಾರುಬಂಡೆಯಂತಹ ಆಟದ ಸಲಕರಣೆಗಳನ್ನು ಇಡಲಾಗಿದ್ದು, ಮಕ್ಕಳು ಮುಕ್ತವಾಗಿ ಆಟವಾಡಬಹುದಾಗಿದೆ.


ವರದಿ: ಪ್ರಶಾಂತ ಮಲಗಾವಿ, ಬೆಳಗಾವಿ

top videos
    First published: