World's Cheapest Water Filter: ಈ ವಾಟರ್ ಫಿಲ್ಟರ್ ಬೆಲೆ 30 ರೂ ಮಾತ್ರ! ಜಗತ್ತಿನ ಅತಿ ಕಡಿಮೆ ಬೆಲೆಯ ಫಿಲ್ಟರ್ ತಯಾರಿಸಿದ ಬೆಳಗಾವಿಯ ಸಂಶೋಧಕ

Filter Man Niranjan Karagi: ನಮ್ಮ ಕರ್ನಾಟಕದವರು ಯಾರಿಗೂ ಕಡಿಮೆಯಿಲ್ಲ, ಇದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇಂತಹುದೇ ಜಗತ್ತೇ ಮೂಗಿನ ಮೇಲೆ ಬೆರಳಿಟ್ಟು ನೋಡಬಲ್ಲ ಸಂಶೋಧನೆಯೊಂದನ್ನು ನಮ್ಮ ಬೆಳಗಾವಿಯ ಫಿಲ್ಟರ್ ಮ್ಯಾನ್ ಮಾಡಿದ್ದಾರೆ! ಅರೇ, ಯಾರಿವರು? ಏನು ಸಂಶೋಧನೆ ಇದು? ಇಲ್ಲಿದೆ ಈ ಆಸಕ್ತಿಕರ ಮಾಹಿತಿ.

ತಾವು ಸಂಶೋಧಿಸಿದ ಫಿಲ್ಟರ್ ಜೊತೆ ನಿರಂಜನ್

ತಾವು ಸಂಶೋಧಿಸಿದ ಫಿಲ್ಟರ್ ಜೊತೆ ನಿರಂಜನ್

 • Share this:
  ಬೆಳಗಾವಿ:  ಯಶಸ್ಸು ಅಂದರೆ ಏನೋ ಅಲ್ಲ, ಅದು ನಮ್ಮ ಪರಿಶ್ರಮದ ಪ್ರತಿಫಲ ಎಂಬುದಕ್ಕೆ ತಾಜಾ ತಾಜಾ ಉದಾಹರಣೆಯೊಂದು ಇಲ್ಲಿದೆ.  ಕೇವಲ 30 ರೂ.ನಲ್ಲಿ ನೀರಿನ ಫಿಲ್ಟರ್ (Water Filter) ತಯಾರಿಸಿ, ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಕುಡಿಯುವ ನೀರಿನ ಫಿಲ್ಟರ್ ತಯಾರಿಸಿದ (World's Cheapest Water Filter) ಖ್ಯಾತಿಗೆ ಬೆಳಗಾವಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ ನಿರಂಜನ್ ಕಾರಂಗಿ ಹೊರಹೊಮ್ಮಿದ್ದಾರೆ. ಈಮೂಲಕ'ಫಿಲ್ಟರ್‌ ಮ್ಯಾನ್‌' (Filter Man From Belagavi) ಎಂದೇ ಖ್ಯಾತಿ ಗಳಿಸುತ್ತಿದ್ದಾರೆ.  ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್​ನಲ್ಲಿ  ತಿರಸ್ಕೃತಗೊಂಡಿದ್ದ ಈ ಫಿಲ್ಟರ್ ಪ್ರಾಜೆಕ್ಟ್​ಗೆ ಈಗ  ಕರ್ನಾಟಕ ಸರ್ಕಾರದ ಇಲೆವೆಂಟ್ 100 ಸಮಾವೇಶದಲ್ಲಿ ಪ್ರಶಸ್ತಿ ಲಭಿಸಿದೆ. ಜತೆಗೆ, ಸ್ಟಾರ್ಟ್ ಅಪ್‌ ಸಹಾಯಧನ (Startup Subsidy) ಕೂಡ ಮಂಜೂರು ಮಾಡಿದೆ.

  12 ಸಾವಿರ ರೂ. ಹೂಡಿಕೆಯೊಂದಿಗೆ ಆರಂಭವಾದ ನಿರಂಜನ್ ಅವರ ಉದ್ಯಮ ಈಗ 'ನಿರ್ನಲ್' ಎನ್ನುವ ಕಂಪೆನಿ ಹೆಸರಿನೊಂದಿಗೆ ಜಾಗತಿಕ ಮಟ್ಟದಲ್ಲಿಯೂ ವ್ಯವಹಾರ ಮಾಡುತ್ತಿದೆ. ದಿನವೊಂದಕ್ಕೆ 10 ಸಾವಿರ ಮೇಲ್ಪಟ್ಟು ಫಿಲ್ಟರ್‌ ತಯಾರಿಸುತ್ತಿದ್ದಾರೆ ಬೆಳಗಾವಿಯ ನಿರಂಜನ್ ಕಾರಂಗಿ.

  ವಿವಿಧ ದೇಶಗಳಿಂದ ಬೇಡಿಕೆ, ಭಾರತೀಯ ಸೇನೆಯಿಂದಲೂ ಪ್ರೋತ್ಸಾಹ
  ಫಿಲ್ಟರ್ ಮ್ಯಾನ್ ಎಂದೇ ಖ್ಯಾತಿ ಗಳಿಸುತ್ತಿರುವ ನಿರಂಜನ್ ಕಾರಂಗಿ ಅವರ ಶೋಧ ಇನ್​ಫೋಸಿಸ್ ಸೇರಿದಂತೆ ಜಗತ್ತಿನ ಘಟಾನುಘಟಿ ಉದ್ಯಮಿಗಳೇ ಬೆರಗಾಗುವಂತೆ ಮಾಡಿದೆ. ದೇಶದಲ್ಲಷ್ಟೇ ಅಲ್ಲದೇ ಆಫ್ರಿಕಾ, ಫ್ರಾನ್ಸ್‌, ನ್ಯೂಜಿಲೆಂಡ್, ಸಿಂಗಾಪುರ, ಕತಾರ್‌ ದೇಶಗಳಿಗೂ ಇವರ ಫಿಲ್ಟರ್ ತಲುಪಿದೆ. ಭಾರತೀಯ ಸೇನೆ ಕೂಡ ಸುಮಾರು ಒಂದು ಸಾವಿರ ಫಿಲ್ಟರ್‌ ಅನ್ನು ಖರೀದಿಸಿ ಯುವ ಸಂಶೋಧಕನಿಗೆ ಪ್ರೋತ್ಸಾಹ ನೀಡಿದೆ.

  ಮಕ್ಕಳಿಗಾಗಿ ತಯಾರಿಸಿದ್ದ ಫಿಲ್ಟರ್!
  ನಿರಂಜನ್ ಅವರು ಎರಡು ವರ್ಷಗಳ ಹಿಂದೆ ಶಾಲೆ ಮಕ್ಕಳಿಗೋಸ್ಕರ ಈ ಫಿಲ್ಟರ್‌ ಅನ್ನು ತಯಾರಿಸಿದ್ದರು. ಅದನ್ನು ಅತ್ಯಂತ ಕನಿಷ್ಠ ಲಾಭದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈಗ ನಿರಂಜನ್ ಅವರ ಫಿಲ್ಟರ್​​ಗೆ ಕೋಲ್ಕತಾ ಐಐಎಂ (Indian Institutes of Management) ವೇದಿಕೆ ಕಲ್ಪಿಸಲು ಮುಂದೆ ಬಂದಿದೆ.

  ಇದನ್ನೂ ಓದಿ: Wonder Mango: ವರ್ಷಕ್ಕೆ ಎರಡು ಸಲ ಫಸಲು ನೀಡುವ ಮಾವಿನ ಮರ! ಬೆಳಗಾವಿಯಲ್ಲಿದೆ ಅಚ್ಚರಿಯ ಮಾವು

  ಇಂಗ್ಲೆಂಡ್‌ ಮತ್ತು ಭಾರತ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಪ್ರಯೋಗ ಶಾಲೆಯಲ್ಲಿ ನಿರಂಜನ್ ಅವರ ಫಿಲ್ಟರ್​ಗೆ ಅವಕಾಶ ಕಲ್ಪಿಸುವುದಾಗಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌.

  ಬೆರಳಿನಷ್ಟೇ ಗಾತ್ರ
  ಅಲ್ಟ್ರಾ ಫಿಲ್ಟರೇಶನ್ ಮೆಮರಿನ್ ತಂತ್ರಜ್ಞಾನದಲ್ಲಿ ಈ 'ಫ್ರೀ ಫಿಲ್ಟರ್‌' ತಯಾರಿಸಲಾಗಿದೆ. ಅದು ನೀರು ಶುದ್ಧ ಮಾಡುವ ಜತೆಗೆ ಶೇ. 80 ರಷ್ಟು ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಬೆರಳಿನ ಗಾತ್ರದ ಈ ಸಾಧನವನ್ನು ಸಾಮಾನ್ಯ ನೀರಿನ ಬಾಟಲಿಯ ಬಾಯಿಗೆ ಅಳವಡಿಸಿ ಶುದ್ಧ ನೀರು ಪಡೆಯಬಹುದು! ಇದೇ ಕಾರಣಕ್ಕೆ ಎಲ್ಲಿಗೆ ಬೇಕಾದರೂ ಸಾಗಣೆ ಮಾಡಬಹುದಾದ ಈ ಫಿಲ್ಟರ್ ಮಹತ್ವ ಪಡೆದಿದೆ. ನೋಡಿ, ಈ ಸಂಶೋಧನೆ ನಿಜಕ್ಕೂ ಅಚ್ಚರಿಯೇ ಅಲ್ಲವೇ?

  ಇದನ್ನೂ ಓದಿ: Inspiration Farmers: 24 ಬಗೆಯ ಜೋಳ ಬೆಳೆಯುವ ಸಾಹಸಿ ರೈತ, ಊಟಕ್ಕೂ ಗತಿಯಿಲ್ಲದ ಸ್ಥಿತಿಯಿಂದ ಲಕ್ಷಗಳಿಸುವ ಹಂತಕ್ಕೇರಿದ್ದೇ ಸಾಧನೆ!

  80 ರೂ.ಗೆ 10 ಸಾವಿರ ಲೀಟರ್‌ ನೀರು ಶುದ್ಧಗೊಳಿಸುವ ಭರವಸೆ
  ಅಂದಹಾಗೆ ಒಂದು 'ಫಿಲ್ಟರ್‌' ಸಾಧನದಿಂದಲೇ 100 ಲೀ. ನೀರು ಶುದ್ಧ ಮಾಡಬಹುದು! ಈ ಸಾಧನಕ್ಕೆ ಒಮ್ಮೆ ನೀರು ತಾಗಿಸಿದರೆ ಗರಿಷ್ಠ ಎರಡು ತಿಂಗಳು ಬಳಸಬಹುದು. ಸದ್ಯ ಜಿಎಟ್​ಟಿಯನ್ನೂ ಹಿಡಿದೂ ಫಿಲ್ಟರ್‌ ಬೆಲೆ 30 ರೂ. ಆಗಿದೆ. ಇದನ್ನು ಇನ್ನಷ್ಟು ಅಭಿವೃದ್ಧಿ ಮಾಡಿ 80 ರೂ.ಗೆ 10 ಸಾವಿರ ಲೀಟರ್‌ವರೆಗೆ ಶೇ. 100ರಷ್ಟು ನೀರು ಶುದ್ಧ ಮಾಡುವ 'ಅಲ್ಟ್ರಾ ಫಿಲ್ಟರ್‌' ಸಾಧನ ರೂಪಿಸುತ್ತಿರುವುದಾಗಿ ನಿರಂಜನ್ ತಿಳಿಸಿದ್ದಾರೆ.

  ವರದಿ: ಪ್ರಶಾಂತ ಮಲಗಾಂವಿ
  Published by:guruganesh bhat
  First published: