Belagavi Updates: ಬೆಳಗಾವಿ ನಾಗರಿಕರೇ, ನಿಮ್ಮೆಲ್ಲ ಸರ್ಕಾರಿ ಸೇವೆಗಳನ್ನು ಹೀಗೆ ಸುಲಭವಾಗಿ ಪಡೆಯಿರಿ

ನಾಗರಿಕರು ತಮ್ಮ ನಕ್ಷೆಗಳ ಪ್ರಿಂಟ್ ಔಟ್ ಪಡೆಯಲು ಸರ್ವೆ ಕಚೇರಿಗಳಿಗೆ ಹೋಗಬೇಕಾದ ಅಗತ್ಯವನ್ನು ಇದು ನಿವಾರಿಸುತ್ತದೆ. ಅವರು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್‌ಗಳ ಸ್ಥಿತಿಯನ್ನು ಸಹ ನೋಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕರು ದಿನನಿತ್ಯ ಹತ್ತು ಹಲವು ಸೇವೆಗಳನ್ನು ಪಡೆಯಲು ವಿವಿಧ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ 11E, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರ ನಕ್ಷೆಗಳ ಮುದ್ರಣ ಮತ್ತು ಎಲ್ಲ ನಾಗರಿಕರ ಅರ್ಜಿಗಳ ಸ್ಥಿತಿಯ ಮಾಹಿತಿಯನ್ನು ನಾಗರಿಕರು ಆನ್​ಲೈನ್​ನಲ್ಲಿ (Online Service) ಪಡೆಯಬಹುದಾಗಿದೆ.‌ ಈಮೂಲಕ ವಿವಿಧ ಸೇವೆಗಳ ಸಂಪೂರ್ಣ ಡಿಜಿಟಲೀಕರಣ ಸೌಲಭ್ಯವನ್ನು (Digitalization Facility) ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯ ಸಾರ್ವಜನಿಕರ ಅಳೆದಾಟವನ್ನು ತಪ್ಪಿಸಲು ಎಲ್ಲ ಅರ್ಜಿಗಳನ್ನು ಆನ್​ಲೈನ್ ಮೂಲಕ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲೆಯ (Belagavi District)  ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾಹಿತಿ ನೀಡಿದ್ದಾರೆ.   

    ಅರ್ಜಿ ಸ್ಥಿತಿ ತಿಳಿಯಲು ವೈಬ್ ಸೈಟ್
    ಸಾರ್ವಜನಿಕರು ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿ ಪ್ರತಿಯ ಕೆಳಗೆ ಮಾಹಿತಿ ಪಡೆಯಲು   ವೆಬ್​ಸೈಟ್ ರೂಪಿಸಲಾಗಿದೆ. ಈ ವೆಬ್​ಸೈಟ್ ಮುಖಾಂತರ ಅರ್ಜಿದಾರರು ತಮ್ಮ ಅರ್ಜಿಗಳನ್ನು ಪಡೆಯಬಹುದಾಗಿದೆ‌. ವೆಬ್​ಸೈಟ್​ಗೆ ತೆರಳಲು ಇಲ್ಲಿ ಕ್ಲಿಕ್ ಮಾಡಿ

    ಸಾರ್ವಜನಿಕರು ಯಾವ, ಯಾವ ದಾಖಲೆಗಳನ್ನು ಪಡೆಯಬಹುದು?
    11 E, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರ ನಕ್ಷೆಗಳ ಮುದ್ರಣ ಮತ್ತು ಎಲ್ಲ ನಾಗರಿಕರ ಅರ್ಜಿಗಳ ಸ್ಥಿತಿಯ ಮಾಹಿತಿಯನ್ನು ಸಾರ್ವಜನಿಕರು ತಮ್ಮ ಸ್ಮಾರ್ಟ್​ಫೋನ್​ಗಳ ಮೂಲಕವೇ ಪಡೆಯಬಹುದಾಗಿದೆ.

    ಇದನ್ನೂ ಓದಿ: Student Bus Pass: ವಿದ್ಯಾರ್ಥಿಗಳೇ, ವೆಬ್​ಸೈಟ್ ಮೂಲಕ ನಿಮ್ಮ ಬಸ್ ಪಾಸ್ ಪಡೆಯೋದು ಹೇಗೆ? ಸುಲಭ ವಿಧಾನ ಇಲ್ಲಿದೆ

    11E, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರ ನಕ್ಷೆಗಳ ಮುದ್ರಣ ಮತ್ತು ನಾಗರಿಕರ ಅರ್ಜಿಗಳ ಸ್ಥಿತಿಯ ಮಾಹಿತಿಯನ್ನು ಪಡೆಯಲು ಸಾರ್ವಜನಿಕರು ಅರ್ಜಿ ಸಲ್ಲಿಸುವಾಗ ಅರ್ಜಿಗಳಿಗೆ ಹಣವನ್ನು ಪಾವತಿಸುತ್ತಾರೆ. ಆದ್ದರಿಂದ ಅವರ ನಕ್ಷೆಯನ್ನು ಅನುಮೋದಿಸಿದ ತಕ್ಷಣ ಈ ಮೇಲೆ ನೀಡಲಾದ ವೆಬ್‌ಸೈಟ್ ಲಿಂಕ್‌ನಲ್ಲಿ ಅದನ್ನು ಮುದ್ರಿಸಲು ಲಭ್ಯವಿರುತ್ತದೆ. ಅದೇ ವೆಬ್‌ಸೈಟ್ ಲಿಂಕ್‌ನಲ್ಲಿ ಯಾವುದೇ ಸಮಯದಲ್ಲಿ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಸಹ ತಿಳಿದುಕೊಳ್ಳಬಹುದು.

    ಇದನ್ನೂ ಓದಿ: Wonder Mango: ವರ್ಷಕ್ಕೆ ಎರಡು ಸಲ ಫಸಲು ನೀಡುವ ಮಾವಿನ ಮರ! ಬೆಳಗಾವಿಯಲ್ಲಿದೆ ಅಚ್ಚರಿಯ ಮಾವು

    ನಾಗರಿಕರು ಈಗಾಗಲೇ ಪಾವತಿಯನ್ನು ಮಾಡಿರುವುದರಿಂದ, ಆನ್‌ಲೈನ್ ಸ್ಕೆಚ್‌ಗಳನ್ನು ಮುದ್ರಿಸಲು ಯಾವುದೇ ಹೆಚ್ಚುವರಿ ಪಾವತಿಯನ್ನು ಮಾಡಬೇಕಾಗಿಲ್ಲ. ನಾಗರಿಕರು ತಮ್ಮ ನಕ್ಷೆಗಳ ಪ್ರಿಂಟ್ ಔಟ್ ಪಡೆಯಲು ಸರ್ವೆ ಕಚೇರಿಗಳಿಗೆ ಹೋಗಬೇಕಾದ ಅಗತ್ಯವನ್ನು ಇದು ನಿವಾರಿಸುತ್ತದೆ. ಅವರು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್‌ಗಳ ಸ್ಥಿತಿಯನ್ನು ಸಹ ನೋಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
    Published by:guruganesh bhat
    First published: