Minority Loans: ಸರ್ಕಾರದ ಈ ಸಾಲ-ಸಹಾಯಧನ ಸೌಲಭ್ಯ ನಿಮಗೆ ಸಿಗಲಿದೆಯೇ? ಈಗಲೇ ಬಳಸಿಕೊಳ್ಳಿ!
ರಾಜ್ಯ ಸರ್ಕಾರ ಪ್ರಾಯೋಜಿಸುವ ಹಲವು ಯೋಜನೆಗಳಿಗೆ 2022-23 ನೇ ಸಾಲಿನಲ್ಲಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ. ಹಾಗಾದರೆ ಯಾರಿಗೆಲ್ಲ ಸಾಲ ದೊರೆಯುತ್ತೆ? ಸಾಲ ಪಡೆಯುವುದು ಹೇಗೆ? ಹೇಗೆ ಎಲ್ಲಿ ಅರ್ಜಿ ಸಲ್ಲಿಸುವುದು? ಎಷ್ಟು ಸಾಲ - ಸಹಾಯಧನ ಸಿಗುತ್ತೆ? ಎಲ್ಲ ವಿವರ ಇಲ್ಲಿದೆ
ಬೆಳಗಾವಿ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌದ್ಧ ಸಿಖ್ಖರು, ಪಾರ್ಸಿ ಜನಾಂಗದವರ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ (Economic Development) ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಸರ್ಕಾರ (Karnataka Government) ಪ್ರಾಯೋಜಿಸುವ ಹಲವು ಯೋಜನೆಗಳಿಗೆ 2022-23 ನೇ ಸಾಲಿನಲ್ಲಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ. ಹಾಗಾದರೆ ಯಾರಿಗೆಲ್ಲ ಸಾಲ ದೊರೆಯುತ್ತೆ? (Loan Facility) ಸಾಲ ಪಡೆಯುವುದು ಹೇಗೆ? ಹೇಗೆ ಎಲ್ಲಿ ಅರ್ಜಿ ಸಲ್ಲಿಸುವುದು? ಎಷ್ಟು ಸಾಲ - ಸಹಾಯಧನ ಸಿಗುತ್ತೆ? ಎಲ್ಲ ವಿವರ ಇಲ್ಲಿದೆ
ಅರಿವು ಸಾಲ (ವಿದ್ಯಾಭ್ಯಾಸ ಸಾಲ) ಯೋಜನೆ
ಈ ಯೋಜನೆಯಡಿ ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದಿಂದ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್, ಬಿ.ಇ, ಬಿ.ಟೆಕ್, ಎಂಇ, ಎಂಟೆಕ್, ಬಿಡಿಎಸ್, ಎಂಡಿಎಸ್, ಬಿ.ಆಯುಷ್, ಎಂಆಯುಷ್, ಎಂ.ಬಿ.ಎ, ಎಂ.ಸಿ.ಎ, ಎಲ್.ಎಲ್.ಬಿ, ಬಿಆರ್ಕ್, ಎಂಆರ್ಕ್ ವೃತ್ತಿಪರ ಕೋರ್ಸ್ಗಳಿಗೆ ರೂ.50.000/- ಗಳಿಂದ ವ್ಯಾಸಂಗಕ್ಕೆ ಅನುಗುಣವಾಗಿ ರೂ.3,00,000 ಗಳವರೆಗೆ ಶೇ.2 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.
ಪ್ಯಾಸೆಂಜರ್ ಅಟೋರಿಕ್ಷಾ/ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಸಲು ಸಹಾಯಧನ ಯೋಜನೆ
ಪ್ಯಾಸೆಂಜರ್ ಆಟೋರಿಕ್ಷಾ ವಾಹನ ಖರೀದಿಗೆ ರೂ.7,500/- ಸಹಾಯಧನ ಹಾಗೂ ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಪಡೆಯುವ ಪಡೆಯುವ ಸಾಲಕ್ಕೆ ವಾಹನ ಮೌಲ್ಯದ ಶೇ.33 ರಷ್ಟು ಸಹಾಯಧನ ಗರಿಷ್ಠ ರೂ.2.50 ಲಕ್ಷಗಳ ಸಹಾಯಧನ ಸೌಲಭ್ಯ ಒದಗಿಸಲಾಗುವುದು.
ಶ್ರಮಶಕ್ತಿ ಸಾಲ ಯೋಜನೆ
ಅಲ್ಪಸಂಖ್ಯಾತರ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮತ್ತು ಕುಲಕಸುಬುದಾರರಿಗೆ ಅವರ ವೃತ್ತಿ ಕೌಶಲ್ಯವನ್ನು ಅಭಿವಧ್ಧಿ ಪಡಿಸಿಕೊಳ್ಳಲು ಗರಿಷ್ಠ ರೂ.5,00,000ರವರೆಗೆ ಹಾಗೂ ಇತರೆ ವೃತ್ತಿಗಳಿಗೆ ಗರಿಷ್ಠ ರೂ.25,000-ವರೆಗೆ ಶೇ.4ರ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸಲಾಗುವುದು.
ಸ್ವಯಂ ಉದ್ಯೋಗ ಯೋಜನೆ ಈ ಯೋಜನೆಯಡಿ ವ್ಯಾಪಾರ, ಸಣ್ಣ ಪ್ರಮಾಣ ವ್ಯಾಪಾರ, ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳು, ಮುಂತಾದ ಉದ್ದೇಶಗಳ ಘಟಕಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡೆಸಲು ರಾಷ್ಟ್ರೀಕೃತ/ಷೆಡ್ಯೂಲ್ ಬ್ಯಾಂಕ್ಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ.
ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ.1 ಲಕ್ಷದ ಸಹಾಯಧನ ಸೌಲಭ್ಯ ಒದಗಿಸಲಾಗುವುದು. ಆನ್ಲೈನ್ ಮೂಲಕ ವೆಬ್ಪೇಜ್ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಹಾಗೂ ಆನ್ಲೈನ್ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 15ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು.
ಸಂಪರ್ಕ ವಿಳಾಸ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ ವಿಳಾಸ ಹೀಗಿದೆ:
ಮೌಲಾನಾ ಆಝಾದ್ ಅಲ್ಪಸಂಖ್ಯಾತರ ಭವನ, ಕೆ.ಎಸ್.ಸಿ.ಎ. ಕ್ರಿಕೆಟ್ ಕ್ರೀಡಾಂಗಣ ಎದುರುಗಡೆ, ರಾಮತೀರ್ಥ ನಗರ, ಬೆಳಗಾವಿ - 590016 ಕಚೇರಿ ದೂರವಾಣಿ ಸಂಖ್ಯೆ 0831-2950794
ಕರ್ನಾಟಕ ರಾಜ್ಯ ಸರ್ಕಾರ ಪ್ರಾಯೋಜಿಸುವ ಹಲವು ಯೋಜನೆಗಳಿಗೆ 2022-23 ನೇ ಸಾಲಿನಲ್ಲಿ ಸಾಲ ಹಾಗೂ ಸಹಾಯಧನ ಸೌಲಭ್ಯಗಳನ್ನು ಈ ಮೂಲಕ ಅರ್ಹರು ಅರಿವು ಸಾಲ (ವಿದ್ಯಾಭ್ಯಾಸ ಸಾಲ) ಯೋಜನೆ, ಪ್ಯಾಸೆಂಜರ್ ಅಟೋರಿಕ್ಷಾ/ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಸಲು ಸಹಾಯಧನ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಸ್ವಯಂ ಉದ್ಯೋಗ ಯೋಜನೆಗಳ ಅಡಿ ಸಾಲ-ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ.