• Home
  • »
  • News
  • »
  • ballari
  • »
  • Vijayanagara: ಉತ್ತರ ಕರ್ನಾಟಕದಲ್ಲಿ ಅಡಿಕೆ ತೋಟದ ನಡುವೆ ಕಾಫಿ ಕೃಷಿ!

Vijayanagara: ಉತ್ತರ ಕರ್ನಾಟಕದಲ್ಲಿ ಅಡಿಕೆ ತೋಟದ ನಡುವೆ ಕಾಫಿ ಕೃಷಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕರ್ನಾಟಕದಲ್ಲಿ ಕಾಫಿ ಬೆಳೆಯಬಹುದೇ ಎಂದು ಪ್ರಯೋಗ ಮಾಡಲು ಗುಡ್ಡಪ್ಪ ಮುಂದಾಗಿದ್ದಾರೆ. ಲಾಭ ಬರದಿದ್ದರೂ ಪರವಾಗಿಲ್ಲ, ಒಮ್ಮೆ ಬೆಳೆದು ನೋಡಲು ಮುಂದಾದ ಗುಡ್ಡಪ್ಪ ಪ್ರತಿ ಎಕರೆಗೆ 450 ಸಸಿ ಹಚ್ಚಿದ್ದಾರೆ.

  • News18 Kannada
  • Last Updated :
  • Bellary, India
  • Share this:

    ಬಳ್ಳಾರಿ:  ಉತ್ತರ ಕರ್ನಾಟಕದಲ್ಲೂ ಕಾಫಿ ಬೆಳೆದ ರೈತ, ಯಶಸ್ವಿಯಾಯ್ತು ರೈತರ ಪ್ರಯೋಗ! ಮಲೆನಾಡಿಗೆ ಸೀಮಿತವಾಗಿದ್ದ ಕಾಫಿ ಬೆಳೆ (Coffee) ಈಗ ಬಿಸಿಲನಾಡಿಲ್ಲೂ ಅರಳುತ್ತಿದೆ!  ಮಲೆನಾಡು ಜಿಲ್ಲೆಗಳಲ್ಲಿ ಬೆಳೆಯುವ ಕಾಫಿ ಘಮಲು ಈಗ 'ಬಿಸಿಲೂರಿನ ಮಲ್ಲಿಗೆ ನಾಡು' ವಿಜಯನಗರ ಜಿಲ್ಲೆಯ  (Vijayanagara News) ಹೂವಿನ ಹಡಗಲಿಗೂ ಹಬ್ಬಿದೆ. ಹೂವಿನ ಹಡಗಲಿ ತಾಲ್ಲೂಕಿನ ಕೊಂಬಳಿ ಗ್ರಾಮದ ಗಡ್ಡಿ ಗುಡ್ಡಪ್ಪ ಅವರು, ತೋಟದಲ್ಲಿ ಕಾಫಿ (Coffee In Areca nut Field) ಬೆಳೆದು ಯಶಸ್ಸು ಕಂಡಿದ್ದಾರೆ.


    ಎಂಟು ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಅಡಿಕೆಯೊಂದಿಗೆ ಅಂತರ್ ಬೆಳೆಯಾಗಿ ನಾಲ್ಕು ವರ್ಷಗಳಿಂದ ಕಾಫಿ ಬೆಳೆಯುತ್ತಿದ್ದಾರೆ. ಎಂಟರಿಂದ ಹತ್ತು ಕಾರ್ಮಿಕರೊಂದಿಗೆ ಗುಡ್ಡಪ್ಪ ಹಾಗೂ ಅವರ ನಾಲ್ವರು ಸಹೋದರರು ನಿತ್ಯ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಕರೆಗೆ 3ರಿಂದ 4 ಕ್ವಿಂಟಲ್‌ಷ್ಟು ಕಾಫಿ ಫಸಲು ಬರುತ್ತಿದೆ.


    ವಿಜಯನಗರದಿಂದ ಚಿಕ್ಕಮಗಳೂರು ಮಾರುಕಟ್ಟೆಗೆ!
    ತೋಟದ ಮನೆಯಲ್ಲಿಯೇ ಕಾಫಿ ಬೀಜಗಳನ್ನು ಒಣಗಿಸಿ, ಚೀಲಗಳಲ್ಲಿ ತುಂಬಲಾಗುತ್ತದೆ. ಬೆಳೆಯನ್ನು ನೇರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಇವರು ಕಾವೇರಿ ತಳಿಯ ಗಿಡಗಳನ್ನು ಬೆಳೆಯುತ್ತಿದ್ದಾರೆ. ಚೆರಿ ಕಾಫಿಯ ತಲಾ 50 ಕೆ.ಜಿ ಚೀಲಕ್ಕೆ ಮಾರುಕಟ್ಟೆಯಲ್ಲಿ ಪ್ರಸ್ತುತ 7 ಸಾವಿರ ಬೆಲೆಯಿದೆ.


    ಇದನ್ನೂ ಓದಿ: Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ


    ಉತ್ತರ ಕರ್ನಾಟಕದಲ್ಲೂ ಕಾಫಿ ಕೃಷಿ!
    ಉತ್ತರ ಕರ್ನಾಟಕದಲ್ಲಿ ಕಾಫಿ ಬೆಳೆಯಬಹುದೇ ಎಂದು ಪ್ರಯೋಗ ಮಾಡಲು ಗುಡ್ಡಪ್ಪ ಮುಂದಾಗಿದ್ದಾರೆ. ಲಾಭ ಬರದಿದ್ದರೂ ಪರವಾಗಿಲ್ಲ, ಒಮ್ಮೆ ಬೆಳೆದು ನೋಡಲು ಮುಂದಾದ ಗುಡ್ಡಪ್ಪ ಪ್ರತಿ ಎಕರೆಗೆ 450 ಸಸಿ ಹಚ್ಚಿದ್ದಾರೆ. ಜೊತೆಗೆ ಅಂತರ ಬೆಳೆಯಾಗಿ ಅಡಿಕೆ ಸಸಿಗಳನ್ನು ಬೆಳೆಸಿದ್ದಾರೆ. ಎರಡು ವರ್ಷ ಬೆಳೆ ತೆಗೆಯದೆ ಹಾಗೆ ಬಿಟ್ಟಿದ್ದಾರೆ. ಎರಡು ವರ್ಷ ಬಳಿಕ ಉತ್ತಮ ಫಸಲು ಬರಲಾರಂಭಿದ್ದು, ಉತ್ತಮ ಬೆಲೆಯೂ ಸಿಕ್ಕಿದೆ.




    ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ
    ಎರಡು ವರ್ಷಗಳಿಂದ ನೇರ ಮಾರುಕಟ್ಟೆಯಲ್ಲೇ ಮಾರುತ್ತಿದ್ದು.ಉತ್ತಮ ಲಾಭ ಪಡೆಯುತ್ತಿದ್ದಾರೆ. ಇನ್ನೂ ಕಾಫಿ ಬೆಳೆಗೆ ಹನಿ ನೀರಾವರಿ ಪದ್ದತಿ ಆಳವಡಿಸಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿಯೇ ಹೆಚ್ಚು ಲಾಭ ಪಡೆಯುತ್ತಿದ್ದಾರೆ.


    ಇದನ್ನೂ ಓದಿ: Birthday: ಗೋಶಾಲೆಯಲ್ಲಿ ಮಗುವಿನ ಮೊದಲ ಬರ್ತ್ ಡೇ ಆಚರಿಸಿಕೊಂಡ ದಂಪತಿ


    ಉತ್ತರ ಕರ್ನಾಟಕ ಸೇರಿ ಈ ಭಾಗದಲ್ಲಿ ಈಗ ಹಲವು ಬಗೆಯ ಹಣ್ಣುಗಳನ್ನು ಬೆಳೆದು ರೈತರು ಸೈ ಎನಿಸಿಕೊಂಡಿದ್ದಾರೆ. ಆದರೆ ಈಗ ಮಲೆನಾಡು ಭಾಗದಲ್ಲಿ ಬೆಳೆಯುವ ಕಾಫಿ ಬೆಳೆಯನ್ನೂ ಬಿಸಿಲುನಾಡಿನ ರೈತರೊಬ್ಬರು ಬೆಳೆಯುವ ಮೂಲಕ ಯಶಸ್ಸು ಕಂಡು ಈಗ ಮಾದರಿಯಾಗಿದ್ದಾರೆ.


    ವರದಿ: ಬಸವರಾಜ ಹರನಹಳ್ಳಿ ನ್ಯೂಸ್ 18, ಬಳ್ಳಾರಿ.

    Published by:ಗುರುಗಣೇಶ ಡಬ್ಗುಳಿ
    First published: