ವಿಜಯನಗರ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು (Puneeth Rajkumar Fans) ಮನೆ ದೇವರು ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಿದೆ. ಅಭಿಮಾನಿಗಳು ಇದೀಗ ಅಪ್ಪುವನ್ನು (Power Star Puneeth Rajkumar) ಸಾಕ್ಷಾತ್ ದೇವರನ್ನೇ ಆಗಿ ಭಾವಿಸುತ್ತಿದ್ದಾರೆ. ನಮ್ಮ ವಿಜಯನಗರದ ಪುನೀತ್ ರಾಜ್ಕುಮಾರ್ (Vijayanagara Puneeth Rajkumar Fans) ಅವರ ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಅವರ ದೇವರ ಮಾಲೆ (Apuu Vritha) ವ್ರತಕ್ಕೆ ಸಜ್ಜಾಗಿದ್ದಾರೆ.
ದೊಡ್ಮನೆ ಹುಡ್ಗನ ಅಭಿಮಾನಿಗಳಿಂದ ಮಾಲಾಧಾರಣೆ ವ್ರತ ಆರಂಭವಾಗಿದೆ. ಮಾರ್ಚ್ 1 ರಿಂದ ಅಭಿಮಾನಿಗಳು ಮಾಲಾಧಾರಣೆ ಮಾಡಲಿದ್ದಾರೆ. ವಿಜಯನಗರದ ಹೊಸಪೇಟೆ ನಗರದ ಅಪ್ಪು ಪುತ್ಥಳಿ ಬಳಿ ಅಭಿಮಾನಿಗಳು ಮಾಲೆ ಧರಿಸಲಿದ್ದಾರೆ. ನಂತರ ಮಾರ್ಚ್ 18 ಕ್ಕೆ ಅಪ್ಪು ಪುಣ್ಯಭೂಮಿಯ ದರ್ಶನ ಪಡೆಯಲಿದ್ದಾರೆ.
ಪಾಲಿಸಬೇಕಿದೆ ನಾನಾ ಸಂಕಲ್ಪ!
ಅಪ್ಪು ಮಾಲೆ ಧರಿಸಿರುವವರು ನಾನಾ ಸಂಕಲ್ಪ ಪಾಲಿಸಬೇಕಿದೆ. ಅಪ್ಪು ಪುಣ್ಯಭೂಮಿ ದರ್ಶನದ ಬಳಿಕವಷ್ಟೇ ಹಂಪಿಯಲ್ಲಿ ಅಭಿಮಾನಿಗಳು ಮಾಲೆ ವಿಸರ್ಜನೆ ಮಾಡಬಹುದಾಗಿದೆ.
ಅಪ್ಪು ದೇವರ ವೃತ ಹೀಗೆ ಆಚರಿಸಬೇಕಂತೆ!
ಅಪ್ಪು ದೇವರ ಡಾಲರ್ ಇರುವ ಮಾಲೆ, ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಟ್ ತೊಟ್ಟು ಅಪ್ಪು ದೇವರ ಫೋಟೋವನ್ನು ಇಟ್ಟಿ ಪೂಜೆ ಮಾಡುವ ವ್ರತ ಪಾಲಿಸಬೇಕಿದೆ. ಬೆಳಗ್ಗೆ ಸೂರ್ಯ ಹುಟ್ಟುವ ಮೊದಲು ಸ್ನಾನ ಹಾಗೂ ಸಂಜೆ ಸೂರ್ಯ ಮುಳುಗಿದ ನಂತರ ಸ್ನಾನ. ಪ್ರಸಾದ ಬೆಳಗ್ಗೆ ಟಿಫಿನ್, ಮಧ್ಯಾಹ್ನ ಊಟ ಹಾಗೂ ರಾತ್ರಿ ಟಿಫಿನ್ ಮಾಡಬಹುದಾಗಿದೆ ಎಂದು ಮನವಿ ಮಾಡಲಾಗಿದೆ.
ಇದನ್ನೂ ಓದಿ: Bidar: ಸೇಬಿಗೆ ಸೆಡ್ಡು ಹೊಡೆಯುತ್ತಿದೆ ಬೀದರ್ ಬೋರೆ!
ಕೆಟ್ಟ ಚಟ ಮಾಡಬಾರದು
ಈ ಮಾಲೆ ಹಾಕುವವರೆಲ್ಲರೂ ಯಾವ ಕೆಟ್ಟ ಚಟಗಳಿಗೆ ಹೋಗಬಾರದು. ಮಾಲೆ ಹಾಕುವ ಎಲ್ಲಾ ಅಭಿಮಾನಿಗಳು 5 ದಿನ, 11 ದಿನ ಅಥವಾ 1 ದಿನ ಮಾಲೆ ಹಾಕಬಹುದಾಗಿದೆ. ಪುಣ್ಯಭೂಮಿಗೆ ಹೋಗುವಾಗ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗತಕ್ಕದ್ದು. ಅದರಲ್ಲಿ ಅಕ್ಕಿ ಬೇಳೆ, ಎಣ್ಣೆ ಮುಂತಾದ ದಿನಸಿ ತೆಗೆದುಕೊಂಡು ಹೋಗತಕ್ಕದ್ದು. ತಮ್ಮ ಕೈಲಾದಷ್ಟು ಒಯ್ಯಬಹುದು. ಇದು ಅಪ್ಪು ದೇವರ ಮಾಲೆಯ ವಿದಾಯ ಎಂದು ಬರೆಯಲಾಗಿದೆ.
ಇದನ್ನೂ ಓದಿ: Petrol Golmaal: ಕರ್ನಾಟಕದ ಪೆಟ್ರೋಲ್-ಡೀಸೆಲ್ ತೆಲಂಗಾಣದಲ್ಲಿ ಮಾರಾಟ!
ವಿಸರ್ಜನೆ ಮಾಡುವ ವಿಧಾನ ಹೀಗಂತೆ
ಎಲ್ಲಾ ಮಾಲೆ ಧರಿಸುವಂತ ಮಾಲಾಧಾರಿಗಳು ಅಪ್ಪು ದೇವರ ಪುಣ್ಯ ಭೂಮಿ ದರ್ಶನ ಪಡೆದು ವಾಪಸ್ ಬಂದ ನಂತರ ಹಂಪಿಯ ಪುಣ್ಯ ನದಿಯಲ್ಲಿ ಸ್ನಾವನ್ನು ಮಾಡಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಪೂಜೆ ಸಲ್ಲಿಸಿ ಮಾಲೆ ವಿಸರ್ಜನೆಯನ್ನು ಮಾಡತಕ್ಕದ್ದು ಎಂದು ಮನವಿ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ