ವಿಜಯನಗರ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ರೈಲಿನ ಗಾಲಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ (Railway Police Constable) ಓರ್ವರು ರಕ್ಷಿಸಿದ ಘಟನೆ ನಡೆದಿದೆ. ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ರಾಠೋಡ್ ಎಂಬುವವರೇ ರೈಲ್ವೆ (Indian Railway Traveler) ಪ್ರಯಾಣಿಕರ ಜೀವ ಉಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.
ಹೊಸಪೇಟೆ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ರೈಲ್ವೆ ಪ್ಲಾಟ್‌ಫಾರಂ ಮೇಲೆ ನಿಂತಿದ್ದ ಪೊಲೀಸ್ ಕಾನ್ಸ್ಟೇಬಲ್ ರೈಲಿನ ಅಡಿಗೆ ಬೀಳುತ್ತಿದ್ದ ಪ್ರಯಾಣಿಕ ಯುವಕನನ್ನು ಕೈ ಹಿಡಿದು ಮೇಲೆತ್ತಿ ರಕ್ಷಿಸಿದ್ದಾರೆ.
ಗದಗ ಮೂಲದ ಯುವಕ ಅಪಾಯಕ್ಕೆ ಸಿಲುಕಿದ್ದೇಗೆ?
ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್ ಹೊರಟಿದ್ದ. ಈ ವೇಳೆ ರೈಲು ನಿಲ್ದಾಣದಲ್ಲಿ ಶೌಚಾಲಯದಲ್ಲಿ ಶೌಚಕ್ಕೆಂದು ಹೋದಾಗ 5 ರೂ. ಕೇಳಿದ್ದು, ಹಣ ಯಾಕೆ ಪಾವತಿಸಬೇಕೆಂದು ಅದೇ ಸಮಯಕ್ಕೆ ಫ್ಲಾಟ್ಫಾರಂಗೆ ಬಂದು ನಿಂತಿದ್ದ ಬೆಳಗಾವಿ- ಸಿಕಂದರಾಬಾದ್ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ.
ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಇಳಿದ ಯುವಕ
ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ವೇಗವಾಗಿ ಚಲಿಸಲು ಆರಂಭಿಸಿದೆ. ಆದರೂ ಸಹ ಯುವಕ ರೈಲು ಚಲಿಸುತ್ತಿರುವಾಗಲೂ ಅದರಿಂದ ಇಳಿಯಲು ಹೋಗಿದ್ದಾನೆ. ಆದರೆ ಚಲಿಸುತ್ತಿರುವ ರೈಲಿನಿಂದ ಕಾಲು ಜಾರಿ ರೈಲಿನ ಅಡಿಗೆ ಸಿಲುಕುವ ಅಪಾಯದಲ್ಲಿದ್ದ.
ಇದೇ ವೇಳೆಗೆ ಅಲ್ಲೆ ಇದ್ದ ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ರಾಠೋಡ್ ಅವರು ಪ್ರಯಾಣಿಕನ ಕೈ ಹಿಡಿದು ಮೇಲೆತ್ತಿದ್ದಾರೆ.
ಅನಿರೀಕ್ಷಿತ ಕಾರ್ಯಾಚರಣೆಯ ವಿಡಿಯೋ ಸೆರೆಯಾಯ್ತು
ಜೊತೆಗಿದ್ದ ರೈಲ್ವೆ ಪೊಲೀಸ್ ಗುರುರಾಜ್ ಅವರು ಕೂಡ ಈ ಅನಿರೀಕ್ಷಿತ ಕಾರ್ಯಾಚರಣೆಯಲ್ಲಿ ಸಹಕರಿಸಿ ಜೀವ ಉಳಿಸಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ರೈಲ್ವೆ ಇಲಾಖೆ ತನ್ನ ವಿಡಿಯೋ ಹಂಚಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ