• Home
 • »
 • News
 • »
 • ballari
 • »
 • ಬಳ್ಳಾರಿಯಲ್ಲಿ ವಿಶ್ವ ಕವಿ ಸಮ್ಮೇಳನ ಸಂಗಂ 2022; ನೀವೂ ಭಾಗವಹಿಸಿ

ಬಳ್ಳಾರಿಯಲ್ಲಿ ವಿಶ್ವ ಕವಿ ಸಮ್ಮೇಳನ ಸಂಗಂ 2022; ನೀವೂ ಭಾಗವಹಿಸಿ

ವಿಶ್ವ ಕವಿ ಸಮ್ಮೇಳನ

ವಿಶ್ವ ಕವಿ ಸಮ್ಮೇಳನ

ವಿಶ್ವ ಕವಿ ಸಮ್ಮೇಳನ ನೇತೃತ್ವ'ಸಂಗಂ 2022' ವು 'ಅರಿವು' ಸಂಸ್ಥೆ ವತಿಯಿಂದ ಹಿರಿಯ ಕವಿ ಡಾ.‌ಹೆಚ್.ಎಸ್. ಶಿವಪ್ರಕಾಶ್ ಅವರ ನೇತೃತ್ವದಲ್ಲಿ ನಡೆಯಲಿದೆ.

 • Share this:

  ಬಳ್ಳಾರಿ: ಗಡಿನಾಡು ಬಳ್ಳಾರಿಗೂ ಸಾಂಸ್ಕೃತಿಕ ಲೋಕಕ್ಕೂ ಅವಿನಾಭಾವ ಸಂಬಂಧವಿದೆ. ರಾಜ ಮಹಾರಾಜರ ಕಾಲದಿಂದಲೂ ಸಂಗೀತ, ಸಾಹಿತ್ಯದ ಜೊತೆಗೆ ಬಳ್ಳಾರಿ ಗುರುತಿಸಿಕೊಂಡಿದೆ. ಇದೀಗ ನಾಡಿನ ಕೀರ್ತಿ ಹೆಚ್ಚಿಸುವಲ್ಲಿ ಬಳ್ಳಾರಿ (Ballari)  ಮತ್ತೊಮ್ಮೆ ಪ್ರಮುಖ ಪಾತ್ರವಹಿಸಲಿದೆ. ಇದೇ ಮೊದಲ ಬಾರಿಗೆ ವಿಶ್ವದ ಮಹಾನ್ ಕವಿಗಳ ಸಂಗಮದೊಂದಿಗೆ ವಿಶ್ವ ಕವಿ ಸಮ್ಮೇಳನ 'ಸಂಗಂ 2022' ಬಳ್ಳಾರಿಯಲ್ಲಿ (Confluence Of World Poets Ballari) ನಡೆಯಲಿದೆ.


  ವಿಶ್ವ ಕವಿ ಸಮ್ಮೇಳನ ಯಾವಾಗ?
  ವಿಶ್ವ ಕವಿ ಸಮ್ಮೇಳನ 'ಸಂಗಂ 2022' ಅಕ್ಟೋಬರ್ 21 ರಿಂದ ಆರಂಭವಾಗಿ ಅಕ್ಟೋಬರ್ 24ರ ವರೆಗೆ ನಡೆಯಲಿದೆ.




  ವಿಶ್ವ ಕವಿ ಸಮ್ಮೇಳನದ ಉದ್ದೇಶ ಹೀಗಿದೆ
  ಬಳ್ಳಾರಿಯಲ್ಲಿಯೇ ವಿಶ್ವ ಕವಿ ಸಮ್ಮೇಳನ ನಡೆಸುವುದರ ಹಿಂದೆ ಒಳ್ಳೆಯ ಸದುದ್ದೇಶವಿದೆ. ಬಳ್ಳಾರಿಗೂ ಸಾಂಸ್ಕೃತಿಕ ಲೋಕಕ್ಕೂ ಸಾವಿರ ವರ್ಷಗಳ ಸಂಬಂಧವಿದೆ. ಹಾಗಾಗಿ ಇಲ್ಲಿಯೇ ವಿಶ್ವ ಕವಿ ಸಮ್ಮೇಳನ‌ ಆಯೋಜಿಸಲಾಗಿದೆ. ಜೊತೆಗೆ ಐಕ್ಯತೆ, ವಿಶ್ವ ಭ್ರಾತೃತ್ವ ಮೆರೆಯುವ ಉದ್ದೇಶವನ್ನೂ ಹೊಂದಲಾಗಿದೆ.


  ಬಳ್ಳಾರಿಯೇ ಏಕೆ?
  ಹೌದು, ಬಳ್ಳಾರಿ ಸಾಂಸ್ಕೃತಿಕವಾಗಿ ಎಷ್ಟು ಶ್ರೀಮಂತಿಕೆ ಹೊಂದಿದೆಯೋ ಅಷ್ಟೇ ಶ್ರೀಮಂತಿಕೆ ಪ್ರವಾಸೋದ್ಯಮದಲ್ಲೂ ಹೊಂದಿದೆ. ಯುನೆಸ್ಕೋ ವಿಶ್ವ ಮಾನ್ಯತೆಯ ಹಂಪಿ, ದರೋಜಿ ಕರಡಿಧಾಮ, ಅಶೋಕನ ಶಿಲಾಶಾಸನ‌ ಹೀಗೆ ಹಲವು ಪ್ರವಾಸಿ ತಾಣಗಳೂ ಇವೆ. ಹೀಗಾಗಿ ಬಳ್ಳಾರಿಯಲ್ಲಿಯೇ ಈ ವಿಶ್ವ ಕವಿ ಸಮ್ಮೇಳನವನ್ನು ನಡೆಸಲಾಗುತ್ತಿದೆ.


  ಹೀಗೆ ನೀವೂ ಭಾಗವಹಿಸಬಹುದು
  ಬಳ್ಳಾರಿಯಲ್ಲಿಯೇ ವಿಶ್ವ ಕವಿ ಸಮ್ಮೇಳನದಲ್ಲಿ ನೀವೂ ನೋಂದಣಿ ಮಾಡಿಕೊಳ್ಳುವ ಮೂಲಕ ಭಾಗವಹಿಸಬಹುದು.  ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


  ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ ಇಲ್ಲಿದೆ: 
  ಆನಂದ್ : 8095921240
  ಜಾನ್ 9986595897
  ಅಥವಾ keystonemedicalservices@gmail.com ಮೇಲ್ ಐಡಿಯನ್ನು ಸಂಪರ್ಕಿಸಬಹುದು


  ಹಿರಿಯ ಕವಿ ಡಾ.‌ಹೆಚ್.ಎಸ್. ಶಿವಪ್ರಕಾಶ್ ಅವರ ನೇತೃತ್ವ
  ವಿಶ್ವ ಕವಿ ಸಮ್ಮೇಳನ ನೇತೃತ್ವ'ಸಂಗಂ 2022' ವಿಶ್ವ ಕವಿ ಸಮ್ಮೇಳನವು 'ಅರಿವು' ಸಂಸ್ಥೆ ವತಿಯಿಂದ ಹಿರಿಯ ಕವಿ ಡಾ.‌ಹೆಚ್.ಎಸ್. ಶಿವಪ್ರಕಾಶ್ ಅವರ ನೇತೃತ್ವದಲ್ಲಿ ನಡೆಯಲಿದೆ.


  ಎಷ್ಟೆಲ್ಲ ಕವಿಗಳು ಭಾಗವಹಿಸಲಿದ್ದಾರೆ ಗೊತ್ತೇ?
  'ಸಂಗಂ 2022' ರಲ್ಲಿ ಭಾರತದ ವಿವಿಧ ಕಡೆಗಳಿಂದ 20 ಕವಿಗಳು ಹಾಗೂ ವಿಶ್ವದ ಹಲವು ರಾಷ್ಟ್ರಗಳ 30 ಕವಿಗಳು ಹೀಗೆ ಒಟ್ಟು 50 ಮಂದಿ ಕವಿಗಳು ವಿಶ್ವ ಕವಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಇಸ್ರೇಲ್, ಬಾಂಗ್ಲಾದೇಶ, ಯುನೈಟೆಡ್ ಸ್ಟೇಟ್ಸ್, ಕೆನಡಾ, ವೆನೆಜುವೆಲಾ ಅಲ್ಜೇರಿಯಾ ಸೇರಿದಂತೆ ವಿಶ್ವದ ವಿವಿಧ ದೇಶಗಳಿಂದ 'ಸಂಗಂ 2022' ರಲ್ಲಿ ಕವಿಗಳು ಭಾಗವಹಿಸಲಿದ್ದಾರೆ. ಕನ್ನಡದ ಭುವನಾ ಹಿರೇಮಠ, ಚಾಂದ್ ಪಾಷ ಎನ್ ಎಸ್, ಚೇತನ್ ನಾಗರಾಳ, ಗಿರೀಶ್ ಚಂದ್ರಕಾಂತ ಜಕಾಪುರೆ, ಕೃಷ್ಣ ದೇವಾಂಗಮಠ, ಪ್ರವರ ಕೊಟ್ಟೂರು ಸೇರಿದಂತೆ ಹಲವು ಕವಿಗಳು ಕಾವ್ಯ ವಾಚನ ನಡೆಸಲಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: