• Home
 • »
 • News
 • »
 • ballari
 • »
 • Ballari To Bengaluru: ಬಳ್ಳಾರಿಯಿಂದ ಬೆಂಗಳೂರು ಇನ್ನಷ್ಟು ಹತ್ತಿರ!

Ballari To Bengaluru: ಬಳ್ಳಾರಿಯಿಂದ ಬೆಂಗಳೂರು ಇನ್ನಷ್ಟು ಹತ್ತಿರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಕ್ಟೋಬರ್‌ 30 ರಿಂದ ವಿಮಾನ ಹಾರಾಟ ಆರಂಭವಾಗಲಿದೆ. ವಿಮಾನದ ಬುಕ್ಕಿಂಗ್ ಸಹ ಪ್ರಾರಂಭಗೊಂಡಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ಬಳ್ಳಾರಿ: ಗಣಿನಾಡು ಬಳ್ಳಾರಿ ಜನತೆಗೆ ಶುಭಸುದ್ದಿಯೊಂದು ಇಲ್ಲಿದೆ. ಇನ್ಮುಂದೆ ಪ್ರತಿದಿನವೂ ಯಾವುದೇ ವಿಳಂಬವಿಲ್ಲದೇ ನೇರ ವಿಮಾನಯಾನದ ಮೂಲಕ  ಬೆಂಗಳೂರು (Ballari To Bengaluru) ಹಾಗೂ ಹೈದರಾಬಾದ್ ನಗರಗಳಿಗೆ (Ballari To Hyderabad) ವಿಮಾನದ ಮೂಲಕವೇ ಪ್ರಯಾಣ ಮಾಡಬಹುದಾಗಿದೆ.  ಉಡಾನ್ ಯೋಜನೆಯಡಿ ಈ ಎರಡು ಬೃಹತ್ ನಗರಗಳಿಗೆ ವಿಮಾನ ಸೇವೆ ಅಕ್ಟೋಬರ್ 30ರಿಂದ ಆರಂಭವಾಗಲಿದೆ. ಅಲಯನ್ಸ್‌ ಏರ್ ವಿಮಾನ ಸಂಚಾರವನ್ನು ಆರಂಭಿಸಲಿದೆ. ಹಾಗಿದ್ರೆ ವಿಮಾನ ಹಾರಾಟ ಸಮಯ ಯಾವುದು? ಅನ್ನೋ ಕುರಿತ ಡೀಟೆಲ್ ಮಾಹಿತಿ ಇಲ್ಲಿದೆ.


  ಸ್ಥಗಿತವಾಗಿದ್ದ ವಿಮಾನ‌ ಹಾರಾಟ
  ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಿದ್ಯಾನಗರ (ಬಳ್ಳಾರಿ) ಯಿಂದಬೆಂಗಳೂರು, ಹೈದರಾಬಾದ್ ನಗರಗಳಿಗೆ ನೇರ ವಿಮಾನ ಯಾನ, ಪ್ರತಿದಿನ ಹಾರಾಟ ಪ್ರಾರಂಭವಾಗುತ್ತಿದೆ. 2017ರಲ್ಲಿ ಟ್ರೂಜೆಟ್ ಕಂಪನಿ ಬಳ್ಳಾರಿಯಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ ಸಂಚಾರ ಆರಂಭಿಸಿತ್ತು. ಆದರೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮಾರ್ಚ್‌ನಲ್ಲಿ ಹಾರಾಟ ನಿಲ್ಲಿಸಲಾಗಿತ್ತು.


  ಬುಕ್ಕಿಂಗ್ ಪ್ರಾರಂಭ
  ಉಡಾನ್ ಯೋಜನೆಯಡಿ ಅಲಯನ್ಸ್ ಏರ್ ವಿಮಾನ ಹಾರಾಟದ ಅನುಮತಿ ಪಡೆದಿದೆ. ಅಕ್ಟೋಬರ್‌ 30 ರಿಂದ ವಿಮಾನ ಹಾರಾಟ ಆರಂಭವಾಗಲಿದೆ. ವಿಮಾನದ ಬುಕ್ಕಿಂಗ್ ಸಹ ಪ್ರಾರಂಭಗೊಂಡಿದೆ.


  ಇದನ್ನೂ ಓದಿ: Bengaluru To Mysuru: ಬೆಂಗಳೂರು-ಮೈಸೂರು ಜನರಿಗೆ ಸೂಪರ್ ಸುದ್ದಿ!


  ವಿಮಾನ ಹಾರಾಟದ ಸಮಯ
  ಅಲಯನ್ಸ್ ಏರ್ ವಾರದ ಏಳು ದಿನವೂ ಉಭಯ ನಗರಗಳ ನಡುವೆ ವಿಮಾನ ಹಾರಾಟ ನಡೆಸಲಿದೆ. ಬಳ್ಳಾರಿ-ಹೈದರಾಬಾದ್ ವಿಮಾನವು ಪ್ರತಿದಿನ ಬೆಳಗ್ಗೆ 8.55ಕ್ಕೆ ಹೈದರಾಬಾದ್‌ನಿಂದ ಹೊರಟು 10.20ಕ್ಕೆ ಬಳ್ಳಾರಿಗೆ ಆಗಮಿಸಲಿದೆ. ಬಳ್ಳಾರಿಯ ವಿದ್ಯಾನಗರದಿಂದ 10.50ಕ್ಕೆ ಹೊರಟು, 12.20ಕ್ಕೆ ಹೈದರಾಬಾದ್‌ ತಲುಪಲಿದೆ.


  ಇದನ್ನೂ ಓದಿ: ಕರುನಾಡಲ್ಲಿ ಕೋಟಿ ಕಂಠ ಗಾಯನ! ಮುಗಿಲು, ಬಾನಲ್ಲೂ ಕನ್ನಡ ಗೀತೆಗಳ ಕಲರವ ನೋಡಿ


  ಬಳ್ಳಾರಿ-ಬೆಂಗಳೂರು
  ಬಳ್ಳಾರಿ-ಬೆಂಗಳೂರು ವಿಮಾನವು ಮಧ್ಯಾಹ್ನ 3.15ಕ್ಕೆ ಬೆಂಗಳೂರಿನಿಂದ ಹೊರಟು 4.20ಕ್ಕೆ ಬಳ್ಳಾರಿಯ ವಿದ್ಯಾನಗರ ತಲುಪಲಿದೆ. 4.45ಕ್ಕೆ ವಿದ್ಯಾನಗರದಿಂದ ಹೊರಟು 5.55ಕ್ಕೆ ಬೆಂಗಳೂರು ತಲುಪಲಿದೆ. ಇದು 72 ಸೀಟುಗಳ ವಿಮಾನವಾಗಿರುತ್ತದೆ.


  ಟಿಕೆಟ್ ದರ ಮತ್ತು ಪ್ರಯಾಣ ಸಮಯ ವಿವರ ಇಲ್ಲಿದೆ ನೋಡಿ
  ಬಳ್ಳಾರಿ - ಹೈದರಾಬಾದ್ ನೇರ ವಿಮಾನದ ಮೂಲಕ ಕೇವಲ ಒಂದೂವರೆ ಗಂಟೆಯಲ್ಲಿ ಬಳ್ಳಾರಿಯಿಂದ ಹೈದರಾಬಾದ್ ತಲುಪಬಹುದಾಗಿದೆ. ಇನ್ನು ಬಳ್ಳಾರಿಯಿಂದ ಬೆಂಗಳೂರಿಗೆ 1 ಗಂಟೆ 10 ನಿಮಿಷದಲ್ಲಿ ತಲುಪಬಹುದಾಗಿದೆ. ಬಳ್ಳಾರಿ- ಹೈದರಾಬಾದ್ ಟಿಕೆಟ್ ದರವು ₹2,246 ರಿಂದ ಆರಂಭವಾಗುತ್ತದೆ. ಬೆಂಗಳೂರಿಗೆ ತೆರಳುವುದಿದ್ದರೆ ₹ 2048 ರಿಂದ ಆರಂಭವಾಗುತ್ತದೆ.

  Published by:ಗುರುಗಣೇಶ ಡಬ್ಗುಳಿ
  First published: