• ಹೋಂ
  • »
  • ನ್ಯೂಸ್
  • »
  • ಬಳ್ಳಾರಿ
  • »
  • Ballari News: ಲೈಟ್, ಫ್ಯಾನ್, ಎಸಿ ಇದ್ರೂ ಈ ಸರ್ಕಾರಿ ಕಚೇರಿಯಲ್ಲಿ ಬಳಸೋದಿಲ್ಲ, ಸೆಕೆಯಂತೂ ಇಲ್ಲಿ ಆಗೋದಿಲ್ಲ!

Ballari News: ಲೈಟ್, ಫ್ಯಾನ್, ಎಸಿ ಇದ್ರೂ ಈ ಸರ್ಕಾರಿ ಕಚೇರಿಯಲ್ಲಿ ಬಳಸೋದಿಲ್ಲ, ಸೆಕೆಯಂತೂ ಇಲ್ಲಿ ಆಗೋದಿಲ್ಲ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸದ್ಯ ಬಳ್ಳಾರಿಯಲ್ಲಿ ಈಗ 40-42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ರೂ ಈ ಕಚೇರಿ ಒಂದರಲ್ಲಿ ಮಾತ್ರ ಕೂಲ್ ಕೂಲ್ ಆಗಿರುತ್ತದೆ.

  • News18 Kannada
  • 2-MIN READ
  • Last Updated :
  • Bellary, India
  • Share this:

ಬಳ್ಳಾರಿ: ಗಣಿನಾಡಿನಲ್ಲೊಂದು ಕೂಲ್ ಕೂಲ್ ಬಿಲ್ಡಿಂಗ್! ರಣಬಿಸಿಲಿನಲ್ಲೂ (Summer Season) ಕಚೇರಿಯಲ್ಲಿ ತಂಪಾದ ವಾತಾವರಣ. ಈ ಕಚೇರಿಗೆ ಫ್ಯಾನೂ ಬೇಕಿಲ್ಲ, ಎಸಿ ಬೇಕಿಲ್ಲ! ಹೌದು, ಬಿಸಿಲೂರು ಬಳ್ಳಾರಿಯಲ್ಲೊಂದು (Ballari News) ಸದಾ ಕೂಲ್ ಕೂಲ್ ಆಗಿರುವ ಬಿಲ್ಡಿಂಗ್​ ಇದೆ.


ಬಳ್ಳಾರಿ ಸೂಪರಿಂಟೆಂಡೆಂಟ್ ಅಂಚೆ ಕಚೇರಿಯಲ್ಲಿ ಬೇಸಿಗೆ ಕಾಲದಲ್ಲಿ ಫ್ಯಾನ್, ಎಸಿ, ಕೂಲರ್ ಬೇಕಿಲ್ಲ. ಈ ಬಿಲ್ಡಿಂಗ್ ಭಾರತಕ್ಕೆ ಕಾಲಿಟ್ಟ ಐರೋಪ್ಯ ವಸಾಹತು ಪೂರ್ವ ಶೈಲಿಯಲ್ಲಿದೆ. ಈ ಕಟ್ಟಡ ಅಗಲವಾಗಿ ಚಾಚಿರುವ ಛಾವಣಿ, ವೃತ್ತಾಕಾರದ ಕಿಂಡಿಗಳು, ವಾಸ್ತುಶೈಲಿ ವೈಶಿಷ್ಟವಾಗಿದೆ.




ಇಷ್ಟು ದೊಡ್ಡ ಕಟ್ಟಡಕ್ಕೆ ಒಂದೇ ಒಂದು ಪಿಲ್ಲರ್ ಇಲ್ಲ!
ಸುಮಾರು 1870 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಒಂದು ಪಿಲ್ಲರ್ ಕೂಡ ಇಲ್ಲ. 30 ಕಮಾನುಗಳು, 16 ಬಾಗಿಲುಗಳಿವೆ. 58 ಅಡಿ ಅಗಲ, 166 ಅಡಿ ಉದ್ದದ ಅರ್ಲಿ ಕೊಲಾನಿಯಲ್ ಮಾದರಿಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ವರ್ಷದ ಎಲ್ಲಾ ದಿನಗಳಲ್ಲೂ ಸದಾ ಕೂಲ್ ಕೂಲ್ ಆಗಿರುವ ಈ ಕಟ್ಟಡದ ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿಗಳು ಅತ್ಯಂತ ಖುಷಿಯಿಂದ ಕೆಲಸ ಮಾಡುತ್ತಾರೆ.


ಇದನ್ನೂ ಓದಿ: Vijayanagara Election News: ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್!




ಫ್ಯಾನ್, ಲೈಟ್ ಇದ್ರೂ ಬಳಸೋದಿಲ್ಲ!
ವಿಶಿಷ್ಟ ಶೈಲಿ, ವಿನ್ಯಾಸಕಾರದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಗಾಳಿ ಬೆಳಕು ಹೇರಳವಾಗಿ ಬರುತ್ತದೆ. ಈ ಕಚೇರಿಯಲ್ಲಿ ಫ್ಯಾನ್, ಲೈಟ್ ಇದ್ರೂ ಬಳಸುವುದಿಲ್ಲ. ಇನ್ನೂ ಈ ಕಟ್ಟಡ ಪಕ್ಕದಲ್ಲಿಯೇ ಪ್ರಸಿದ್ದ ಏಕಾಶಿಲಾ ಬೆಟ್ಟವಿದ್ರೂ ಬಿಸಿಲಿನ ಧಗೆ ಈ ಕಚೇರಿಯ ಕಟ್ಟಡಕ್ಕೆ ತಾಗುವುದಿಲ್ಲ.


ಬಿಸಿಲಿನಿಂದ ತಂಪಾದ ಆಸರೆ
ಹಿಂದೆ ಈ ಕಟ್ಟಡವನ್ನ ಅತಿಥಿಗೃಹವಾಗಿ ಬಳಸುತ್ತಿದ್ದರು. ಮದ್ರಾಸ್ ಪ್ರೆಸಿಡೆನ್ಸಿ ಅವಧಿಯಲ್ಲಿ ಬಳ್ಳಾರಿ, ಅನಂತಪುರ, ಕರ್ನೂಲ್, ಕಡಪ ಜಿಲ್ಲೆಗಳ ಮುಖ್ಯ ಅಂಚೆ ಕಚೇರಿ ಇದಾಗಿತ್ತು. ಇದೀಗ ಸೂಪರಿಂಟೆಂಡೆಂಟ್ ಕಚೇರಿಯಾಗಿ ಬದಲಾಗಿದೆ. ಆಗಿನ ಕಾಲದಲ್ಲಿ ಬ್ರಿಟಿಷರು ಬಳ್ಳಾರಿಯ ಬಿಸಿಲಿನಿಂದ ಆಸರೆ ಪಡೆಯಲು ಇಂತಹ ಕಟ್ಟಡ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.




ಸದ್ಯ ಬಳ್ಳಾರಿಯಲ್ಲಿ ಈಗ 40-42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ರೂ ಈ ಕಚೇರಿ ಒಂದರಲ್ಲಿ ಮಾತ್ರ ಕೂಲ್ ಕೂಲ್ ಆಗಿರುತ್ತದೆ. ಕಚೇರಿ ಕೆಲಸದಲ್ಲಿ ಎಷ್ಟೇ ಒತ್ತಡವಿದ್ರೂ ಕಚೇರಿಯಲ್ಲಿನ ಕೂಲ್ ಕೂಲ್ ವಾತಾವರಣದಿಂದ ಸಿಬ್ಬಂದಿಗಳು ಚೆನ್ನಾಗಿ ಕೆಲ್ಸ ಮಾಡುತ್ತಾರೆ.


ಇದನ್ನೂ ಓದಿ: Vijayanagara: ಅಮೇರಿಕಾ ವ್ಯಕ್ತಿಯ ಋಣ ಹಂಪಿಯಲ್ಲಿತ್ತು!




ವೈಶಿಷ್ಟಪೂರ್ಣ ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ ಗಾಳಿ, ಬೆಳಕು ಚೆನ್ನಾಗಿ ಬರುತ್ತದೆ. ಹೀಗಾಗಿ ಈ ಕಟ್ಟಡ ಸದಾ ಕೂಲ್ ಕೂಲ್ ಆಗಿರುತ್ತದೆ. ಈಗ ನಿರ್ಮಾಣ ಮಾಡುತ್ತಿರುವ ಸರ್ಕಾರಿ ಕಟ್ಟಡಗಳಲ್ಲಿ ಬೇಸಿಗೆ ಕಾಲದಲ್ಲಿ ಎಸಿ ಇಲ್ಲವೇ ಕನಿಷ್ಟ ಫ್ಯಾನ್​ಗಳಾದ್ರೂ ಬೇಕು ಬೇಕು. ಇಲ್ಲದಿದ್ರೆ ಸಿಬ್ಬಂದಿಗಳು ಕೆಲ್ಸ ಮಾಡೋದು ಕಷ್ಟ. ಆದ್ರೆ ವಿಭಿನ್ನ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಬಳ್ಳಾರಿಯ ಅಂಚೆ ಕಚೇರಿ ಮಾತ್ರ ಬಿರುಬಿಸಿಲು ಕಾಲದಲ್ಲೂ ತಂಪಾಗಿರುವುದು ವಿಶೇಷ.


ವರದಿ: ಬಸವರಾಜ ಹರನಹಳ್ಳಿ, ನ್ಯೂಸ್ 18 ಬಳ್ಳಾರಿ.

First published: