ವಿಜಯನಗರ: ಹಿಂದೂ ಸಂಪ್ರದಾಯ, ಸಂಸ್ಕೃತಿ (Hindu Culture) ಅಂದ್ರೆನೇ ಹಾಗೆನೇ, ಎಲ್ಲ ಸಂಸ್ಕೃತಿಗಳಿಗಿಂತ ವಿಭಿನ್ನ, ವಿಶಿಷ್ಟ, ಹುಟ್ಟಿನಿಂದ ಹಿಡಿದು ಸಾವಿನವರೆಗೂ ಕೂಡ ಒಂದೊಂದು ಸಂಸ್ಕಾರ, ಆಚಾರ ವಿಚಾರಗಳಿವೆ. ಹಿಂದೂ ಸಂಪ್ರದಾಯ (Hindu Tradition) ಆಚಾರ, ವಿಚಾರಗಳು ವಿದೇಶಿಗರನ್ನು ಸಹ ಅಳವಡಿಸಿಕೊಂಡಿದ್ದಾರೆ. ಅರ್ಸತಿ ವಿಸರ್ಜಿಸುವ ವಿಚಾರದಲ್ಲಿಯೂ ವಿದೇಶಿಗರು ಎಲ್ಲವನ್ನೂ ಪಾಲನೆ ಮಾಡಿದ್ದಾರೆ.
ಹಿಂದೂ ಸಂಪ್ರದಾಯ ಅದೆಂಥವರನ್ನೂ ಸಹ ಗಮನಸೆಳೆಯುತ್ತದೆ. ಹುಟ್ಟಿನಿಂದ ಹಿಡಿದು ಸಾವಿನವರೆಗೆ ನಮ್ಮಲ್ಲಿ ನಾನಾ ಸಂಪ್ರದಾಯಗಳಿವೆ. ಅದ್ರಲ್ಲೂ ಸಾವಿನ ಬಳಿಕ ಅಸ್ಥಿ ಬಿಡೋ ವಿಚಾರ ಮಹತ್ವದ್ದು. ಇದನ್ನು ವಿದೇಶಿಗರು ಸಹ ಪಾಲನೆ ಮಾಡಿ, ದಕ್ಷಿಣ ಕಾಶಿ ಹಂಪಿಯಲ್ಲಿ ಅಮೇರಿಕಾದ ಪುರಾತತ್ವಜ್ಞ ಜಾನ್ ಮೆರ್ವಿನ್ ಫ್ರಿಟ್ಜ್ ಅಸ್ಥಿ ವಿಸರ್ಜನೆ ಮಾಡಲಾಗಿದೆ.
1981 ರಿಂದಲೂ ಹಂಪಿಗೆ ಆಗಮಿಸುತ್ತಿದ್ದರಂತೆ!
ಇತ್ತೀಚಿಗೆ ಲಂಡನ್ನಲ್ಲಿ ಕ್ಯಾನ್ಸರ್ನಿಂದ ನಿಧನವಾಗಿದ್ದ ಫ್ರಿಟ್ಜ್, ನಿಧನದ ಬಳಿಕ ಹಂಪಿಯಲ್ಲಿ ಅಸ್ಥಿ ವಿಸರ್ಜನೆ ಮಾಡುವಂತೆ ಹೇಳಿದ್ದರಂತೆ. ಫ್ರಿಟ್ಜ್ ಆಸೆಯಂತೆ ಮಗಳು ಆ್ಯಲಿಸ್ ಮೊಮ್ಮಗ ವಿಲಿಯಂ ಹಂಪಿಗೆ ಭೇಟಿ ನೀಡಿ ಅಸ್ತಿ ವಿಸರ್ಜನೆ ಮಾಡಿದ್ದಾರೆ. ಫ್ರಿಟ್ಜ್ ಅವರು 1981 ರಿಂದಲೂ ಸಹ ಹಂಪಿಗೆ ಆಗಮಿಸುತ್ತಿದ್ದರಂತೆ. ಹಾಗಾಗಿ ಅವರ ಅಸ್ತಿಯನ್ನು ಹಂಪಿಯಲ್ಲಿ ಬಿಡುವಂತೆ ಕೋರಿಕೊಂಡಿದ್ದರಂತೆ. ಅವರ ಆಸೆಯಂತೆಯೇ ಅಸ್ಥಿ ವಿಸರ್ಜನೆ ಮಾಡಲಾಗಿದೆ.
ಇದನ್ನೂ ಓದಿ: Vijayanagara: ಏನಿದು ಅಪ್ಪು ದೇವರ ಮಾಲೆ ವೃತ? ಹೇಗೆs ಆಚರಿಸಬೇಕಂತೆ?
ಕೊನೆಯ ಆಸೆ ಈಡೇರಿಸಿದ ತೃಪ್ತಿ
ಪುರಾತತ್ವಜ್ಞನ ಕುಟುಂಬ ಸದಸ್ಯರು ಅಮೇರಿಕಾದಿಂದ ನೇರವಾಗಿ ಹಂಪಿಗೆ ಆಗಮಿಸಿದ್ದಾರೆ. ಹಂಪಿಯಲ್ಲಿರೋ ತುಂಗಭದ್ರಾ ತಟದಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ, ವಿಧಿ, ವಿಧಾನ ಕಾರ್ಯಗಳನ್ನು ಮಾಡಿ, ಅಸ್ಥಿ ವಿಸರ್ಜನೆ ಮಾಡಿ, ಕೊನೆಯ ಆಸೆ ಈಡೇರಿಸಿದ್ದಾರೆ.
ಇದನ್ನೂ ಓದಿ: Mantralaya: ಶ್ರೀ ಗುರು ರಾಘವೇಂದ್ರರ ಸ್ಮರಿಸಿರೋ! ಮಂತ್ರಾಲಯದಲ್ಲಿ ಪಟ್ಟಾಭಿಷೇಕ ಮಹೋತ್ಸವದ ವೈಭವ
ಒಟ್ಟಾರೆ ದಕ್ಷಿಣ ಕಾಶಿ ಹಂಪಿಯಲ್ಲಿ ವಿದೇಶಿಗರು ಹಿಂದೂ ಸಂಪ್ರದಾಯದಂತೆ ಅಸ್ಥಿ ವಿಸರ್ಜನೆ ಮಾಡುತ್ತಿರೋ ದೃಶ್ಯ, ಫೋಟೋಗೆ ಹೂ ಮಾಲೆ ಹಾಕಿ, ಪೂಜೆ ಮಾಡುತ್ತಿರೋ ದೃಶ್ಯ ಈ ಎಲ್ಲಾ ದೃಶ್ಯಗಳು ಕಂಡು ಸ್ಥಳೀಯರು ಅಚ್ಚರಿಪಟ್ಟರು.
ವರದಿ: ಬಸವರಾಜ್ ಹರನಹಳ್ಳಿ, ನ್ಯೂಸ್ 18 ಬಳ್ಳಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ