Vijayanagara: ವಿಜಯನಗರಕ್ಕೆ ಉದ್ದ ಕತ್ತಿನ ವಿಶೇಷ ಅತಿಥಿಯ ಆಗಮನ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂದಹಾಗೆ ಈ ಜಿರಾಫೆಗೆ ಇನ್ನೂ 4 ವರ್ಷ ಮಾತ್ರ. ವಿಶೇಷ ಬೋನು ಅಳವಡಿಸಿ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಜಿರಾಫೆಯನ್ನ ಶಿಫ್ಟ್ ಮಾಡಲಾಗಿದೆ.

  • Share this:

    ವಿಜಯನಗರ: ಬಿಹಾರದಿಂದ ನಮ್ಮ ಕರ್ನಾಟಕದ ವಿಜಯನಗರಕ್ಕೆ ಅತಿಥಿಯೊಬ್ರು ಆಗಮಿಸಿದ್ದಾರೆ! ಹೌದು, ವಿಜಯನಗರಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ (Atal Bihari Vajpayee Zoo) ಹೊಸ ಅತಿಥಿ ಆಗಮನವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ (Hospet) ಕಮಲಾಪುರ ಬಳಿಯ ಮೃಗಾಲಯದಲ್ಲಿ ಉದ್ದ ಕತ್ತಿನ ಜಿರಾಫೆ (Giraffe) ಖುಷಿ ಖುಷಿಯಿಂದ ವಿಹರಿಸುತ್ತಿದೆ.


    ಬಿಹಾರದ ಪಾಟ್ನಾ ಮೃಗಾಲಯದಿಂದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಈ ಜಿರಾಫೆ ಆಗಮಿಸಿದೆ. ನಾಲ್ಕು ದಿನಗಳ ಕಾಲ ರಸ್ತೆಮಾರ್ಗದ ಮೂಲಕ ಬಿಹಾರದಿಂದ ಜಿರಾಫೆಯನ್ನು ಕರೆತರಲಾಗಿದೆ.


    ಇದನ್ನೂ ಓದಿ: Vijayanagara: ಉತ್ತರ ಕರ್ನಾಟಕದಲ್ಲಿ ಅಡಿಕೆ ತೋಟದ ನಡುವೆ ಕಾಫಿ ಕೃಷಿ!


    4ರ ಹರೆಯದ ಜಿರಾಫೆ
    ಅಂದಹಾಗೆ ಈ ಜಿರಾಫೆಗೆ ಇನ್ನೂ 4 ವರ್ಷ ಮಾತ್ರ. ವಿಶೇಷ ಬೋನು ಅಳವಡಿಸಿ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಜಿರಾಫೆಯನ್ನ ಶಿಫ್ಟ್ ಮಾಡಲಾಗಿದೆ. ಅಲ್ಲದೇ, ಮೈಸೂರು ಮೃಗಾಲಯದಿಂದ ಮತ್ತೊಂದು ಜಿರಾಫೆ ತರಲು ತೀರ್ಮಾನಿಸಲಾಗಿದೆ.




    ಇದನ್ನೂ ಓದಿ: Viral News: ಹೊಸಪೇಟೆಯಲ್ಲಿ ಅಪರೂಪದ ವಿದ್ಯಮಾನ, ಮರಳಿ ಮನೆ ಸೇರಿದ ಯೂರೋಪಿಯನ್ ರಣಹದ್ದು


    ಸ್ಥಳೀಯರ ಸಂತಸ ಹೆಚ್ಚಿಸಿದ ಜಿರಾಫೆ
    ಒಟ್ಟಾರೆ ವಿಜಯನಗರಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಹೊಸ ಅತಿಥಿ ಆಗಮನವಾಗಿರೋದು ವನ್ಯಜೀವಿಗಳ ಖುಷಿಗೆ ಕಾರಣವಾಗಿದೆ. ಅಲ್ಲದೇ, ಜಿಲ್ಲೆಯ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯಕ್ಕೆ ಆಗಮಿಸಿ ಜಿರಾಫೆ ನೋಡಿ ಸಂಭ್ರಮಿಸ್ತಿದ್ದಾರೆ.


    ಮಾಹಿತಿ, ವಿಡಿಯೋ: ಬಸವರಾಜ್ ಹಾರನಹಳ್ಳಿ, ನ್ಯೂಸ್ 18 ಕನ್ನಡ ಬಳ್ಳಾರಿ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು