Vijayanagara: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ; ದೇವರ ಮೊರೆಹೋದ ರೈತ

ರಥಕ್ಕೆ ಎಸೆದ ಬಾಳೆಹಣ್ಣು

ರಥಕ್ಕೆ ಎಸೆದ ಬಾಳೆಹಣ್ಣು

ದೇಶದ ಬಹುದೊಡ್ಡ ಸಮಸ್ಯೆಯಾದ ರೈತರಿಗೆ ಕನ್ಯಾ ಕೊಡೊಲ್ಲ, ನೌಕರರಿಗೆ ಕನ್ಯಾ ಕೊಡ್ತೀವಿ ಅನ್ನೋದು ಬದಲಾಗಲಿ- ವೈರಲ್ ಆಗ್ತಿದೆ ಗಂಭೀರ ಸಮಸ್ಯೆ!

  • News18 Kannada
  • 5-MIN READ
  • Last Updated :
  • Bellary, India
  • Share this:

    ವಿಜಯನಗರ: ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ಭಕ್ತರೊಬ್ಬರು ರಥೋತ್ಸವಕ್ಕೆ ಎಸೆದ ವಿದ್ಯಮಾನ ನಡೆದಿದೆ.  ವಿಜಯನಗರದ (Vijayangara News) ಹಗರಿಬೊಮ್ಮನಹಳ್ಳಿ ತಾಲೂಕು ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲೇ (Durga Mata Rathotsav) ಈ ವಿಶಿಷ್ಟ ಘಟನೆ ನಡೆದಿರುವುದು.


    ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಮ್ಮನಹಳ್ಳಿಯಲ್ಲಿ ರಥೋತ್ಸವ ನಡೆಯುತ್ತಿದೆ. ಈ ರಥೋತ್ಸವದಲ್ಲೇ ಭಕ್ತರೊಬ್ಬರು ಹೀಗೆ ಬಾಳೆಹಣ್ಣಿನ ಮೇಲೆ ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ ಎಂದು ಬರೆದು ರಥಕ್ಕೆ ಎಸೆದ ಘಟನೆ ನಡೆದಿದೆ.


    ದೇಶದ ಬಹುದೊಡ್ಡ ಸಮಸ್ಯೆ
    ದೇಶದ ಬಹುದೊಡ್ಡ ಸಮಸ್ಯೆಯಾದ ರೈತರಿಗೆ ಕನ್ಯಾ ಕೊಡೊಲ್ಲ, ನೌಕರರಿಗೆ ಕನ್ಯಾ ಕೊಡ್ತೀವಿ ಅನ್ನೋದು ಬದಲಾಗಲಿ. ಬಹು ಸಂಖ್ಯಾ ಹೆಣ್ಣೆತ್ತವರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯಾಕೊಡಲಿ ಎಂದು ತಾಯಿ ದುರ್ಗಾ ಮಾತೆಗೆ ಬಾಳೆಹಣ್ಣಿನ ಮೇಲೆ ಬರೆದು ರೈತ ಭಕ್ತರೊಬ್ಬರು ಬೇಡಿಕೊಂಡಿದ್ದಾರೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ವೈರಲ್ ಆಗಿದೆ.


    ಇದನ್ನೂ ಓದಿ: Vijayanagara: ವಿಜಯನಗರಕ್ಕೆ ಉದ್ದ ಕತ್ತಿನ ವಿಶೇಷ ಅತಿಥಿಯ ಆಗಮನ!


    ಹೆಚ್.ಡಿ.ಕುಮಾರಸ್ವಾಮಿ ಅವರಿಂದಲೂ ಪ್ರಸ್ತಾಪ, ಆಶ್ವಾಸನೆ
    ಸದ್ಯ ರೈತ ಯುವಕರಿಗೆ ಮದುವೆಯಾಗಲು ವಧು ಸಿಗುತ್ತಿಲ್ಲ ಎಂಬ ವಿಷಯ ಗಂಭೀರ ಚರ್ಚೆಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ವೇಳೆಯೂ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ತಾವು ಅಧಿಕಾರಕ್ಕೆ ಬಂದರೆ ರೈತ ಯುವಕರ ಮನೆಗೆ ಹುಡುಕಿಕೊಂಡು ಬಂದು ಹೆಣ್ಣು ಕೊಡುವಂತೆ ಮಾಡುವುದಾಗಿ ಅವರು ಆಶ್ವಾಸನೆ ನೀಡಿದ್ದರು.




    ಇದನ್ನೂ ಓದಿ: Vijayanagara: ಉತ್ತರ ಕರ್ನಾಟಕದಲ್ಲಿ ಅಡಿಕೆ ತೋಟದ ನಡುವೆ ಕಾಫಿ ಕೃಷಿ!


    ವೈರಲ್ ಆಗುತ್ತಿದೆ ಗಂಭೀರ ಸಮಸ್ಯೆ
    ಸದ್ಯ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಮ್ಮನಹಳ್ಳಿಯಲ್ಲಿ ರಥೋತ್ಸವದಲ್ಲಿ ರೈತ ಭಕ್ತರೊಬ್ಬರು ತಮ್ಮ ಮನದಾಳದ ಭಾವನೆಗಳನ್ನು ಈ ರೀತಿ ದೇವಿಯ ಮುಂದಿಟ್ಟಿರುವುದು ವೈರಲ್ ಆಗುತ್ತಿದೆ.

    Published by:ಗುರುಗಣೇಶ ಡಬ್ಗುಳಿ
    First published: