ನಮ್ಮ ಸುತ್ತಮುತ್ತಲಿನ ಜನರಲ್ಲಿ (People) ಕೆಲವರು ತುಂಬಾನೇ ಬಲವಾದ ಮತ್ತು ದೃಢವಾದ ವ್ಯಕ್ತಿತ್ವವನ್ನು ಹೊಂದಿರುವ ಜನರನ್ನು ನಾವು ನೋಡುತ್ತೇವೆ. ಅಂತಹ ಜನರನ್ನು ನಾವು ನೋಡಿದಾಗ ‘ಏನಪ್ಪಾ ಇವರು ಇಷ್ಟೊಂದು ದೃಢನಿಶ್ಚಯದವರಾಗಿದ್ದಾರೆ, ಇವರ ವ್ಯಕ್ತಿತ್ವ ಎಷ್ಟೊಂದು ವಿಭಿನ್ನವಾಗಿದೆ’ ಅಂತೆಲ್ಲಾ ಮಾತಾಡುತ್ತೇವೆ. ಈ ಜನರು ತುಂಬಾನೇ ಆಕರ್ಷಕವಾದ (Attraction) ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಇವರ ವ್ಯಕ್ತಿತ್ವಕ್ಕೆ ಬೇರೆಯವರು ಹೆದರುವವರು. ಈ ಜನರು ಹೆಚ್ಚಾಗಿ ವೃಶ್ಚಿಕ, ಸಿಂಹ, ಮತ್ತು ಮೇಷ ರಾಶಿಯವರಾಗಿರುತ್ತಾರೆ. ಬನ್ನಿ ಹಾಗಾದರೆ ಈ ಮೂರು ರಾಶಿಯ (Zodic) ಜನರ ವ್ಯಕ್ತಿತ್ವ ಹೇಗಿರುತ್ತದೆ ಅಂತ ನೋಡಿಕೊಂಡು ಬರೋಣ. 'ತೀವ್ರ' ಎಂಬ ಪದವು ಹೆಚ್ಚಾಗಿ ಈ ವೃಶ್ಚಿಕ ರಾಶಿಯ ಜನರಿಗೆ ಸರಿ ಹೊಂದುತ್ತದೆ. ರೂಪಾಂತರ ಮತ್ತು ಶಕ್ತಿಯ (Power) ಗ್ರಹವಾದ ಪ್ಲೂಟೊದಿಂದ ಆಳಲ್ಪಡುವ ವೃಶ್ಚಿಕ ರಾಶಿಯವರು ಆಳವಾದ, ಸಂಕೀರ್ಣ ಮತ್ತು ಸ್ವಲ್ಪ ಹೆದರಿಸುವವರು ಸಹ ಆಗಿರುತ್ತಾರೆ.
ಈ ರಾಶಿಯ ಜನರು ಎಲ್ಲೇ ಹೋದರೂ ತಲೆಯೆತ್ತಿ ನೋಡಲು ಇಷ್ಟಪಡುತ್ತಾರೆ ಮತ್ತು ಅವರ ದೃಷ್ಟಿ ಎದುರಿಗಿರುವವರನ್ನು ಹೆದರಿಸುತ್ತದೆ. ಅವರು ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅಷ್ಟೇ ಪ್ರಮಾಣದಲ್ಲಿ ನಿಮಗೆ ಅವರ ಮುಂದಿನ ನಡೆಗಳ ಮತ್ತು ಮಾತುಗಳ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡುತ್ತಾರೆ ಈ ರಾಶಿಯ ಜನರು.
ವೃಶ್ಚಿಕ ರಾಶಿಯವರು ಆಳವಾದ, ಅರ್ಥಪೂರ್ಣ ಸಂವಹನಗಳನ್ನು ನಡೆಸಲು ಬಯಸುತ್ತಾರೆ ಮತ್ತು ಜೀವನದ ಕರಾಳ ಮುಖಗಳನ್ನು ಅನ್ವೇಷಿಸಲು ಸ್ವಲ್ಪವೂ ಹಿಂಜರಿಯುವುದಿಲ್ಲ.
ಸಿಂಹ ರಾಶಿಯವರು ತುಂಬಾನೇ ಧೈರ್ಯಶಾಲಿಗಳು!
ಸಿಂಹ ರಾಶಿಯವರು ಸಿಂಹದಂತೆ ತುಂಬಾನೇ ಧೈರ್ಯಶಾಲಿಗಳಾಗಿರುತ್ತಾರೆ ಮತ್ತು ಸದಾ ಮನಮೋಹಕವಾಗಿರಲು ಇಷ್ಟಪಡುತ್ತಾರೆ. ನಮ್ಮ ಸೌರವ್ಯೂಹದ ಕೇಂದ್ರವಾದ ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು ಗಮನವನ್ನು ಸೆಳೆಯುವ ಸಹಜ ಸಾಮರ್ಥ್ಯವನ್ನು ಹೊಂದಿರುತ್ತಾರೆ, ಇದು ಇತರರನ್ನು ಹೆದರಿಸುತ್ತದೆ ಅಂತ ಹೇಳಬಹುದು.
ಇದನ್ನೂ ಓದಿ: ಮನೆಯಲ್ಲಿ ಹಣದ ಸಮಸ್ಯೆ ಆಗಬಾರ್ದು ಅಂದ್ರೆ ಈ ಕೆಲಸ ಮಾಡಿ ಸಾಕು
ಸಿಂಹ ರಾಶಿಯವರು ಸ್ವಾಭಾವಿಕವಾಗಿಯೇ ನಾಯಕತ್ವ ಗುಣಗಳೊಂದಿಗೆ ಜನಿಸಿದವರಾಗಿರುತ್ತಾರೆ ಮತ್ತು ಅವರ ಕ್ರಿಯಾತ್ಮಕ ವ್ಯಕ್ತಿತ್ವವು ಇತರರನ್ನು ಜ್ವಾಲೆಗೆ ಪತಂಗಗಳಂತೆ ಸೆಳೆಯುತ್ತವೆ. ಆದರೆ ಅವರ ದಿಟ್ಟತನ, ಕೌಶಲ್ಯ ಮತ್ತು ಸ್ವಾಭಾವಿಕ ಪ್ರಾಬಲ್ಯವು ಕೆಲವರಿಗೆ ಸ್ವಲ್ಪ ಅಥವಾ ಪೂರ್ಣವಾಗಿ ಕಾಣುತ್ತದೆ.
ಸಿಂಹ ರಾಶಿಯವರು ಒಂದು ಕೋಣೆಗೆ ಕಾಲಿಟ್ಟಾಗ, ಅವರ ವರ್ಚಸ್ಸು ಮತ್ತು ಉಪಸ್ಥಿತಿಯನ್ನು ಅಲ್ಲಿರುವ ಇತರೆ ಜನರು ಅದನ್ನು ಅನುಭವಿಸುತ್ತಾರೆ ಮತ್ತು ಅವರ ಆತ್ಮವಿಶ್ವಾಸವು ಇತರರಿಗೆ ತುಂಬಾನೇ ವಿಸ್ಮಯಕಾರಿ ಮತ್ತು ಹೆದರಿಸುವಂತೆ ಇರುತ್ತದೆ.
ಅಲ್ಲದೆ ಈ ರಾಶಿಯವರು ಇತರರನ್ನು ಬೆರಗುಗೊಳಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಎಂದರೆ ಇವರು ಬಲಶಾಲಿಯೂ ಹೌದು, ಉದಾರಿಗಳು ಸಹ ಆಗಿರುತ್ತಾರೆ, ತುಂಬಾನೇ ಕರುಣಾಮಯಿ ಹೃದಯದವರು ಸಹ ಆಗಿರುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರನ್ನು ತುಂಬಾನೇ ರಕ್ಷಿಸುತ್ತಾರೆ.
ಮೇಷ ರಾಶಿಯ ಜನರು ತುಂಬಾನೇ ನಿರ್ಭೀತರಾಗಿರುತ್ತಾರೆ
ಮೇಷ ರಾಶಿಯ ಜನರು ಮಂಗಳನಿಂದ ಆಳಲ್ಪಡುವವರಾಗಿರುತ್ತಾರೆ. ಮೇಷ ರಾಶಿಯ ಜನರು ನಿರ್ಭೀತರು, ಕ್ರಿಯಾತ್ಮಕರು ಮತ್ತು ಅನೇಕರು ಹೆದರಿಸುವ ಮನೋಭಾವವನ್ನು ಹೊಂದಿರುತ್ತಾರೆ.
ಇವರು ಯಾವುದೇ ಸಭೆಗಳಿಗೆ ಹೋದರೂ ತಮ್ಮನ್ನು ತಾವು ತುಂಬಾನೇ ಆತ್ಮವಿಶ್ವಾಸದಿಂದ ಪರಿಚಯಿಸಿಕೊಳ್ಳುವುದನ್ನು, ಅವರ ಉತ್ಸಾಹವನ್ನು ಮತ್ತು ಅವರ ಶಕ್ತಿ ಮತ್ತು ಸಾಮರ್ಥ್ಯವನ್ನು ನೀವು ನೋಡುತ್ತೀರಿ. ಅವರು ತುಂಬಾನೇ ದಿಟ್ಟ ಪ್ರಸ್ತಾಪಗಳನ್ನು ಮಾಡುತ್ತಾರೆ, ಆಲೋಚನೆಗಳನ್ನು ಪ್ರಶ್ನಿಸುತ್ತಾರೆ ಮತ್ತು ಬಿಸಿ ಚರ್ಚೆಗಳನ್ನು ಹುಟ್ಟು ಹಾಕುತ್ತಾರೆ.
ಮೇಷ ರಾಶಿಯ ಜನರು ಪ್ರವರ್ತಕರು, ಯಾವಾಗಲೂ ಹೊಸ ಉದ್ಯಮಗಳಲ್ಲಿ ಧುಮುಕಲು ಸಿದ್ಧರಿರುತ್ತಾರೆ. ಜೀವನದ ಬಗ್ಗೆ ಅವರ ಉತ್ಸಾಹ, ದೃಢತೆ ಮತ್ತು ಧೈರ್ಯವು ಆಗಾಗ್ಗೆ ಇತರರನ್ನು ಸೆಳೆಯಬಹುದು.
ಇದನ್ನೂ ಓದಿ: ಪ್ರತಿನಿತ್ಯ ನೀವು ಈ ಬಣ್ಣದ ಬಟ್ಟೆಯನ್ನು ಧರಿಸಿದ್ರೆ, ಹಣ ಮನೆಯಲ್ಲಿ ತುಂಬಿ ತುಳುಕಾಡುತ್ತೆ!
ಅವರ ಧೈರ್ಯಶಾಲಿ ಸ್ವಭಾವ ಮತ್ತು ಪ್ರಚೋದನೆಯು ಕೆಲವರಿಗೆ ಆತಂಕವನ್ನುಂಟು ಮಾಡಬಹುದು, ಇದರಿಂದಾಗಿ ಅವರು ಸುಂಟರಗಾಳಿಯಲ್ಲಿ ಸಿಕ್ಕಿಹಾಕಿಕೊಂಡಂತೆ ಭಾಸವಾಗುತ್ತದೆ.
ಈ ಮೂರು ರಾಶಿಯವರು ತಮ್ಮ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ
ಮೇಲಿನ ಮೂರು ರಾಶಿಯ ಜನರು ಜಲಪಾತಗಳಷ್ಟೇ ಶಕ್ತಿಯುತವಾದ ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ ಮತ್ತು ಗಮನವನ್ನು ಮತ್ತು ಗೌರವವನ್ನು ಸಹ ಕೋರುತ್ತಾರೆ. ವಾಸ್ತವವಾಗಿ, ಈ ಚಿಹ್ನೆಗಳು ಅತ್ಯಂತ ಪ್ರತಿಫಲದಾಯಕ ಸ್ನೇಹ ಮತ್ತು ಸಂಬಂಧಗಳನ್ನು ನೀಡುತ್ತವೆ, ನೀವು ಅವುಗಳ ತೀವ್ರತೆಗೆ ಹೊಂದಿಕೆಯಾಗಬಹುದು.
ವೃಶ್ಚಿಕ, ಸಿಂಹ ಮತ್ತು ಮೇಷ ರಾಶಿಯವರು ತುಂಬಾನೇ ನಿಷ್ಠಾವಂತರು
ಜೀವನದಲ್ಲಿ ಹೇಗೆ ಕಷ್ಟಗಳನ್ನು ಮೀರಿ, ದಾಟಿಕೊಂಡು ಮುಂದಕ್ಕೆ ಹೋಗುತ್ತೀರೊ, ಹಾಗೆಯೇ ನೀವು ಒಮ್ಮೆ ಈ ರಾಶಿಯ ಜನರ ನಂಬಿಕೆಯನ್ನು ಗಳಿಸಿದರೆ ಸಾಕು, ನೀವು ವಿಶೇಷವಾದ ಅನುಭವವನ್ನು ಕಂಡುಕೊಳ್ಳುತ್ತೀರಿ.
ಅವರ ನಿಷ್ಠೆಯನ್ನು ನೀವು ಗೌರವಿಸಬೇಕು ಮತ್ತು ಅವರ ಒಳನೋಟಗಳು ವಿಷಯಗಳನ್ನು ಹೊಸ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ.
ವೃಶ್ಚಿಕ, ಸಿಂಹ ಮತ್ತು ಮೇಷ ರಾಶಿಯವರು ತಮ್ಮ ಶಕ್ತಿಯುತ ವ್ಯಕ್ತಿತ್ವಗಳಿಂದ ಇತರರು ಭಯಭೀತರನ್ನಾಗಿಸಬಹುದು. ಆದರೆ ಅವರು ತೀವ್ರವಾಗಿ ನಿಷ್ಠಾವಂತರು, ನಂಬಲಾಗದಷ್ಟು ಭಾವೋದ್ರಿಕ್ತರು ಮತ್ತು ಅಸಾಧಾರಣವಾಗಿ ಬೆಂಬಲಿಸುವಂತವರು ಅಂತ ಹೇಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ