• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Unlucky Persons: ಈ ರಾಶಿಯವರಿಗೆ ಏನೇ ಮಾಡಿದ್ರೂ ತೃಪ್ತಿ ಆಗಲ್ವಂತೆ, ಈ ಪಟ್ಟಿಯಲ್ಲಿ ನೀವಿದ್ದೀರಾ ಅಂತ ನೋಡ್ಕೊಳ್ಳಿ

Unlucky Persons: ಈ ರಾಶಿಯವರಿಗೆ ಏನೇ ಮಾಡಿದ್ರೂ ತೃಪ್ತಿ ಆಗಲ್ವಂತೆ, ಈ ಪಟ್ಟಿಯಲ್ಲಿ ನೀವಿದ್ದೀರಾ ಅಂತ ನೋಡ್ಕೊಳ್ಳಿ

ಭವಿಷ್ಯ

ಭವಿಷ್ಯ

ತೃಪ್ತಿ ಪಟ್ಟುಕೊಂಡರೆ ಸ್ವರ್ಗ ಅನುಭವ ನೀಡುತ್ತದೆ, ಅದೇ ತೃಪ್ತಿ ಪಡದೇ ಇನ್ನೂ ಬೇಕು ಎನ್ನುವವರಿಗೆ ನರಕ ಯಾತನೆ ತಪ್ಪಿದ್ದಲ್ಲ ಅಂತ ಹೇಳಬಹುದು.

  • Trending Desk
  • 4-MIN READ
  • Last Updated :
  • Share this:

ಕೆಲವೊಬ್ಬರು ತಮಗೆ ಜೀವನದಲ್ಲಿ (Life) ಸಿಗುವ ಚಿಕ್ಕ-ಪುಟ್ಟ ಖುಷಿಗಳನ್ನು ಆನಂದಿಸುತ್ತಾ ಜೀವನವನ್ನು ಸಂಪೂರ್ಣವಾಗಿ ಜೀವಿಸುತ್ತಿರುತ್ತಾರೆ. ಆದರೆ ಇನ್ನು ಕೆಲವರು ಇರಲು ಬಂಗಲೆ, ಓಡಾಡಲು ಕಾರು, ಕೈ ತುಂಬಾ ಸಂಬಳ, ಒಳ್ಳೆಯ ಕೆಲಸ, ಮಡದಿ ಮತ್ತು ಮಕ್ಕಳಿದ್ದರೂ ಸಹ ಅವರು ತಮ್ಮ ಜೀವನದಿಂದ ತೃಪ್ತರಾಗಿರುವುದಿಲ್ಲ ಅಂತ ಹೇಳಬಹುದು. ಈ ಜೀವನವೇ (Life) ಹಾಗೆ ನೋಡಿ. ತೃಪ್ತಿ ಪಟ್ಟುಕೊಂಡರೆ ಸ್ವರ್ಗ (Heaven) ಅನುಭವ ನೀಡುತ್ತದೆ, ಅದೇ ತೃಪ್ತಿ ಪಡದೇ ಇನ್ನೂ ಬೇಕು ಎನ್ನುವವರಿಗೆ ನರಕ ಯಾತನೆ ತಪ್ಪಿದ್ದಲ್ಲ ಅಂತ ಹೇಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ಜೀವನದ ಸಾರ ಇರುವುದು ನಮ್ಮಲ್ಲಿ ಎಷ್ಟಿದೆಯೋ ಅದರಲ್ಲಿ ತೃಪ್ತಿ ಪಡುವುದು ಅಂತ ಹೇಳಬಹುದು. ಪಡೆದಷ್ಟೂ ಇನ್ನೂ ಬೇಕು ಎಂಬ ಹಂಬಲವಿರುವ ಜನರ ಜೀವನದಲ್ಲಿ ಆ ಸಂತೋಷ (Happy), ನೆಮ್ಮದಿ ನೆಲೆಯೂರಲು ಸಾಧ್ಯವೇ ಇಲ್ಲ ಅಂತ ಹೇಳಬಹುದು. ಇಂತಹ ಜನರು ನಮ್ಮ ನಿಮ್ಮ ಮಧ್ಯೆ ತುಂಬಾನೇ ಇರುತ್ತಾರೆ ಅಂತ ಹೇಳಬಹುದು.


ಇಲ್ಲಿ ಹನ್ನೆರಡು ರಾಶಿಚಕ್ರ ಚಿಹ್ನೆಗಳ ಜನರ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಮೂಲಕ ಯಾರಲ್ಲಿ ಈ ರೀತಿಯ ತೃಪ್ತಿ ಪಡದ ಗುಣಗಳಿರುತ್ತವೆ ಅಂತ ಅರ್ಥ ಮಾಡಿಕೊಳ್ಳಲು ಜ್ಯೋತಿಷ್ಯವು ಸಹಾಯ ಮಾಡಿದೆ ನೋಡಿ. ಇಲ್ಲಿ ತಮ್ಮ ಜೀವನದಿಂದ ತೃಪ್ತಿಪಡದ ಜನರು ಹೆಚ್ಚಾಗಿ ಯಾವ ರಾಶಿಚಕ್ರ ಚಿಹ್ನೆಗೆ ಸೇರಿದವರಾಗಿರುತ್ತಾರೆ ಅಂತ ಇಲ್ಲಿ ತಿಳಿದುಕೊಳ್ಳೋಣ ಬನ್ನಿ.


1. ಮೇಷ ರಾಶಿ


ಈ ರಾಶಿಯ ಜನರು ತಮ್ಮ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುವ ಉತ್ಸಾಹವನ್ನು ಹೊಂದಿರುತ್ತಾರೆ ಮತ್ತು ಇದಕ್ಕೆ ಒಂದು ಕೊನೆ ಎನ್ನುವುದು ಇರುವುದಿಲ್ಲ ಅಂತ ಹೇಳಬಹುದು. ಅವರು ಹೆಚ್ಚಿನ ಜವಾಬ್ದಾರಿ ಮತ್ತು ಸವಾಲುಗಳನ್ನು ತೆಗೆದುಕೊಳ್ಳಲು ಬಯಸುವ ಯಾವುದೇ ಕೆಲಸದಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಲು ಇವರು ಹಿಂಜರಿಯುವುದಿಲ್ಲ. ಅವರು ತಮ್ಮಲ್ಲಿ ಏನಿದೆಯೋ ಅದರಿಂದ ತೃಪ್ತಿಪಡಲು ಸಾಧ್ಯವಾಗುವುದಿಲ್ಲ. ಅವರ ಬಳಿ ಇರುವ ಆಸ್ತಿ, ಸಂಪತ್ತು, ಯಶಸ್ಸು, ನೆಮ್ಮದಿಯಿಂದ ಅವರು ಅಷ್ಟೊಂದು ತೃಪ್ತರಾಗಿರುವುದಿಲ್ಲ.


2. ಮಿಥುನ ರಾಶಿ


ಈ ರಾಶಿಯ ಜನರು ತುಂಬಾನೇ ಸುಲಭವಾಗಿ ಬೇಸರಗೊಳ್ಳುತ್ತಾರೆ. ಅವರು ಯಾವಾಗಲೂ ಮಾಡಲು ಹೊಸ ವಿಷಯಗಳನ್ನು ಹುಡುಕುತ್ತಿರುತ್ತಾರೆ, ಏಕೆಂದರೆ ಅವರಿಗೆ ಜೀವನದಲ್ಲಿ ನಿರಂತರ ಉತ್ಸಾಹ ಬೇಕು. ಅವರು ಬಯಸಿದ್ದನ್ನು ತಕ್ಷಣ ಪಡೆಯಲು ಸಾಧ್ಯವಾಗದಿದ್ದರೆ, ಅವರು ಕೋಪಗೊಳ್ಳುತ್ತಾರೆ ಮತ್ತು ನಿರಾಶೆಗೊಳ್ಳುತ್ತಾರೆ. ಅವರು ಈ ಸಂಬಂಧಗಳಲ್ಲಿಯೂ ಸಹ ನಿಜವಾಗಿಯೂ ಯಾವಾಗಲೂ ಬೇಸರಗೊಳ್ಳುತ್ತಲೇ ಇರುತ್ತಾರೆ ಅಂತ ಹೇಳಬಹುದು.


ಇದನ್ನೂ ಓದಿ: ಕುಂಭ ರಾಶಿಯಲ್ಲಿ ಬುಧಾದಿತ್ಯ ಯೋಗ, ಹಣದ ಹೊಳೆಯನ್ನು ಯಾರೂ ತಡೆಯಲು ಆಗಲ್ಲ


3. ಕನ್ಯಾ ರಾಶಿ


ಈ ರಾಶಿಯವರು ಸರ್ವಕಾಲಿಕ ಅತ್ಯುತ್ತಮವಾದದ್ದನ್ನು ಸಾಧಿಸುವ ಅನ್ವೇಷಣೆಯನ್ನು ಹೊಂದಿರುವವರಾಗಿರುತ್ತಾರೆ. ಆದರೆ ಅವರು ಬಯಸಿದ್ದನ್ನು ಅವರು ಈಗಾಗಲೇ ಸಾಧಿಸಿದ್ದರೂ ಸಹ, ಅವರು ಇನ್ನೂ ಹೆಚ್ಚಿನದನ್ನು ಸಾಧಿಸಲು ಬಯಸುತ್ತಿರುತ್ತಾರೆ. ಏಕೆಂದರೆ ಅವರು ತಮ್ಮಲ್ಲಿರುವದರಿಂದ ಎಂದಿಗೂ ತೃಪ್ತರಾಗುವುದಿಲ್ಲ. ಅವರ ಈ ತೃಪ್ತಿಪಡದ ಬುದ್ದಿ ಒಂದು ದಿನ ಅವರ ಸಂಬಂಧಗಳನ್ನು ಸಹ ಹಾಳು ಮಾಡಬಹುದು.


4. ಧನು ರಾಶಿ


ಈ ರಾಶಿಯ ಜನರು ತಮ್ಮ ಜೀವನದಲ್ಲಿ ಯಾವಾಗಲೂ ಅತ್ಯುತ್ತಮವಾದುದ್ದನ್ನು ಹುಡುಕುತ್ತಿರುತ್ತಾರೆ. ಈ ಹುಡುಕಾಟ ಅವರಿಗೆ ಎಂದಿಗೂ ಈಡೇರುವುದಿಲ್ಲ ಮತ್ತು ಅವರು ಸಂತೋಷ ಮತ್ತು ಸಂತೃಪ್ತಿ ಹೊಂದಿದ್ದರೂ ಸಹ ತಮ್ಮಲ್ಲಿರುವದಕ್ಕೆ ಎಂದಿಗೂ ತೃಪ್ತಿ ಪಟ್ಟುಕೊಳ್ಳುವುದಿಲ್ಲ. ಅವರು ಎಲ್ಲವೂ ಪರಿಪೂರ್ಣವಾಗಿ ಮತ್ತು ಅತ್ಯುತ್ತಮವಾದದ್ದನ್ನು ಹೊಂದಬೇಕೆಂದು ಕೊನೆಯೇ ಇಲ್ಲದ ಬಯಕೆಯನ್ನು ಹೊಂದಿರುತ್ತಾರೆ.


5. ಮಕರ ರಾಶಿ


ಇವರು ಅತ್ಯಂತ ಉನ್ನತ ಗುರಿಗಳನ್ನು ಹೊಂದಿರುವ ಜನರು ಮತ್ತು ಪ್ರೇರೇಪಿತ ಜನರು ಆಗಿರುತ್ತಾರೆ. ಅವರು ತಮ್ಮ ಸಾಧನೆಗಳಿಂದ ಎಂದಿಗೂ ಬೇಗನೆ ತೃಪ್ತರಾಗುವುದಿಲ್ಲ. ಇವರು ಅತ್ಯಂತ ಗುರಿ-ಆಧಾರಿತ ಜನರಲ್ಲಿ ಒಬ್ಬರಾಗಿರುತ್ತಾರೆ. ಅವರು ಯಾವಾಗಲೂ ತಮ್ಮ ಗೆಲುವು ಮತ್ತು ಗೆಲುವನ್ನು ವಿಸ್ತರಿಸಲು ಪ್ರಯತ್ನಿಸುತ್ತಾರೆ.




ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಜೀವನದಿಂದ ತೃಪ್ತವಾಗಿರುತ್ತಾರಂತೆ..


ವೃಷಭ, ಕರ್ಕ, ಸಿಂಹ, ತುಲಾ, ವೃಶ್ಚಿಕ, ಕುಂಭ ಮತ್ತು ಮೀನ ರಾಶಿಯವರು ತಮ್ಮ ಜೀವನದಲ್ಲಿ ಏನಿದೆಯೋ ಅದರಿಂದ ತೃಪ್ತರಾಗಿರುತ್ತಾರೆ. ಅವರು ತಮ್ಮ ಜೀವನವನ್ನು ಸಂತೋಷ ಮತ್ತು ಸಂತೃಪ್ತಿಗೊಳಿಸಲು ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದ್ದರಿಂದ ಅವರು ಹೆಚ್ಚಿನ ಗುರಿಗಳನ್ನು ಬೆನ್ನಟ್ಟಲು ಹೋಗುವುದಿಲ್ಲ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು