ಸಿನಿಮಾ ಸ್ಟಾರ್ಸ್ ಅಂದರೆ ಎಲ್ಲರಿಗೂ ಒಂದು ರೀತಿಯ ಅಭಿಮಾನ, ಪ್ರೀತಿ. ಅವರ ಜೊತೆ ಒಂದು ಫೋಟೋ ತೆಗೆದುಕೊಳ್ಳಬೇಕು, ಅವರನ್ನು ನೋಡಬೇಕು, ಮಾತನಾಡಿಸಬೇಕು ಅಂತಾ ಆಸೆ ಇರುತ್ತದೆ. ಅದರಲ್ಲೂ ಅವರಿಷ್ಟದ ನಟ-ನಟಿಯರನ್ನೂ ಕಂಡರೆ ಇನ್ನಿಲ್ಲದ ಕ್ರೇಜ್. ಆ ಕ್ರೇಜ್ (Film Stars Craze) ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಅವರ ಮದುವೆ ಆಗೋ ಚಾನ್ಸ್ ಸಿಕ್ಕರೂ ಬೇಡ ಅನ್ನಲ್ವೇನೋ. ಕೆಲವರಂತೂ ಅವರೇ ನನ್ನ ಕನಸಿನ ಹುಡುಗ (Dream Boy) ಅಥವಾ ಕನಸಿನ ಹುಡುಗಿ (Dream Girl) ಅಂತಾ ತಿಳಿದಿರುತ್ತಾರೆ.
ಹೀಗೆ ಸಿನಿಮಾ ನಟರನ್ನು ಹುಚ್ಚನಂತೆ ಪ್ರೀತಿಸುವ, ಅವರ ಜೊತೆ ಹೆಚ್ಚು ಪ್ರೀತಿಯಲ್ಲಿ ಬೀಳುವ ಕೆಲ ರಾಶಿಗಳಿವೆ. ಈ ರಾಶಿಗಳ ಜನರು ಮಾತ್ರ ಅವರನ್ನು ಹೆಚ್ಚಾಗಿ ಹಚ್ಚಿಕೊಳ್ಳುತ್ತಾರಂತೆ. ಹಾಗಾದರೆ ಸಿನಿಮಾ ಸ್ಟಾರ್ಸ್‌ಗಳನ್ನು ಹೆಚ್ಚಾಗಿ ಪ್ರೀತಿಸುವ ರಾಶಿ ನಿಮ್ಮದೂ ಕೂಡ ಹೌದಾ ಅಂತಾ ಈ ಕೆಳಗಿನ ವಿವರಣೆಯಲ್ಲಿ ತಿಳಿಯಿರಿ.
ಚಲನಚಿತ್ರ ತಾರೆಯರನ್ನು ಹುಚ್ಚನಂತೆ ಪ್ರೀತಿಸುವ ರಾಶಿ ಚಕ್ರಗಳು
ವೃಷಭ ರಾಶಿ
ಮೊದಲಿಗೆ ವೃಷಭ ರಾಶಿ. ಈ ರಾಶಿಯವರ ಹೇಗಪ್ಪಾ ಅಂದರೆ ಇವರು ಬಹಳ ಐಷಾರಾಮಿ ಮತ್ತು ಭವ್ಯವಾದ ರೀತಿಯಲ್ಲಿ ಪ್ರೀತಿಯಲ್ಲಿ ಬೀಳುವ ಕಲ್ಪನೆಯನ್ನು ಪ್ರೀತಿಸುತ್ತಾರೆ. ಹೀಗಾಗಿ ಸ್ಟಾರ್ಸ್‌ಗಳನ್ನು ಪರದೆಯ ಮೇಲೆ ನೋಡಿ ಇವರು ಇದೇ ರೀತಿ ಪ್ರೀತಿಯನ್ನು ವ್ಯಕ್ತಪಡಿಸಬಹುದು ಎಂದು ಅವರ ಜೊತೆ ಬೇಗ ಪ್ರೀತಿಯಲ್ಲಿ ಬೀಳುತ್ತಾರೆ. ಹುಚ್ಚರಂತೆ ಅವರನ್ನು ಪ್ರೀತಿಸುತ್ತಾರೆ.
ಸಿಂಹ
ಸಿನಿಮಾ ಕಲಾವಿದರ ಹೊಂದಿರುವ ಖ್ಯಾತಿ ಮತ್ತು ಪ್ರಚಾರ ಇವರಿಗೂ ಸಹ ಇಷ್ಟ. ಹೀಗಾಗಿ ಅವರಿಷ್ಟದ ನಟರನ್ನು ಅನುಕರಣೆ ಮಾಡುವ ಮೂಲಕ ಅವರ ಬಗ್ಗೆ ಕನಸು ಕಾಣುತ್ತಾರೆ. ಈ ಫೇಮ್ ಮತ್ತು ನೇಮ್‌ಗಳು ಸಿಂಹ ರಾಶಿಯವರಿಗೆ ಸಿನಿಮಾ ತಾರೆಯರತ್ತ ಆಕರ್ಷಿಸಲು ಪ್ರಮುಖ ಕಾರಣವಾಗಿದೆ. ಏಕೆಂದರೆ ಸಿಂಹ ರಾಶಿಯವರಿಗೂ ಈ ನೇಮ್ ಮತ್ತು ಫೇಮ್ ತುಂಬಾನೇ ಇಷ್ಟ.
ನಾವು ಕೂಡ ಹೇಗೆ ಖ್ಯಾತಿ ಪಡೆಯುವುದು ಅಂತಾ ಯೋಚನೆ ಮಾಡುತ್ತಿರುತ್ತಾರೆ. ಹೀಗಾಗಿ ಅವರು ಸಿನಿಮಾ ಸ್ಟಾರ್ಸ್‌ಗಳನ್ನು ಹೆಚ್ಚು ಅನುಕರಣೆ ಮಾಡುವ ಮೂಲಕ ಅವರನ್ನು ಹೆಚ್ಚು ಪ್ರೀತಿಸುತ್ತಾರೆ.
ತುಲಾ
ತುಲಾ ರಾಶಿಯವರು ಅವರ ಲೈಫ್ ತುಂಬಾ ಬ್ರೈಟ್ ಆಗಿರಬೇಕು ಎಂದು ಬಯಸುತ್ತಾರೆ. ಹೀಗಾಗಿ ಅವರು ಜನಪ್ರಿಯತೆ ಹೊಂದಿರುವವರನ್ನು ಪ್ರೀತಿಸಲು, ಮದುವೆಯಾಗಲು ಬಯಸುತ್ತಾರೆ. ಅದರಲ್ಲೂ ಸೂಕ್ತ ಮ್ಯಾಚಿಂಗ್ ಸಿನಿಮಾ ತಾರೆಯರೇ ಎಂದು ಅಂದುಕೊಳ್ಳುತ್ತಾರೆ. ಸಿನಿಮಾ ಸ್ಟಾರ್ ಅನ್ನು ಮದುವೆಯಾಗಬೇಕು ಅಂತಲೂ ತುಲಾ ರಾಶಿಯವರು ಬಯಸುತ್ತಾರೆ. ಆದ್ದರಿಂದ ಸುಲಭವಾಗಿ ಕಲಾವಿದರ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ ಈ ರಾಶಿಯ ಜನರು.
ಧನು ರಾಶಿ
ಧನು ರಾಶಿಯವರು ಅದ್ದೂರಿ ಮತ್ತು ಲಕ್ಸುರಿ ಜೀವನವನ್ನು ಇಷ್ಟಪಡುತ್ತಾರೆ. ಆದ್ದರಿಂದ ಅವರು ಚಲನಚಿತ್ರ ತಾರೆಯೊಂದಿಗೆ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಹೆಚ್ಚು. ಚಲನಚಿತ್ರ ತಾರೆಯರು ಅನುಭವಿಸುವ ಅದ್ದೂರಿತನದ ಸವಲತ್ತುಗಳನ್ನು ಅವರು ಆನಂದಿಸುವುದರಿಂದ ನಟ ಅಥವಾ ನಟಿಯೇ ನಮ್ಮ ಜೀವನದ ಸಂಗಾತಿ ಆಗಬೇಕು ಎಂದು ಬಯಸುತ್ತಾರೆ. ಪ್ರೀತಿ ಮತ್ತು ಸಂಬಂಧಗಳ ಸಣ್ಣ ಕ್ಷಣಗಳು ಮತ್ತು ಸಂತೋಷಗಳನ್ನು ಸಹ ಈ ರಾಶಿಯವರು ಅಮೂಲ್ಯವಾಗಿ ಪರಿಗಣಿಸುತ್ತಾರೆ. ತಮ್ಮ ಸಂಗಾತಿಗೆ ಮನಸ್ಸಲ್ಲಿ ವಿಶೇಷವಾದ ಸ್ಥಾನಮಾನ ನೀಡಿರುತ್ತಾರೆ.
ಇದನ್ನೂ ಓದಿ: Lucky Zodiac Sign: ಈ ರಾಶಿಯವರಷ್ಟು ಲಕ್ಕಿ ಬೇರಾರೂ ಇಲ್ಲ ಬಿಡಿ, ನಾಳೆಯಿಂದ ಯಶಸ್ಸು ಕಟ್ಟಿಟ್ಟ ಬುತ್ತಿ
ಮೀನ
ಮೀನ ರಾಶಿಯವರು ಸಖತ್ ರೋಮ್ಯಾಂಟಿಕ್. ಹೀಗೆ ರೋಮ್ಯಾಂಟಿಕ್ ಆಗಿರುವ ಮೀನ ರಾಶಿಗೆ ಜೀವನದ ಸಂಗಾತಿ ಆಯ್ಕೆ ಬಂದಾಗ ಸಿನಿಮಾ ತಾರೆಯರೇ ಉತ್ತಮ ಎಂದುಕೊಳ್ಳುತ್ತಾರೆ. ಹೀಗಾಗಿ ಅವರನ್ನು ಹೆಚ್ಚಾಗಿ ಪ್ರೀತಿಸುವ ಮೂಲಕ ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಯಾವುದೋ ಒಂದು ರೋಮ್ಯಾಂಟಿಕ್ ಸಿನಿಮಾ ನೋಡಿದ ಮೇಲೆ ನಾವು ಹೀಗೆ ಇರಬೇಕು ಅಂತಾ ಸಹ ಅವರು ಬಯಸುತ್ತಾರೆ. ಆ ಪಾತ್ರದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳುತ್ತಾರೆ.
ಈ ಮೇಲಿನ ರಾಶಿಗಳು ಸ್ಟಾರ್ಸ್ ಜೊತೆ ಪ್ರೀತಿಯಲ್ಲಿ ಸುಲಭವಾಗಿ ಬೀಳುವ ಸ್ವಭಾವವರು. ಮೇಷ, ಮಿಥುನ, ಕರ್ಕಾಟಕ, ಕನ್ಯಾ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯವರು ಪ್ರೀತಿಯ ವಿಚಾರದಲ್ಲಿ ಬಹಳ ವಾಸ್ತವಿಕವಾಗಿ ಯೋಚಿಸುವಂತವರು.
ಇದನ್ನೂ ಓದಿ:
ಅವರು ಆರಾಮದಾಯಕ ಮತ್ತು ಸಂತೋಷದ ಜೀವನವನ್ನು ನಡೆಸುವ ಜೀವನ ಸಂಗಾತಿಯನ್ನು ಬಯಸುತ್ತಾರೆ. ಅದಕ್ಕಾಗಿ ವಾಸ್ತವಿಕ ಮಾನದಂಡಗಳನ್ನು ಮತ್ತು ನಿರೀಕ್ಷೆಗಳನ್ನು ಹೊಂದಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ