ಎಲ್ಲವೂ ಡಿಜಿಟಲ್ (digital) ಆಗುತ್ತಿರುವ ಆಧುನಿಕ ಲೋಕದಲ್ಲಿ ಟೆಕ್ (Tech) ವಲಯಕ್ಕೆ ಎಲ್ಲಿಲ್ಲದ ಬೇಡಿಕೆ. ಡಿಜಿಟಲ್ ಲೋಕ ಕೂಡ ಬೆಳೆಯುತ್ತಿದ್ದಂತೆ ಜನ ಹೊಸ ಹೊಸ ಮೊಬೈಲ್ (Mobile), ಫ್ಯಾನ್ಸಿ ಗ್ಯಾಜೆಟ್‌ಗೆ ಮನಸೋಲುತ್ತಿದ್ದಾರೆ. ಅದರಲ್ಲೂ ಕೆಲವರಿಗೆ ಹೊಸ ಫೋನ್, ಗ್ಯಾಜೆಟ್ ಅಂದರೆ ಎಲ್ಲಿಲ್ಲದ ಕ್ರೇಜ್. ಮಾರುಕಟ್ಟೆಗೆ (Market) ಹೊಸ ಆವೃತ್ತಿಗಳು ಬಂದರೆ ಸಾಕು ಅದನ್ನು ತೆಗೆದುಕೊಳ್ಳೋಕೆ ಮುಂದಾಗುತ್ತಾರೆ. ಮೊಬೈಲ್, ಗ್ಯಾಜೆಟ್‌ಗೆ ಇಷ್ಟೆಲ್ಲಾ ಖರ್ಚು ಮಾಡ್ತಾರಲ್ಲಪ್ಪಾ ಅಂತಾ ನಮ್ಮಂತ ಸಾಮಾನ್ಯರಿಗೆ ಅನಿಸುತ್ತೆ.
ರಾಹುವಿನ ಸಂಪರ್ಕಕ್ಕೆ ಬರುವ ರಾಶಿಯವರು ಹೆಚ್ಚು ಖರ್ಚು ಮಾಡುತ್ತಾರೆ
ಈ ಖರ್ಚು ಮಾಡುವ ಅವರ ವ್ಯಕ್ತಿತ್ವ ಕೆಲವೊಮ್ಮೆ ಅವರ ರಾಶಿಯ ಮೇಲೂ ಅವಲಂಬಿತವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿ ರಾಹುವಿನ ಸಂಪರ್ಕಕ್ಕೆ ಬರುತ್ತದೆಯೋ ಅಂತವರು ಹೆಚ್ಚು ಹಣ ಖರ್ಚು ಮಾಡುತ್ತಾರೆ ಎನ್ನುತ್ತದೆ. ಇಂತಹ ಕೆಲವೊಂದು ರಾಶಿಯವರು ಮೊಬೈಲ್, ಗ್ಯಾಜೆಟ್‌ಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಹೇಳುತ್ತದೆ.
ಹಾಗಾದರೆ ನಾವಿಲ್ಲಿ, ಮೊಬೈಲ್ ಮತ್ತು ಗ್ಯಾಜೆಟ್‌ಗಳಲ್ಲಿ ಹೆಚ್ಚು ಖರ್ಚು ಮಾಡುವ ರಾಶಿಚಕ್ರದ ಚಿಹ್ನೆಗಳ ಬಗ್ಗೆ ತಿಳಿಯೋಣ.
ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಸ್ನೇಹಿತರನ್ನು ಸಂತೋಷಪಡಿಸಲು ಅವರು ಹಣದ ಬಗ್ಗೆ ಕಾಳಜಿ ವಹಿಸುವುದಿಲ್ಲ.
ಅವರು ಆಗಾಗ್ಗೆ ಸ್ನೇಹಿತರಿಂದ ಕೂಡ ಮೋಸ ಹೋಗುತ್ತಾರೆ. ಇವರ ದುಂದುವೆಚ್ಚವನ್ನು ಪ್ರದರ್ಶಿಸಲು ದುಬಾರಿ ಮೊಬೈಲ್, ಗ್ಯಾಜೆಟ್‌ಗಳನ್ನು ಸಹ ಖರೀದಿ ಮಾಡುತ್ತಾರೆ. ಈ ಮೂಲಕ ಮೊಬೈಲ್, ಗ್ಯಾಜೆಟ್‌ಗಳಿಗೆ ಹೆಚ್ಚು ವ್ಯಯಿಸುತ್ತಾರೆ.
ಕಟಕ ರಾಶಿ
ಕಟಕ ರಾಶಿಯ ಅಧಿಪತಿ ಚಂದ್ರ ಮತ್ತು ಚಂದ್ರನನ್ನು ಮನಸ್ಸಿನ ಅಂಶ ಎಂದು ಹೇಳಲಾಗುತ್ತದೆ. ಇದರಿಂದಾಗಿ ಈ ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಚಂದ್ರನ ರಾಹು ಪ್ರಭಾವದಿಂದಾಗಿ, ಅವರು ಮೊಬೈಲ್ ಅಥವಾ ಗ್ಯಾಜೆಟ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ದುಬಾರಿ ಮೊಬೈಲ್ ಮತ್ತು ಗ್ಯಾಜೆಟ್ ಎಂದರೆ ಬಲು ಪ್ರೀತಿ, ಅವುಗಳನ್ನು ಅವರು ಹೆಚ್ಚು ಇಷ್ಟಪಡುತ್ತಾರೆ. ಈ ರಾಶಿಯವರು ಯಾವಾಗಲೂ ಹೊಸ ಹೊಸ ವಿಭಿನ್ನ ಗ್ಯಾಜೆಟ್‌ಗಳನ್ನು ಇಷ್ಟಪಡುತ್ತಾರೆ ಮತ್ತು ಖರೀದಿಸುತ್ತಾರೆ. ಇದರಿಂದಾಗಿ ಮೊಬೈಲ್ ಮತ್ತು ಗ್ಯಾಜೆಟ್‌ಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ.
ಇದನ್ನೂ ಓದಿ: 12 ವರ್ಷದ ನಂತರ ಗುರು-ಶುಕ್ರ ಸಂಯೋಗ, ಈ ರಾಶಿಯವರಿಗೆ ಲಾಟರಿ ಹೊಡೆಯೋದು ಪಕ್ಕಾ
ತುಲಾ ರಾಶಿ
ತುಲಾ ರಾಶಿಯವರು ಬೇರೆ ಕಡೆ ಪ್ರಯಾಣಿಸಲು ಮತ್ತು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ ಮತ್ತು ಐಷಾರಾಮಿಯಾಗಿ ಬದುಕಲು ಇಷ್ಟಪಡುತ್ತಾರೆ. ಅಂತೆಯೇ ಮೊಬೈಲ್ ಮತ್ತು ಗ್ಯಾಜೆಟ್‌ಗಳನ್ನು ಸಹ ಖರೀದಿಸಲು ಇಷ್ಟಪಡುತ್ತಾರೆ. ಲಕ್ಸುರಿಯಾಗಿರಲು ಅವರು ದುಬಾರಿ ಮೊಬೈಲ್ ಫೋನ್‌ಗಳನ್ನು ಖರೀದಿಸುತ್ತಾರೆ.
ಕನ್ಯಾರಾಶಿ
ಕನ್ಯಾರಾಶಿಯವರು ಸಹ ಪ್ರದರ್ಶನಕ್ಕೆ ಅಂತಾನೂ ಸಹ ದುಂದು ವೆಚ್ಚ ಮಾಡುತ್ತಾರೆ. ಇವರಿಗೆ ತೋರ್ಪಡಿಕೆ ಎಂದರೆ ಇಷ್ಟ. ತಮ್ಮ ಸ್ಟೇಟಸ್ ತೋರಿಸಲು ಗ್ಯಾಜೆಟ್ ಮತ್ತು ದುಬಾರಿ ಮೊಬೈಲ್ ಗಳಿಗೆ ಹಣ ಖರ್ಚು ಮಾಡುತ್ತಾರೆ.
ಅವರು ಗ್ಯಾಜೆಟ್ ಅನ್ನು ತೆಗೆದುಕೊಳ್ಳುವ ಮೊದಲು ಹತ್ತಾರು ಕಡೆ ನೋಡಿ, ಫೀಚರ್ ನೋಡಿ ತೆಗೆದುಕೊಳ್ಳುವಂತಹ ಸ್ವಭಾವ ಹೊಂದಿರುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯ ಅಧಿಪತಿ ಶನಿ ದೇವ. ಅವರು ಖರ್ಚುಗಳನ್ನು ಕಡಿಮೆ ಮಾಡುತ್ತಾರೆ. ಆದರೆ ಕೆಲವೊಂದು ವಿಚಾರಗಳಲ್ಲು ಹಣಕಾಸಿನ ಖರ್ಚು ಸಹ ನೋಡದೇ ವೆಚ್ಚ ಮಾಡುತ್ತಾರೆ.
ಕುಂಭ ರಾಶಿಯಲ್ಲಿ ಶನಿಯು ಚಂದ್ರ ಅಥವಾ ರಾಹು-ಕೇತುಗಳೊಂದಿಗೆ ಸಂಪರ್ಕಕ್ಕೆ ಬಂದಾಗ, ಈ ರಾಶಿಯ ಜನರು ಹಣವನ್ನು ಖರ್ಚು ಮಾಡಲು ಪ್ರಾರಂಭಿಸುತ್ತಾರೆ, ಇವರಿಗೆ ದುಬಾರಿ ಗ್ಯಾಜೆಟ್, ಫೋನ್ ಎಂದರೆ ಪ್ರೀತಿ ಅದಕ್ಕಾಗಿ ಎಷ್ಟು ಬೇಕಾದರೂ ವ್ಯಯಿಸುತ್ತಾರೆ.
ಇದನ್ನೂ ಓದಿ: ಈ ಸಿಂಪಲ್ ವಾಸ್ತು ಟಿಪ್ಸ್ ಟ್ರೈ ಮಾಡಿದ್ರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತೆ
ಮೀನ ರಾಶಿ
ಮೀನ ರಾಶಿಯವರು ತಮ್ಮ ಹವ್ಯಾಸಗಳನ್ನು ಪೂರೈಸಿಕೊಳ್ಳಲು ಮೊಬೈಲ್ ಮತ್ತು ಗ್ಯಾಜೆಟ್‌ಗಳಿಗೆ ಹಣವನ್ನು ಖರ್ಚು ಮಾಡುತ್ತಾರೆ. ಈ ರಾಶಿಯವರಿಗೂ ಸ್ಟೇಟಸ್ ತೋರಿಸುವುದು ಎಂದರೆ ಒಂದು ರೀತಿಯ ಗೀಳು. ಮೀನ ರಾಶಿ ರಾಹುವಿನ ಸಂಪರ್ಕಕ್ಕೆ ಬಂದಾಗ ಹೆಚ್ಚು ಹಣ ಖರ್ಚು ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ