• Home
  • »
  • News
  • »
  • astrology
  • »
  • Astrology: ರಾಶಿಗನುಗುಣವಾಗಿ ನಿಮ್ಮ ಸ್ವಭಾವ ಹೀಗಿರುತ್ತಂತೆ, ನಿಮ್ಮದು ಯಾವ್ದು?

Astrology: ರಾಶಿಗನುಗುಣವಾಗಿ ನಿಮ್ಮ ಸ್ವಭಾವ ಹೀಗಿರುತ್ತಂತೆ, ನಿಮ್ಮದು ಯಾವ್ದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಶಿಗಳನ್ನು ಅರಿತುಕೊಂಡು ಆ ದಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಒಮ್ಮೊಮ್ಮೆ ರಾಶಿಯಲ್ಲಿರುವ ಅಂಶಗಳೆಲ್ಲವೂ ನಿಜವಾಗಿರಬೇಕು ಎಂದೇನಿಲ್ಲ ಆದರೆ ಒಮ್ಮೊಮ್ಮೆ ಇಲ್ಲಿರುವಂತೆಯೇ ಘಟಿಸಿಬಿಡುತ್ತದೆ.

  • Trending Desk
  • 3-MIN READ
  • Last Updated :
  • Share this:

ಜ್ಯೋತಿಷ್ಯಶಾಸ್ತ್ರ (Astrology) ಎಂಬುದು ಅನಾದಿಕಾಲದಿಂದಲೂ ಭಾರತದಲ್ಲಿರುವ (India) ವಿಶೇಷ ಜ್ಞಾನವಾಗಿದೆ. ಹಿಂದೂ (Hindu) ಧರ್ಮದಲ್ಲಿ ಪ್ರತಿಯೊಂದು ಶುಭ ಸಮಾರಂಭಗಳನ್ನು ಜ್ಯೋತಿಷ್ಯದಲ್ಲಿ ತಿಳಿಸಿರುವ ಮಾಹಿತಿಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ವಿವಾಹ ಸಮಾರಂಭದಿಂದ ಹಿಡಿದು ಪೂಜೆ ಪುನಸ್ಕಾರಗಳಿರಬಹುದು ಪ್ರತಿಯೊಂದಕ್ಕೂ ಜ್ಯೋತಿಷ್ಯ ಶಾಸ್ತ್ರ ಮುಖ್ಯವಾಗಿದೆ. ಹೆಚ್ಚಿನವರು ಈ ಶಾಸ್ತ್ರದಲ್ಲಿ ನಂಬಿಕೆಯುಳ್ಳವರಾಗಿದ್ದಾರೆ.


ಜ್ಯೋತಿಷ್ಯ ಶಾಸ್ತ್ರದಲ್ಲಿದೆ ಸಮಸ್ಯೆಗಳಿಗೆ ಪರಿಹಾರಗಳು


ರಾಶಿಗಳನ್ನು ಅರಿತುಕೊಂಡು ಆ ದಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಒಮ್ಮೊಮ್ಮೆ ರಾಶಿಯಲ್ಲಿರುವ ಅಂಶಗಳೆಲ್ಲವೂ ನಿಜವಾಗಿರಬೇಕು ಎಂದೇನಿಲ್ಲ ಆದರೆ ಒಮ್ಮೊಮ್ಮೆ ಇಲ್ಲಿರುವಂತೆಯೇ ಘಟಿಸಿಬಿಡುತ್ತದೆ.


ಆದರೆ ಜೀವನದಲ್ಲಿ ಸಂಭವಿಸುವ ಘಟನೆಗಳೆಲ್ಲವೂ ರಾಶಿಗೆ ಅನುಸಾರವಾಗಿ ಇರುವುದಿಲ್ಲ ನಮ್ಮ ಹಣೆಯ ಬರಹದಲ್ಲಿ ಬರೆದಂತೆ ಇರುತ್ತದೆ ಆದರೆ ಇದಕ್ಕೆ ಬೇಕಾದ ಪ್ರತಿವಿಧಿ, ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ ತಿಳಿದುಕೊಳ್ಳಬಹುದು ಎಂಬುದು ಪರಿಣಿತರ ಮಾತಾಗಿದೆ.


ರಾಶಿಗೆ ಅನುಸಾರವಾಗಿ ನಮ್ಮ ಸ್ವಭಾವ ಇರುತ್ತದೆ ಇದು ಎಷ್ಟು ನಿಜ?


ರಾಶಿ ವಿಷಯಕ್ಕೆ ಬಂದಾಗ ಕೂಡ ಜ್ಯೋತಿಷ್ಯದಲ್ಲಿ ತಿಳಿಸಿರುವ ಅಂಶಗಳು ಮುಖ್ಯವಾಗುತ್ತವೆ. ನಮ್ಮ ರಾಶಿಗೆ ಅನುಸಾರವಾಗಿ ನಮ್ಮ ಸ್ವಭಾವ ಇರುತ್ತದೆ ಎಂಬುದು ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಗೊಂಡಿದೆ.


ಆದರೆ ಇದು ನೂರಕ್ಕೆ ನೂರು ಸರಿಯಲ್ಲದಿದ್ದರೂ ಕೆಲವೊಂದು ಅಂಶಗಳು ನಿಜ ಎಂದು ಅನಿಸುವುದೂ ಇದೆ. ಜ್ಯೋತಿಷ್ಯ ಶಾಸ್ತ್ರವನ್ನು ಪೂರ್ಣವಾಗಿ ನಂಬುವವರೂ ಇದ್ದಾರೆ ಇನ್ನು ಕೆಲವರಿಗೆ ನಂಬಿಕೆ ಇಲ್ಲದಿರುವುದೂ ಇದೆ.


ರಾಶಿಯಲ್ಲಿರುವ ಪಂಚಭೂತ ಅಂಶಗಳು


ಪ್ರತಿಯೊಂದು ರಾಶಿಯು ಶಕ್ತಿಯುತವಾದ ಅಂಶಗಳನ್ನು ಒಳಗೊಂಡಿರುತ್ತದೆ. ಈ ಅಂಶಗಳೆಂದರೆ ಜಲ, ಅಗ್ನಿ, ಆಕಾಶ, ಭೂಮಿ ಹಾಗೂ ಗಾಳಿ. ಇವೆಲ್ಲವೂ ಸಮಗ್ರವಾಗಿ ಒಟ್ಟಾಗಿ ಕೆಲಸ ಮಾಡುತ್ತವೆ.


ಅಂತೆಯೇ ಜೀವನದಲ್ಲಿ ಅನನ್ಯ ಲಕ್ಷಣಗಳನ್ನು ಸಂಕೇತಿಸುತ್ತವೆ. ರಾಶಿಯಲ್ಲಿ ಶಕ್ತಿಯುತ ಅಂಶಗಳು ಅಂತೆಯೇ ದೌರ್ಬಲ್ಯವನ್ನು ತೋರುವ ಅಂಶಗಳೂ ಇವೆ. ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಗೊಂಡಿರುವ ರಾಶಿಗಳ ಪ್ರಭಾವವು ನಿಮ್ಮ ಗುಣಲಕ್ಷಣಗಳನ್ನು ವಿಶೇಷವಾಗಿ ಬಿಂಬಿಸುತ್ತವೆ.


ವಿಜ್ಞಾನ ಹಾಗೂ ಜ್ಯೋತಿಷ್ಯ ಶಾಸ್ತ್ರ


ಆದರೆ ವೈಜ್ಞಾನಿಕ ನೆಲೆಯಲ್ಲಿ ನೋಡುವುದಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಅಂಶಗಳನ್ನು ತಳ್ಳಿಹಾಕುತ್ತದೆ. ಇದೆಲ್ಲಾ ಕೇವಲ ಮಿಥ್ಯ ಎಂಬುದು ವಿಜ್ಞಾನದ ಮಾತಾಗಿದೆ.


ಆದರೆ ಕೆಲವೊಂದು ಸ್ವಾಭಾವಿಕ ಅಂಶಗಳಾದ ಬೆಂಕಿ, ಭೂಮಿ, ಗಾಳಿ ಹಾಗೂ ನೀರಿಗೆ ಅನುಸಾರವಾಗಿ ಕೂಡ ಈ ರಾಶಿ ಚಕ್ರಗಳಿಗಿರುವ ಮಹತ್ವಗಳನ್ನು ತಿಳಿಸಲಾಗಿದ್ದು, ಈ ಹಿಂದೆ ತಿಳಿಸಿರುವ ರಾಶಿಯವರ ಸ್ವಭಾವಗಳು ಕಟ್ಟುಕಥೆಗಳು ಎಂಬುದಾಗಿ ವರದಿಯಾಗಿವೆ.


ರಾಶಿಯ ಗುಣಮಲಕ್ಷಣಗಳನ್ನು ಪಂಚಭೂತಗಳಿಗೆ ಅನುಸಾರವಾಗಿ ಅಂತೆಯೇ ಗ್ರಹದ ವಿಶೇಷತೆಗಳ ಪ್ರಕಾರವಾಗಿ ಇಲ್ಲಿ ತಿಳಿಸಲಾಗಿದ್ದು, ಆಯಾಯ ರಾಶಿಯವರ ಗುಣಸ್ವಭಾವಗಳನ್ನು ಅಂತೆಯೇ ಪಟ್ಟಿಮಾಡಲಾಗಿದೆ. ನಿಮ್ಮ ಸ್ವಭಾವ ಈ ಲೇಖದಲ್ಲಿ ತಿಳಿಸಿರುವಂತೆಯೇ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.




ಅಗ್ನಿ ಅಂಶವುಳ್ಳ ರಾಶಿ ಸ್ವಭಾವದವರು


ಮೇಷ ರಾಶಿಯವರ ಸ್ವಭಾವದವರ ಬಗೆಗಿನ ಕಟ್ಟುಕಥೆ


ಈ ರಾಶಿಯವರು ಸ್ವಾರ್ಥಿಗಳು ಹಾಗೂ ನಂಬರ್ 1 ಆಗಿರಬೇಕೆಂದು ಬಯಸುತ್ತಾರೆ


ಈ ರಾಶಿಯವರ ನಿಜವಾದ ಸ್ವಭಾವ: ಮೇಷವು ಸ್ಪರ್ಧಾತ್ಮಕ ಗುಣವನ್ನು ಹೊಂದಿದ್ದು, ಮಂಗಳ ಈ ಗ್ರಹದ ಅಧಿಪತಿ. ಸ್ಪರ್ಧಾತ್ಮಕ ಗುಣದವರಾಗಿದ್ದರೂ ಎಲ್ಲರನ್ನೂ ಹಿಂದಕ್ಕೆ ಹಾಕಬೇಕೆಂಬುದು ಇವರ ಅಭಿಮತವಲ್ಲ.


ಈ ರಾಶಿಯವರು ಒಂದು ಸಂಕಲ್ಪಕ್ಕೆ ಬದ್ಧರಾದರು ಎಂದರೆ ಹಿಂತಿರುಗಿ ನೋಡುವವರಲ್ಲ ಮುನ್ನುಗ್ಗುವವರು. ಚಂಚಲ ಮನಸ್ಸಿನವರಲ್ಲ ವಿಚಲಿತರಾಗುವುದಿಲ್ಲ. ನೀವು ಮೇಷ ರಾಶಿಯವರೊಂದಿಗಿದ್ದರೆ ಅವರನ್ನು ಅನುಸರಿಸಿ.


ಸಿಂಹ ರಾಶಿಯ ಸ್ವಭಾವದ ಬಗೆಗಿನ ಕಟ್ಟುಕಥೆ


ಅಹಂಕಾರಿಗಳು ಹಾಗೂ ತಮ್ಮ ಬಗ್ಗೆ ಅತೀವ ಆಸಕ್ತಿಯುಳ್ಳವರು


ನಿಜವಾದ ಸ್ವಭಾವ: ಸಿಂಹ ರಾಶಿಯವರು ಇತರರ ಗಮನ ತಮ್ಮ ಮೇಲಿರಲಿ ಎಂದು ಭಾವಿಸುವವರು. ಸೂರ್ಯ ಈ ರಾಶಿಯ ಅಧಿಪತಿ. ಇವರು ಎಲ್ಲಿದ್ದರೂ ಅಲ್ಲಿ ಖ್ಯಾತಿ ಪಡೆಯುತ್ತಾರೆ.


ಜೊತೆಗಿದ್ದವರನ್ನೂ ಖ್ಯಾತಿ ಪಡೆಯುವಂತೆ ಮಾಡುತ್ತಾರೆ. ನಿಮಗೆ ಸಲಹೆ ಕೇಳಬೇಕು ಎಂದಿದ್ದರೆ ಈ ರಾಶಿಯವರ ಸಲಹೆಯನ್ನು ಪಡೆದುಕೊಳ್ಳಬಹುದು.


ಧನು ರಾಶಿಯ ಸ್ವಭಾವದ ಬಗೆಗಿನ ಕಟ್ಟುಕಥೆ


ಪ್ರಯಾಣ ಪ್ರಿಯರು


ನಿಜವಾದ ಸ್ವಭಾವ: ಧನು ರಾಶಿಯ ಅಧಿಪತಿ ಗುರು. ಹಾಗಾಗಿಯೇ ಅವರು ಪ್ರಯಾಣ ಪ್ರಿಯರಾಗಿದ್ದಾರೆ. ಗುರುವಿನ ಅಧಿಪತಿಯ ಈ ರಾಶಿಯವರು ಇತರರನ್ನೂ ತಮ್ಮ ಸ್ವಭಾವದ ಅಂಶಗಳಿಗೆ ಅನ್ವಯಿಸುವಂತೆ ಮಾಡುತ್ತಾರೆ.


ಧನು ರಾಶಿಯವರು ನಾಯಕತ್ವ ಗುಣದವರು ಹಾಗೂ ಯಾವುದೇ ಉದ್ಯೋಗ ಯೋಜನೆಯನ್ನು ಅವರೊಂದಿಗೆ ನಿರ್ಮಿಸಬಹುದು.


ಭೂಮಿಯ ಅಂಶವುಳ್ಳವರು


ವೃಷಭ ರಾಶಿಯ ಸ್ವಭಾವದ ಬಗೆಗಿನ ಕಟ್ಟುಕಥೆ


ನಿಧಾನ ಪ್ರವೃತ್ತಿಯವರು ಸೋಮಾರಿಗಳು


ನಿಜವಾದ ಸ್ವಭಾವ: ವೃಷಭ ರಾಶಿಯವರು ನಿಧಾನ ಪ್ರವೃತ್ತಿಯವರು ಏಕೆಂದರೆ ಸಮಯ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುವವರು. ಹಾಗೆಂದು ಇವರು ಸೋಮಾರಿಗಳಲ್ಲ. ಇವರ ಅಧಿಪತಿ ಶುಕ್ರ. ಶುಕ್ರ ಪ್ರೀತಿ ಹಾಗೂ ಪ್ರಣಯಕ್ಕೆ ಅಧಿದೇವತೆ. ಈ ರಾಶಿಯವರು ಪ್ರಣಯಿಗಳು ಹಾಗೂ ಪ್ರೀತಿ ವ್ಯಕ್ತಪಡಿಸುವವರು.


ಕನ್ಯಾರಾಶಿಯವರ ಸ್ವಭಾವದ ಬಗೆಗೆ ಕಟ್ಟುಕಥೆ


ಶಿಸ್ತಿನ ಸಿಪಾಯಿಗಳು ಅಚ್ಚುಕಟ್ಟು ಬಯಸುವವರು


ನಿಜವಾದ ಸ್ವಭಾವ: ಈ ರಾಶಿಯವರು ಇಂತಹ ಸ್ವಭಾದವರು ಎಂದು ನಿಮಗನ್ನಿಸಿದರೆ ಇದು ತಪ್ಪು! ಬುಧ ಗ್ರಹ ಈ ರಾಶಿಯ ಅಧಿಪತಿ. ತಮ್ಮ ಸುತ್ತಲೂ ಗೊಂದಲಮಯವಾಗಿರುವುದು ಇವರಿಗೆ ಇಷ್ಟ.


ಸಿಕ್ಕಾಪಟ್ಟೆ ಹವ್ಯಾಸಿಗಳು ಹಾಗೂ ಸಿಕ್ಕಸಿಕ್ಕ ವಸ್ತುಗಳೆಲ್ಲವನ್ನೂ ಸಂಗ್ರಹಿಸುವ ಆಸಕ್ತಿವಂತರು. ಹಾಗಾಗಿ ಇವರು ಸ್ವಚ್ಛತಾ ಪ್ರಿಯರು ಎಂದರೆ ಅದು ತಪ್ಪಾಗುತ್ತದೆ ಎಂದಾಗಿದೆ.


ಮಕರ ರಾಶಿಯವರ ಸ್ವಭಾವದ ಬಗೆಗೆ ಕಟ್ಟುಕಥೆ


ಉದ್ಯೋಗಕ್ಕೆ ಅಂಟಿಕೊಂಡಿರುವವರು, ಒಂದಿಲ್ಲೊಂದು ಕೆಲಸಗಳಲ್ಲಿ ನಿರತರಾಗಿರುತ್ತಾರೆ


ನಿಜವಾದ ಸ್ವಭಾವ: ರಾಶಿಗಳಲ್ಲಿ ಈ ರಾಶಿಯವರು ಹೆಚ್ಚು ಕಠಿಣ ಕೆಲಸ ಮಾಡುವವರು. ಈ ರಾಶಿಯ ಅಧಿಪತಿ ಶನಿ ಗ್ರಹ. ಸಡಗರದಿಂದಲೇ ಈ ರಾಶಿಯವರು ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಮಕರ ರಾಶಿಯವರು ಇತರರಿಗೂ ಸ್ಫೂರ್ತಿದಾಯಕರು ಹಾಗೂ ಅವರು ಮಹತ್ವಾಕಾಂಕ್ಷೆಯುಳ್ಳವರು.


ವಾಯು ಅಂಶದವರು


ಮಿಥುನ ರಾಶಿಯವರ ಬಗಿಗಿನ ಕಟ್ಟುಕಥೆ


ಒಳಗೊಂದು ಹೊರಗೊಂದು ಸ್ವಭಾವದವರು ನಂಬಿಕೆಗೆ ಪಾತ್ರರಲ್ಲ


ನಿಜವಾದ ಸ್ವಭಾವ: ಈ ರಾಶಿವರು ದ್ವಂದ್ವವಾದಿಗಳು ಆದರೆ ಅದು ಅವರ ಪ್ರಕ್ರಿಯೆಯ ಭಾಗವೆನಿಸಿದೆ. ಬುಧ ಈ ಗ್ರಹದ ಅಧಿಪತಿ. ಯಾವುದಾದರೂ ವಿಷಯದ ಬಗ್ಗೆ ಅರಿತುಕೊಳ್ಳುವ ಆಸಕ್ತಿ ಇವರದಾಗಿರುತ್ತದೆ. ನೀವು ಮಿಥುನ ರಾಶಿಯವರೊಂದಿಗಿದ್ದರೆ ಅವರ ಪ್ರಕ್ರಿಯೆಯ ಅದೇ ಆಸಕ್ತಿಯನ್ನು ನೀವು ಪಡೆದುಕೊಳ್ಳುತ್ತೀರಿ.


ತುಲಾರಾಶಿಯ ಬಗೆಗಿನ ಕಟ್ಟುಕಥೆ


ಶಾಂತಪ್ರಿಯರು ಹಾಗೂ ಸಹಕಾರಿ ಮನೋಭಾವವುಳ್ಳವರು


ನಿಜವಾದ ಸ್ವಭಾವ: ಈ ರಾಶಿಯವರು ಯಾವಾಗಲೂ ಒಂದೇ ಸ್ವಭಾವವನ್ನು ಹೊಂದಿರುವುದಿಲ್ಲ. ಪರಿಪೂರ್ಣ ಸಮತೋಲನದಲ್ಲಿ ಈ ರಾಶಿಯವರು ಇರುವುದಿಲ್ಲ. ಶುಕ್ರ ಈ ಗ್ರಹದ ಅಧಿಪತಿಯಾಗಿರುವುದರಿಂದ ಸ್ವಭಾವದಲ್ಲಿ ಕೂಡ ಬದಲಾವಣೆಗಳು ಉಂಟಾಗುತ್ತಿರುತ್ತದೆ.


ಇದನ್ನೂ ಓದಿ: ಒಂದು ತಿಂಗಳ ಮಟ್ಟಿಗೆ 3 ರಾಶಿಯವರು ಬಹಳ ಎಚ್ಚರದಿಂದಿರಿ, ಹಣ ಕಳೆದುಕೊಳ್ಳೋದು ಗ್ಯಾರಂಟಿ


ಇನ್ನು ಇದೇ ದಾರಿಯಲ್ಲಿ ಮುನ್ನಡೆಯಬೇಕು ಎಂದು ನಿರ್ಧರಿಸಿದ ನಂತರ ಹಿಂದಡಿ ಇಡುವುದಿಲ್ಲ ಇದು ತುಲಾರಾಶಿಯವರ ಸ್ವಭಾವವಾಗಿದೆ. ತುಲಾ ರಾಶಿಯವರು ನಿಮ್ಮೊಡನಿದ್ದಾರೆ ಎಂದರೆ ಮೊದಲೇ ಮಾತುಕತೆಗಳನ್ನಾಡಿಕೊಂಡು ಸಾಮರಸ್ಯದಿಂದಿರಿ.


ನಿಮ್ಮ ನಿರ್ಧಾರಗಳನ್ನು ಮುಂಚಿತವಾಗಿ ಅವರಿಗೆ ತಿಳಿಸಿಬಿಡಿ. ಈ ರಾಶಿಯವರು ತಮ್ಮ ನಿರ್ಧಾರದಲ್ಲಿ ಹಠಮಾರಿಗಳಾಗಿರುತ್ತಾರೆ.


ಕುಂಭ ರಾಶಿಯ ಬಗೆಗೆ ಕಟ್ಟುಕಥೆ


ಶಾಂತ ಸ್ವಭಾವ ಹಾಗೂ ಎಲ್ಲರೊಂದಿಗೆ ಬೆರೆಯುವವರು.


ನಿಜವಾದ ಸ್ವಭಾವ: ಈ ಸ್ವಭಾದವರನ್ನು ಚೆನ್ನಾಗಿ ಅರಿತುಕೊಂಡ ನಂತರ ಅವರ ಸ್ವಭಾವ ಇದೇ ರೀತಿಯೇ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.


ಯುರೇನಸ್ ಈ ರಾಶಿಯ ಅಧಿಪತಿ. ಈ ಗ್ರಹ ಅವ್ಯವಸ್ಥೆಯ ಗ್ರಹವೆಂದೇ ಉಲ್ಲೇಖಿತಗೊಂಡಿದೆ. ಈ ರಾಶಿಯವರು ನಿಮ್ಮ ಜೊತೆಗಿದ್ದರೆ ಅವರೊಂದಿಗೆ ಸಂವಹನಗಳನ್ನು ನಡೆಸುತ್ತಿರಿ ಅವರ ದಿನಚರಿಗಳನ್ನು ಅರಿತುಕೊಂಡಿರಿ.


ಜಲ ಅಂಶದವರು


ಕರ್ಕಾಟಕ ರಾಶಿಯ ಬಗೆಗೆ ಕಟ್ಟುಕಥೆ


ಒಂದೇ ಸ್ಥಳದಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಇರಬೇಕೆಂದು ಬಯಸುವವರು. ಮೂಢಿಗಳು


ನಿಜವಾದ ಸ್ವಭಾವ: ಚಂದ್ರ ಈ ಗ್ರಹದ ಅಧಿಪತಿ. ಹಾಗಾಗಿ ಅವರ ಮನಸ್ಥಿತಿ ಕೂಡ ಕ್ಷೀಣವಾಗಿರುತ್ತದೆ. ಅವರ ಸ್ವಭಾವ ಒಂದೇ ರೀತಿಯಾಗಿರುವುದಿಲ್ಲ ಆಗಾಗ್ಗೆ ಬದಲಾಗುತ್ತಿರುತ್ತದೆ. ಅವರೊಡನೆ ಸಮಯ ಕಳೆಯಬೇಕೆಂದು ಬಯಸಿದರೆ ಈ ಕ್ಷಣದಲ್ಲಿ ಅದನ್ನು ಮಾಡಿ ಏಕೆಂದರೆ ನಾಳೆ ಅವರ ಮನಸ್ಸು ಬದಲಾಗುತ್ತದೆ.


ವೃಶ್ಚಿಕ ರಾಶಿ


ವೃಶ್ಚಿಕ ಕಾಮಪ್ರಚೋದಕ ಚಿಹ್ನೆ. ಫ್ಲುಟೊ ಈ ರಾಶಿಯ ಅಧಿಪತಿ. ಪ್ರಣಯ ವಿಷಯಗಳಲ್ಲಿ ವೃಶ್ಚಿಕ ರಾಶಿಯವರು ಮುಂದಿರುತ್ತಾರೆ. ಪ್ರೀತಿಯ ಭಾವನೆಗಳನ್ನು ಪ್ರಚೋದಿಸುತ್ತಾರೆ. ಇನ್ನು ಇವರ ಮನಸ್ಸು ಆಗಾಗ್ಗೆ ಬದಲಾಗುತ್ತಿರುತ್ತದೆ.


ಇದನ್ನೂ ಓದಿ: ಅದ್ಧೂರಿಯಾಗಿ ಸುತ್ತೂರು ಜಾತ್ರಾ ಮಹೋತ್ಸವ ಆರಂಭ, 6 ದಿನಗಳ ಕಾಲ ನಡೆಯಲಿದೆ ಕಾರ್ಯಕ್ರಮ


ಮೀನ ರಾಶಿಯ ಬಗೆಗೆ ಕಟ್ಟುಕಥೆ


ಯಾವುದೇ ಗುರಿ ಇಲ್ಲದ ಕನಸುಗಾರರು


ನಿಜವಾದ ಸ್ವಭಾವ: ಮೀನರಾಶಿಯು 12 ನೇ ಚಿಹ್ನೆಯಾಗಿದ್ದು ಎಲ್ಲಾ ಚಿಹ್ನೆಗಳ ಶಕ್ತಿಗಳನ್ನು ಒಳಗೊಂಡಿರುತ್ತದೆ. ಮೀನ ರಾಶಿಯವರು ವಿಷಯವನ್ನು ಗ್ರಹಿಸುವ ಸಾಮರ್ಥ್ಯವುಳ್ಳವರು.


ಆಕರ್ಷಕ ವ್ಯಕ್ತಿತ್ವದವರು ಹಾಗೂ ಹೆಚ್ಚಿನ ಜ್ಞಾನಗಳ ಬಗ್ಗೆ ಅರಿವುಳ್ಳವರು. ಅವರಿಗೆ ಯಾವುದರ ಬಗ್ಗೆಯೂ ಫೋರ್ಸ್ ಮಾಡಬೇಕಾದ ಅಗತ್ಯವಿರುವುದಿಲ್ಲ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು