ಜ್ಯೋತಿಷ್ಯ ಶಾಸ್ತ್ರವು (Astrology) ನಮ್ಮ ಜೀವನದ ಹಲವಾರು ಅಂಶಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿವಾಹ, ಉದ್ಯೋಗ, ಪ್ರೀತಿ , ವ್ಯಕ್ತಿತ್ವ, ಭವಿಷ್ಯ ಹೀಗೆ ಮುಂದೆ ಜೀವನದಲ್ಲಿ ಘಟಿಸಬಹುದಾದ ಕೆಲವೊಂದು ಸನ್ನಿವೇಶಗಳನ್ನು ಊಹಿಸಲು ಜ್ಯೋತಿಷ್ಯ ಸಹಾಯಕವಾಗಿದೆ. ಇದರಿಂದಲೇ ಮುಂದೊದಗುವ ಆಪತ್ತುಗಳನ್ನು ನಿವಾರಿಸುವ ಕೆಲವೊಂದು ತಂತ್ರಗಳನ್ನು ಅರಿತುಕೊಳ್ಳಲು ಈ ಶಾಸ್ತ್ರ ನೆರವನ್ನು ನೀಡುತ್ತದೆ.
ಜೀವನದ ದಿಕ್ಕನ ಜ್ಯೋತಿಷ್ಯ:
ಖ್ಯಾತ ಜ್ಯೋತಿಷಿ ಕ್ಯಾರೊಲಿನ್ ಫಾಕ್ನರ್ ಜ್ಯೋತಿಷ್ಯದ ಕುರಿತು ಉತ್ತಮ ಜ್ಞಾನವನ್ನು ಸಂಪಾದಿಸಿರುವ ಶಾಸ್ತ್ರಜ್ಞರಾಗಿದ್ದು ರಾಶಿಗನುಗುಣವಾಗಿ ವ್ಯಕ್ತಿತ್ವ, ವಿವಾಹ, ಉದ್ಯೋಗ, ಪ್ರೇಮವನ್ನು ಅರಿಯಬಲ್ಲ ನಿಷ್ಣಾತರಾಗಿದ್ದಾರೆ. ದಿ ಸೈನ್ಸ್ ಇನ್ ಲವ್ ಎಂಬ ತಮ್ಮದೇ ಪುಸ್ತಕದಲ್ಲಿ ಕ್ಯಾರೊಲಿನ್ ಜನ್ಮ ಚಾರ್ಟ್‌ನ ಪ್ರಕಾರ ಪ್ರೀತಿ ಹೇಗಿರುತ್ತದೆ ಹಾಗೂ ನೀವು ನಿಮ್ಮ ಸಂಗಾತಿಯನ್ನು ಹೇಗೆ ಪ್ರೀತಿಸುತ್ತೀರಿ? ಪ್ರೀತಿಯ ಭವಿಷ್ಯವೇನು ಎಂಬುದನ್ನು ತಿಳಿಸಲು ಹೇಗೆ ಸಹಾಯಕ ಎಂಬುದನ್ನು ತಿಳಿಸಿದ್ದಾರೆ.
ರಾಶಿಗಳಲ್ಲಿ ಚಿಹ್ನೆಗಳ ಸಂಕೇತಗಳೇನು?:
ರಾಶಿಗಳು ಅಗ್ನಿ, ಜಲ, ಭೂಮಿ, ವಾಯು ಹೀಗೆ ಕೆಲವೊಂದು ಚಿಹ್ನೆಗಳಿಂದಲೂ ಚಿರಪರಿಚತವಾಗಿವೆ. ಈ ಚಿಹ್ನೆಗಳ ಯಾವ ರಾಶಿಗಳು ಪ್ರೀತಿಯ ವಿಷಯದಲ್ಲಿ ಎಷ್ಟು ಬದ್ಧವಾಗಿವೆ? ಸಂಗಾತಿಯನ್ನು ಇವರು ಎಷ್ಟು ಪ್ರೀತಿಸುತ್ತಾರೆ ಹಾಗೆಯೇ ಪ್ರೀತಿಯ ಕುರಿತು ಇವರ ಭಾವನೆಗಳೇನು ಎಂಬುದನ್ನು ತಿಳಿದುಕೊಳ್ಳೋಣ
ಅಗ್ನಿ ಚಿಹ್ನೆಗಳಲ್ಲಿ ಪ್ರೀತಿಯ ಭಾವನೆ:
ಮೇಷ, ಸಿಂಹ ಮತ್ತು ಧನು ರಾಶಿ - ಅಗ್ನಿ ಚಿಹ್ನೆಗಳಾದ ಈ ರಾಶಿಯವರು ಬದ್ಧತೆ ಹಾಗೂ ಪರಿಶ್ರಮಕ್ಕೆ ಹೆಸರುವಾಸಿಯಾದವರು. ಪ್ರೀತಿಯ ವಿಷಯದಲ್ಲಿ ಈ ರಾಶಿಯವರು ಹೆಚ್ಚು ಭಾವೋದ್ರಿಕ್ತರಾಗಿರುವವರು. ಪ್ರೀತಿಸುವವರನ್ನು ಅಷ್ಟೊಂದು ಕಾಳಜಿಯಿಂದ ನೋಡಿಕೊಳ್ಳುವವರೂ ಅಲ್ಲ.
ಇದನ್ನೂ ಓದಿ: Vastu Tips: ಹಾಸಿಗೆ ಮೇಲೆ ಕುಳಿತು ಊಟ ಮಾಡ್ತೀರಾ? ವಾಸ್ತು ಶಾಸ್ತ್ರದ ಪ್ರಕಾರ ಏನಾಗುತ್ತೆ ಗೊತ್ತಾ?
ಉತ್ಸಾಹ ಮತ್ತು ಪ್ರಚೋದನೆಯನ್ನು ಸಂಗಾತಿಗಳಲ್ಲಿ ಉಂಟುಮಾಡುತ್ತಾರೆ. ಅಗ್ನಿ ಚಿಹ್ನೆಯ ರಾಶಿಯವರಲ್ಲಿ ಪ್ರೀತಿಗೆ ಬಿದ್ದಿದ್ದೀರಿ ಎಂದಾದರೆ ಒಂದು ರೀತಿಯಲ್ಲಿ ಉಸಿರುಗಟ್ಟಿಸುವ ಭಾವನೆ ನಿಮಗುಂಟಾಗಬಹುದು. ಅತಿಯಾಗಿ ಪ್ರತಿಯೊಂದನ್ನು ಯೋಚಿಸುವ ಪ್ರವೃತ್ತಿಯವರು ಈ ರಾಶಿಯವರು. ತಮ್ಮ ಸಂಗಾತಿಗಳಿಂದ ನಿಷ್ಠೆ ಹಾಗೂ ಪ್ರೀತಿಯ ಭಾವನೆಗಳನ್ನು ನಿರೀಕ್ಷಿಸುತ್ತಾರೆ. ಸ್ಥಿರವಾದ ಅನುಬಂಧವನ್ನು ಸಂಗಾತಿಗಳೊಂದಿಗೆ ನಿರ್ವಹಿಸುವಲ್ಲಿ ಈ ರಾಶಿಯವರು ಸಿದ್ಧಹಸ್ತರು.
ಭಾವೋದ್ರಿಕ್ತ ಪ್ರೀತಿ- ಈ ರಾಶಿಯವರು ಭಾವೋದ್ರಿಕ್ತ ಪ್ರೀತಿಯನ್ನು ಮೆಚ್ಚುವವರು. ಪ್ರೀತಿಯಲ್ಲಿ ಭಾವೋದ್ರಿಕ್ತರಾಗುವುದು ಪ್ರೇಮಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾಟಿಯಿಲ್ಲದ ಬಯಕೆಯನ್ನು ಸೃಷ್ಟಿಸುತ್ತದೆ.
ಪ್ರೇಮದಲ್ಲಿ ಅತಿಯಾದ ಭಾವೋದ್ರಿಕ್ತತೆ ಅಷ್ಟೊಂದು ಒಳ್ಳೆಯದಲ್ಲ ಎಂಬುದು ಕ್ಯಾರೊಲಿನ್ ಹೇಳಿಕೆಯಾಗಿದೆ. ಪ್ರೀತಿಯಲ್ಲಿ ಪರಸ್ಪರ ಗೌರವ ನಂಬಿಕೆ ಇದ್ದಾಗ ನಿರಂತರ ಪ್ರೀತಿಯಾಗಿ ಶಾಶ್ವತವಾಗಿರುತ್ತದೆ ಎಂದು ಸಲಹೆ ನೀಡುತ್ತಾರೆ. ಪ್ರೀತಿಯಲ್ಲಿ ಭಾವೋದ್ರಿಕ್ತತೆಯುಂಟಾದಾಗ ಅದು ದೀರ್ಘತೆಯನ್ನು ಹೊಂದುವುದಿಲ್ಲ ಎಂಬುದು ಕ್ಯಾರೊಲಿನ್ ಸಲಹೆಯಾಗಿದೆ. ಪ್ರೀತಿಯ ಭಾವನೆಗಳು ಒಮ್ಮೆಗೆ ಆಗಮಿಸುತ್ತವೆ ಹಾಗೆಯೇ ಕೆಲವೇ ಸಮಯದಲ್ಲಿ ನಿರ್ಗಮಿಸುತ್ತವೆ.
ಭೂಮಿಯ ಚಿಹ್ನೆಗಳ ಭಾವನೆ:
ವೃಷಭ ರಾಶಿ, ಕನ್ಯಾರಾಶಿ ಮತ್ತು ಮಕರ ರಾಶಿ- ಭೂಮಿಯ ಚಿಹ್ನೆಗಳು ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚು ಒಲವನ್ನು ತೋರಿಸುತ್ತವೆ. ಸ್ಥಾನಮಾನ ಹಾಗೂ ಅಧಿಕಾರವನ್ನು ಹುಡುಕುವ ಪ್ರವೃತ್ತಿ ಈ ಚಿಹ್ನೆಯ ರಾಶಿಯವರದ್ದಾಗಿದೆ.
ಪ್ರೀತಿಯ ವಿಷಯದಲ್ಲಿ ಮೊದಲು ಇದನ್ನು ಸಮತೋಲನಗೊಳಿಸಬೇಕು ಎಂಬುದು ಕ್ಯಾರೊಲಿನ್ ಸಲಹೆಯಾಗಿದೆ. ಹಣ ಮಾಡುವುದು ಹಾಗೂ ಲಾಭ ಗಳಿಸುವುದಕ್ಕಿಂತ ಆಚೆಗೂ ಜೀವನವಿದೆ ಎಂಬುದನ್ನು ಈ ರಾಶಿಯವರು ಅರಿತುಕೊಳ್ಳಬೇಕು ಎಂಬುದು ಜ್ಯೋತಿಷಿ ಕ್ಯಾರೊಲಿನ್ ಅಭಿಪ್ರಾಯವಾಗಿದೆ. ಪ್ರೀತಿಯಲ್ಲಿ ಲಾಭ ಹಾಗೂ ದುರಾಸೆ ಒಳ್ಳೆಯದಲ್ಲ ಎಂಬ ಕಿವಿಮಾತನ್ನೂ ಅವರು ನೀಡುತ್ತಾರೆ.
ನಾಣ್ಯಕ್ಕೆ ಎರಡು ಬದಿಯಿರುವಂತೆ ಈ ರಾಶಿಯವರಲ್ಲಿ ಕೆಲವರು ಪ್ರೀತಿಯ ಬಗ್ಗೆ ಗಂಭೀರತೆಯನ್ನು ತಾಳುತ್ತಾರೆ. ಅಂತೆಯೇ ತಮ್ಮ ಪಾಲುದಾರರನ್ನು ತುಂಬಾ ಕಾಳಜಿಯಿಂದ ಅಪ್ಯಾಯಮಾನತೆಯಿಂದ ನೋಡಿಕೊಳ್ಳುತ್ತಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಈ ರಾಶಿಯವರು ಪ್ರವೀಣರು ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ.
ನಿರಂತರ ಪ್ರೀತಿ - ಈ ರಾಶಿಯವರು ನಿರಂತರ ಪ್ರೀತಿಯನ್ನು ಆಸ್ವಾದಿಸುವವರು. ನಿರಂತರ ಪ್ರೀತಿಯನ್ನು ಪಡೆಯಲು ಯಾವುದೇ ಮಾಂತ್ರಿಕ ಕ್ರಿಯೆಯಿಲ್ಲ. ಸಹಜ ಪ್ರೀತಿಯಲ್ಲಿ ಇದು ತನ್ನಿಂದ ತಾನೇ ಮೂಡುತ್ತದೆ.
ಭಾವೋದ್ರಿಕ್ತ ಪ್ರೀತಿ ಕೆಲವು ಸಮಯಗಳವರೆಗೆ ಮಾತ್ರ ಇರುತ್ತದೆ ಆದರೆ ನಿರಂತರ ಪ್ರೀತಿ ಜೀವನ ಕೊನೆಯಾಗುವವರೆಗೆ ಹಾಗೆಯೇ ಇರುತ್ತದೆ. ಈ ರಾಶಿಯವರು ನಿರಂತರ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ. ಭೂಮಿಯ ಚಿಹ್ನೆ ಪ್ರಮಾಣಿಕತೆ ಹಾಗೂ ನೈಜತೆಗೆ ಹೆಸರುವಾಸಿಯಾಗಿವೆ. ಮುಕ್ತ ಸಂವಾದ ನಡೆಸುವ ಮೂಲಕ ಕಲಹಗಳನ್ನು ಸಂಧಾನ ಮಾಡುವ ಅಂಶ ಈ ರಾಶಿಯವರಲ್ಲಿದೆ.
ನಿಮ್ಮ ಸಂಗಾತಿ ನಿಮಗೆ ಬದ್ಧರಾಗಿರಬೇಕು ಹಾಗೂ ಪ್ರೀತಿಪಾತ್ರರಾಗಬೇಕು ಎಂದಾದಲ್ಲಿ ಈ ರಾಶಿಯವರು ಮೊದಲಿಗೆ ಅಂತಹ ಗುಣಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂಬುದು ಕ್ಯಾರೊಲಿನ್ ಸಲಹೆಯಾಗಿದೆ. ಭೂಮಿಯ ಚಿಹ್ನೆಗಳು (ನಿರ್ದಿಷ್ಟವಾಗಿ) ತಮ್ಮದೇ ಆದ ಶಕ್ತಿಯನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಇನ್ನೂ ನಿಜವಾದ ಪ್ರೀತಿಗೆ ಶರಣಾಗುತ್ತವೆ. ಎರಡೂ ಪಕ್ಷಗಳು ಶಾಂತಿಯ ಭಾವವನ್ನು ಅನುಭವಿಸಿದಾಗ ನಿರಂತರ ಪ್ರೀತಿಯನ್ನು ಸಾಧಿಸಲಾಗುತ್ತದೆ. ಇದರಿಂದ ನಿಜವಾದ ಸಂತೋಷವನ್ನು ಪಡೆದುಕೊಳ್ಳಬಹುದಾಗಿದೆ, ಇದು ಸಾಮಾನ್ಯವಾಗಿ ರೋಮಾಂಚನಕಾರಿ ಶಾಂತ ಪ್ರವೃತ್ತಿ ಎಂದೆನಿಸಿದೆ.
ವಾಯು ಚಿಹ್ನೆಗಳಲ್ಲಿ ಪ್ರೀತಿಯ ಭಾವನೆ:
ಕುಂಭ, ಮಿಥುನ, ತುಲಾ ರಾಶಿ - ನೀವು ಯಾರನ್ನಾದರೂ ನಿಜವಾಗಿಯೂ ಪ್ರೀತಿಸಿದರೆ, ನೀವು ಯಾವಾಗಲೂ ಅವರನ್ನು ಪ್ರೀತಿಸುತ್ತೀರಿ ಎಂಬುದು ವಾಯುವಿನ ಲಕ್ಷಣಗಳಾಗಿವೆ. ಸ್ನೇಹವು ಮೊದಲ ಸ್ಥಾನದಲ್ಲಿದ್ದರೆ ಪ್ರೀತಿ ಜೀವನಪರ್ಯಂತ ಇರುತ್ತದೆ ಎಂಬುದು ಈ ರಾಶಿಯವರ ಅನಿಸಿಕೆಯಾಗಿದೆ.
ಪಾಲುದಾರರ ಮೇಲೆ ಒತ್ತಡ ಹೇರುವುದಿಲ್ಲ ಹಾಗೂ ಸ್ವತಂತ್ರರಾಗಿರಲು ಬಿಡುತ್ತಾರೆ. ಸಂಕಲ್ಪಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ ಅವರ ಬೇಡಿಕೆಗಳನ್ನು ಈಡೇರಿಸಲು ಸಹಕಾರಿಯಾಗಿದ್ದಾರೆ. ಅವರಿಗೆ ಬಯಸಿದ ರೀತಿಯಲ್ಲಿ ಮುಂದೆ ಬರಲು ಅವರಿಗೆ ಸಹಾಯ ಮಾಡುತ್ತಾರೆ.
ಕುಶಾಗ್ರಮತಿ, ಅವರ ಪ್ರಕಾಶಮಾನವಾದ ಮನಸ್ಸು ಮತ್ತು ಚಿಂತನೆಯನ್ನು ಪ್ರಚೋದಿಸುವ ಮತ್ತು ಚರ್ಚೆಯನ್ನು ಹುಟ್ಟುಹಾಕುವ ಸಾಮರ್ಥ್ಯದೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ತಪ್ಪು ತಿಳುವಳಿಕೆ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ಇವರಿಗೆ ಮುಕ್ತ ಸಂವಾದದ ಅಗತ್ಯವಿದೆ.
ನಿರ್ಲಿಪ್ತ ಪ್ರೀತಿ - ಇವರದ್ದು ಒಂದು ರೀತಿ ಕಟ್ಟುಪಾಡುಗಳಿಲ್ಲದ ನಿರ್ಲಿಪ್ತ ಪ್ರೀತಿಯಾಗಿದೆ. ಈ ರಾಶಿಯವರು ಸಂಗಾತಿಗೆ ಗೌರವ ನೀಡುವವರು ಹಾಗೂ ವಾಯು ಚಿಹ್ನೆಯ ರಾಶಿಯವರು ಪ್ರೀತಿಗೆ ಮತ್ತು ಪ್ರೀತಿಸುವವರಿಗೆ ಬೆಲೆ ನೀಡುವವರು.
ಇವರದು ನಿರ್ಲಿಪ್ತ ಪ್ರೀತಿ ಅಂದರೆ ಉಸಿರುಗಟ್ಟಿಸುವ ಪ್ರೀತಿಗೆ ಇವರು ಬೆಲೆ ನೀಡುವುದಿಲ್ಲ. ಪ್ರೀತಿಯಲ್ಲಿ ಸ್ವಾತಂತ್ರ್ಯ ಇರಬೇಕು ಎಂದು ಭಾವಿಸುವವರು. ವಿಶ್ವಾಸದ್ರೋಹಕ್ಕಿಂತ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ.
ತಮ್ಮ ಮಾಜಿಗಳೊಂದಿಗೆ ಅಷ್ಟೇ ನಿಕಟ ಸ್ನೇಹವನ್ನು ಈ ರಾಶಿಯವರು ಮುಂದುವರಿಸುತ್ತಾರೆ. ಅವರೊಂದಿಗೆ ಸಂತೋಷದಿಂದಲೇ ರಜಾದಿನಗಳನ್ನು ಕಳೆಯುತ್ತಾರೆ ಹಾಗೂ ಸ್ನೇಹದಿಂದ ನಿಕಟವಾಗಿರುತ್ತಾರೆ.
ಪ್ರೀತಿಯ ಬಗ್ಗೆ ಅವರು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡಿರುತ್ತಾರೆ. ಈ ರಾಶಿಯವರು ಪ್ರೀತಿಯಲ್ಲಿ ಕಟ್ಟುಪಾಡುಗಳಿರಬಾರದು ಎಂದು ನಂಬಿರುವವರಾಗಿದ್ದಾರೆ.
ನೀವು ಒಮ್ಮೆ ಪ್ರೀತಿಸಿದರೆ ನಿಮ್ಮ ಪ್ರೀತಿ ಹಾಗೆಯೇ ಇರುತ್ತದೆ ಮತ್ತು ಜೀವನಪರ್ಯಂತ ಪ್ರೀತಿಸುತ್ತೀರಿ ಎಂದು ಈ ರಾಶಿಯವರು ನಂಬುತ್ತಾರೆ. ವಿಶ್ವಾಸ ದ್ರೋಹ, ಮೋಸಕ್ಕೆ ಈ ರಾಶಿಯವರಲ್ಲಿ ಸ್ಥಳವಿಲ್ಲ. ಸಂದೇಹ ಪ್ರವೃತ್ತಿಯಿಂದ ಇವರು ವ್ಯಕ್ತಿಗಳನ್ನು ನೋಡುವವರಲ್ಲ.
ಜಲ ಚಿಹ್ನೆಯಲ್ಲಿ ಪ್ರೀತಿಯ ಭಾವನೆಗಳು:
ಕರ್ಕಾಟಕ, ವೃಶ್ಚಿಕ, ಮೀನ - ಈ ರಾಶಿಯವರಿಗೆ ಪ್ರೀತಿಯಲ್ಲಿ ಬದ್ಧತೆ ಇರಬೇಕು ಆಗ ಮಾತ್ರವೇ ಅವರು ನಂಬುತ್ತಾರೆ. ಪ್ರೀತಿಯಲ್ಲಿ ಭಾವನಾತ್ಮಕ ಭದ್ರತೆಯನ್ನು ಅವರು ನಂಬುತ್ತಾರೆ. ದೀರ್ಘಾವಧಿಯ ಸಂಬಂಧದಲ್ಲಿಯೂ ಸಹ, ಅವರು ತಮ್ಮ ಭಾವನೆಗಳ ಬಗ್ಗೆ ಸುಲಭವಾಗಿ ಮಾತನಾಡುವುದಿಲ್ಲ.
ತಮ್ಮ ಸಂಗಾತಿ ತಾವು ಹೇಳದೆಯೇ ತಮ್ಮ ಬಗ್ಗೆ ತಿಳಿದುಕೊಳ್ಳಲಿ ಎಂಬ ಭಾವನೆಯನ್ನು ಈ ರಾಶಿಯವರು ಹೊಂದಿರುತ್ತಾರೆ. ತಮ್ಮ ಸಂಗಾತಿಗಳಿಂದ ವಿಶೇಷವಾಗಿ ಏನನ್ನಾದರೂ ಇವರು ಬಯಸುತ್ತಿರುತ್ತಾರೆ. ತಾವು ಅವರಿಗೆ ವಿಶೇಷವಾಗಿರಬೇಕೆಂದು ಬಯಸುತ್ತಾರೆ.
ವೃಶ್ಚಿಕ ರಾಶಿಯವರು ಅಂತಃಪ್ರಜ್ಞೆ ಮತ್ತು ಭಾವನೆಗಳ ಮೂಲಕ ಸಂವಹನ ನಡೆಸುತ್ತಾರೆ ಹಾಗೂ ಉಳಿದವರಿಂದಲೂ ಇದನ್ನೇ ನಿರೀಕ್ಷಿಸುತ್ತಾರೆ. ಭಾವನೆಗಳ ಮೂಲಕ ಜಲ ಚಿಹ್ನೆಯವರು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ಚಿಹ್ನೆಯವರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತಾರೆ ಹಾಗೂ ಈ ನಿರೀಕ್ಷೆಗಳನ್ನು ಪೂರೈಸುವುದು ಕಷ್ಟವೇ. ಅವರಿಗೆ ಎಷ್ಟು ಮಾಡಿದರೂ ತೃಪ್ತಿ ಎಂಬುದು ಇರುವುದಿಲ್ಲ. ಅವರನ್ನು ಮೆಚ್ಚಿಸುವುದು ತುಸು ಕಷ್ಟದ ವಿಚಾರವಾಗಿದೆ.
ಪೋಷಣೆಯ ಪ್ರೀತಿ - ಈ ರಾಶಿಯವರು ಪ್ರೀತಿಯಲ್ಲಿ ಕಾಳಜಿ ಹಾಗೂ ಪೋಷಣೆ ಇರಬೇಕು ಎಂದು ಬಯಸುವವರು. ಪ್ರೀತಿ ಎಂಬುದು ಪೋಷಿಸುವಂತಿರಬೇಕು ಹಾಗೂ ಮಿತಿಯಿಲ್ಲದ ಕಾಳಜಿಯನ್ನು ಹೊಂದಿರಬೇಕು ಎಂಬುದು ಈ ರಾಶಿಯವರ ತತ್ವವಾಗಿದೆ.
ಪೋಷಕರು ನೀಡಿದ ಅದೇ ಪ್ರೀತಿ ಹಾಗೂ ಕಾಳಜಿಯನ್ನು ತಮ್ಮ ಸಂಗಾತಿಗಳಲ್ಲಿ ಈ ರಾಶಿಯವರು ಎದುರು ನೋಡುತ್ತಾರೆ. ಪುರಾತನ ಗ್ರಂಥಗಳು ಹೇಳುವಂತೆ ನಾವು ನಮ್ಮ ಹೆತ್ತವರಿಗೆ ನೀಡಬೇಕಾದ ಕರ್ಮದ ಋಣವನ್ನು ನಾವು ಎಂದಿಗೂ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಈ ರಾಶಿಯವರು ಅರಿತುಕೊಂಡಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ