• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Zodiac Diaries: ಬ್ರೇಕ್‌ಅಪ್‌ ಆದ್ರೆ ಜೀವನ ಮುಗಿಯಲ್ಲ; ಬದುಕನ್ನು ರೀಸ್ಟಾರ್ಟ್‌ ಮಾಡಲು ರಾಶಿಗನುಗುಣವಾಗಿ ಹೀಗೆ ಮಾಡಿ

Zodiac Diaries: ಬ್ರೇಕ್‌ಅಪ್‌ ಆದ್ರೆ ಜೀವನ ಮುಗಿಯಲ್ಲ; ಬದುಕನ್ನು ರೀಸ್ಟಾರ್ಟ್‌ ಮಾಡಲು ರಾಶಿಗನುಗುಣವಾಗಿ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ (ಕೃಪೆ: Internet)

ಸಾಂದರ್ಭಿಕ ಚಿತ್ರ (ಕೃಪೆ: Internet)

ಹೆಮ್ಮೆ ಮತ್ತು ಆತ್ಮವಿಶ್ವಾಸ ಮೇಷ ರಾಶಿಯವರ ಸಂಕೇತವಾಗಿದೆ. ಮೇಷ ರಾಶಿಯರಿಗೆ ತಮ್ಮ ಮೇಲೆ ಆತ್ಮವಿಶ್ವಾಸ ಹೆಚ್ಚು ಹಾಗು ಉತ್ತಮಕ್ಕೆ ತಾವು ಅರ್ಹರೆಂದು ಭಾವಿಸಿರುತ್ತಾರೆ. ಹೀಗಾಗಿ ಬಿಟ್ಟು ಹೋದ ಸಂಗಾತಿಯ ಬಗ್ಗೆ ಚಿಂತಿಸದೇ ಮುಂದೆ ಬರುವ ಒಳ್ಳೆಯ ಜೀವನವನ್ನು ಧೈರ್ಯದಿಂದ ಬರ ಮಾಡಿಕೊಳ್ಳಿ. ಮೇಷ ರಾಶಿಯವರು ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಬೇಗ ಪಲ್ಲಟವಾಗುತ್ತಾರೆ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • New Delhi, India
 • Share this:

ಜೀವನದಲ್ಲಿ (Life) ಅತಿಯಾಗಿ ಪ್ರೀತಿಸಿದ (Love) ಹುಡುಗ-ಹುಡುಗಿ ಹೃದಯಕ್ಕೆ ಘಾಸಿ ಮಾಡಿ ಬಿಟ್ಟು ಹೋದರೆ ಆಗುವ ನೋವು ಅಷ್ಟಿಷ್ಟಲ್ಲ. ಈಗಿನ ಯುವ ಜನತೆಗೆ ಲವ್-ಬ್ರೇಕಪ್‌ (Love-Breakup) ಇದೆಲ್ಲಾ ತುಂಬಾ ಕಾಮನ್‌ ಆದರೂ ಕೆಲವರು ಇದನ್ನು ಹೆಚ್ಚಾಗಿ ಮನಸ್ಸಿಗೆ ತೆಗೆದುಕೊಂಡು ದುಃಖ ಅನುಭವಿಸುತ್ತಾರೆ. ಜೀವನವೇ ಮುಗಿದು ಹೋಯಿತು ಎಂದು ಅದರಿಂದ ಆಚೆ ಬರಲು ಒದ್ದಾಡುತ್ತಿರುತ್ತಾರೆ. ಬ್ರೇಕ್‌ಅಪ್‌ ಆದಮೇಲೆ ಕೆಲವರು ಇನ್ನಿಲ್ಲದ ದುಶ್ಚಟಗಳಿಗೂ ದಾಸರಾಗಿ (Bad Habits) ಬಿಡುತ್ತಾರೆ. ಆದರೆ ಖಂಡಿತಾ ಜೀವನ ಇಷ್ಟೇ ಅಲ್ಲ. ಬ್ರೇಕಪ್‌ ಆಯ್ತು ಎಂದಾದರೆ ಜೀವನ ಅಷ್ಟಕ್ಕೇ ಮುಗಿಯೋದಿಲ್ಲ. ಬದುಕುವುದು, ನೋಡುವುದು, ಕಲಿಯುವುದು ಸಾಕಷ್ಟಿದ್ದು, ಬದುಕು ಮುಂದೆ ಸಾಗಲೇ ಬೇಕು. ಹಾಗಾದರೆ ನಾವಿಲ್ಲಿ ರಾಶಿ (Zodiac) ಚಕ್ರದನುಗುಣವಾಗಿ ಬ್ರೇಕ್‌ಅಪ್‌ನಿಂದ ಹೊರಬಂದು ಬದುಕುವುದು ಹೇಗೆ ಎಂಬುವುದನ್ನು ನೋಡೋಣ.


Numerology Suggestions Novemberr 27th 2022 Check Your lucky number by birth date
ಸಾಂದರ್ಭಿಕ ಚಿತ್ರ


ಬ್ರೇಕ್‌ಅಪ್‌ ನಂತರ ಬದುಕನ್ನು ಹೀಗೆ ಬದಲಾಯಿಸಿಕೊಳ್ಳಿ


ಮೇಷ:  ಮಾರ್ಚ್ 21 ಏಪ್ರಿಲ್ 19
ಹೆಮ್ಮೆ ಮತ್ತು ಆತ್ಮವಿಶ್ವಾಸ ಮೇಷ ರಾಶಿಯವರ ಸಂಕೇತವಾಗಿದೆ. ಮೇಷ ರಾಶಿಯರಿಗೆ ತಮ್ಮ ಮೇಲೆ ಆತ್ಮವಿಶ್ವಾಸ ಹೆಚ್ಚು ಹಾಗು ಉತ್ತಮಕ್ಕೆ ತಾವು ಅರ್ಹರೆಂದು ಭಾವಿಸಿರುತ್ತಾರೆ. ಹೀಗಾಗಿ ಬಿಟ್ಟು ಹೋದ ಸಂಗಾತಿಯ ಬಗ್ಗೆ ಚಿಂತಿಸದೇ ಮುಂದೆ ಬರುವ ಒಳ್ಳೆಯ ಜೀವನವನ್ನು ಧೈರ್ಯದಿಂದ ಬರ ಮಾಡಿಕೊಳ್ಳಿ. ಮೇಷ ರಾಶಿಯವರು ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಬೇಗ ಪಲ್ಲಟವಾಗುತ್ತಾರೆ.


ಮೇಷ ರಾಶಿ


ಈ ಸ್ವಭಾವ ಬ್ರೇಕ್‌ಅಪ್‌ ಸಂದರ್ಭದಲ್ಲೂ ಕೈಹಿಡಿಯುತ್ತದೆ. ನಿಮ್ಮ ಮಾಜಿ ಪ್ರೇಮಿ ಜೊತೆಗಿನ ಎಲ್ಲಾ ನೆನಪುಗಳನ್ನು ಮರೆತು ನಿಮಗೆ ಸಮಯ ನೀಡಿ ಎಲ್ಲವನ್ನೂ ಎದುರಿಸುವ ಮನಸ್ಸು ಮಾಡಿ. ಮೇಷ ರಾಶಿಯವರು ಈ ಸಂದರ್ಭದಲ್ಲಿ ಪತ್ರ ಬರೆಯುವ ಮೂಲಕ ನಿಮ್ಮ ಕೋಪವನ್ನು ಹೊರಹಾಕಬಹುದು. ಇದು ನಿಮ್ಮ ಕೋಪ, ನಿರಾಶೆ ಹೊರಹಾಕಿ ಮತ್ತು ಅವನ/ಅವಳ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಿಸುತ್ತದೆ. ಹೀಗೆ ಬರೆದ ಪತ್ರವನ್ನು ಸುಟ್ಟು ಹಾಕಿದರೆ ಇನ್ನಷ್ಟು ಮನಸ್ಸು ಹಗುರವಾಗುತ್ತದೆ ಮತ್ತು ನಕಾರಾತ್ಮಕ ಭಾವನೆಗಳು ಬೂದಿಯಾಗುತ್ತವೆ.


ವೃಷಭ: ಏಪ್ರಿಲ್ 20-ಮೇ 20
ವೃಷಭ ರಾಶಿಯವರು ಪ್ರೀತಿಯಲ್ಲಿ ನಿಷ್ಠಾವಂತರು, ಹೀಗಾಗೆ ಬ್ರೇಕ್‌ಅಪ್‌ನಿಂದ ಇವರಿಗೆ ಹೊರಬರುವುದು ಕಷ್ಟವಾಗಬಹುದು. ಈ ರಾಶಿಯವರು ಅವರ ಸಂಗಾತಿಯನ್ನು ಹೆಚ್ಚು ಪ್ರೀತಿಸುವುದರಿಂದ ಬ್ರೇಕ್‌ಅಪ್‌ನಂತಹ ಘಟನೆಗಳು ಅವರ ಮನಸ್ಸನ್ನು ಹೆಚ್ಚು ಘಾಸಿ ಮಾಡುತ್ತದೆ.


ವೃಷಭ ರಾಶಿ


ಈ ಕಷ್ಟ, ಕಹಿ ಅನುಭವ ಸ್ವಲ್ಪ ದಿನ ಮಾತ್ರ, ನೀವೂ ಕೂಡ ಇದರಿಂದ ಆಚೆ ಬರಲು ಪ್ರಯತ್ನಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಅದಕ್ಕಾಗಿ ನೀವು ಈ ನೋವನ್ನು ಮರೆತು ಜನರೊಂದಿಗೆ ಬೆರೆಯಿರಿ, ಪರಿಸರದ ಜೊತೆ ಕಾಲ ಕಳೆಯಿರಿ. ನಿಮ್ಮ ಸಂಗಾತಿ ಜೊತೆ ಕಳೆದ ಸಮಯವನ್ನು ಮೆಲುಕು ಹಾಕುವುದನ್ನು ತಪ್ಪಿಸಿ. ವೃಷಭ ರಾಶಿಯವರು ಈ ನೋವಿನಿಂದ ಹೊರಬರಲು ನಿಮ್ಮ ರೂಮ್‌ಗಳಿಗೆ ತಾಜಾ ಮತ್ತು ಪ್ರಕಾಶಮಾನವಾದ ಬಣ್ಣವನ್ನು ಬಳಿಯಿರಿ. ಇದು ನಿಮಗೆ ಪಾಸಿಟಿವ್‌ನೆಸ್‌ ನೀಡುತ್ತದೆ.


ಮಿಥುನ: ಮೇ 21-ಜೂನ್ 20
ಮಿಥುನ ರಾಶಿಯವರು ಹೇಳಿ ಕೇಳಿ ಆಳವಾಗಿ ಯೋಚನೆ ಮಾಡುವ ಸ್ವಭಾವದವರು. ಹೀಗೆ ಬ್ರೇಕ್‌ಅಪ್‌ನಂತಹ ವಿಷಯಗಳನ್ನು ಸಹ ಇವರು ಮನಸ್ಸಿಗೆ ತಗೆದುಕೊಂಡು ಹೆಚ್ಚು ಆಳವಾಗಿ ಯೋಚಿಸುತ್ತಾರೆ. ಆದರೆ ಜೀವನ ಇನ್ನೂ ಸಾಕಷ್ಟಿದೆ, ಅಳುತ್ತಾ ಕೂರದೇ ಮುಂದೆ ಸಾಗಿ. ಇಂತಹ ಸಂದರ್ಭದಲ್ಲಿ ಸ್ನೇಹಿತರ ಜೊತೆ ಎಲ್ಲವನ್ನೂ ಹೇಳಿಕೊಳ್ಳಿ. ಪ್ರೀತಿಯಿಂದ ಹೊರಬರಲು ಸ್ವಲ್ಪ ಸಮಯ ಬೇಕಾದರೂ ಈ ವೇಳೆಯಲ್ಲಿ ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.


ಮಿಥುನಾ ರಾಶಿ


ಮಿಥುನ ರಾಶಿಯವರು ಈ ನೋವಿನಿಂದ ಹೊರಬರಲು ಮಾಜಿ ಪ್ರೇಮಿಯ ಫೋಟೋವನ್ನು ಪದೇ ಪದೇ ನೋಡುವುದು ಅಥವಾ ಅವರ ಸೋಶಿಯಲ್‌ ಮೀಡಿಯಾವನ್ನು ಚೆಕ್‌ ಮಾಡುವುದನ್ನು ತಪ್ಪಿಸಿ. ಇದು ನಿಮಗೆ ಅವರ ನೆನಪಿನಿಂದ ಹೊರಬರಲು ಸಹಾಯ ಮಾಡುತ್ತದೆ.


ಕರ್ಕಾಟಕ: ಜೂನ್ 21-ಜುಲೈ 22
ಕರ್ಕಾಟಕ ರಾಶಿಯವರು ಪ್ರೀತಿಯನ್ನು ಒಪ್ಪಿಕೊಳ್ಳುವಾಗಲೂ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಪ್ರೀತಿಯನ್ನು ಮರೆಯಲು ಸಹ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.


ಕಟಕ ರಾಶಿ


ಬ್ರೇಕ್‌ಅಪ್‌ ನಂತರ ಈ ರಾಶಿಯವರು ಹೆಚ್ಚಿನ ನೋವು ಅನುಭವಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಮ್ಮನ್ನು ನೀವು ಗುಣಪಡಿಸಿಕೊಳ್ಳುವುದರತ್ತ ಗಮನ ಹರಿಸಬೇಕು, ಕುಟುಂಬ ಮತ್ತು ಸ್ನೇಹಿತರ ಜೊತೆ ಹೆಚ್ಚಿನ ಸಮಯ ಕಳೆಯಿರಿ. ಬ್ರೇಕ್‌ಅಪ್‌ನಿಂದ ಹೊರಬರಲು ಯೋಗ, ಡ್ಯಾನ್ಸ್‌ ಮಾಡಿ, ಟ್ರೆಕ್ಕಿಂಗ್‌ ಹೋಗಿ. ಬೇರೆ ಬೇರೆ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ.


ಸಿಂಹ: ಜುಲೈ 23-ಆಗಸ್ಟ್ 22
ಸಿಂಹ ರಾಶಿಯವರು ಭಾವೋದ್ರಿಕ್ತ ಸ್ವಭಾವದವರು. ಬ್ರೇಕ್‌ಅಪ್‌ನಿಂದ ಹೊರಬರಲು ಕೆಲವು ವಿಷಯಗಳನ್ನು ನೀವು ಎಚ್ಚರಿಕೆಯಿಂದ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ನಿಮ್ಮ ನಡವಳಿಕೆ, ಕೋಪ, ಹತಾಶೆಯನ್ನು ನಿಗ್ರಹಿಸುವ ಪ್ರಯತ್ನ ಮಾಡಿ. ಮಾಜಿ ಪ್ರೇಮಿಯನ್ನು ಮರೆಯಲು ನಿಮ್ಮ ನೆಚ್ಚಿನ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಪೇಟಿಂಗ್‌, ಒಳ್ಳೆ ಲವ್‌ ಸ್ಟೋರಿ ಬರೆದು ಅದಕ್ಕೆ ಒಳ್ಳೆಯ ಖುಷಿ ಅಂತ್ಯವನ್ನು ನೀಡಿ.


ಸಿಂಹ ರಾಶಿ


ಕನ್ಯಾ: ಆಗಸ್ಟ್ 23-ಸೆಪ್ಟೆಂಬರ್ 22
ಕಾಳಜಿಯುಳ್ಳ, ಮೌಲ್ಯಮಾಪನಶೀಲ ಗುಣದವರಾದ ಕನ್ಯಾರಾಶಿಯವರು ತಮ್ಮ ಸಂಗಾತಿ ಬಿಟ್ಟುಹೋದಾಗ ಈ ಬಗ್ಗೆ ಸಾವಿರಾರು ಪ್ರಶ್ನೆಗಳನ್ನು ತಮಗೇ ತಾವೇ ಹಾಕಿಕೊಂಡು ಯೋಚನೆಯಲ್ಲಿ ಮುಳುಗಿರುತ್ತಾರೆ.


ಕನ್ಯಾ ರಾಶಿ


ಬ್ರೇಕ್‌ಅಪ್‌ ಅನ್ನು ಸರಿಪಡಿಸಲು ಏನು ಮಾಡಬಹುದು ಎಂದು ಚಿಂತಿಸುತ್ತಾರೆ. ನಿಮಗೆ ಎರಡನೇ ಅವಕಾಶ ಇಲ್ಲದಿದ್ದಾಗ ಚಿಂತಿಸಿ ಫಲವಿಲ್ಲ. ಹೀಗಾಗಿ ಜೀವನ ಮುಂದೆ ಸಾಗುವುದರ ಬಗ್ಗೆ ನೋಡಿ. ಹಳೇ ಪ್ರೇಮಿಯನ್ನು ಮರೆಯಲು ಜಿಮ್‌ಗೆ ಹೋಗಿ, ದೈನಂದಿನ ಚಾಲನೆಯಲ್ಲಿರುವ ದಿನಚರಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.


ತುಲಾ: ಸೆಪ್ಟೆಂಬರ್ 23-ಅಕ್ಟೋಬರ್ 22
ತುಲಾ ರಾಶಿಯವರು ಪ್ರೀತಿಗೆ ಮೌಲ್ಯ ನೀಡುವವರಾಗಿದ್ದು, ಬೇರ್ಪಡುವಿಕೆಯನ್ನು ಒಪ್ಪಿಕೊಳ್ಳದೇ ಮನಸ್ಸಿನಲ್ಲಿಯೇ ಒದ್ದಾಡುವ ಸ್ವಭಾವದವರು. ಪ್ರೇಮಿಯನ್ನು ಮರೆಯಲು ಅವರ ನೆನಪುಗಳನ್ನು ಅಳಿಸುತ್ತಾ ಬನ್ನಿ. ಇದು ನಿಮಗೆ ಆ ನೋವಿನಿಂದ ಹೊರಬರಲು ಸಾಧ್ಯವಾಗುತ್ತದೆ. ಬೇರ್ಪಡುವಿಕೆಯಿಂದ ಹೊರಬರಲು ನಿಮಗೆ ಮತ್ತು ನಿಮ್ಮ ಕಾಳಜಿಗೆ ಸಮಯ ನೀಡಿ, ಸ್ಪಾ ನಂತಹ ಜಾಗದಲ್ಲಿ ಕಾಲ ಕಳೆಯಿರಿ.


ತುಲಾ ರಾಶಿ


ವೃಶ್ಚಿಕ: ಅಕ್ಟೋಬರ್ 23-ನವೆಂಬರ್ 21
ತುಂಬಾ ಪೊಸೆಸಿವ್‌ ಆದ ವೃಶ್ಚಿಕ ರಾಶಿಯವರಿಗೆ ಬ್ರೇಕ್‌ಅಪ್‌ ಅನ್ನು ಸ್ವೀಕರಿಸುವುದು ಕಷ್ಟ. ಒಬ್ಬರ ಜೊತೆ ಸಂಬಂಧ ಇದ್ದರೆ ಈ ರಾಶಿಯವರು ಅವರನ್ನು ತುಂಬಾ ಹಚ್ಚಿಕೊಳ್ಳುತ್ತಾರೆ.


ವೃಶ್ಚಿಕ ರಾಶಿ


ಬೇರೆಯಾಗುವಿಕೆ ಇವರ ಮನಸ್ಸನ್ನು ಛಿದ್ರಗೊಳಿಸುತ್ತದೆ. ಈ ವೇಳೆ ನೀವು ಆಲ್ಕೋಹಾಲ್ ಅಥವಾ ಇತರ ಯಾವುದೇ ವ್ಯಸನಕಾರಿ ಅಭ್ಯಾಸಕ್ಕೆ ಮೊರೆ ಹೋಗಬಾರದು. ಇರುವ ಬೇರೆ ಸಂಬಂಧಗಳಿಗೆ ಬೆಲೆ ನೀಡಿ. ನಿಮ್ಮ ಗಮನವನ್ನು ಸ್ನೇಹಿತರು ಮತ್ತು ಕುಟುಂಬಕ್ಕೆ ನೀಡಿ.


ಧನು: ನವೆಂಬರ್ 22-ಡಿಸೆಂಬರ್ 21
ಮುಕ್ತ ಮನೋಭಾವದ ಧನು ರಾಶಿಯವರು ಪ್ರೀತಿಯನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಆದರೆ ಹೆಚ್ಚು ಪ್ರೀತಿಸಿದ ಪಾಲುದಾರರೇ ನಿಮ್ಮನ್ನು ಬಿಟ್ಟು ಹೋದಾಗ ನೀವು ಮತ್ತೊಂದು ಪ್ರೀತಿಯಲ್ಲಿ ಬೀಳಲು ಹಿಂಜರಿಯುವುದಿಲ್ಲ.


ಧನಸ್ಸು ರಾಶಿ


ಈ ನಿಮ್ಮ ಗುಣ ಹಳೇ ಪ್ರೀತಿಯನ್ನು ಮರೆಸಲು ಸಹಾಯ ಮಾಡುತ್ತದೆ. ಬ್ರೇಕ್‌ಅಪ್‌ ಮರೆಯಲು ಧನುರಾಶಿಯವರು ಪ್ರವಾಸ ಕೈಗೊಳ್ಳಬೇಕು, ಇದು ನಿಮ್ಮ ಮನಸ್ಸನ್ನು ಹದಗೊಳಿಸುತ್ತದೆ.


ಮಕರ: ಡಿಸೆಂಬರ್ 22-ಜನವರಿ 19
ಲೆಕ್ಕಾಚಾರ ಮತ್ತು ನಿರಂತರ ಯೋಚನೆಯ ಗುಣ ಬ್ರೇಕ್‌ಅಪ್‌ ಅನ್ನು ಸ್ವೀಕರಿಸಲು ಮಕರ ರಾಶಿಯವರಿಗೆ ಕಷ್ಟವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಾಜಿ ಜೊತೆ ನೀವು ಹಂಚಿಕೊಂಡಿರುವ ಸಂಬಂಧದ ಬಗ್ಗೆ ಆಲೋಚಿಸಿ ಮತ್ತು ನಿಮ್ಮ ಎಲ್ಲಾ ಸಮಯ ಮತ್ತು ಶ್ರಮಕ್ಕೆ ಅವರು ಯೋಗ್ಯವಾಗಿದ್ದಾರೆಯೇ ಎಂದು ನೀವು ಅರಿತುಕೊಳ್ಳುತ್ತೀರಿ.


ಮಕರ ರಾಶಿ


ನಂತರ ಧನಾತ್ಮಕ ಚಿಂತನೆಯತ್ತ ತೊಡಗಿಸಿಕೊಳ್ಳಿ, ಸಾವಧಾನತೆಯನ್ನು ಅಭ್ಯಾಸ ಮಾಡಿ, ಸ್ಪೂರ್ತಿದಾಯಕ ಪುಸ್ತಕಗಳನ್ನು ಓದಿ.


ಕುಂಭ: ಜನವರಿ 20 -ಫೆಬ್ರವರಿ 18
ಶಾಂತ ಮತ್ತು ಸಂಯೋಜಿತ ಮನೋಭಾವದ ಈ ಕುಂಭರಾಶಿಯವರು ಪ್ರತಿಕೂಲ ಸಮಯದಲ್ಲಿ ಲಘು ಹೃದಯದ ವ್ಯಕ್ತಿಗಳಾಗಿರಲು ಪ್ರಯತ್ನಿಸುತ್ತಾರೆ. ಈ ರಾಶಿಯವರಿಗೆ ಬ್ರೇಕ್‌ಅಪ್‌ನಂತಹ ಘಟನೆಗಳು ಅಭದ್ರತೆ ಮತ್ತು ಹೆದರಿಕೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಬೇರ್ಪಟ್ಟ, ನಿಮ್ಮ ನೋವನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿರಬಹುದು.


ಕುಂಭ ರಾಶಿ


ಇದು ನಿಮಗೆ ಹೆಚ್ಚು ತೊಂದರೆದಾಯಕವಾಗಿರುತ್ತದೆ. ಹೀಗಾಗಿ ನಿಮ್ಮ ಭಾವನೆಗಳನ್ನು ಮತ್ತು ನೋವನ್ನು ಹೊರಹಾಕಲು ದೈಹಿಕವಾಗಿ ಸವಾಲಿನ ಚಟುವಟಿಕೆಗಳನ್ನು ಮಾಡಿ. ಕುಂಭ ರಾಶಿಯವರು ಮಾಜಿ ಸಂಗಾತಿ ಬಿಟ್ಟು ಹೋದ ನೆನಪನ್ನು ಮರೆಯಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.


ಮೀನ: ಫೆಬ್ರವರಿ 19-ಮಾರ್ಚ್ 20
ಸೂಕ್ಷ್ಮ ಸ್ವಭಾವ ಹೊಂದಿರುವ ಮೀನಾ ರಾಶಿಯವರು ಹೆಚ್ಚಿನ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದಾರೆ. ಇವರಿಗೆ ಈ ಶಕ್ತಿ ಇಂತಹ ಕಷ್ಟದ ಸಂದರ್ಭದಿಂದ ಹೊರಬರಲು ಸಹಾಯ ಮಾಡುತ್ತದೆ. ಕಣ್ಣೀರಿನ ಜೊತೆ ಇವರ ನಗುವೇ ಇವರಿಗೆ ಶಕ್ತಿ.
ನಿಮ್ಮನ್ನು ನೀವು ಈ ಆಘಾತದಿಂದ ಹೊರತರಲು ಸ್ನೇಹಿತರ ಜೊತೆ ಸಮಯ ಕಳೆಯಿರಿ ಮತ್ತು ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಮುಂದಾಗಿ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು