• Home
  • »
  • News
  • »
  • astrology
  • »
  • Wind Chimes: ವಿಂಡ್ ಚೈಮ್‌ಗಳನ್ನು ಮನೆಯ ಈ ಮೂಲೆಯಲ್ಲಿ ಹಾಕಿದ್ರೆ ಒಳ್ಳೆಯದಂತೆ

Wind Chimes: ವಿಂಡ್ ಚೈಮ್‌ಗಳನ್ನು ಮನೆಯ ಈ ಮೂಲೆಯಲ್ಲಿ ಹಾಕಿದ್ರೆ ಒಳ್ಳೆಯದಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Wind Chimes: ಮೆಟಲ್‌ನಿಂದ ಮಾಡಿರುವ ವಿಂಡ್ ಚೈಮ್‌ ಅನ್ನು ವಾಯುವ್ಯ ದಿಕ್ಕಿನಲ್ಲಿ ಅಳವಡಿಸಬೇಕು ಅಂತೆಯೇ ಮರದ ವಿಂಡ್ ಚೈಮ್‌ಗಳನ್ನು ಕಟ್ಟಡದ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಅಳವಡಿಸಬೇಕು.

  • Trending Desk
  • 4-MIN READ
  • Last Updated :
  • Share this:

ಚೀನಾದ (China) ಸಾಂಪ್ರದಾಯಿಕ ಪದ್ಧತಿಯಾದ ಫೆಂಗ್​ ಶೂಯಿ (Feng Shui) ಮನೆಯಲ್ಲಿ ಸುಖಶಾಂತಿ ಹಾಗೂ ಸಮೃದ್ಧಿಯನ್ನು ಕಾಪಾಡಲು ಹಲವಾರು ವಿಧಾನಗಳನ್ನು ತಿಳಿಸಿಕೊಡುತ್ತದೆ. ಈ ವಿಧಾನಗಳಲ್ಲಿ ವಿಂಡ್ ಚೈಮ್‌ಗಳನ್ನು (Wind Chime)  ಮನೆಗಳಲ್ಲಿ ಅಳವಡಿಸುವ ಕ್ರಮವೂ ಒಂದಾಗಿದೆ. ವಿಂಡ್ ಚೈಮ್‌ಗಳು ಲೋಹದ ಪೈಪ್‌ಗಳ ಜೋಡಣೆಯೊಂದಿಗೆ ಬರುತ್ತವೆ ಇವುಗಳು ಒಂದಕ್ಕೊಂದು ಬಡಿದಾಗ ಸುಶ್ರಾವ್ಯವಾದ ಧ್ವನಿಯನ್ನುಂಟು ಮಾಡುತ್ತವೆ. ಹೆಚ್ಚಿನ ಮನೆಗಳಲ್ಲಿ ವಿಂಡ್ ಚೈಮ್‌ಗಳನ್ನು ಮನೆಯ (Home) ಮುಖ್ಯ ದ್ವಾರದ ಬಳಿ ತೂಗುಹಾಕುತ್ತಾರೆ. ಗಾಳಿ ಬಂದಾಗ ಇವುಗಳು ಸಂಗೀತವನ್ನುಂಟು ಮಾಡುತ್ತವೆ ಅದೇ ರೀತಿ ಅತಿಥಿಗಳು ಆಗಮಿಸಿದಾಗ ಕೂಡ ಈ ವಿಂಡ್ ಚೈಮ್ ಧ್ವನಿಯನ್ನುಂಟುಮಾಡುತ್ತದೆ.


ಫೆಂಗ್ ಶುಯಿ ತಿಳಿಸುವಂತೆ ಅತಿಥಿಗಳು ಆಗಮಿಸಿದಾಗ ಚೈಮ್‌ನಿಂದ ಸ್ವರ ಹೊರಡುವುದು ಅದೃಷ್ಟದ ಸಂಕೇತವಾಗಿದೆ. ಅದಾಗ್ಯೂ ಚೈಮ್ ಅನ್ನು ತೂಗುಹಾಕುವ ಭಂಗಿಯನ್ನು ನಿರ್ಧರಿಸುವ ಸಮಯದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂಬುದು ಫೆಂಗ್ ಶುಯಿ ಸಲಹೆಯಾಗಿದೆ. ಎಲ್ಲಿಯಾದರೂ ಈ ನಿಯಮಗಳನ್ನು ಪಾಲಿಸದೇ ಇದ್ದರೆ ಶಾಂತಿ ಸಮೃದ್ಧಿಯ ಸೂಚನೆಯ ಬದಲಿಗೆ ಮನೆಯಲ್ಲಿ ಋಣಾತ್ಮಕ ಸಂಗತಿಗಳು ಉಂಟಾಗಬಹುದು ಎಂದು ಫೆಂಗ್ ಶುಯಿ ತಿಳಿಸಿದೆ.


ವಿಂಡ್ ಚೈಮ್‌ಗಳ ಅಳವಡಿಕೆ ಹೇಗಿರಬೇಕು?


ದುರಾದೃಷ್ಟವನ್ನು ತೊಡೆದುಹಾಕಲು ಫೆಂಗ್ ಶುಯಿ ಐದು ಪೈಪ್‌ಗಳಿರುವ ವಿಂಡ್ ಚೈಮ್ ಅನ್ನು ಅಳವಡಿಸಬೇಕು ಎಂದು ತಿಳಿಸುತ್ತದೆ. ಎಲ್ಲಿಯಾದರೂ ಆರು ಪೈಪ್‌ಗಳ ವಿಂಡ್ ಚೈಮ್ ಅನ್ನು ಆಯ್ಕೆಮಾಡಿದಲ್ಲಿ ಮನೆಯ ವಾಯವ್ಯ ದಿಕ್ಕಿನಲ್ಲಿ ವಿಂಡ್ ಚೈಮ್ ಅನ್ನು ಅಳವಡಿಸಿ. ಇನ್ನು ಏಳು ಪೈಪ್‌ಗಳಿರುವ ವಿಂಡ್ ಚೈಮ್ ಅನ್ನು ಮನೆ ಅಥವಾ ಕಚೇರಿಯ ಪಶ್ಚಿಮ ದಿಕ್ಕಿನಲ್ಲಿ ಅಳವಡಿಸಿ. ಕಟ್ಟಡದ ಎಲ್ಲಾ ಮೂಲೆಗಳಲ್ಲಿ ವಿಂಡ್ ಚೈಮ್ ಅನ್ನು ತೂಗುಹಾಕುವಂತಿಲ್ಲ ಎಂದು ಫೆಂಗ್ ಶುಯಿ ತಿಳಿಸುತ್ತದೆ.


ವಿಂಡ್ ಚೈಮ್‌ನಿಂದ ಸಂಗೀತ ಕೇಳಿಬರಬೇಕು ಏಕೆ?


6,7,8 ಅಥವಾ 9 ಪೈಪ್‌ಗಳಿರುವ ವಿಂಡ್ ಚೈಮ್ ಅನ್ನು ಮನೆಯ ಮುಂಭಾಗಿಲಿನ ಪಕ್ಕದಲ್ಲಿ ಅಳವಡಿಸಬೇಕು ಎಂಬುದು ಫೆಂಗ್ ಶುಯಿ ತಿಳಿಸುತ್ತದೆ. ಮನೆಯ ಒಳಭಾಗದಲ್ಲೆಲ್ಲಾದರೂ ವಿಂಡ್ ಚೈಮ್ ಅನ್ನು ಅಳವಡಿಸಿದಲ್ಲಿ ಸಾಕಷ್ಟು ಗಾಳಿ ಮನೆಯ ಒಳಭಾಗದಲ್ಲಿ ಬರುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಇದರಿಂದ ಚೈಮ್‌ನಲ್ಲಿ ಸುಶ್ರಾವ್ಯ ಸಂಗೀತ ಬರುತ್ತದೆ ಎಂಬುದನ್ನು ಖಾತ್ರಿಪಡಿಸಬೇಕು.


ಇದನ್ನೂ ಓದಿ: ಇಲ್ಲಿ ಮಣ್ಣೇ ಪ್ರಸಾದ! ಮಕ್ಕಳ ಹಠ ಕಡಿಮೆ ಆಗೋಕೆ ಈ ದೇಗುಲದ ಮಣ್ಣು ತಿನಿಸುವ ಪೋಷಕರು!


ವಿಂಡ್ ಚೈಮ್‌ನಲ್ಲಿದೆ ಧನಾತ್ಮಕ ಶಕ್ತಿ


ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಗೆಯ ವಿಂಡ್ ಚೈಮ್‌ಗಳು ಲಭ್ಯವಿದೆ. ಇವುಗಳು ಬೇರೆ ಬೇರೆ ಬಣ್ಣಗಳು ಹಾಗೂ ಗಾತ್ರದಲ್ಲಿ ಲಭ್ಯವಿವೆ. ಇನ್ನು ಬೆಲೆಯ ವಿಷಯದಲ್ಲಿ ಕೂಡ ಕಡಿಮೆ ದರದಿಂದ ಹಿಡಿದು ದುಬಾರಿ ವಿಂಡ್ ಚೈಮ್‌ಗಳು ಲಭ್ಯವಿವೆ. ಹೆಚ್ಚು ಸಾಮಾನ್ಯವಾಗಿ ಬಳಕೆಯಲ್ಲಿರುವ ವಿಂಡ್ ಚೈಮ್‌ಗಳೆಂದರೆ ಸ್ಟೀಲ್, ಮರ ಹಾಗೂ ತಾಮ್ರದ ಪೈಪ್‌ಗಳಾಗಿವೆ.


ಫೆಂಗ್ ಶುಯಿ ತಿಳಿಸುವಂತೆ ಚಿ ಎಂಬುದು ವಿಂಡ್ ಚೈಮ್‌ಗಳಿಂದ ಹೊರಬರುವ ಧನಾತ್ಮಕ ಶಕ್ತಿಯನ್ನು ವಿವರಿಸುತ್ತದೆ. ಈ ಶಕ್ತಿಯು ವ್ಯಕ್ತಿಯ ಸಂತೋಷ, ಆರೋಗ್ಯ ಹಾಗೂ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ.


ಸಂಖ್ಯೆ 9 ಹಾಗೂ ದಕ್ಷಿಣ ದಿಕ್ಕಿಗಿರುವ ಮಹತ್ವವೇನು?


ಮೆಟಲ್‌ನಿಂದ ಮಾಡಿರುವ ವಿಂಡ್ ಚೈಮ್‌ ಅನ್ನು ವಾಯುವ್ಯ ದಿಕ್ಕಿನಲ್ಲಿ ಅಳವಡಿಸಬೇಕು ಅಂತೆಯೇ ಮರದ ವಿಂಡ್ ಚೈಮ್‌ಗಳನ್ನು ಕಟ್ಟಡದ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಅಳವಡಿಸಬೇಕು. ನೀವು ಹೆಸರು ಹಾಗೂ ಮಾನ್ಯತೆಯನ್ನು ಗಳಿಸಬೇಕು ಎಂದಾದಲ್ಲಿ ಕಟ್ಟಡದ ದಕ್ಷಿಣ ಭಾಗದಲ್ಲಿ ವಿಂಡ್ ಚೈಮ್ ಅನ್ನು ಅಳವಡಿಸಬೇಕು. ಫೆಂಗ್ ಶುಯಿ ತಿಳಿಸುವಂತೆ ವಿಂಡ್ ಚೈಮ್ ಅನ್ನು ಸರಿಯಾದ ಸ್ಥಳದಲ್ಲಿ ಅಳವಡಿಸುವುದರಿಂದ ಮನೆ ಹಾಗೂ ಕಚೇರಿ ಸ್ಥಳಗಳಲ್ಲಿ ಧನಾತ್ಮಕ ನೆಲೆಗೊಳ್ಳುತ್ತದೆ ಎಂದಾಗಿದೆ.


ಇದನ್ನೂ ಓದಿ: ಫೆಂಗ್ ಶೂಯಿ ಪ್ರಕಾರ ನಿಮ್ಮ ಅಡುಗೆ ಮನೆ ಹೀಗಿದ್ರೆ ಸಂಪತ್ತು ಹೆಚ್ಚಾಗುತ್ತೆ


ಸಂಖ್ಯೆ 9 ಸಂಬಂಧಿಸಿದಂತೆ ಫೆಂಗ್ ಶುಯಿ ವಿಂಡ್ ಚೈಮ್ ಕುರಿತು ಮಹತ್ವದ ಮಾಹಿತಿ ನೀಡುತ್ತದೆ. ಚೀನಾದ ನಂಬಿಕೆಯ ಪ್ರಕಾರ ಸಂಖ್ಯೆ 9 ಹಾಗೂ ದಕ್ಷಿಣ ದಿಕ್ಕು ಒಂದಕ್ಕೊಂದು ಸಂಪರ್ಕ ಹೊಂದಿದೆ ಎಂದಾಗಿದೆ. ಮರದಿಂದ ಮಾಡಿದ ವಿಂಡ್ ಚೈಮ್ 9 ಪೈಪ್‌ಗಳನ್ನು ಒಳಗೊಂಡಿದ್ದರೆ ಕಟ್ಟಡದ ದಕ್ಷಿಣದಲ್ಲಿ ಇದನ್ನು ತೂಗುಹಾಕಬೇಕು ಎಂಬುದು ಫೆಂಗ್ ಶುಯಿ ಹೇಳಿಕೆಯಾಗಿದೆ.

Published by:Sandhya M
First published: