Swiggy Instamartನಲ್ಲಿ ಕೂಡ ನೀವು ಜ್ಯೋತಿಷ್ಯ ತಿಳಿದುಕೊಳ್ಳಬಹುದು!

ವೈರಲ್​ ವಿಷಯ

ವೈರಲ್​ ವಿಷಯ

ಆಹಾರವನ್ನು ವಿತರಿಸುವ ಸ್ವಿಗ್ಗಿ ಇನ್‍ಸ್ಟಾಮಾರ್ಟ್ ಕುರಿತು ನೀವು ಕೇಳಿರಬೇಕಲ್ಲ. ಈಗ ಅವರು ತಮ್ಮ ಇತ್ತೀಚಿನ ಪೋಸ್ಟ್‌ಗಳಲ್ಲಿ, ಪಾಮ್ ರೀಡಿಂಗ್ ಕಲಿತಿದ್ದಾರೆ ಎಂದು ಹಂಚಿಕೊಂಡಿದ್ದಾರೆ.

  • Share this:

ಯಾರಿಗೆ ತಾನೇ ತಮ್ಮ ಭವಿಷ್ಯವನ್ನು ಕುರಿತು ತಿಳಿದುಕೊಳ್ಳಲು ಆಸಕ್ತಿ ಇರುವುದಿಲ್ಲ. ಎಲ್ಲರಿಗೂ ತಮ್ಮ, ತಮ್ಮ ಕುಟುಂಬದವರ ಭವಿಷ್ಯದ (Astrology) ಚಿಂತೆ ಇದ್ದೇ ಇರುತ್ತದೆ. ಹೀಗಾಗಿ ಎಲ್ಲರೂ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಜ್ಯೋತಿಷ್ಯದ ಮೊರೆ ಹೋಗುತ್ತಾರೆ. ಕವಡೆ ಶಾಸ್ತ್ರ, ಟಾರೋ ಕಾರ್ಡ್ಸ್, ಗಿಳಿ ಶಾಸ್ತ್ರ, ಹಸ್ತ ಸಾಮುದ್ರಿಕ ಶಾಸ್ತ್ರ ಇನ್ನು ಹಲವು ಬಗೆಯ ಶಾಸ್ತ್ರಗಳಿವೆ. ಇವುಗಳು ನಿಮ್ಮ ಭವಿಷ್ಯವನ್ನು ನಿಖರವಾಗಿ ಹೇಳುತ್ತವೆ ಎಂದು ನಂಬಲಾಗಿದೆ. ಆಹಾರವನ್ನು ವಿತರಿಸುವ ಸ್ವಿಗ್ಗಿ ಇನ್‍ಸ್ಟಾಮಾರ್ಟ್ (Instagram) ಕುರಿತು ನೀವು ಕೇಳಿರಬೇಕಲ್ಲ.  


ಇದು ತುಂಬಾ ವೈರಲ್ ಆಗಿದೆ. ಇದರ ಜೊತೆಗೆ ಅವರು ಅಂಗೈಗಳ ಚಿತ್ರಗಳನ್ನು ಹಂಚಿಕೊಳ್ಳಲು ತಮ್ಮ ಫಾಲೋವರ್ಸ್‍ಗಳಿಗೆ ಹೇಳಿದ್ದಾರೆ. ಇದರಿಂದ ಅವರು ಆ ಫಾಲೋವರ್ಸಗಳ ಪಾಮ್ ರೀಡಿಂಗ್ ಮಾಡಿ ಅವರ ಭವಿಷ್ಯದ ಕುರಿತು ತಿಳಿಸುತ್ತಾರೆ ಅಂತೆ. ಇದರಿಂದ ಫಾಲೋವರ್ಸ್‍ಗಳು ಅವರ ಹಸ್ತಸಾಮುದ್ರಿಕ ಕೌಶಲ್ಯಗಳನ್ನು ಪ್ರಯತ್ನಿಸಬಹುದು.


ನೀವು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಹಸ್ತಸಾಮುದ್ರಿಕ ಜ್ಯೋತಿಷ್ಯ ಕೌಶಲ್ಯಗಳನ್ನು ಪ್ರಯತ್ನಿಸುತ್ತೀರಾ? ಟ್ವಿಟ್ಟರ್ ಇದಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಪ್ರತಿಕ್ರಿಯೆಗಳು ಉಲ್ಲಾಸದಾಯಕವಾಗಿವೆ


ಹೆಚ್ಚಿನ ದೇಸಿ ಬ್ರಾಂಡ್‌ಗಳು ನಿಯಮಿತ ಸಂವಾದಾತ್ಮಕ ಪೋಸ್ಟ್‌ಗಳೊಂದಿಗೆ ಆನ್‌ಲೈನ್‌ನಲ್ಲಿ ಮೋಜಿನ ವಾತಾವರಣವನ್ನು ಸಾಕಷ್ಟು ಸಂದರ್ಭಗಳಲ್ಲಿ ಸೃಷ್ಟಿಸಿರುವುದನ್ನು ನೋಡಬಹುದು.


ಅವುಗಳಲ್ಲಿ, ಆಹಾರ ವಿತರಣಾ ಅಪ್ಲಿಕೇಶನ್‌ಗಳಾದ ಜೊಮ್ಯಾಟೋ ಮತ್ತು ಸ್ವಿಗ್ಗಿ ಖಂಡಿತವಾಗಿಯೂ ಪ್ರಮುಖ ಸ್ಥಾನವನ್ನು ಹೊಂದಿವೆ. ಆದಾಗ್ಯೂ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತನ್ನ ವಿನೋದ ಮತ್ತು ತಾಜಾ ವಿಷಯಗಳ ಕಾರಣದಿಂದ ಯಾವಾಗಲೂ ಮುಂದಿರುತ್ತದೆ.


ಇತ್ತೀಚಿನ ಪೋಸ್ಟ್‌ಗಳಲ್ಲಿ, ಅವರು ಪಾಮ್ ರೀಡಿಂಗ್ ಕಲಿತಿದ್ದಾಗಿ ಹೇಳಿದ್ದು ಇದು ತುಂಬಾ ವೈರಲ್ ಆಗಿದೆ. ಇದರ ಜೊತೆಗೆ ಅವರು ತಮ್ಮ ಫಾಲೋವರ್ಸ್‍ಗಳಿಗೆ ತಮ್ಮ ಅಂಗೈಗಳ ಚಿತ್ರಗಳನ್ನು ಹಂಚಿಕೊಳ್ಳಲು ಹೇಳಿದ್ದಾರೆ.


ಇದರಿಂದ ಅವರು ಆ ಫಾಲೋವರ್ಸಗಳ ಪಾಮ್ ರೀಡಿಂಗ್ ಮಾಡಿ ಅವರ ಭವಿಷ್ಯದ ಕುರಿತು ತಿಳಿಸುತ್ತಾರಂತೆ. ಹಾಗಾಗಿ ಇದೀಗ ಅವರ ಫಾಲೋವರ್ಸ್‍ಗಳು ಅವರ ಹಸ್ತಸಾಮುದ್ರಿಕ ಕೌಶಲ್ಯಗಳನ್ನು ಪ್ರಯತ್ನಿಸಬಹುದು.


ಇದನ್ನೂ ಓದಿ:  ಈ ಟಿಪ್ಸ್​ಗಳನ್ನು ಗಂಡ ಹೆಂಡತಿ ಫಾಲೋ ಮಾಡಿದ್ರೆ, ಸಂಸಾರ ಆನಂದ ಸಾಗರವಾಗುತ್ತೆ!


“ಈಗಷ್ಟೇ ಪಾಮ್ ರೀಡಿಂಗ್ ಕಲಿತೆ. ನಿಮ್ಮ ಭವಿಷ್ಯದ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಅಂಗೈಯ ಫೋಟೋ ಜೊತೆಗೆ ಹಾಕಿ” ಎಂಬ ಅವರ ಪೋಸ್ಟ್‌ಗೆ ಸಾಕಷ್ಟು ಉಲ್ಲಾಸದಾಯಕ ಪ್ರತಿಕ್ರಿಯೆಗಳು ಬಂದಿವೆ. ನೆಟ್ಟಿಗರೂ ಸಾಕಷ್ಟು ತರಾವರಿಯಾಗಿ ಪ್ರತಿಕ್ರಿಯಿಸಿದ್ದಾಗೆ. ಬಗೆ ಬಗೆಯ ಪ್ರಶ್ನೆಗಳನ್ನು ಕೇಳಿದ್ದಾರೆ.


ಟ್ವಿಟರನಲ್ಲಿ ಈ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಈ ಪೋಸ್ಟಿನ ಕಾಮೆಂಟ್‌ಗಳ ವಿಭಾಗವು ಚಿತ್ರಗಳಿಂದ ತುಂಬಿಹೋಗಿದೆ. ಮತ್ತು ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ 11.5k ವೀಕ್ಷಣೆಗಳು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಜನರು ತಮ್ಮ ಭವಿಷ್ಯದ ಬಗ್ಗೆ 'ಸ್ವಿಗ್ಗಿ ಬಾಬಾ'ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.


ಇದನ್ನೂ ಓದಿ: ಮನೆಯಲ್ಲಿಈ ಹೂವು ಒಂದಿದ್ರೆ ಸಾಕು, ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ! ಇಲ್ಲಿದೆ ನೋಡಿ ಸಲಹೆಗಳು


ಜನರು ತಮ್ಮ ಭವಿಷ್ಯದ ಕುರಿತು ಹಲವು ಬಗೆಯ ಪ್ರಶ್ನೆಗಳನ್ನು ಹೊಂದಿದ್ದು, ಪ್ರಶ್ನೆಗಳು ಸಹ ವೈವಿಧ್ಯಮಯವಾಗಿವೆ. ಕೆಲವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಅದೃಷ್ಟದ ಬಗ್ಗೆ ಕೇಳಿದರೆ, ಇನ್ನು ಕೆಲವರು ತಮಗೆ ಮದುವೆ ಯಾವಾಗ ಆಗುತ್ತದೆ. ತಮಗೆ ಕಂಕಣ ಭಾಗ್ಯ ಯಾವಾಗ ಕೂಡಿ ಬರುತ್ತದೆ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.


top videos



    ಮತ್ತು ಸ್ವಿಗ್ಗಿ ಇನ್‍ಸ್ಟಾಮಾರ್ಟ್ ಸಹ ಜನರ ಈ ವಿವಿಧ ಪ್ರಶ್ನೆಗಳಿಗೆ ತುಂಬಾ ಉಲ್ಲಾಸದ ರೀತಿಯಲ್ಲಿ ಸೂಕ್ತವಾಗಿ ಉತ್ತರಿಸಿದೆ. ಹೀಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಯಾವಾಗಲೂ ತನ್ನ ವಿನೋದ,ಉಲ್ಲಾಸಮಯ ಮತ್ತು ತಾಜಾ ವಿಷಯಗಳ ಕಾರಣದಿಂದ ಯಾವಾಗಲೂ  ಮುಂದಿರುತ್ತದೆ.ಈಗ ಸ್ವಿಗ್ಗಿ ಪಾಮ್ ರೀಡಿಂಗ್ ಬಾಬಾ ಎಲ್ಲೆಡೆ ಫೇಮಸ್ ಆಗಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು