Kalava: ಕೈಗೆ ಕಟ್ಟುವ ಕೆಂಪುದಾರದ ಹಿಂದಿನ ಧಾರ್ಮಿಕ- ವೈಜ್ಞಾನಿಕ ಕಾರಣ ಇದು

ಕೆಂಪು ದಾರ ಕಟ್ಟುವುದು ನೂರಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಇದರ ಹಿಂದೆ ಧಾರ್ಮಿಕ ಜೊತೆಗೆ ವೈಜ್ಞಾನಿಕ ಅಂಶಗಳು ಕೂಡ ಅಡಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯಾವುದೇ ಶುಭ ಕಾರ್ಯದ ಸಂದರ್ಭದಲ್ಲಿ, ಪೂಜೆಯ ಸಮಯದಲ್ಲಿ ಕೆಂಪು ದಾರವನ್ನು (Red Thread) ಕಟ್ಟಲಾಗುತ್ತದೆ. ಹಿಂದೂ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವನ್ನ ಕಲಾವ ದಾರ (Kalava) ಅಥವಾ ಮೌಳಿ ದಾರ ಎಂದು ಕರೆಯುತ್ತಾರೆ. ಮನೆಯಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಪೂಜೆಯಲ್ಲಿಯೂ ಕೆಂಪು ದಾರವನ್ನು ಕಟ್ಟಲು ಮರೆಯುವುದಿಲ್ಲ. ಹಿಂದೂ ಧರ್ಮದಲ್ಲಿ (Hindu Dharma) ಈ ಕೆಂಪು ದಾರವನ್ನು ರಕ್ಷಾ ಸೂತ್ರ ಎಂದೂ ಕರೆಯುತ್ತಾರೆ. ಪೂಜೆಯ ಸಮಯದಲ್ಲಿ ಕೈಗೆ ಕಲಾವ ಕಟ್ಟಿಕೊಳ್ಳುವುದರಿಂದ ಜೀವನದಲ್ಲಿ ತೊಂದರೆಗಳಿಂದ ದೂರಾ ಆಗುತ್ತೇವೆ ಎಂದು ನಂಬಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಕೈಯಲ್ಲಿ ದಾರ ಕಟ್ಟುವುದರಿಂದ ತ್ರಿದೇವರು ಮತ್ತು ಮೂರು ಮಹಾದೇವಿಗಳ ಆಶೀರ್ವಾದವನ್ನು ಪಡೆಯುತ್ತಾರೆ. ಸಂಪತ್ತು, ಜ್ಞಾನ, ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಮೂರು ದೇವತೆಗಳಾದ ಲಕ್ಷ್ಮಿ, ಸರಸ್ವತಿ ಮತ್ತು ಮಹಾಕಾಳಿಯಿಂದ ಪಡೆಯಲಾಗುತ್ತದೆ. ಕೈಯಲ್ಲಿ ಕೆಂಪು ದಾರವನ್ನು ಕಟ್ಟುವ ಅಥವಾ ಬದಲಾಯಿಸುವ ಮೊದಲು ಕೆಲವು ವಿಶೇಷ ನಿಯಮಗಳಿವೆ

    ಸಕಾರತ್ಮಕ ಶಕ್ತಿ ಹೆಚ್ಚುತ್ತದೆ

    ಪೂಜೆಯ ಸಮಯದಲ್ಲಿ ಕಂಕಣವನ್ನು ಕಟ್ಟಬೇಕು. ಶುಭ ಕಾರ್ಯದ ಸಂದರ್ಭದಲ್ಲೂ ಕೈಗೆ ದಾರವನ್ನು ಕಟ್ಟಿಕೊಳ್ಳುತ್ತಾರೆ ಇದರಿಂದ ತೊಂದರೆಗಳಿಂದ ದೇವರು ರಕ್ಷಿಸುತ್ತಾನೆ ಎಂದು ನಂಬಲಾಗಿದೆ.

    ಧಾರ್ಮಿಕ ಪುರಾಣಗಳ ಪ್ರಕಾರ, ಮಂಗಳವಾರ ಮತ್ತು ಶನಿವಾರದಂದು ಮಾತ್ರ ಕೈಯಲ್ಲಿ ಕಟ್ಟಿರುವ ಕಾಲವವನ್ನು ಬದಲಾಯಿಸಬೇಕು. ಇದನ್ನು ಕಟ್ಟಿಕೊಳ್ಳುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ಅಲ್ಲಿ ಪುರುಷರು ಮತ್ತು ಅವಿವಾಹಿತ ಹುಡುಗಿಯರು ಬಲಗೈಯಲ್ಲಿ ಈ ದಾರವನ್ನು ಕಟ್ಟಬೇಕು. ವಿವಾಹಿತ ಮಹಿಳೆಯರು ಎಡಗೈಯಲ್ಲಿ ಕಟ್ಟಬೇಕು.

    ಇದನ್ನು ಓದಿ: ರಾಕ್ಷಸ ಕುಲದಲ್ಲಿ ಹುಟ್ಟಿದ ವೃಂದಾ ತುಳಸಿಯಾದ ಕಥೆ ಇದು

    ಬಲಿರಾಜನ ಮೂಲಕ ಆರಂಭವಾದ ಪದ್ಧತಿ

    ಪುರಾಣಗಳ ಪ್ರಕಾರ ಈ ಕೆಂಪು ದಾರ ಕಟ್ಟುವ ಪದ್ಧತಿಯು ಹಿಂದೆ ಲಕ್ಷ್ಮೀ ದೇವಿಯು ಬಲಿರಾಜನಿಗೆ ಕಟ್ಟುವ ಮೂಲಕ ಆರಂಭ ಆಯಿತು. ಕೆಂಪು ದಾರ ಸರಳವಾದ ದಾರ ಆದರೂ ಪ್ರಭುವಿನ ಆಶೀರ್ವಾದ ಪಡೆಯಲು ಅರ್ಹವಾಗಿದೆ. ಈ ದಾರವನ್ನು ಕಟ್ಟುವುದರಿಂದ ಪಡೆಯುವ ಲಾಭವನ್ನು ವಿಜ್ಞಾನವು ಸಹ ಒಪ್ಪಿಕೊಂಡಿದೆ.

    ಪುರಾತನ ಕಾಲದಿಂದಲೂ ಮಂಗಳಕರ ಎಂದು ಹಳದಿ ದಾರವನ್ನು ಕಟ್ಟಿಕೊಳ್ಳುವ ಸಂಪ್ರದಾಯ ಅಸ್ತಿತ್ವದಲ್ಲಿ ಇತ್ತು ಎನ್ನಲಾಗುತ್ತದೆ. ಇದಲ್ಲದೆ, ಕಿತ್ತಳೆ ಹಳದಿ ಕೆಂಪು ಬಣ್ಣದ ದಾರವನ್ನು ನಮ್ಮ ಹಿಂದೂ ಧರ್ಮದಲ್ಲಿ ಮಂಗಳಕರ ಎಂದು ಭಾವಿಸಲಾಗುತ್ತದೆ

    ಇದನ್ನು ಓದಿ: ಮತ್ಸ ಅವತಾರ ತಾಳಿದ ವಿಷ್ಣುವಿನ ಕಥೆ ಇದು

    ವೈಜ್ಞಾನಿಕ ಕಾರಣ
    ಈ ಕೆಂಪು ದಾರ ಕಟ್ಟುವುದು ನೂರಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಆಗಿದೆ. ಇದರ ಹಿಂದೆ ಕೆಲವು ಪ್ರಯೋಜನಗಳು ಇವೆ. ಧಾರ್ಮಿಕ ಜೊತೆಗೆ ವೈಜ್ಞಾನಿಕ ಅಂಶಗಳು ಕೂಡ ಇದರ ಹಿಂದೆ ಅಡಗಿದೆ

    ಮಣಿಕಟ್ಟಿನಲ್ಲಿ ಸೂಕ್ಷ್ಮ ನರಗಳ ಜಾಲವೇ ಅಡಗಿದೆ. ದೇಹದ ಎಲ್ಲಾ ಪ್ರಮುಖ ರಕ್ತ ನರಗಳು ಈ ಭಾಗದ ಮೂಲಕ ಹಾದು ಹೋಗುತ್ತವೆ. ಮಣಿಕಟ್ಟಿಗೆ ದಾರ ಕಟ್ಟಿಕೊಳ್ಳುವದರಿಂದ ರಕ್ತ ಸಂಚಾರ ಸರಿ ಆಗುತ್ತದೆ. ಈ ಮೂಲಕ ತ್ರಿ ದೋಷಗಳಾದ ವಾತ, ಪಿತ್ತ, ಕಫ ಇವು ಸಮತೋಲನದಲ್ಲಿ ಇರುತ್ತವೆ. ಇದರ ಪರಿಣಾಮವಾಗಿ ದೇಹದ ವ್ಯವಸ್ಥೆ ಸಮತೋಲನ ಕಾಯ್ದುಕೊಂಡು ಆರೋಗ್ಯಕರವಾಗಿ ಇರುತ್ತದೆ. ಮಣಿಕಟ್ಟಿನ ಮೇಲೆ ಕಟ್ಟುವ ಈ ದಾರದಿಂದ ನರಗಳ ಮೂಲಕ ಬೀಳುವ ಒತ್ತಡ ಕಡಿಮೆ ಆಗಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿ ದೇಹದ ಆರೋಗ್ಯ ಕಾಪಾಡುತ್ತದೆ.
    Published by:Seema R
    First published: