ನೀವು ಗಮನಿಸಿರಬಹುದು ಯಾರೆದ್ದೇ ಮನೆಯಲ್ಲಿ (Home) ಯಾವುದೇ ವ್ಯಕ್ತಿ ಸಾವಿಗೀಡಾಗಿದ್ದರೆ (Death) ಕೆಲ ದಿನಗಳ ಕಾಲ ಆ ಮನೆಯಲ್ಲಿ ಅಡುಗೆ (Cooking) ಮಾಡುವುದಿಲ್ಲ. ಸಾವಾಗಿರುವ ಮನೆಯಲ್ಲಿ ಒಲೆ ಹಚ್ಚಬಾರದು ಎನ್ನುವ ಮಾತನ್ನು ಹಿರಿಯರು ಹೇಳಿದ್ದನ್ನು ಸಹ ಕೇಳಿರುತ್ತೇವೆ. ಶೋಕವಿರುವ ಮನೆಯಲ್ಲಿ ಶ್ರಾದ್ಧದವರೆಗೆ ಅಡುಗೆ ಮಾಡುವುದಿಲ್ಲ. ಆದರೆ ಇದಕ್ಕೆ ಕಾರಣ (Reason) ಮಾತ್ರ ಹಲವಾರು ಜನರಿಗೆ ಗೊತ್ತಿಲ್ಲ. ಸತ್ತವರ ಮನೆಯಲ್ಲಿ ಗರುಡಪುರಾಣವನ್ನು (Garuda Purana) ಓದಲಾಗುತ್ತದೆ. ಇದರಲ್ಲಿ ಏಕೆ ಅಡುಗೆ ಮಾಡಬಾರದು ಎಂಬ ಮಾಹಿತಿ ಇದ್ದು, ಶೋಕದ ಮನೆಯಲ್ಲಿ ಓಲೆ ಏಕೆ ಹಚ್ಚಬಾರದು ಎಂಬುದು ಇಲ್ಲಿದೆ.
ಗರುಡ ಪುರಾಣದಲ್ಲಿದೆ ಇದಕ್ಕೆ ಕಾರಣ
ಗರುಡ ಪುರಾಣದಲ್ಲಿ ಸಾವಿನ ನಂತರ ಜೀವನದ ಬಗ್ಗೆ ಮಾಹಿತಿ ಇದೆ ಎನ್ನಲಾಗುತ್ತದೆ. ಅದಲ್ಲದೇ ಇದರಲ್ಲಿ ನಂತರ ನಡೆಯುವ ಘಟನೆಗಳ ಬಗ್ಗೆ ಸಹ ವಿವರಗಳಿವೆ. ಹಾಗೆಯೇ ಮನೆಯಲ್ಲಿ ಒಂದು ಸಾವಿನ ನಂತರ 13 ದಿನಗಳ ಕಾಲ ಮನೆಯಲ್ಲಿ ಪೂಜೆಯನ್ನು ಸಹ ಮಾಡಬಾರದು. ಹಾಗೆಯೇ ಸತ್ತ ವ್ಯಕ್ತಿಯುವ ಈ ಲೋಕದ ಮೋಹದಿಂದ ಮುಕ್ತರಾಗುವವರೆಗೆ ಮನೆಯಲ್ಲಿ ಒಲೆ ಉರಿಸಬಾರದು ಎಂದು ಗರುಡ ಪುರಾಣ ಹೇಳಿದೆ.
ಈ ಗರುಡ ಪುರಾಣದ ಪ್ರಕಾರ ವ್ಯಕ್ತಿ ಸತ್ತಾ 13 ದಿನಗಳ ಕಾಲ ವ್ಯಕ್ತಿಯು ಈ ಲೋಕದ ಭ್ರಮೆಯಲ್ಲಿ ಮನೆಯಲ್ಲಿ ಸುತ್ತಾಡುತ್ತಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ 13 ದಿನವೂ ಮನೆಯಲ್ಲಿ ಯಾವುದೇ ರೀತಿ ಆಹಾರವನ್ನು ತಯಾರಿಸಿಬಾರದು. ಹಾಗೆಯೇ ಪ್ರತಿದಿನ ಗರುಡ ಪುರಾಣ ಓದಬೇಕು. ಅಲ್ಲದೇ ಈ ದಿನಗಳಲ್ಲಿ ಅಕ್ಕ-ಪಕ್ಕದ ಮನೆಯವರು ಆಹಾರ ನೀಡುತ್ತಾರೆ.
ಇದನ್ನೂ ಓದಿ: ನಂಬರ್ 8 ನಿಮ್ಮದಾದ್ರೆ, ಈ ಹೊಸ ವರ್ಷ ಹೀಗೆಲ್ಲಾ ಇರಲಿದ್ಯಂತೆ!
ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಈ ಸಮಯದಲ್ಲಿ ಆ ಕುಟುಂಬ ಬಹಳ ಬೇಸರದಲ್ಲಿ ಇರುತ್ತಾರೆ. ಬಹಳ ಹತ್ತಿರದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಅವರಿಗೆ ಸಮಯ ಬೇಕಾಗುತ್ತದೆ. ಹಾಗೆಯೇ ಈ ಸಮಯದಲ್ಲಿ ಅವರಿಗೆ ಅಡುಗೆ ಮಾಡುವಷ್ಟು ಶಕ್ತಿ ಸಹ ಇರುವುದಿಲ್ಲ. ಅವರ ಮನೆಯಲ್ಲಿ ಸಂತೋಷ ಮರುಕಳಿಸಲು ಸಹ ಸಮಯ ತೆಗೆದುಕೊಳ್ಳುವುದರಿಂದ. ಸಾವಿನ ಮನೆಯಲ್ಲಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.
ನೋವಿನಲ್ಲಿರುವ ಕುಟುಂಬಸ್ಥರಿಗೆ ಸಮಯ ಅಗತ್ಯ
ಈ ಸಮಯದಲ್ಲಿ ಸಾವಿಗೀಡಾದ ವ್ಯಕ್ತಿಯ ಆತ್ಮಕ್ಕೆ ಶಾಂತಿ ಕೋರುವ ಸಮಯ ಇದು. ಹಾಗಾಗಿ ಈ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡುವುದು ಸೂಕ್ತವಲ್ಲ. ಈ ಕಾರಣದಿಂದ ಸಾವಿನ ಮನೆಯಲ್ಲಿ ಅಡುಗೆ ಮಾಡಬಾರದು ಎನ್ನಲಾಗುತ್ತದೆ. ಅಲ್ಲದೇ ಮತ್ತೊಂದು ನಂಬಿಕೆಯ ಪ್ರಕಾರ ಸಾವಿನ 30 ದಿನಗಳ ಒಳಗೆ ಸಂಬಂಧಿಕರು ಬಂದು ಮಾತನಾಡಿಸಿಕೊಂಡು ಹೋಗಬಹುದು ಎನ್ನಲಾಗುತ್ತದೆ.
ಈ 30 ದಿನಗಳ ಸಮಯದಲ್ಲಿ ಬಂದರೆ ಒಳ್ಳೆಯದು ಎಂದು ಸಹ ಹೇಳಲಾಗುತ್ತದೆ. ಹಾಗೆಯೇ ಈ ಸಮಯದಲ್ಲಿ ಹೋಗುವಾಗ ಅಂದರೆ ಸಾವಿನ ಮನೆಗೆ ತೆರಳುವಾಗ ಸಕ್ಕರೆ, ತುಪ್ಪ, ಅವಲಕ್ಕಿ, ಬೆಲ್ಲ, ಟೀ ಪುಡಿ, ರವೆ ಹೀಗೆ ವಿವಿಧ ರಿತಿಯ ವಸ್ತುಗಳನ್ನು ಕೊಡಲಾಗುತ್ತದೆ. ಇದರ ಜೊತೆಗೆ ಕೆಲವರು ಅಡುಗೆ ಮಾಡಿ ಆಹಾರವನ್ನು ಸಹ ತೆಗೆದುಕೊಂಡು ಹೋಗುತ್ತಾರೆ.
ಇದನ್ನೂ ಓದಿ: ಹೊಸವರ್ಷದಲ್ಲಿ ಈ 4 ರಾಶಿಯವರಿಗೆ ಗುರುದೆಸೆಯಂತೆ
ಈ ರೀತಿ ಹೋಗಿ ಮಾತನಾಡಿಸುವುದರ ಹಿಂದೆ ಸಹ ಒಂದು ಕಾರಣವಿದೆ. ಸಾವಿನ ಮನೆಯಲ್ಲಿ ಕಾರ್ಯಗಳಿಗೆ ಸಂಬಂಧಪಟ್ಟಂತೆ ಕೆಲಸಗಳು ಇರುತ್ತದೆ, ಅದಕ್ಕೆ ಯಾವುದಾದರೂ ರೀತಿಯಲ್ಲಿ ಸಹಾಯ ಬೇಕಾ ಎಂದು ಕೇಳಲು ಇದು ಒಂದು ಅವಕಾಶ ಹಾಗು ನಿಮ್ಮ ಜೊತೆ ನಾವಿದ್ದೇವೆ ಎಂಬುದನ್ನ ತಿಳಿಸುವ ವಿಧಾನ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ