Makar Sankranti: ಮಕರ ಸಂಕ್ರಾಂತಿ ದಿನದಂದು ಎಳ್ಳು-ಬೆಲ್ಲ ಸೇವನೆ ಹಿಂದಿದೆ ವೈಜ್ಞಾನಿಕ ಕಾರಣ

ಮಕರ ಸಂಕ್ರಾಂತಿಯ ದಿನದಂದು ಎಳ್ಳು ಮತ್ತು ಬೆಲ್ಲಕ್ಕೆ ಹೆಚ್ಚಿನ ಮಹತ್ವವಿದೆ. ಆದುದರಿಂದ ಇದನ್ನು ತಿಲ ಸಂಕ್ರಾಂತಿ ಎಂದೂ ಕರೆಯುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಕರ ಸಂಕ್ರಾಂತಿ (Makar Sankranti) ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ವರ್ಷದ ಮೊದಲ ಹಬ್ಬ ಇದಾಗಿದ್ದು, ಈ ದಿನ ದಾನ ನೀಡುವ ಸಂಪ್ರದಾಯದ ಆಚರಣೆಯಲ್ಲಿದೆ. ಇದೇ ಕಾರಣಕ್ಕೆ ಈ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮಕರ ಸಂಕ್ರಾಂತಿ ಯೋಗವು ರೂಪುಗೊಳ್ಳುತ್ತದೆ. ಸೂರ್ಯನು (Sun) ಮಕರ ರಾಶಿಯನ್ನು ಪ್ರವೇಶಿಸಿದಾಗ ಅದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

    ಮಕರ ಸಂಕ್ರಾಂತಿಯ ದಿನದಂದು ಎಳ್ಳು ಮತ್ತು ಬೆಲ್ಲಕ್ಕೆ ಹೆಚ್ಚಿನ ಮಹತ್ವವಿದೆ. ಆದುದರಿಂದ ಇದನ್ನು ತಿಲ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಮಕರ ಸಂಕ್ರಾಂತಿಯ ದಿನ ಬೆಲ್ಲ, ಎಳ್ಳು ತಿನ್ನುವುದಲ್ಲದೇ, ನೀರಿನಲ್ಲಿ ಎಳ್ಳು ಸೇರಿಸಿ ಸ್ನಾನ ಮಾಡುತ್ತಾರೆ. ಮಕರ ಸಂಕ್ರಾಂತಿಯ ದಿನದಂದು ಬೆಲ್ಲ-ಎಳ್ಳುಗಳನ್ನು ಏಕೆ ತಿನ್ನುತ್ತಾರೆ. ಇದರ ಧಾರ್ಮಿಕ ಮತ್ತು ವೈಜ್ಞಾನಿಕ ಪ್ರಾಮುಖ್ಯತೆ ಏನು ಎಂಬ ಮಾಹಿತಿ ಇಲ್ಲಿದೆ.

    ಪಥ ಬದಲಾಯಿಸುವ ಸೂರ್ಯ
    ಮಕರ ರಾಶಿಯ ಅಧಿಪತಿ ಶನಿ. ಶನಿಯು ಸೂರ್ಯನ ತಂದೆ. ಪುರಾಣಗಳ ಪ್ರಕಾರ, ತಂದೆ ಮಗನಾದರೂ ಶನಿ ಮತ್ತು ಸೂರ್ಯ ಎಂದಿಗೂ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮಕರ ಸಂಕ್ರಾಂತಿ ಯೋಗವು ರೂಪುಗೊಳ್ಳುತ್ತದೆ. ಈ ದಿನ ಸೂರ್ಯದೇವನು ಶನಿಯ ಮನೆಗೆ ಪ್ರವೇಶಿಸಿದಾಗ, ಇದರ ಉಪಸ್ಥಿತಿಯಿಂದ ಶನಿಯು ಸೂರ್ಯ ದೇವರಿಗೆ ಯಾವುದೇ ರೀತಿಯ ತೊಂದರೆಗಳನ್ನು ಉಂಟುಮಾಡುವುದಿಲ್ಲ. ಅಲ್ಲದೇ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.

    ಇದನ್ನು ಓದಿ: ಈ ಅಕ್ಷರದ ಹುಡುಗಿಯರು ಅಂದ್ರೆ ಹುಡುಗರಿಗೆ ಬಲು ಇಷ್ಟ ಅಂತೆ; ಅಂತಹ ಜಾದು ಏನಿದೆ?

    ರೋಗ ನಿರೋಧಕ ಶಕ್ತಿ ಹೊಂದಿರುವ ಎಳ್ಳು ಬೆಲ್ಲ
    ಎಳ್ಳಿನಲ್ಲಿ ರೋಗ ನಿರೋಧಕಗಳು ಹೇರಳವಾಗಿ ಕಂಡುಬರುತ್ತವೆ. ಇದರ ಸೇವನೆಯಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತವೆ. ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಸಮಯದಲ್ಲಿ, ಚಳಿಗಾಲವು ಇರುತ್ತದೆ. ಈ ಸಮಯದಲ್ಲಿ ದೇಹದ ಚರ್ಮವೂ ಒಣ ಆಗುತ್ತದೆ. ಜೊತೆಗೆ ದೇಹಕ್ಕೆ ಶಾಖದ ಅವಶ್ಯಕತೆ ಇರುತ್ತದೆ.  ಎಳ್ಳು ಮತ್ತು ಬೆಲ್ಲದಲ್ಲಿ ಈ ಎರಡು ಗುಣ ಹೊಂದಿರುತ್ತವೆ. ಜೊತೆಗೆ ಈ ಸಮಯದಲ್ಲಿ ಇವುಗಳ ಸೇವನೆಯಿಂದ ನಮ್ಮ ದೇಹದ ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ. ಇದರಿಂದಾಗಿ ನಮ್ಮ ದೇಹವು ಶಾಖವನ್ನು ಪಡೆಯುತ್ತದೆ. ಎಳ್ಳು ಮತ್ತು ಬೆಲ್ಲವು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಅನೇಕ ರೋಗಗಳನ್ನು ಸಹ ಗುಣಪಡಿಸುತ್ತದೆ. ಅಲ್ಲದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.

    ಇದನ್ನು ಓದಿ: ಸಂಕ್ರಾಂತಿ ಹಬ್ಬದ ದಿನ ಯಾವ ರಾಶಿಯವರು ಏನು ದಾನ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

    ವಿವಿಧ ಹೆಸರುಗಳ ಮೂಲಕ ಆಚರಣೆ
    ಮಕರ ಸಂಕ್ರಾಂತಿಯಂದು ಹೊಸ ಬೆಳೆ ಆಗಮಿಸುವ ಹಿನ್ನಲೆ ಇದನ್​ನು ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಹಬ್ಬವಾಗಿಯೂ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯು ಭಾರತದೆಲ್ಲೆಡೆಗಳಲ್ಲಿ ವಿವಿಧ ಹೆಸರುಗಳಿಂದ ಆಚರಿಸಲ್ಪಡುತ್ತದೆ. ಪಂಜಾಬ್‌ನಲ್ಲಿ ಇದು ಲೋಹರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬೋಗಲಿ ಬಿಹು, ಗುಜರಾತ್ ಮತ್ತು ರಾಜಸ್ತಾನದಲ್ಲಿ ಉತ್ತರಾಯಣ್ (ಗಾಳಿಪಟ ಹಾರಿಸುವ ಹಬ್ಬ), ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಮೊದಲಾದೆಡೆ ಮಕರ ಸಂಕ್ರಾಂತಿಯೆಂದೂ ತಮಿಳುನಾಡಿನಲ್ಲಿ ಪೊಂಗಲ್​ ಎಂದು ಆಚರಿಸಲಾಗುವುದು.

    ಮಕರ ಸಂಕ್ರಾತಿಯ ದಿನದಂದು ಪವಿತ್ರ ಸ್ಥಳಗಳಾದ ಪ್ರಯಾಗ, ಹರಿದ್ವಾರ್, ಉಜ್ಜೈನಿ ಮತ್ತು ನಾಸಿಕ್ ಮೊದಲಾದೆಡೆಗಳಲ್ಲಿ ವಿಶೇಷ ಮೇಳಗಳು ನಡೆದು ಬರುತ್ತಿದ್ದು, 12 ವರ್ಷಗಳಿಗೆ  ಆಚರಿಸುವ ಕುಂಭ ಮೇಳವು ಸಂಕ್ರಾತಿಯ ದಿನದಂದು ಮೇಲಿನ ಯಾವುದಾದರೊಂದು ಕ್ಷೇತ್ರಗಳಲ್ಲಿ ನೆರವೇರುತ್ತದೆ. ಮಾಘ ಮೇಳ ಪ್ರಯಾಗದಲ್ಲಿಯೂ, ಗಂಗಾಸಾಗರ ಮೇಳವು ಗಂಗಾನದಿಯಲ್ಲಿಯೂ ಮಕರ ಸಂಕ್ರಾಂತಿಯ ದಿನದಂದು ನೆರವೇರಿಸಲ್ಪಡುತ್ತದೆ.
    Published by:Seema R
    First published: