Utpanna Ekadashi: ಏಕಾದಶಿಗಳಲ್ಲೇ ವಿಶೇಷ ಈ ಉತ್ಪನ್ನ ಏಕಾದಶಿ; ಕಾರಣ ಏನು, ಏನಿದರ ಮಹತ್ವ?

 ಮುರ ಎಂಬ ರಾಕ್ಷಸನನ್ನು ನಾಶಮಾಡಲು ವಿಷ್ಣವಿನ  ದೇಹದಿಂದ ಏಕಾದಶಿ ಜನಿಸಿದರು ಎಂದು ಹಿಂದೂ ಪುರಾಣಗಳಲ್ಲಿ ತಿಳಿಸಲಾಗಿದೆ

ಸಾಂದರ್ಭಿಕ ಚಿತರ

ಸಾಂದರ್ಭಿಕ ಚಿತರ

  • Share this:
    ಇಂದು ಉತ್ಪನ್ನ ಏಕಾದಶಿ (Utpanna Ekadashi ). ಕಾರ್ತಿಕ ಪೂರ್ಣಿಮೆಯ ನಂತರ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯನ್ನು ಉತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ಉತ್ಪನ್ನ ಏಕಾದಶಿಯು ವರ್ಷದಲ್ಲಿ ಬರುವ ಅನೇಕ ಏಕಾದಶಿಗಳಲ್ಲಿ ಪ್ರಮುಖವಾಗಿದೆ. ಈ ದಿನ ಏಕಾದಶಿಯ ಜನ್ಮದಿನವೆಂದು ಪರಿಗಣಿಸಲಾಗಿದೆ. ವಾರ್ಷಿಕ ಉಪವಾಸವನ್ನು ಆಚರಿಸಲು ಪ್ರತಿಜ್ಞೆ ಮಾಡುವ ಭಕ್ತರು ಏಕಾದಶಿ ಉಪವಾಸವನ್ನು ಉತ್ಪನ್ನ ಏಕಾದಶಿಯಿಂದ ಪ್ರಾರಂಭಿಸುವ ಪ್ರತೀತಿ ಇದೆ. ಎಲ್ಲಾ ಏಕಾದಶಿ ಉಪವಾಸಗಳುವಿಷ್ಣುವಿನ (Vishnu) ಶಕ್ತಿಗಳಲ್ಲಿ ಒಂದಾಗಿದ್ದು,  ಏಕಾದಶಿ ದೇವರಿಗೆ ಸಮರ್ಪಿತವಾಗಿವೆ.

    ಮುರ ಎಂಬ ರಾಕ್ಷಸನನ್ನು ನಾಶಮಾಡಲು ವಿಷ್ಣವಿನ  ದೇಹದಿಂದ ಏಕಾದಶಿ ಜನಿಸಿದರು ಎಂದು ನಂಬಲಾಗಿದೆ. ಆದ್ದರಿಂದ, ಈ ದಿನದಂದು  ವಿಷ್ಣುವಿನ ಭಕ್ತರು ಏಕಾದಶಿಯಂದು ಹರಿಯ ಅನುಗ್ರಹವನ್ನು ಪಡೆಯಲು ಉಪವಾಸವನ್ನು ಮಾಡುತ್ತಾರೆ. ಏಕಾದಶಿಯು ವಿಷ್ಣುವಿನ ರಕ್ಷಣಾತ್ಮಕ ಶಕ್ತಿಗಳಲ್ಲಿ ಒಂದಾಗಿದೆ ಎಂದು ಹಿಂದೂ ಪುರಾಣದಲ್ಲಿ ತಿಳಿಸಲಾಗಿದೆ.

    ಉಪವಾಸ ವ್ರತಾಚರಣೆ
    ಈ ದಿನ, ಮುಂಜಾನೆ ಬೇಗನೆ ಎದ್ದು, ಶುಭ್ರವಾದ ಬಟ್ಟೆಗಳನ್ನು ಧರಿಸಿ, ಧೂಪ, ದೀಪ, ಹೂವುಗಳು, ಶ್ರೀಗಂಧ, ಹೂವುಗಳು, ತುಳಸಿಗಳಿಂದ ವಿಷ್ಣುವನ್ನು ಪೂಜಿಸಬೇಕು. ದಿನವೀಡಿ ಉಪವಾಸವಿದ್ದು, ಪಾರಣೆಯ ಸಮಯದಲ್ಲಿ ಉಪವಾಸವನ್ನು ಮುರಿಯಲಾಗುತ್ತದೆ. ಈ ದಿನ ಪವಿತ್ರ ನೀರಿನಲ್ಲಿ ಸ್ನಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಎಲ್ಲಾ ದೋಷಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.

    ಏನಿದರ ಹಿಂದಿನ ಕಥೆ
    ಸುವರ್ಣ ಯುಗದಲ್ಲಿ ಮುರ ಎಂಬ ರಾಕ್ಷಸ ಇದ್ದ ಆತ ತುಂಬಾ ಬಲಶಾಲಿ ಮತ್ತು ಭಯಂಕರನಾಗಿದ್ದ. ಆ ಉಗ್ರ ರಾಕ್ಷಸನು ಇಂದ್ರ, ಆದಿತ್ಯ, ವಸು, ವಾಯು, ಅಗ್ನಿ ಮೊದಲಾದ ದೇವತೆಗಳೆಲ್ಲರನ್ನು ಸೋಲಿಸಿ ಓಡಿಸಿದನು. ಆಗ ಇಂದ್ರನ ಸಹಿತ ದೇವತೆಗಳೆಲ್ಲರೂ ಭಯಭೀತರಾಗಿ ಶಿವನ ಬಳಿ ಹೋದರು. ಆಗ ಶಿವನು ಮೂರು ಲೋಕಗಳ ಒಡೆಯನೂ, ಭಕ್ತರ ದುಃಖಗಳ ನಾಶಕನೂ ಆದ ವಿಷ್ಣುವನ್ನು ಆಶ್ರಯಿಸಿ ಎಂದು ಸಲಹೆ ನೀಡಿದನು

    ಸಂಕಷ್ಟ ಆಲಿಸಿದ ವಿಷ್ಣುವು ಮುರ​ ರಾಕ್ಷಸನ ಕೊಲ್ಲಲು ತನ್ನ ದೇಹದಿಂದ ಮಹಿಳೆಯನ್ನು ಸೃಷ್ಟಿಸಿದನು, ವಿಷ್ಣುವಿನ ದೇಹದಿಂದ ಜನಿಸಿದ ಮಹಿಳೆ ಮುರ್ ಎಂಬ ರಾಕ್ಷಸನನ್ನು ಕೊಂದಳು. ಆಗ ವಿಷ್ಣುವು ಸಂತುಷ್ಟನಾಗಿ ಆ ಸ್ತ್ರೀಗೆ ಉತ್ನಾ ಎಂದು ಹೆಸರಿಟ್ಟನು. ಏಕಾದಶಿಯಂದು ಹುಟ್ಟಿದ ಕಾರಣ, ಈ ದಿನ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂದು ವಿಷ್ಣುವು ಉತ್ಪನ್ನನಿಗೆ ಹೇಳಿದನು.

    ಇದನ್ನು ಓದಿ: ಈ ಅಭ್ಯಾಸಗಳಲ್ಲಿ ಅಡಗಿದೆಯಂತೆ ಜೀವನದ ಯಶಸ್ಸು

    ಮೋಕ್ಷ ಪ್ರಾಪ್ತಿ

    ಏಕಾದಶಿಯಂದು ಕುಟುಂಬದ ಅಗಲಿದವರಿಗಾಗಿ ಉಪವಾಸ ಮಾಡುವ ಸಂಪ್ರದಾಯವೂ ಇದೆ. ಅಗಲಿದವರ ಆತ್ಮವು ಈ ದಿನದಂದು ಉಪವಾಸದ ಪುಣ್ಯ ಫಲವನ್ನು ಪಡೆಯುತ್ತದೆ ಎಂದು ನಂಬಲಾಗಿದೆ. ಉತ್ಪನ್ನ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ

    ಇದನ್ನು ಓದಿ: ಸೂರ್ಯಗ್ರಹಣದ ಪ್ರಭಾವ ಡಿಸೆಂಬರ್​ನಲ್ಲಿ ಈ ರಾಶಿಯವರಿಗೆ ಸಂಕಷ್ಟ; ಇಲ್ಲಿದೆ ಪರಿಹಾರ

    ಉಪವಾಸದ ಹಿಂದೆ ವೈಜ್ಞಾನಿಕ ದೃಷ್ಟಿ

    ಹರಿ ವಿಷ್ಣುವನ್ನು ಕೃಪೆ ಪಡೆಯಲು ಈ ದಿನ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡುವುದರಿಂದ ಮನಸ್ಸು ಶುದ್ಧವಾಗುತ್ತದೆ. ಜೊತೆಗೆ ದೇಹವು ಆರೋಗ್ಯವಾಗಿರುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ. ತಿಂಗಳಲ್ಲಿ ಒಂದು ದಿನ ಉಪವಾಸ ಆಚರಿಸುವುದು ದೇಹದ ಆರೋಗ್ಯದಿಂದಲೂ ಉತ್ತಮ ಎಂಬುದನ್ನು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
    Published by:Seema R
    First published: