Shravana Masa: ಶ್ರಾವಣಾ ಬಂತು ಶ್ರಾವಣಾ! ಈ ಆಚರಣೆಗಳನ್ನು ನೀವೂ ಮಾಡಬಹುದು!

ಶ್ರಾವಣ ಮಾಸವು ಪವಿತ್ರ ಮಾಸವಾಗಿದ್ದು ಈ ತಿಂಗಳಲ್ಲಿ ಪ್ರಮುಖವಾಗಿ ಶಿವ ಭಕ್ತರು ಪ್ರಮುಖವಾಗಿ ಶಿವನಿಗಾಗಿ ಉಪವಾಸ ವ್ರತಗಳನ್ನು, ಕನ್ವರ್ ಯಾತ್ರೆ ಮತ್ತು ಇತರೆ ಪೂಜಾ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ.

ಭಗವಾನ್ ಶಿವ

ಭಗವಾನ್ ಶಿವ

  • Share this:
ಆಷಾಡ ಕಳೆದು ಶ್ರಾವಣ ಮಾಸ ಬಂತೆಂದರೆ ಎಲ್ಲರಿಗೂ ಖುಷಿ, ಹಬ್ಬದ (Festivals)  ಸಡಗರವೇ ಎಲ್ಲೆಡೆ ತುಂಬಿರುತ್ತದೆ. ಭಾರತವು (India) ಧಾರ್ಮಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಪ್ರತಿಯೊಂದು ತಿಂಗಳು ಒಂದೊಂದು ರೀತಿಯಾದ ವಿಶೇಷತೆಯನ್ನು ಪಡೆದಿದೆ. ಹಾಗೆಯೇ ಶಿವನಿಗೆ (Shiva) ಅತ್ಯಂತ ಪ್ರಿಯವಾದ ತಿಂಗಳು ಶ್ರಾವಣ ಮಾಸ. ಶಿವ ಭಕ್ತರು (Shiva Devotees) ಈ ಮಾಸದಲ್ಲಿ ಹೆಚ್ಚಾಗಿ ಉಪವಾಸ  ವ್ರತಗಳು (Fasting), ಶಿವನ ಆರಾಧನೆಗಳು, ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ಜುಲೈ ತಿಂಗಳ (July Month) ಮದ್ಯದಿಂದ ಆಗಸ್ಟ್ ತಿಂಗಳ (August Month) ಮದ್ಯದವರೆಗೆ ಶ್ರಾವಣ ಮಾಸ (Shravana Masa) ಬರುತ್ತದೆ.

ಶ್ರಾವಣ ಸೋಮವಾರದ ಉಪವಾಸ
ಸೋಮವಾರವು ಶಿವನನ್ನು ಆರಾಧಿಸಲು ಉತ್ತಮ ದಿನವೆಂಬ ನಂಬಿಕೆಯಿದೆ. ಹಾಗೆಯೇ ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸಲು ಮಂಗಳಕರ ಸಮಯವೆಂದು ಪರಿಗಣಿಸುತ್ತಾರೆ. ಈ ತಿಂಗಳಲ್ಲಿ ಶಿವ ಭಕ್ತರು ಹೆಚ್ಚಾಗಿ ಪ್ರತಿ ಸೋಮವಾರ ಉಪವಾಸ ವ್ರತ ಮಾಡುತ್ತಾರೆ. ಈ ಸೋಮವಾರವನ್ನು ಶ್ರಾವಣ ಸೋಮವಾರ ಅಥವಾ ಸಾವನ್ ಸೋಮವಾರ ಎಂದು ಕರೆಯುತ್ತಾರೆ.

ಇದನ್ನೂ ಓದಿ: Shravan Shukravara: ಶ್ರಾವಣ ಶುಕ್ರವಾರ ಮುತ್ತೈದೆ ಮಹಿಳೆಯರಿಗೆ ಎಷ್ಟು ಮುಖ್ಯ? ಪೂಜೆ ಹೇಗಿರುತ್ತೆ ಗೊತ್ತಾ?

ಮಂಗಳವಾರ ಪಾರ್ವತಿಯ ಆರಾಧನೆ
ಸಾಮಾನ್ಯವಾಗಿ ಈ ಮಾಸದಲ್ಲಿ ಸೋಮವಾರ ಶಿವನನ್ನು ಪ್ರಾರ್ಥಿಸಿದರೆ, ಮಂಗಳವಾರದ ದಿನವನ್ನು ದೇವಿ ಪಾರ್ವತಿಗೆ ಸಮರ್ಪಿಸಲಾಗುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ಕೈಗೊಳ್ಳುವ ವ್ರತವನ್ನು ಮಂಗಳಗೌರಿ ವ್ರತ ಎಂದೂ ಸಹ ಕರೆಯುತ್ತಾರೆ.

ಶ್ರಾವಣ ಮಾಸ ಯಾವಾಗ ಆರಂಭ
ಈ ವರ್ಷದಲ್ಲಿ ಶ್ರಾವಣ ಮಾಸವು ಜುಲೈ14 ರಂದು ಆರಂಭವಾಗಿದ್ದು, ಆಗಸ್ಟ್ 12ರಂದು ಬರುವ ಶ್ರಾವಣ ಪೂರ್ಣಿಮೆಯಂದು ಕೊನೆಗೊಳ್ಳಲಿದೆ. ಈ ತಿಂಗಳಲ್ಲಿ ಒಟ್ಟು ನಾಲ್ಕು ಸೋಮವಾರಗಳು ಬರುತ್ತವೆ. ಜುಲೈ 18 ಶ್ರಾವಣದ ಮೊದಲ ಸೋಮವಾರವಾಗಿದೆ. ನಂತರದಲ್ಲಿ ಜುಲೈ 25, ಆಗಸ್ಟ್ 1, ಆಗಸ್ಟ್ 8 ಶ್ರಾವಣ ಸೋಮವಾರಗಳಾಗಿವೆ. ಆಗಸ್ಟ್ 12 ಶ್ರಾವಣದ ಕೊನೆಯ ದಿನವಾಗಿದೆ.

ಶ್ರಾವಣ ಮಾಸದ ವಿಶೇಷತೆ
ಹಿಂದೂ ಪುರಾಣಗಳ ಪ್ರಕಾರ, ಶ್ರಾವಣ ಮಾಸದಲ್ಲಿ ದೇವತೆಗಳು ಮತ್ತು ದಾನವರ ನಡುವಿನ ಮಂಥನದ ಸಮಯದಲ್ಲಿ ಸಮುದ್ರದಿಂದ ಹೊರಬಂದ ವಿಷದಿಂದ ಇಡೀ ಭೂಮಂಡಲವನ್ನು ರಕ್ಷಿಸಲು ಆ ವಿಷವನ್ನು ಶಿವ ಸೇವಿಸಿದನು. ಆದ್ದರಿಂದ ಶಿವನ ಭಕ್ತರು, ತನ್ನ ಅನುಯಾಯಿಗಳನ್ನು ಎಲ್ಲಾ ರೀತಿಯ ಅಪಾಯಗಳಿಂದ ರಕ್ಷಿಸಿ ಅವರಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುವ ಮಹಾದೇವನನ್ನು ಈ ಮಾಸದಲ್ಲಿ ವಿಶೇಷವಾಗಿ ಆರಾಧಿಸುತ್ತಾರೆ.

ಶಿವ ಭಕ್ತರ ಕನ್ವರ್ ಯಾತ್ರೆ
ಈ ಮಾಸದಲ್ಲಿ ಶಿವ ಭಕ್ತರು ಕನ್ವರ್ ಯಾತ್ರೆ ಕೈಗೊಳ್ಳುತ್ತಾರೆ. ಕನ್ವರ್ ಯಾತ್ರೆ ಎಂದರೆ ಶಿವನ ತೀರ್ಥಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಪವಿತ್ರ ಗಂಗೆಯನ್ನು ತಂದು ತಮ್ಮ ಸ್ಥಳೀಯ ಶಿವ ದೇವಾಲಯದಲ್ಲಿ ಸಮರ್ಪಿಸುತ್ತಾರೆ. ಅಲ್ಲದೆ ಈ ಯಾತ್ರೆಯಲ್ಲಿ ಕನ್ವರಿಗಳು ಬರಿಗಾಲಿನಲ್ಲಿ ಯಾತ್ರೆ ನಡೆಸುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಈ ಯಾತ್ರೆಯನ್ನು ಕೈಗೊಳ್ಳುತ್ತಾರೆ.

ಆಹಾರ ಸೇವನಾ ಪದ್ದತಿ
ಪವಿತ್ರ ತಿಂಗಳೆಂದು ಆಚರಿಸುವ ಈ ಶ್ರಾವಣ ಮಾಸದಲ್ಲಿ ದೇವರ ಆರಾಧನೆ, ಉಪವಾಸ ವ್ರತಗಳನ್ನು ಕೈಗೊಳ್ಳುವುದರಿಂದ ಆಹಾರ ಸೇವನೆಯಲ್ಲೂ ಕೆಲವು ನಿಬಂಧನೆ ಕಟ್ಟುಪಾಡುಗಳನ್ನು ಹೊಂದಿದ್ದಾರೆ. ಕೋಳಿ, ಮೀನು, ಮೊಟ್ಟೆ ಹೀಗೆ ಮಾಂಸ ಪದಾರ್ಥಗಳು ಮತ್ತು ಮದ್ಯ ಸೇವನೆಯನ್ನು ತ್ಯಜಿಸುತ್ತಾರೆ. ಅಲ್ಲದೆ ಕೆಲವು ಆಹಾರ ಪದ್ಧತಿಯನ್ನು ಅವರ ಪಾರಂಪರಿಕ ಆಚರಣೆಯಂತೆ ಅಥವ ಅವರ ಪ್ರಾದೇಶಿಕ ಆಚರಣೆಗೆ ಅನುಸಾರವಾಗಿ ಅನುಸರಿಸುತ್ತಾರೆ.

ಇದನ್ನೂ ಓದಿ: Shravana Masa: ಶ್ರಾವಣ ಮಾಸದಲ್ಲಿ ಜನರು ಏಕೆ ನಾನ್ ವೆಜ್ ತಿನ್ನೋದಿಲ್ಲ? ಇದರ ಹಿಂದಿನ ಕಾರಣಗಳೇನು?

ಹೀಗೆ ಶ್ರಾವಣ ಮಾಸವನ್ನು ಭಾರತದಲ್ಲಿ ಬಹಳ ಪ್ರಾಮಾಣಿಕತೆಯಿಂದ ಆಚರಿಸುತ್ತಾರೆ. ಇಂತಹ ಆಚರಣೆಗಳು, ಧಾರ್ಮಿಕ ವಿಧಿ ವಿಧಾನಗಳು ಜನರು ಸಾತ್ವಿಕ ಜೀವನ ಮತ್ತು ಪ್ರಾಮಾಣಿಕತೆಯ ಬದುಕು ನಡೆಸಲು ಅನುವು ಮಾಡಿಕೊಡುತ್ತದೆ.
Published by:Nalini Suvarna
First published: