• Home
  • »
  • News
  • »
  • astrology
  • »
  • Christmas Crib: ಕ್ರಿಸ್​ಮಸ್​ ಸಂಭ್ರಮದಲ್ಲಿ ಕಣ್ಮನ ಸೆಳೆಯೋ ಗೋದಲಿ ಸಂಪ್ರದಾಯಕ್ಕಿದೆ 795 ವರ್ಷಗಳ ಇತಿಹಾಸ!

Christmas Crib: ಕ್ರಿಸ್​ಮಸ್​ ಸಂಭ್ರಮದಲ್ಲಿ ಕಣ್ಮನ ಸೆಳೆಯೋ ಗೋದಲಿ ಸಂಪ್ರದಾಯಕ್ಕಿದೆ 795 ವರ್ಷಗಳ ಇತಿಹಾಸ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Christmas Crib Importance: ಈ ಕ್ರಿಸ್​ಮಸ್​ ಕ್ರಿಬ್​ ಅನ್ನು ಏಕೆ ತಯಾರಿಸಬೇಕು ಹಾಗೂ ಹೇಗೆ ತಯಾರಿಸಬೇಕು ಎಂಬುದು ಇಲ್ಲಿದೆ.  

  • Share this:

ಕ್ರಿಸ್​ಮಸ್​ ಹಬ್ಬ (Christmas ) ಎಂದರೆ ಅದೇನೋ ಸಂತೋಷ ಹಾಗೂ ಸಂಭ್ರಮ ಎಲ್ಲೆಡೆ ಮನೆಮಾಡಿರುತ್ತದೆ. ತಿಂಗಳ ಮೊದಲೇ ಈ ಹಬ್ಬದ (Festival) ಆಚರಣೆಗೆ ತಯಾರಿ ಆರಂಭ ಮಾಡಲಾಗಿರುತ್ತದೆ. ಇನ್ನೇನು ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಚರ್ಚ್​ (Church) ಹಾಗೂ ಮನೆಗಳಲ್ಲಿ ಕೇಕ್ ಹಾಗೂ ಕ್ರಿಸ್​ಮಸ್​ ಟ್ರೀ (Christmas Tree)  ಅಲಂಕಾರ ಮಾಡಲು ಆರಂಭಿಸಲಾಗಿದೆ. ಈ ಕ್ರಿಸ್​ಮಸ್​ ಹಬ್ಬದ ಸಮಯದಲ್ಲಿ  ವಿಭಿನ್ನವಾದ ಕಾರ್ಯಕ್ರಮಗಳಿರುತ್ತದೆ,  ಸಿಹಿತಿಂಡಿಗಳನ್ನು ಹಂಚಲಾಗುತ್ತದೆ, ಗಿಫ್ಟ್​ಗಳನ್ನು ಸಹ ಕೊಡಲಾಗುತ್ತದೆ. ಈ ಎಲ್ಲಾ ಆಚರಣೆಗಳಲ್ಲಿ ಮತ್ತೊಂದು ವಿಶೇಷವಾದ ಪದ್ಧತಿ ಎಂದರೆ ಕ್ರಿಸ್​ಮಸ್​ ಕ್ರಿಬ್​ (Christmas Crib) ಅಂದರೆ ಗೋದಲಿ. ಇದನ್ನು ಚರ್ಚ್​ಗಳಲ್ಲಿ ಹಾಗೂ ಕೆಲ ಮನೆಗಳಲ್ಲಿ ಸಹ ಮಾಡಲಾಗುತ್ತದೆ. ಹಾಗಾದ್ರೆ ಈ ಕ್ರಿಸ್​ಮಸ್​ ಕ್ರಿಬ್​ ಅನ್ನು ಏಕೆ ತಯಾರಿಸಬೇಕು ಹಾಗೂ ಹೇಗೆ ತಯಾರಿಸಬೇಕು ಎಂಬುದು ಇಲ್ಲಿದೆ.  


ಕ್ರಿಸ್‌ಮಸ್ ಗೋದಲಿ ಒಂದು ಪ್ರಮುಖ ಕ್ರಿಸ್‌ಮಸ್ ಸಂಪ್ರದಾಯವಾಗಿದ್ದು. ಕ್ಯಾಥೋಲಿಕ್​ ಸಂಪ್ರದಾಯದಲ್ಲಿ ಇದನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇದು ಯೇಸಯ ಕ್ರಿಸ್ತನ ಜನನದ ಸಮಯವನ್ನು ಪ್ರಸ್ತುತ ಪಡಿಸುತ್ತದೆ ಎನ್ನಲಾಗುತ್ತದೆ. ಇದಕ್ಕೆ ಸುಮಾರು 795ಕ್ಕೂ ಹೆಚ್ಚು ವರ್ಷಗಳ ಹಿಂದಿನ ಇತಿಹಾಸವಿದ್ದು , ಈ ಗೋದಲಿಯನ್ನು 1223ರಲ್ಲಿ ಮೊಟ್ಟ ಮೊದಲ ಬಾರಿಗೆ ಟೆಲಿಯಲ್ಲಿ ರಚನೆ ಮಾಡಲಾಗಿತ್ತು ಎಂದು ಹೇಳಲಾಗುತ್ತದೆ.


ಮೂಲಗಳ ಪ್ರಕಾರ ಸಂತ ಫ್ರಾನ್ಸಿಸ್‌ ಅಸ್ಸಿಸಿಯವರು ಈ ಯೇಸು ಜನನದ ಗೋದಲಿಯನ್ನು ನಿರ್ಮಾಣ ಮಾಡಿದ್ದರು. ಆ ಸಮಯದಲ್ಲಿ ಈ ಕ್ರಿಬ್​ ಅನ್ನು ಯಾವುದೇ ವಿಗ್ರಹಗಳನ್ನು ಬಳಸದೇ ಮನುಷ್ಯರನ್ನೇ ಬಳಸಿ ತಯಾರಿಸಲಾಗಿತ್ತಂತೆ. ಇದು ಜನರನ್ನು ಆಕರ್ಷಿಸಿದ್ದಲ್ಲದೇ ನಂತರ ಕ್ರಿಸ್​ಮಸ್​ ಆಚರಣೆಯ ಅವಿಭಾಜ್ಯ ಅಂಗವಾಗಿ ಬದಲಾಗಿದ್ದು, ಇಂದು ಎಲ್ಲಾ ಕಡೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.   


ಇದನ್ನೂ ಓದಿ: ಈ ರಾಶಿಯ ಮಹಿಳೆಯರಿಗೆ ಭಯ ಅಂದ್ರೆ ಏನು ಅಂತಾನೇ ಗೊತ್ತಿಲ್ವಂತೆ


ಗೋದಲಿಯಲ್ಲಿ ಏನೆಲ್ಲಾ ಇರುತ್ತದೆ?


ಕ್ರಿಸ್​ಮಸ್​ ಹಬ್ಬದ ಸಮಯದಲ್ಲಿ ನಿರ್ಮಿಸುವ ಈ ಗೋದಲಿಯಲ್ಲಿ ಯೇಸುವಿನ ತಂದೆ ಜೋಸೆಫ್‌, ತಾಯಿ ಮರಿಯ ಹಾಗೂ ಮಗು ಯೇಸುವಿನ ಸಣ್ಣ ಸಣ್ಣ ಮೂರ್ತಿಗಳನ್ನು ಇಡಲಾಗುತ್ತದೆ. ಇದರ ಜೊತೆಗೆ ಕುರಿ ಕಾಯುವ ಕೆಲ ಜನರು, ಆಡು-ಕುರಿಗಳು, ಹಸು ಹಾಗೂ ಕತ್ತೆ ಹಾಗೂ ಕೆಲ ಪ್ರಾಣಿಗಳು ಇರುತ್ತದೆ. ಅಲ್ಲದೇ ಈ ಕ್ರಿಬ್​ನಲ್ಲಿ ಆ ಸಮಯದಲ್ಲಿ ಪೂರ್ವ ದೇಶಗಳಿಂದ ಯೇಸುವಿನ ಭೇಟಿಗಾಗಿ ಬಂದಿದ್ದ ಜ್ಯೋತಿಷಿಗಳು ಹಾಗೂ ದೇವದೂತರ ವಿಗ್ರಹಗಳನ್ನು ಸಹ ಇಡಲಾಗುತ್ತದೆ.


ಅಲ್ಲದೇ ಸುಂದರವಾದ ಬೆಟ್ಟ –ಗುಡ್ಡಗಳು, ಹಸಿರು ಹುಲ್ಲುಗಳನ್ನು ಸಹ ಇದರಲ್ಲಿ ಮಾಡಿರಲಾಗುತ್ತದೆ. ಇದು ನೋಡುಗರನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.  ಯೇಸುಕ್ರಿಸ್ತರ ಜನನ ಕೊಟ್ಟಿಗೆಯಲ್ಲಿ ಆಗಿರುವ ಕಾರಣ ಈ ಗೋದಲಿಯನ್ನು ಹೀಗೆ ನಿರ್ಮಾಣ ಮಾಡಲಾಗುತ್ತದೆ. ಕ್ರಿಸ್​ಮಸ್​ ಹಬ್ಬದ ಸಮಯದಲ್ಲಿ ಮನೆಗಳಲ್ಲಿ ಸಹ ಇದನ್ನು ರಚಿಸಿ ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ.


ಮನೆಯಲ್ಲಿ ಗೋದಲಿ ಹೇಗೆ ಮಾಡುವುದು?


ಮೊದಲು ಇದನ್ನು ರಚಿಸಲು ಹೆಚ್ಚು ಆಕರ್ಷಕ ವಸ್ತುಗಳು ಲಭ್ಯವಿರುತ್ತಿರಲಿಲ್ಲ, ಆದರೆ ಈಗ ಕಾಲ ಬದಲಾಗಿದ್ದು ವಿಭಿನ್ನ ರೀತಿಯ ವಸ್ತುಗಳನ್ನು ಬಳಸಿ ಸುಂದರವಾದ ಕ್ರಿಬ್ ತಯಾರಿಸಬಹುದು.  ಈ ಕ್ರಿಸ್​ಮಸ್​ ಗೋದಲಿ ಸಂತೋಷದ ಸಂಕೇತವಾಗಿದ್ದು, ನೀವು ಮನೆಯಲ್ಲಿಯೇ ಹೆಚ್ಚು ಕಷ್ಟಪಡದೇ ಹಾಗೂ ಹೆಚ್ಚು ಹಣ ವ್ಯರ್ಥ ಮಾಡದೇ ಕ್ರಿಬ್ ತಯಾರಿಸಬಹುದು.


ಇದನ್ನೂ ಓದಿ: ನಿಮ್ಮ ಜನ್ಮದಿನಾಂಕದಲ್ಲಿ ಈ ಡೇಟ್‌ಗಳಿದ್ರೆ ನಿಮ್ಮ ಲೆಕ್ಕ ಪಕ್ಕಾ! ನೀವು ಬ್ಯುಸಿನೆಸ್‌ಮೆನ್ ಆಗೇ ಆಗ್ತೀರಿ!


ನೈಸರ್ಗಿಕವಾಗಿ ನೀವು ಕ್ರಿಬ್ ತಯಾರಿಸಬೇಕು ಎಂದರೆ ಹೂವುಗಳು ಹಾಗು ಸಸ್ಯಗಳನ್ನು ಬಳಕೆ ಮಾಡಬಹುದು. ಅಲ್ಲದೇ ಮರಳುಗಳನ್ನು ಸಹ ಬಳಸುವುದು ನಿಮಗೆ ಸಹಾಯ ಮಾಡುತ್ತದೆ. ನೀವು ಗೋದಲಿಯ ಒಂದೊಂದು ಭಾಗವನ್ನು ಮಾಡಲು ಒಂದೊಂದು ವಸ್ತುವನ್ನು ಬಳಕೆ ಮಾಡಬಹುದು. ಐಸ್​ ಕ್ರೀಂ ಕಡ್ಡಿಗಳನ್ನು ಸಹ ನೀವು ಯೂಸ್ ಮಾಡಬಹುದು.

Published by:Sandhya M
First published: