Rahu kaal : ರಾಹು ಕಾಲದಲ್ಲಿ ಶುಭ ಕಾರ್ಯ ಯಾಕೆ ಮಾಡಬಾರದು; ಇದರ ಲೆಕ್ಕಾಚಾರ ಹೇಗೆ!

ರಾಹುಕಾಲ ಎಂದರೇನು, ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ.  ರಾಹುಕಾಲದ ಬಗ್ಗೆ ಇರುವ ನಂಬಿಕೆಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯ  (Good Work) ಅಥವಾ ಪೂಜೆಯನ್ನು ಮಾಡುವಾಗ ಶುಭ ಮುಹೂರ್ತವನ್ನು ನೋಡಿಯೇ ಆರಂಭಿಸಲಾಗುವುದು. ಶುಭ ಮುಹೂರ್ತದಲ್ಲಿ (Auspicious time) ಮಾಡಿದ ಕೆಲಸಗಳು ಫಲ ನೀಡುತ್ತದೆ ಎಂಬ ನಂಬಿಕೆ ಇದೆ. ಯಾವುದೇ ಹೊಸ ಕೆಲಸವನ್ನು ಮಾಡುವ ಮೊದಲು ಶುಭ ಮುಹೂರ್ತವನ್ನು ನಿರ್ಲಕ್ಷಿಸಿದರೆ, ಆಗ ಕೆಲಸವು ಪೂರ್ಣಗೊಳ್ಳುವುದಿಲ್ಲ ಅಥವಾ ಅದರಲ್ಲಿ ಅನೇಕ ಅಡಚಣೆಗಳು ಉಂಟಾಗುತ್ತವೆ ಎನ್ನಲಾಗುತ್ತದೆ. ದಿನದಲ್ಲಿ ಮೂರು ಮುಹೂರ್ತಗಳಿದ್ದು, ಅವುಗಳ ಮುಹೂರ್ತ ನೋಡುಕೊಂಡು ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಅದರಲ್ಲಿ ರಾಹು ಕಾಲದಲ್ಲಿ (Rahu Kaal ಯಾವುದೇ ಶುಭ ಸಮಾರಂಭ ಮಾಡಬಾರದು ಎಂಬ ಪ್ರತೀತಿ ಇದೆ. ಶಾಸ್ತ್ರಗಳಲ್ಲಿ ಈ ಮುಹೂರ್ತವನ್ನು ಅಶುಭ ಎಂದು ಪರಿಗಣಿಸಲಾಗುವುದು. ಈ ಮುಹೂರ್ತದಲ್ಲಿ ಯಾವುದೇ ಹೊಸ ಕೆಲಸ ಮಾಡುವುದಿಲ್ಲ.

    ಜ್ಯೋತಿಷಿ ಮತ್ತು ಹಸ್ತಸಾಮುದ್ರಿಕ ವಿನೋದ್ ಸೋನಿ ಪೊದ್ದಾರ್ ಪ್ರಕಾರ, ರಾಹುಕಾಲವು ಸ್ಥಳ ಮತ್ತು ದಿನಾಂಕವನ್ನು ಅವಲಂಬಿಸಿ ಬದಲಾಗುತ್ತದೆ. ಅಂದರೆ ರಾಹುಕಾಲವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಈ ವ್ಯತ್ಯಾಸವು ಸಮಯ ವಲಯದಲ್ಲಿನ ವ್ಯತ್ಯಾಸದಿಂದಾಗಿ ಬದಲಾಗುತ್ತದೆ. ಹಾಗಾದ್ರೆ ಈ ರಾಹುಕಾಲ ಎಂದರೇನು, ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ.  ರಾಹುಕಾಲದ ಬಗ್ಗೆ ಇರುವ ನಂಬಿಕೆಗಳೇನು ಎಂಬುದನ್ನು ಅವರು ತಿಳಿಸಿದ್ದಾರೆ.

    ರಾಹು ಕಾಲ ಎಂದರೇನು?
    ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ಎಂಟನೇ ಭಾಗದ ಅಧಿಪತಿ ರಾಹು. ರಾಹುವನ್ನು ಅಸುರ ಮತ್ತು ನೆರಳು ಗ್ರಹ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿದಿನ 90 ನಿಮಿಷ ರಾಹುಕಾಲ ಇರುತ್ತದೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಿದರೆ ಅದು ಫಲ ನೀಡುವುದಿಲ್ಲ ಎಂಬ ನಂಬಿಕೆ ಇದೆ. ರಾಹುವಿನ ಅಶುಭ ಪ್ರಭಾವದಿಂದ ದೇವತೆಗಳೂ ಹೊರತಾಗಿಲ್ಲ. ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳು ಪ್ರಾರಂಭವಾಗುವುದಿಲ್ಲ.

    ಇದನ್ನು ಓದಿ: ಶತ್ರುವಿನಿಂದ ಇರಲಿ ಅಂತರ; ಚಾಣಕ್ಯ ನೀತಿಯ ಈ ಐದು ವಿಷಯ ಸದಾ ನೆನಪಿರಲಿ

    ರಾಹುಕಾಲ ಲೆಕ್ಕಾಚಾರ
    ಜ್ಯೋತಿಷಿಯ ಪ್ರಕಾರ, ಯಾವುದೇ ದೊಡ್ಡ ಮತ್ತು ಮಂಗಳಕರ ಕೆಲಸದ ಪ್ರಾರಂಭದ ಸಮಯದಲ್ಲಿ, ದಿನದ ಪೂರ್ಣ ಮೌಲ್ಯವನ್ನು ಗಂಟೆ ಮತ್ತು ನಿಮಿಷದಲ್ಲಿ ಲೆಕ್ಕ ಹಾಕಿ. ಅದನ್ನು 8 ಸಮಾನ ಭಾಗಗಳಾಗಿ ವಿಂಗಡಿಸಲಾಗುವುದು. ಬಳಿಕ ಅದನ್ನು ಸ್ಥಳೀಯ ಕಾಲಮಾನದ ಸೂರ್ಯೋದಯಕ್ಕೆ ಸೇರಿಸಿ ಲೆಕ್ಕಾಚಾರ ನಡೆಸಲಾಗುವುದು. ಇದರಲ್ಲಿ 90 ನಿಮಿಷ ರಾಹುಕಾಲವೆಂದು ಪರಿಗಣಿಸಲಾಗುವುದು. ಈ ಅವಧಿಯನ್ನು ಎಲ್ಲಾ ಶುಭ ಕಾರ್ಯಗಳು ನಡೆಸಿದರೆ ತೊಡಕು ಹೆಚ್ಚು ಎನ್ನಲಾಗಿದೆ.

    ಇದನ್ನು ಓದಿ: ಡಿ. 4ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ; ಈ ರಾಶಿಗಳ ಮೇಲೆ ಅಧಿಕ ಪರಿಣಾಮ

    ಹೇಗೆ ಮಾಡುವುದು ಲೆಕ್ಕಾಚಾರ

    ಈ ರಾಹುಕಾಲದ ಲೆಕ್ಕಾಚಾರದಲ್ಲಿ, ಸೂರ್ಯೋದಯದ ಸಮಯವನ್ನು ಬೆಳಿಗ್ಗೆ 06:00 ಎಂದು ಪರಿಗಣಿಸಲಾಗುತ್ತದೆ (ಭಾರತೀಯ ಕಾಲಮಾನ) ಮತ್ತು ಅಸ್ತಮಿಸುವ ಸಮಯವನ್ನು ಸಂಜೆ 06:00 ಎಂದು ಪರಿಗಣಿಸಲಾಗುತ್ತದೆ. ಹೀಗೆ ಪಡೆದ 12 ಗಂಟೆಗಳನ್ನು ಸಮಾನ ಎಂಟು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಹನ್ನೆರಡು ಭಾಗಗಳಲ್ಲಿ ಪ್ರತಿಯೊಂದೂ ಒಂದೂವರೆ ಗಂಟೆಗಳಿರುತ್ತದೆ. ಸೂರ್ಯೋದಯದ ಸಮಯ ಮತ್ತು ಅಸ್ತಮಿಸುವ ಸಮಯದ ನಡುವಿನ ಸಮಯವನ್ನು ನಿಗದಿತ ಎಂಟು ಭಾಗಗಳಾಗಿ ವಿಂಗಡಿಸಿದರಲ್ಲಿ ರಾಹುಕಾಲ ಅಶುಭವಾದರೆ ಗುಳಿ ಕಾಲ ಶುಭ ಎಂದು ಪರಿಗಣಿಸಲಾಗಿದೆ.

    ಎರಡನೇ ಭಾಗದಲ್ಲಿ ಮಂಗಳವಾರವನ್ನು ಏಳನೇ ಭಾಗ, ಬುಧವಾರ ಐದನೇ ಭಾಗದಲ್ಲಿ, ಗುರುವಾರ ಆರನೇ ಭಾಗದಲ್ಲಿ, ಶುಕ್ರವಾರ ನಾಲ್ಕನೇ ಭಾಗದಲ್ಲಿ, ಶನಿವಾರದಂದು ಮೂರನೇ ಭಾಗದಲ್ಲಿ ಹೀಗೆ ಪ್ರತಿ ವಾರದ ಪ್ರತಿ ದಿನವೂ ಒಂದು ನಿರ್ದಿಷ್ಟ ಸಮಯಗಳನ್ನು ವಿಂಗಡಿಸಿ, ರಾಹು ಕಾಲ ನಿರ್ಧರಿಸಲಾಗುವುದು
    Published by:Seema R
    First published: