• Home
  • »
  • News
  • »
  • astrology
  • »
  • Sabarimala: ಶಬರಿಮಲೆ ಯಾತ್ರೆ ಎಷ್ಟು ಕಠಿಣವಾಗಿರುತ್ತೆ? ಭಕ್ತರು ಮಾಲೆ ಹಾಕಿ,ವ್ರತ ಮಾಡೋದು ಯಾಕೆ?

Sabarimala: ಶಬರಿಮಲೆ ಯಾತ್ರೆ ಎಷ್ಟು ಕಠಿಣವಾಗಿರುತ್ತೆ? ಭಕ್ತರು ಮಾಲೆ ಹಾಕಿ,ವ್ರತ ಮಾಡೋದು ಯಾಕೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sabarimala Temple: ಶಬರಿಮಲೆಗೆ ಬರುವ ಭಕ್ತರು 41 ದಿನಗಳ ಕಾಲ ವ್ರತ ಆಚರಣೆ ಮಾಡಿ ಬರುತ್ತಾರೆ. ಅದನ್ನು ಮಾಲೆ ಹಾಕುವುದು ಎಂದು ಹೇಳಲಾಗುತ್ತದೆ. ಹಾಗಾದ್ರೆ ಈ ಮಾಲೆ ಹಾಕುವುದು ಏಕೆ ಕಡ್ಡಾಯ ಎಂಬುದು ಇಲ್ಲಿದೆ.

  • Share this:

ದಕ್ಷಿಣ ಭಾರತದ (South India) ಪ್ರಸಿದ್ಧ ದೇವಾಲಯಗಳಲ್ಲಿ (Temple) ಶಬರಿಮಲೆಯ ಅಯ್ಯಪ್ಪಸ್ವಾಮಿ (Sabarimala temple) ದೇವಸ್ಥಾನ ಕೂಡ ಒಂದು. ಈ ದೇವಸ್ಥಾನಕ್ಕೆ ದೇಶದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಾರೆ. ಅಯ್ಯಪ್ಪನ ದರ್ಶನ ಪಡೆಯಲು ಭಕ್ತರು ಮಾಲೆ (Mala) ಧರಿಸಿ ಬರುತ್ತದೆ. ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಮೊದಲು ಹೆಚ್ಚಾಗಿ ಮಾಲೆ ಧರಿಸಿ, ದೇವರ ದರ್ಶನಕ್ಕೆ ಬರುತ್ತಾರೆ. ಪ್ರತಿವರ್ಷ ನವೆಂಬರ್‌ನಿಂದ ಡಿಸೆಂಬರ್ ತನಕ ವಾರ್ಷಿಕ ಪೂಜೆಗಳು ನಡೆಯುತ್ತದೆ. ಈ ಸಮಯದಲ್ಲಿ ಭಕ್ತಾಧಿಗಳು ಸ್ವಲ್ಪ ಹೆಚ್ಚು ಬರುತ್ತದೆ. ಆದರೆ ಇಲ್ಲಿಗೆ ಬರುವ ಭಕ್ತರು 41 ದಿನಗಳ ಕಾಲ ವ್ರತ ಆಚರಣೆ ಮಾಡಿ ಬರುತ್ತಾರೆ. ಅದನ್ನು ಮಾಲೆ ಹಾಕುವುದು ಎಂದು ಹೇಳಲಾಗುತ್ತದೆ. ಹಾಗಾದ್ರೆ ಈ ಮಾಲೆ ಹಾಕುವುದು ಏಕೆ ಕಡ್ಡಾಯ ಎಂಬುದು ಇಲ್ಲಿದೆ.


ಮಾಲೆ ಹಾಕಿ ಬರುವ ಸಾವಿರಾರು ಭಕ್ತಾಧಿಗಳು


ಕೇರಳದ ಪಥನಂತಿಟ್ಟ ಜಿಲ್ಲೆಯ ಅಯ್ಯಪ್ಪ ದೇವರಿಗೆ ಸಮರ್ಪಿತವಾಗಿರುವ ಶಬರಿಮಲೆ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರುವ ಈ ದೇವಾಲಯಕ್ಕೆ ನಾಲ್ಕು ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದ ಹಾಗೂ ಕಷ್ಟಕರವಾದ ಟ್ರೆಕ್ಕಿಂಗ್ ಮೂಲಕ ಭಕ್ತರು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಇನ್ನು ಕಾಡಿನ ಮೂಲಕ, ಪಂಬಾ ನದಿಯನ್ನು ದಾಟಿ ಈ ದೇವಾಲಯಕ್ಕೆ ಹೋಗುವ ಈ ದೇವಾಲಯಕ್ಕೆ ಸಂಕ್ರಾಂತಿಯ ಸಮಯದಲ್ಲಿ ಮಕರ ಜ್ಯೋತಿ ವೀಕ್ಷಣೆಗೆ ಕಠಿಣ ವ್ರತ ಮಾಡುವ ಮೂಲಕ ಬರುತ್ತಾರೆ.


ವೃಶ್ಚಿಕ ಮಾಸದ 1 ನೇ ದಿನದಂದು ಗುರುಸ್ವಾಮಿ ಅವರು ಮಾಲೆ (ತುಳಸಿ ಅಥವಾ ರುದ್ರಾಕ್ಷ ಮಣಿಗಳ ಸರ) ಹಾಕುತ್ತಾರೆ. ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮಾಲಾಧಾರಣೆಯ ಕಾರ್ಯಕ್ರಮ ಮಾಡಲಾಗುತ್ತದೆ. ಮೊದಲು ಮಾಲೆ ಧರಿಸುವ ಭಕ್ತ ದಕ್ಷಿಣೆ ಅರ್ಪಿಸುವ ಮೂಲಕ ಅವರ ಹೆತ್ತವರು ಮತ್ತು ಹಿರಿಯರ ಆಶೀರ್ವಾದವನ್ನು ಪಡೆಯುತ್ತಾರೆ.


ಮಾಲೆಯನ್ನು ಮನೆಯಲ್ಲಿ ಪೂಜಾ ಕೋಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ಧರಿಸಬಹುದು. ಹಾಗೆಯೇ ವೃಶ್ಚಿಕ ಮಾಸದ 1 ನೇ ದಿನದಂದು ಧರಿಸಿದರೆ ಸಮಯ ಅಥವಾ ದಿನ ಮುಖ್ಯವಾಗುತ್ತದೆ. ಆದರೆ ರಾಹು ಕಾಲವನ್ನು ತಪ್ಪಿಸಬೇಕು. ಯಾವುದೇ  ಬೇರೆ ದಿನ ಮಾಲೆ ಹಾಕುವುದಾದರೆ ಜನ್ಮ ನಕ್ಷತ್ರ ಇರುವ ದಿನ ಮಾಲೆಯನ್ನು ಧರಿಸದಿರುವುದು ಒಳ್ಳೆಯದು ಎನ್ನಲಾಗುತ್ತದೆ.


ಇದನ್ನೂ ಓದಿ: 3 ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವಂತೆ, ಯಾವ್ದೇ ಕೆಲಸ ಮಾಡಿದ್ರೂ ಲಕ್ ಪಕ್ಕ!


ಬಹಳ ಕಷ್ಟ ಈ ಮಾಲಾಧಾರಣೆ


ಮನೆಯ ಹೊರಗೆ ಎಲ್ಲಿಯಾದರೂ ಮಾಲಾಧಾರಣೆ ಮಾಡಿದರೆ ನೇರವಾಗಿ ಮನೆಗೆ ಹೋಗುವುದು ವಾಡಿಕೆ.  ಈ ಮಾಲೆಯನ್ನು ಧರಿಸಿದಾಗ ಕೆಲ ನಿಯಮಗಳಿದೆ.  ಯಾವುದೇ ಸಾವು ಸಂಭವಿಸಿದ ಕಡೆ ಹೋಗುವುದು, ಆಸ್ಪತ್ರೆಗಳು, ಹೋಟೆಲ್‌ಗಳು ಅಥವಾ ಇತರರ ಮನೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ನೀವು ಮಾಲೆಯನ್ನು ಧರಿಸಿರುವಾಗ ಯಾವುದೇ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಬಾರದು ಅಥವಾ ಭಾಗವಹಿಸಬಾರದು. ಇಷ್ಟೇ ಅಲ್ಲದೇ ಹಗಲಿನಲ್ಲಿ ಮಲಗಬಾರದು ಎಂದು ಸಹ ಹೇಳಲಾಗುತ್ತದೆ.


ಶಬರಿಮಲೆಗೆ ತೀರ್ಥಯಾತ್ರೆ ಪೂರ್ಣಗೊಳ್ಳುವವರೆಗೆ ಮಾಲೆಯನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಈ ಸಮಯದಲ್ಲಿ ನಿಮ್ಮನ್ನು ಸ್ವಾಮಿ ಎಂದು ಕರೆಯಲಾಗುತ್ತದೆ ಮತ್ತು ನೀವು ಇತರ ಎಲ್ಲಾ ವಯಸ್ಕ ಪುರುಷರನ್ನು ಸ್ವಾಮಿ ಎಂದು ಕರೆಯಬೇಕು. ಮಾಲೆ ಧರಿಸಿದ ಸ್ವಾಮಿಗಳು ಕಪ್ಪು ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಆದರೆ ನೀಲಿ, ಕೇಸರಿ ಬಟ್ಟೆಯನ್ನು ಸಹ ಹಾಕಲು ಅವಕಾಶವಿದೆ.


ಇದನ್ನೂ ಓದಿ: ಸಂಕ್ರಾಂತಿ ಹಿನ್ನೆಲೆ, ಮಹತ್ವ ಏನು? ಹಬ್ಬವನ್ನು ಸಂಭ್ರಮಿಸುವ ಮುನ್ನ ಇದನ್ನು ತಿಳಿದುಕೊಳ್ಳಿ


ಈ ಸಮಯದಲ್ಲಿ ಯಾವುದೇ ರೀತಿಯ ಸೌಂದರ್ಯವರ್ಧಕಗಳು ಅಥವಾ ಇತರ ಅಲಂಕಾರಗಳನ್ನು ತಪ್ಪಿಸಬೇಕು ಎನ್ನಲಾಗುತ್ತದೆ. ಭೌತಿಕ ಅಗತ್ಯತೆಗಳು ಮತ್ತು ಆಹಾರದ ವಿಷಯದಲ್ಲಿ ನೀವು ಸ್ವಾಮಿಯಾಗಿ ಅತ್ಯಂತ ಮಿತವ್ಯಯದ ಜೀವನವನ್ನು ನಡೆಸಬೇಕು. ನೀವು ಈ ಸಮಯದಲ್ಲಿ ನಿಮ್ಮ ಉಗುರುಗಳನ್ನು ಕಟ್​ ಮಾಡುವುದು ಅಥವಾ ಕೂದಲು ಕತ್ತರಿಸುವುದು ಮಾಡಬಾರದು.

Published by:Sandhya M
First published: