Mythology: ಭಗವಾನ್ ವಿಷ್ಣು ಮತ್ಸ್ಯಾವತಾರ ತಾಳಿದ್ದು ಯಾಕೆ ಗೊತ್ತಾ..?

Lord Vishnu: ಬ್ರಹ್ಮದೇವರು ವಿಶ್ರಾಂತಿಯಲ್ಲಿದ್ದಾಗ ಅವರ ಮೂಗಿನ ಹೊರಳೆಯಿಂದ  ಹಯಗ್ರೀವ ಎಂಬ ಅಸುರ ಹೊರಗೆ ಬಂದು ವೇದಗಳನ್ನು ಅಪಹರಿಸಿ ಸಾಗರ ತಳದಲ್ಲಿ ಅಡಗಿದ

ವಿಷ್ಣು ಮತ್ಸ್ಯವತಾರ

ವಿಷ್ಣು ಮತ್ಸ್ಯವತಾರ

 • Share this:
  ಲೋಕ(World) ಕಲ್ಯಾಣಕ್ಕಾಗಿ ಮಹಾವಿಷ್ಣು(Lord Maha Vishnu) ಹತ್ತು ಅವತಾರಗಳನ್ನು ತಾಳುತ್ತಾನೆ ಅವುಗಳಲ್ಲಿ ಮೊದಲನೇ ಅವತಾರವೇ ಮತ್ಸ್ಯಾವತಾರ(Matsya avatar).. ಶತಪಥ ಬ್ರಾಹ್ಮಣದಲ್ಲಿ(Brahmin) ಮತ್ಸ್ಯ ಪುರಾಣದಲ್ಲಿ ಮತ್ಸ್ಯಾವತಾರದ ವಿವರಗಳು ಬರುತ್ತವೆ. ಪ್ರಳಯಕಾಲ ಸಮೀಪಿಸಿದಾಗ ಭೂಮಂಡಲವನ್ನು ಸತ್ಯವ್ರತನೆಂಬ ರಾಜನು(King) ಆಳುತ್ತಿದ್ದನು, ಇವನೇ ಮುಂದಿನ ವೈವಸ್ವತ ಮನ್ವಂತರ ಮನುವಾಗುವನು(Manu). ಇವನ ಕಾಲದಲ್ಲಿಯೇ ಮತ್ಸ್ಯಾವತಾರವಾದದ್ದು.ಇವನು ನಾರಾಯಣನ(Narayana) ಪರಮ  ಭಕ್ತನು. ತನ್ನ ವಾರ್ಧಕ್ಯದಲ್ಲಿ ಪರಮ ವೈರಾಗ್ಯವನ್ನು ಹೊಂದಿ ಸಿರಿಸಂಪತ್ತು ಸಾಮ್ರಾಜ್ಯಾದಿ ಸರ್ವಸ್ವವನ್ನು  ತೊರೆದು ಕೃತಮಲೆ ಎಂಬ ನದಿ ತೀರದಲ್ಲಿ ಪರ್ಣಕುಟೀರವನ್ನು ನಿರ್ಮಿಸಿ, ಕೇವಲ ಜಲಪಾನವನ್ನು ಮಾಡುತ್ತಾ ಶ್ರೀಹರಿಯನ್ನು ಕುರಿತು ಘೋರವಾದ ತಪಸ್ಸನ್ನಾಚರಿಸುತ್ತಿದ್ದನು.

  ರಾಜನ ಕೈಗೆ ಸಿಕ್ಕ ಪುಟ್ಟ ಮೀನು..

  ಒಂದು ದಿವಸ ರಾಜನು ನೀರು ಕುಡಿಯಲು ನದಿಗಿಳಿದು ಬೊಗಸೆಯಲ್ಲಿ ನೀರನ್ನು ಎತ್ತಲು ಅದರಲ್ಲಿ ಒಂದು ಪುಟ್ಟದಾದ ಮೀನು ಬಂದಿತು ಆ ನೀರನ್ನು ನದಿಯಲ್ಲಿ ಬಿಡಬೇಕೆನ್ನುವಷ್ಟರಲ್ಲಿ ಆ ಮೀನು ” ರಾಜ, ದಯವಿಟ್ಟು ನನ್ನನ್ನು ನದಿಯಲ್ಲಿ ಬಿಡಬೇಡ, ದೊಡ್ಡ ಮೀನುಗಳಿಂದ ನನ್ನನ್ನು ರಕ್ಷಿಸು” ಎಂದಿತುಮೀನು ಮಾತನಾಡುವುದನ್ನು ಕಂಡು ಆಶ್ಚರ್ಯಚಿಕಿತನಾದ ಸತ್ಯವ್ರತನು ಅದರ ಬಗ್ಗೆ ದಯೆ ತೋರಿ, ಅದನ್ನು ತನ್ನ ಕಮಂಡಲದಲ್ಲಿ ಇರಿಸಿಕೊಂಡು ಕುಟೀರಕ್ಕೆ ಬಂದನು. ಮರುದಿನವೇ ಆ ಮೀನು ಕಮಂಡಲದ ತುಂಬಾ ಬೆಳೆದುಬಿಟ್ಟಿತು, ದೊಡ್ಡದಾದ ಮೀನು ” ರಾಜ… ಈ ಕಮಂಡಲವು ನನ್ನ ವಾಸಕ್ಕೆ ಚಿಕ್ಕದಾಯಿತು…. ದಯಮಾಡಿ ನನ್ನನ್ನು ದೊಡ್ಡ ಪಾತ್ರೆಗೆ ಹಾಕು” ಎಂದಿತು

  ಇದನ್ನೂ ಓದಿ: ಮಹಾಭಾರತದ ದುರಂತ ನಾಯಕ ಕರ್ಣನ ಅಂತ್ಯಕ್ಕೆ ಕಾರಣವಾಗಿದ್ದೇ ಆತನಿಗೆ ತಟ್ಟಿದ್ದ ಶಾಪಗಳು..!

  ಚಿಕ್ಕದಾಗಿದ್ದ ಈ ಮೀನು ಒಂದೇ ರಾತ್ರಿಯಲ್ಲಿ ಇಷ್ಟು ದೊಡ್ಡದಾಗಿ ಹೇಗೆ ಬೆಳೆಯಿತು ಎಂದು ಯೋಚಿಸುತ್ತ ಅದನ್ನು ದೊಡ್ಡ ಪಾತ್ರೆಯಲ್ಲಿ ಬಿಟ್ಟನು. ಒಂದೇ ಗಳಿಗೆಯಲ್ಲಿ ಆ ಮತ್ಸ್ಯವು ಪಾತ್ರೆಯ ತುಂಬಾ ಬೆಳೆದು ರಾಜನಿಗೆ ಮತ್ತಷ್ಟು ಆಶ್ಚರ್ಯವನ್ನುಂಟುಮಾಡಿತು. ಆದರೂ ಮಾತನಾಡದೆ ಅದನ್ನು ಎತ್ತಿ ತಂದು ಒಂದು ಸರೋವರದಲ್ಲಿ ಬಿಟ್ಟನು, ಸ್ವಲ್ಪಹೊತ್ತಿನಲ್ಲಿ ಆ ಸರೋವರವನ್ನು ವ್ಯಾಪಿಸುವಷ್ಟು ದೊಡ್ಡದಾಗಿ ಮತ್ಸ್ಯವು ಬೆಳೆದುನಿಂತಿತು. ಅದನ್ನು ಕಂಡ ರಾಜನು ಆ ಮತ್ಸ್ಯವನ್ನು ಸಮುದ್ರಕ್ಕೆ ತಂದು ಬಿಟ್ಟನು.

  ಪ್ರಳಯದ ಮುನ್ಸೂಚನೆ ನೀಡಿದ ಮಹಾವಿಷ್ಣು

  ಸಾಗರದಲ್ಲಿ ಬಿದ್ದ ದೊಡ್ಡ ಮೀನನ್ನು ಕಂಡು ರಾಜ ದಿಗ್ಭ್ರಾಂತನಾಗಿ ನಿಂತ. ಅವನಿಗೇನೂ ಸಂಶಯ ಉಳಿಯಲಿಲ್ಲ. ಈ ಮೀನು ನಿಜಕ್ಕೂ ಶ್ರೀಹರಿಯ ಅವತಾರವೇ ಆಗಿದೆ ಎಂಬುದು ಅವನ ಅಚಲ ನಂಬಿಕೆಯಿಂದ ನೀನು ನನ್ನ ಆರಾಧ್ಯ ದೈವ ನಾರಾಯಣಣೆ ಎಂದು ಬೇಡಿಕೊಳ್ಳುತ್ತಾನೆ.

  ಅವನ ನಂಬಿಕೆಗೆ ಪುಷ್ಟಿಯಾಗಿ ರಾಜನೆದುರು ಬಂದ ಆ ಹೊಳೆಯುವ ಚಿನ್ನದ ಮೆರುಗಿನ, ಬೆನ್ನ ಮೇಲೆ ಕೊಂಬಿರುವ ಮೀನು ರಾಜನನ್ನು ಉದ್ದೇಶಿಸಿ, 'ರಾಜನೇ, ಅನತಿ ಸಮಯದಲ್ಲಿ ಯುಗಾಂತ್ಯವಾಗಲಿದೆ. ಭೂಮಿಗೆ ಅಪಾಯ ಕಾದಿದೆ. ಪ್ರಳಯ ಕಾಲದಂತೆ ಭೀಕರವಾದ ಮಳೆ ಬಂದು ಜಗತ್ತನ್ನು ಮುಳುಗಿಸಲಿದೆ. ನಾನು ಪ್ರಳಯಕಾಲದಲ್ಲಿ ಮತ್ಸ್ಯರೂಪದಿಂದ ಇರುವೆನು. ಇಂದಿನಿಂದ ಏಳನೇ ದಿನದಂದು ಅತಿವೃಷ್ಟಿಯಾಗಿ ಇಡೀ ಸೃಷ್ಟಿಯೇ ಜಲಮಯವಾಗುವುದು. ಆಗ ಆ ನೀರಿನಲ್ಲಿ ಒಂದು ದೋಣಿಯು ತೇಲಿಬರುವುದು. ಅದರಲ್ಲಿ ಸಪ್ತಋಷಿಗಳು ಇರುವರು. ನೀನು ಆ ದೋಣಿಯಲ್ಲಿ ಎಲ್ಲ ರೀತಿಯ ಬೀಜಗಳು ಹಾಗೂ ವನಸ್ಪತಿಗಳನ್ನು ತುಂಬಿಸಿ ನೀನು ಸಹ ಅದರಲ್ಲಿ ಕುಳಿತುಕೋ ಎಂದಿತು. ಹೀಗೆ, ಮತ್ಸ್ಯ ರೂಪದಲ್ಲಿ ಬಂದಿದ್ದ ಮಹಾವಿಷ್ಣು ಪ್ರಳಯದ ಮುನ್ಸೂಚನೆಯನ್ನ ನೀಡಿದನು.

  ಶ್ರೀಹರಿಯು ಹೇಳಿದಂತೆ ಏಳನೆಯ ದಿನ ಇದ್ದಕಿದ್ದಂತೆ ಬಿರುಗಾಳಿ ಸಹಿತವಾದ ಗುಡುಗು ಸಿಡಿಲುಗಳಿಂದ ಕೂಡಿದ ಅತ್ಯಂತ ವಿನಾಶಕಾರಿಯಾದ ಮಳೆ ಬೀಳತೊಡಗಿತು. ಇಡೀ ಭೂಭಾಗವೇ ಜಲಾವೃತವಾಯಿತು. ಮಹಾ ಪ್ರಳಯ ಇಡೀ ಸೃಷ್ಟಿಯನ್ನೇ ಆಹುತಿ ತೆಗೆದುಕೊಳ್ಳುವಷ್ಟು ಪ್ರಬಲವಾಯಿತು. ಸಾಗರದ ಬೃಹದಾಕಾರದ ತೆರೆಗಳ ಹೊಯ್ದಾಟದಲ್ಲಿ ದೋಣಿಯು ಅಲ್ಲೋಲಕಲ್ಲೋಲವಾಗುತ್ತಿದ್ದರೂ ರಾಜನು ಹರಿಯನ್ನು ಧ್ಯಾನಿಸುತ್ತ ಧೈರ್ಯದಿಂದ ಇದ್ದನು.

  ಅಷ್ಟರಲ್ಲಿ  ಬಂಗಾರದ ಬಣ್ಣದ ಬೃಹದಾಕಾರದ ಮತ್ಸ್ಯವು ವಿಹರಿಸುತ್ತ ದೋಣಿಯ ಸಮೀಪಕ್ಕೆ ಬರುವುದನ್ನು ಕಂಡರು.ಅದೇ ಸಮಯದಲ್ಲಿ ಬೃಹದಾಕಾರದ ಸರ್ಪವೊಂದು ದೋಣಿಯ ಹತ್ತಿರಕ್ಕೆ ಬಂದಿತು. ರಾಜನು ಆ ಸರ್ಪದ ಒಂದು ತುದಿಯನ್ನು ದೋಣಿಗೂ ಮತ್ತೊಂದನ್ನು ಮತ್ಸ್ಯಕ್ಕೂ ಕಟ್ಟಿದನು. ಆಗ ದೋಣಿಯ ಹೊಯ್ದಾಟ ನಿಂತು ಬ್ರಹ್ಮ್ಮನ ಒಂದು ರಾತ್ರಿ ಕಾಲದವರೆಗೂ ನಿಧಾನಕ್ಕೆ ತೇಲತೊಡಗಿತು. ಆ ಸಮಯದಲ್ಲಿ ಭಗವಂತನು ಸತ್ಯವ್ರತನಿಗೆ ಆತ್ಮಸ್ವರೂಪ, ಭಕ್ತಿ ಯೋಗ, ಮತ್ಸ್ಯಪುರಾಣ ಸಂಹಿತೆಯನ್ನು ಉಪದೇಶಿಸಿದನು.

  ಇದನ್ನೂ ಓದಿ: ಬ್ರಹ್ಮಚಾರಿಯಾಗಿರುತ್ತೇನೆ ಎಂದ ಗಣೇಶ ಸಿದ್ದಿ-ಬುದ್ದಿ ಮದುವೆಯಾದ ಕಥೆ ಇದು

  ವೇದಗಳನ್ನು ಅಪಹರಿಸಿ ಸಾಗರ ತಳದಲ್ಲಿ ಅಡಗಿಸಿದ ರಾಕ್ಷಸ

  ಬ್ರಹ್ಮದೇವರು ವಿಶ್ರಾಂತಿಯಲ್ಲಿದ್ದಾಗ ಅವರ ಮೂಗಿನ ಹೊರಳೆಯಿಂದ  ಹಯಗ್ರೀವ ಎಂಬ ಅಸುರ ಹೊರಗೆ ಬಂದು ವೇದಗಳನ್ನು ಅಪಹರಿಸಿ ಸಾಗರ ತಳದಲ್ಲಿ ಅಡಗಿದ. ಇದನ್ನು ಅರಿತ ಸ್ಥಿತಿಕಾರಕ ವಿಷ್ಣು ಅಸುರನನ್ನು ಸಂಹರಿಸಿ ವೇದಗಳನ್ನು ಪುನರುತ್ಥಾನಗೊಳಿಸುವ ಯೋಜನೆಯಲ್ಲಿದ್ದ.ಆದರೆ
  ಪ್ರಳಯಕಾಲ ಕಳೆದು ಬ್ರಹ್ಮನ ಹಗಲು ಪ್ರಾರಂಭವಾದಾಗ, ಮತ್ಸ್ಯರೂಪಿ ಪರಮಾತ್ಮನು ಆ ದಾನವನನ್ನು ಸಂಹರಿಸಿ ವೇದಗಳನ್ನು ಬ್ರಹ್ಮದೇವನಿಗೆ ಒಪ್ಪಿಸಲು ಹೊಸ ಮನ್ವಂತರ ಪ್ರಾರಂಭವಾಯಿತು ಅದಕ್ಕೆ ಸತ್ಯವ್ರತ ರಾಜನೇ  ಮನುವಾದನು.
  Published by:ranjumbkgowda1 ranjumbkgowda1
  First published: