Scripture: ಜನನ-ಮರಣ ಸಮಯದಲ್ಲಿ ಸೂತಕದ ಆಚರಣೆ ಯಾಕೆ? ಸಾವಿನ ಮನೆಯಲ್ಲಿ ಒಲೆ ಹಚ್ಚಲ್ಲ ಯಾಕೆ?

Sutak: ನಮ್ಮ ಪುರಾಣಗಳಲ್ಲಿ ಹೇಳಿರುವ ಪ್ರಕಾರ ಸೂತಕದಲ್ಲಿ 2 ವಿಧಗಳಿವೆ. ಒಂದು ಹುಟ್ಟಿನ ಸೂತಕ ಮತ್ತೊಂದು ಸಾವಿನ ಸೂತಕ. ಈ ಎರಡೂ ಸೂತಕಗಳಲ್ಲಿ ಹುಟ್ಟಿನ ಸೂತಕ ಮರಣ ಸೂತಕಕ್ಕಿಂತ ಹೆಚ್ಚಿನ ಪರಿಣಾಮಕಾರಿ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಿರಿಯರು ಆಚರಿಸಿಕೊಂಡು ಬಂದಿರುವ ಕೆಲವು ಆಚಾರ (Ritual), ವಿಚಾರಗಳು ನಮಗೆ ವಿಚಿತ್ರ ಅನಿಸಿದರೂ ಕೂಡ ಅದರ ಹಿಂದೆ ಒಂದು ಬಲವಾದ ಕಾರಣ (Reason) ಇರುತ್ತೆ. ಮನುಷ್ಯನ (Human) ಜನನದಿಂದ (Birth) ಹಿಡಿದು ಮರಣದವರೆಗೂ (Death) ನಾವು ಹಲವು ಆಚಾರ ವಿಚಾರಗಳನ್ನು ಪಾಲಿಸುತ್ತಲೇ ಬಂದಿದ್ದೇವೆ, ಇಂದಿಗೂ ಪಾಲಿಸುತ್ತಿದ್ದೇವೆ. ನಾವು ಆಚರಿಸುವ ಕೆಲವು ಆಚರಣೆಗಳು ನಮಗೆ ಮೂಢನಂಬಿಕೆ (Superstition) ಅನಿಸಿದರೂ ಅವುಗಳನ್ನು ನಾವು ಆಚರಣೆ ಮಾಡುತ್ತಿದ್ದೇವೆ. ಅದರಲ್ಲಿ ಸೂತಕದ ಆಚರಣೆಯು ಒಂದು. ಹಾಗಿದ್ರೆ ಸೂತಕ ಅಂದರೇನು..? ಸೂತಕವನ್ನು ಯಾಕೆ ಆಚರಣೆ ಮಾಡಲಾಗುತ್ತದೆ.. ಹಿಂದೂ ಪುರಾಣಗಳಲ್ಲಿ ಸೂತಕದ ಬಗ್ಗೆ ಏನು ಹೇಳಲಾಗಿದೆ..? ಸೂತಕದ ಸಮಯದಲ್ಲಿ ದೇವರ ಪೂಜೆ ಯಾಕೆ ಮಾಡಬಾರದು ಎಂದು ಹೇಳುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

    ಸೂತಕ ಎಂದರೇನು..?

    ವ್ಯಕ್ತಿ ಸತ್ತಾಗ ಸೂತಕವಾದರೆ, ಮಗು ಜನ್ಮಿಸಿದಾಗ ವೃದ್ಧಿ ಎಂದು ಹೇಳಲಾಗುತ್ತದೆ. ಸತ್ತ ವ್ಯಕ್ತಿಯ ಮನೆಯಲ್ಲಿ ಸಾವು ಸೂತಕವಾದರೆ ಮಗು ಜನ್ಮಿಸಿದ ಮನೆಯಲ್ಲಿ ಸಂತೋಷದ ಸೂತಕವಾಗಿರುತ್ತದೆ. ಸರಳವಾಗಿ ಹೇಳುವುದಾದರೆ ಸೂತಕಗಳು ಮನುಷ್ಯನ ವ್ಯಕ್ತಿತ್ವಕ್ಕೆ ಸಂಬಂದ್ಧಪಟ್ಟದ್ದು. ವ್ಯಕ್ತಿಯಿಂದ ಕುಂಟುಂಬ, ಕುಟುಂಬದಿಂದ ಸಮಾಜ, ಸಮಾಜದಿಂದ ಧರ್ಮಗಳಿಗೆ, ನಂಟಿನಿಂದ ಕೂಡಿಸಿ ಕಟ್ಟುವ ಮನುಷ್ಯ ನಿರ್ಮಿಸಿದ ನಿಯಮಗಳಾಗಿವೆ. ಸೂತಕಗಳು ಅವರವರ ಮಡಿವಂತಿಕೆಯ ಅನನ್ಯತೆಯನ್ನು ವಿಭಿನ್ನವಾಗಿ ಹೇಳುತ್ತವೆ. ಒಂದೊಂದು ಧರ್ಮದಲ್ಲಿ ಸೂತಕಗಳಿಗೆ ಅವುಗಳದೇ ಆಚರಣೆ ಇರುತ್ತದೆ. ಅರ್ಥವಿರುತ್ತದೆ, ಸಮಾಜದಲ್ಲಿ ಮರು ಹುಟ್ಟು ಪಡೆಯುತ್ತ ಸಾಗುತ್ತದೆ.

    ಇದನ್ನೂ ಓದಿ: ದೇಗುಲದ ಸುತ್ತ ಪ್ರದಕ್ಷಿಣೆ ಯಾಕೆ ಹಾಕಬೇಕು?

    ಮನೆಯಲ್ಲಿ ಸೂತಕ ಸಮಯವಿದ್ದರೆ ಇಂತಹ ಸ್ಥಿತಿಯಲ್ಲಿ ದೇವರ ಕರ್ಮಗಳನ್ನು ಮಾಡಬಾರದು ಎಂದು ಪೂರ್ವ ಕಾಲದಿಂದಲೂ ನಮ್ಮ ಹಿರಿಯರು ಈ ಪದ್ದತಿಯನ್ನು ಆಚರಿಸುತ್ತಾ ಬರುತ್ತಿದ್ದಾರೆ. ನಮ್ಮ ಹಿಂದೂ ಗ್ರಂಥಗಳಲ್ಲಿ ಹೇಳಿದ ಪ್ರಕಾರ ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ 7 ತಲೆಮಾರಿನವರೆಗೂ ಸೂತಕದ ಅವಧಿ ಇರುತ್ತದೆ ಎಂದು ಹೇಳಲಾಗಿದೆ. ಇನ್ನು ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಇವರಿಗೆ 3 ದಿನಗಳವರೆಗೂ ಸೂತಕದ ಅವಧಿಯಲ್ಲಿ ಇರುತ್ತಾರೆ. ಇನ್ನು ಸನ್ಯಾಸಿಗಳಿಗೆ ಸೂತಕ ಯಾವುದೇ ರೀತಿ ಅಂಟುವುದಿಲ್ಲ ಎಂದು ಹೇಳಲಾಗಿದೆ.

    ಪುರಾಣಗಳ ಪ್ರಕಾರ ಸೂತಕದಲ್ಲಿ 2 ವಿಧ

    ನಮ್ಮ ಪುರಾಣಗಳಲ್ಲಿ ಹೇಳಿರುವ ಪ್ರಕಾರ ಸೂತಕದಲ್ಲಿ 2 ವಿಧಗಳಿವೆ ಒಂದು ಹುಟ್ಟಿನ ಸೂತಕ ಮತ್ತೊಂದು ಸಾವಿನ ಸೂತಕ. ಈ ಎರಡೂ ಸೂತಕಗಳಲ್ಲಿ ಹುಟ್ಟಿನ ಸೂತಕ ಮರಣ ಸೂತಕಕ್ಕಿಂತ ಹೆಚ್ಚಿನ ಪರಿಣಾಮಕಾರಿ ಎಂದು ಹೇಳಲಾಗಿದೆ.

    ಸಾವಿನ ಸೂತಕ ಎಷ್ಟು ದಿನಗಳವರೆಗೂ ಇರುತ್ತದೆ..?

    ಇನ್ನೂ ಸಾವಿನ ಸೂತಕ ಎಷ್ಟು ದಿನಗಳವರೆಗೂ ಇರುತ್ತದೆ ಎಂದರೆ ಸ್ನಾನ ಮಾಡಿದ ನಂತರ ಯಾವುದೇ ರೀತಿಯ ಸೂತಕ ಇಲ್ಲ ಎಂದು ಗ್ರಂಥಗಳಲ್ಲಿ ತಿಳಿಸಿದ್ದಾರೆ. ಇದೇ ನಿಯಮವನ್ನು ಬ್ರಾಹ್ಮಣರು ಕೂಡ ಪಾಲನೆ ಮಾಡುತ್ತಾರೆ. ಹಾಗಾಗಿ ಕುಟುಂಬದ ಸದಸ್ಯರು ಯಾರಾದರೂ ಮೃತವಾದರೆ ಸ್ನಾನ ಮಾಡುವುದು ಸೂತಕದ ನಿಯಮಗಳು ಎಂದು ಹೇಳಲಾಗಿದೆ.

    ಇನ್ನೂ ಸಾವಿನ ಸೂತಕದ ಅವಧಿ ಎಷ್ಟು ದಿನ ಇರುತ್ತದೆ ಎಂದರೆ ಹತ್ತು ದಿನಗಳ ಕಾಲ ಎಂದು ಹೇಳಲಾಗಿದೆ.

    ಸೂತಕದ ಬಗ್ಗೆ ಪುರಾಣಗಳಲ್ಲಿ ಏನಿದೆ..?

    ಸೂತಕದ ಅವಧಿಯಲ್ಲಿ ದೇವ ಕರ್ಮ ಮಾಡಬಾರದು ಎಂದು ಗರುಡಪುರಾಣ, ಮನುಸ್ಮೃತಿ, ಪರಾಶರ ಸ್ಮೃತಿ, ಗೌತಮ ಸ್ಮೃತಿ, ಧರ್ಮಸಿಂಧು ಸೇರಿದಂತೆ ಹಲವು ಗ್ರಂಥಗಳಲ್ಲಿ ಕುರಿತು ಉಲ್ಲೇಖಿಸಿರುವುದನ್ನು ನಾವು ಕಾಣಬಹುದು. ಈ ಸಮಯದಲ್ಲಿ ದೇವಪೂಜೆ, ಕರ್ಮ ಮತ್ತು ದೇವರನ್ನು ಮುಟ್ಟಬಾರದು. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿತೃ ಕರ್ಮ ಮಾಡುವ ನಿಯಮವನ್ನು ಹೇಳಲಾಗಿದೆ. ಧಾರ್ಮಿಕ ಗ್ರಂಥಗಳಲ್ಲಿ, ಸೂತಕದ ಬಗ್ಗೆ ಬಹಳ ವಿವರವಾಗಿ ಹೇಳಲಾಗಿದ್ದು, ಸೂತಕವು ಯಾರಿಗೆ ಅನ್ವಯಿಸುತ್ತದೆ ಮತ್ತು ಎಷ್ಟು ಸಮಯದವರೆಗೆ ಸೂತಕದ ಅವಧಿಯಿರುತ್ತದೆ. ಇದರಲ್ಲಿ, ದೇಹವನ್ನು ತ್ಯಜಿಸುವ ವ್ಯಕ್ತಿ ಮತ್ತು ದೇಹವನ್ನು ಹೇಗೆ ತ್ಯಾಗ ಮಾಡಲಾಗುತ್ತದೆ ಎನ್ನುವುದರ ಬಗ್ಗೆಯೂ ಹೇಳಲಾಗಿದೆ.

    ಇದನ್ನೂ ಓದಿ: ನೀವು ಇಲ್ಲಿ ಈ ತಪ್ಪು ಮಾಡಿದ್ರೆ ನರಕದಲ್ಲಿ ಅನುಭವಿಸಬೇಕಾಗುತ್ತೆ ಘೋರ ಶಿಕ್ಷೆ..!

    ಸಾವಿನ ಸೂತಕದ ಮನೆಯಲ್ಲಿ ಒಲೆ ಯಾಕೆ ಹಚ್ಚಬಾರದು..?

    ಸತ್ತ ವ್ಯಕ್ತಿಯ ಮನೆಯಲ್ಲಿ ಏಕೆ ಒಲೆ ಹಚ್ಚಬಾರದು ಮತ್ತು ಅಡುಗೆ ಮಾಡಬಾರದು ಅನ್ನೋದಕ್ಕೂ ಕಾರಣವಿದೆ. ಮನೆಯಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಮನೆಯಲ್ಲಿನ ಜನರು ಉಪವಾಸ ಮಾಡಬೇಕು ಎಂಬ ನಿಯಮವಿಲ್ಲ. ಮನೆಯಲ್ಲಿ ಅಡುಗೆ ಮಾಡದೇ ಬೇರೆಯವರು ತಂದು ಕೊಡುವ ಆಹಾರ ಸೇವಿಸಬಹುದು. ಸಾವಿನ ಮನೆಯವರು ಅಡುಗೆ ಮಾಡಿದರೆ ಮೃತದೇಹದ ಜೊತೆಗೆ ಅವರ ಆತ್ಮ ಕೂಡ ಸುಟ್ಟು ಹೋಗುತ್ತೆ ಅನ್ನೋ ನಂಬಿಕೆ ಇದೆ.
    Published by:ranjumbkgowda1 ranjumbkgowda1
    First published: