ಸಂಖ್ಯಾಶಾಸ್ತ್ರದಲ್ಲಿ (Numerology) ಕೆಲವು ಸಂಖ್ಯೆಗಳು ಅವರ ಜನ್ಮ ದಿನಾಂಕದ (Birth date) ಪ್ರಕಾರ ಜನರ ಮೇಲೆ ಪ್ರಭಾವ ಬೀರುತ್ತವೆ. ಈ ಸಂಖ್ಯೆಗಳ ಆಧಾರದ ಮೇಲೆ, ಸಂಖ್ಯಾಶಾಸ್ತ್ರಜ್ಞರು ವ್ಯಕ್ತಿಯ ಗುಣಗಳು, ಗುಣಲಕ್ಷಣಗಳು ಮತ್ತು ಅವರ ಭವಿಷ್ಯವನ್ನು ಊಹಿಸುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ನಿರ್ದಿಷ್ಟ ಸಂಖ್ಯೆಯ ಸಂಯೋಜನೆಗಳು ಕೆಲವು ಜನರಿಗೆ ಚೆನ್ನಾಗಿ ಲಾಭದಾಯಕವಾಗಿರಲಿದೆ. ಟೀಂ ಇಂಡಿಯಾ ಕ್ರಿಕೆಟಿಗ ಮತ್ತು ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕಳೆದ ವರ್ಷ ಐಪಿಎಲ್‌ನಲ್ಲಿ ಇದೇ ರೀತಿಯ ಸಂಖ್ಯೆಯ ಸಂಯೋಜನೆಯನ್ನು ಹೊಂದಿದ್ದರು. ಇದರೊಂದಿಗೆ ಬ್ಯಾಟಿಂಗ್ ನಲ್ಲಿ ತಮ್ಮ ಸಾಮರ್ಥ್ಯ ತೋರಿದ ಅವರು ನಾಯಕನಾಗಿ ಉತ್ತಮ ತಂತ್ರಗಾರಿಕೆಯೊಂದಿಗೆ ತಂಡ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2022ರಲ್ಲಿ ಗೆದ್ದು ಬೀಗಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಆತ್ಮ ವಿಶ್ವಾಸದ ದೊಡ್ಡ ಮರವಾಗಿದ್ದು, ಅವರ ಜೀವನದ ನಿರ್ದೇಶಕ ಮತ್ತು ನಿರ್ಮಾಪಕ ಅವರೆ ಎಂಬುದರಲ್ಲಿ ಅನುಮಾನವಿಲ್ಲ. ಅವರು ಅಕ್ಟೋಬರ್ 11, 1993 ರಂದು ಜನಿಸಿದರು. ಈ ಸಂಖ್ಯೆಗಳ ಸಂಯೋಜನೆಯು ಹಾರ್ದಿಕ್ ಅವರನ್ನು ಉತ್ತಮ ಸಂವಹನ ಮತ್ತು ಬುದ್ಧಿವಂತಿಕೆಯ ವ್ಯಕ್ತಿಯನ್ನಾಗಿ ಮಾಡುತ್ತದೆ.
ಈ ಸ್ಟಾರ್ ಕ್ರಿಕೆಟಿಗ ತನ್ನ ಜೀವನದಲ್ಲಿ ಅತ್ಯುತ್ತಮ ಮತ್ತು ಕೆಟ್ಟ ಸನ್ನಿವೇಶಗಳನ್ನು ಮತ್ತು ಅನೇಕ ಏರಿಳಿತಗಳನ್ನು ಕಂಡಿದ್ದಾರೆ. 2022ರಲ್ಲಿ ಐಪಿಎಲ್‌ಗೆ ಪ್ರವೇಶವಾದ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಆಯ್ಕೆಯಾದರು. ಆ ಸೀಸನ್ನಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಟ್ರೋಫಿ ಗೆದ್ದಿದ್ದರು. ಸಂಖ್ಯಾಶಾಸ್ತ್ರದ ಪ್ರಕಾರ ಈ ಯಶಸ್ಸಿನ ಹಿಂದಿನ ಕಾರಣವೇನು ಎಂಬುದು ಇಲ್ಲಿದೆ.
ಕಳೆದ ವರ್ಷ ಐಪಿಎಲ್ 2022 ರ ಫೈನಲ್ ಪಂದ್ಯ ಮೇ 29 ರಂದು ನಡೆದಿತ್ತು. ಈ ದಿನಾಂಕದ ಸಂಖ್ಯೆಗಳ ಒಟ್ಟು ಮೊತ್ತವು 4 ಆಗಿದೆ. ಇದು ಕಷ್ಟಕರವಾದ ಸಂಖ್ಯೆ, ಆದರೆ ಸಮರ್ಥ ಪ್ರಯತ್ನದಿಂದ ಯಶಸ್ಸನ್ನು ಪಡೆಯುತ್ತದೆ. ಹಾರ್ದಿಕ್ ಹುಟ್ಟಿದ ದಿನಾಂಕದ ಅಂಕೆಗಳು 7 ಕ್ಕೆ ಸೇರುತ್ತವೆ. ಇದು ಡೆಸ್ಟಿನಿ ಸಂಖ್ಯೆ. ಆದರೆ ಇದು 4 ರೊಂದಿಗೆ ಟ್ರಿಕಿ ಸಂಬಂಧವನ್ನು ಹೊಂದಿದೆ. ಆದರೆ ಈ ಸಂಖ್ಯೆಗಳ ಸಂಯೋಜನೆಯೊಂದಿಗೆ, ಹಾರ್ದಿಕ್ ಕಳೆದ ವರ್ಷ ಯಶಸ್ವಿಯಾಗಿದ್ದರು.
ಗೆಲುವಿನ ಹಿಂದಿನ ಸಂಖ್ಯಾಶಾಸ್ತ್ರ
ಹಾರ್ದಿಕ್ ಪಾಂಡ್ಯ ನೇರ ಜನ್ಮ ದಿನಾಂಕ 11 (2). ಇದು ಪಂದ್ಯದ ದಿನದಂದು 29(2) ಗೆ ನೇರವಾಗಿ ಅನುಪಾತದಲ್ಲಿರುತ್ತದೆ. ಆದರೆ 2 ಒಂದು ಅವಿಭಾಜ್ಯ ಸಂಖ್ಯೆ. ಸಂಖ್ಯೆ 2 ಅನ್ನು ಸಂಖ್ಯೆ 7 ಕ್ಕೆ ಉತ್ತಮ ಸ್ನೇಹಿತ ಎಂದು ಹೇಳಬಹುದು. ಆದ್ದರಿಂದ ಇದು ಅತ್ಯುತ್ತಮ ಅಥವಾ ಕೆಟ್ಟ ದಿನವಾಗಿರಬಹುದು. ಕಳೆದ ವರ್ಷ ಐಪಿಎಲ್ ಫೈನಲ್ ದಿನದಂದು ಹಾರ್ದಿಕ್ ಮಾಸ್ಟರ್ ನಂಬರ್ 2 ಮತ್ತು ಡೆಸ್ಟಿನಿ ನಂಬರ್ 7 ರ ಶಕ್ತಿಯನ್ನು ಪಡೆದು ಆನಂದಿಸಿದ್ದರು.
ಇದನ್ನೂ ಓದಿ: ಅಶ್ವಿನಿ ನಕ್ಷತ್ರದಲ್ಲಿ ದೇವ ಗುರು, ಈ 4 ರಾಶಿಯವರು ಶ್ರೀಮಂತರಾಗೋದು ಫಿಕ್ಸ್
2 ಮತ್ತು 7 ಸಂಖ್ಯೆಗಳು ಕ್ರೀಡಾ ತಾರೆಗಳಿಗೆ ತೆರೆದ ಬಾಗಿಲು ಎನ್ನಬಹುದು. ಆದ್ದರಿಂದ, ಈ ಸಂಖ್ಯೆಯ ಬಲದ ಮೇಲೆ, ಹಾರ್ದಿಕ್ ಐಪಿಎಲ್ 2022 ಪ್ರಶಸ್ತಿಯನ್ನು ಹೊಸ ಫ್ರಾಂಚೈಸ್ ಗುಜರಾತ್ ಟೈಟಾನ್ಸ್ ಪಡೆಯಲು ಸಹಾಯವಾಗಿತ್ತು. ಇವರೆಲ್ಲ ಸೇರಿ ಮೊದಲ ಸೀಸನ್‌ನಲ್ಲಿಯೇ ತಂಡವನ್ನು ಐಪಿಎಲ್‌ನ ವಿಜೇತರನ್ನಾಗಿ ಮಾಡಿತ್ತು ಎನ್ನಬಹುದು. ಇನ್ನು ಈ ವರ್ಷ ಅವರ ಆಟ ಹೇಗಿರಲಿದೆ ಎಂಬುದು ಇಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ