ಗೋವು(Cow) ಮನುಕುಲದ ಆರಂಭದಿಂದಲೂ, ಮನುಷ್ಯರ ಪ್ರೀತಿಪಾತ್ರವಾದ ಪ್ರಾಣಿಯಾಗಿತ್ತು(Animal). ಆರ್ಯರು(Arya), ಭಾರತೀಯರ(Indians) ನಾಗರಿಕ ಪರಂಪರೆಯಲ್ಲಿ ಗೋವಿನ ಬಳಕೆಯ ಮಹತ್ವ ಗೋಚರವಾಗುತ್ತದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಸಮಭಾಗಿಯಾಗಿದ್ದ ಗೋವನ್ನು ತಾಯಿಯಾಗಿ(Mother), ದೇವರಾಗಿ(God) ಪೂಜಿಸುವ ಸಂಸ್ಕೃತಿ(Culture) ಬೆಳೆಯುತ್ತಾ ಬಂತು. ಮನುಷ್ಯರಿಗೆ ಅಮೃತ ಸದೃಶವಾದ ಹಾಲನ್ನು ನೀಡುವ ಕಾಮಧೇನುವಿಗೆ ಜನ್ಮಕೊಟ್ಟ ತಾಯಿಯ ಸ್ಥಾನವನ್ನು ನೀಡಿದ ಹಿರಿಮೆ, ನಮ್ಮ ಪರಂಪರೆ.
ಇನ್ನು ಗೋವಿಲ್ಲದೇ ನಮ್ಮ ವೇದ ಇತಿಹಾಸಗಳೇ ಇಲ್ಲ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇಂದಿಗೂ ವೇದ, ಪುರಾಣ ಮತ್ತು ಉಪನಿಷತ್ತುಗಳಲ್ಲಿ ಗೋ ಸಂಬಂಧಿ ವಿವರಗಳು ವಿಫುಲವಾಗಿ ಕಾಣ ಸಿಗುತ್ತವೆ. ಒಟ್ಟಾರೆಯಾಗಿ ಸಂಪೂರ್ಣ ವೇದಗಳನ್ನು ಅವಲೋಕಿಸಿದಾಗ ವೇದಗಳು ‘ಗೋ’ಮಯವಾದರೆ, ಗೋವು ಸರ್ವದೇವ ಮಯವಾಗಿದೆ.
ಇದೇ ಕಾರಣಕ್ಕೆ ವೇದಗಳು ಧರ್ಮಕ್ಕೆ ಮೂಲವಾದುದಾಗಿವೆ ಎಂದು ಹೇಳಲಾಗಿರುವುದು. ಅಷ್ಟೇ ಅಲ್ಲದೆ ವೇದ, ಉಪನಿಷತ್ತು ಮತ್ತು ಇನ್ನಿತರ ಮಹಾಗ್ರಂಥಗಳ ಆಧಾರದಿಂದ ತಿಳಿಯುವುದೇನೆಂದರೆ ಗೋವು ವಿಶ್ವದ ತಾಯಿಯಾಗಿದೆ ಎಂದು.
ಇದನ್ನೂ ಓದಿ: ಹಸುಗಳಿಗೂ ಪ್ರತ್ಯೇಕ ರೂಂ, ಹಾಸಿಗೆ ವ್ಯವಸ್ಥೆ.. ಗಂಜಲ-ಸಗಣಿ ಕಥೆ ಏನು?
ಗೋ ಪೂಜೆಯಿಂದ ಕಡಿಮೆಯಾಗಲಿದೆ ಪಾಪ ಕರ್ಮ
ಸ್ಕಂದ ಪುರಾಣದ ಪ್ರಕಾರ ಗೋವುಗಳ ಪೂಜೆಯನ್ನು ಮಾಡುವುದರಿಂದ ಸಿಗುವ ಫಲಗಳ ಬಗ್ಗೆ ವಿಶೇಷವಾಗಿ ತಿಳಿಸಲಾಗಿದೆ. ಪುರಾಣಗಳ ಪ್ರಕಾರ ಶ್ರೀರಾಮನ ಕುಟುಂಬದ ಪೂರ್ವಜರು ಗೋವುಗಳ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದರಿಂದ ವಿಷ್ಣುವು ಇವರ ವಂಶದಲ್ಲಿ ಶ್ರೀರಾಮನಾಗಿ ಜನಿಸಿದರು ಎಂದು ಹೇಳಲಾಗುತ್ತದೆ.
ಇನ್ನು ಗೋವಿಗೆ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಹಾರವನ್ನು ದಾನಮಾಡಬೇಕು, ನೀವು ಕೊಟ್ಟಂತಹ ಆಹಾರವನ್ನು ಹಸುಗಳು ತಿನ್ನುತ್ತಾ ಹೊದಂತೆ ನಿಮ್ಮ ಕರ್ಮಗಳು ಕೂಡ ಕಡಿಮೆಯಾಗುತ್ತಾ ಹೋಗುತ್ತದೆ.
ಶಿವನ ವಾಹನವೇ ಗೋವು
ಹಸುಗಳ ಉಪಯೋಗ ಬಹಳ. ಅದು ದೇಶದ ಆರ್ಥಿಕ ಶಕ್ತಿಯ ಆಧಾರ. ಕುಟುಂಬದ ಬಂಧು. ಹಾಲು ಕೊಟ್ಟು ಸಲಹುವ ತಾಯಿ. `ನೀನ್ಯಾರಿಗಾದೆಯೋ ಎಲೆ ಮಾನವ, ಹರಿ ಹರಿ ಗೋವು ನಾನು'- ಈ ಗೀತೆ ಕೇಳಿಲ್ಲವೆ? ವೇದ, ಪುರಾಣಗಳು ಗೋವನ್ನು ಕೊಂಡಾಡಿವೆ. ಶ್ರೀಕೃಷ್ಣ ಗೋವುಗಳನ್ನು ಕಾಪಾಡಿ ಸಲಹುವ ಗೋವಿಂದ, ಗೋಪಾಲ ಎನಿಸಿದ್ದರೆ, ಶಿವನ ವಾಹನವೇ ಗೋವು.
ಗೋ ಮಾತೆಯಲ್ಲಿ ಮಹಾಲಕ್ಷ್ಮೀಯ ವಾಸ
ಗೋಮೂತ್ರ, ಗೋಮಯ ಮತ್ತು ವಿಭೂತಿಗಳಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ ಎಂದು ಹೇಳುತ್ತಾರೆ. ಗೋಮೂತ್ರವು ರೋಗನಿವಾರಕ ಮತ್ತು ಆರೋಗ್ಯವರ್ಧಕವಾಗಿದೆ. ಗೋಮೂತ್ರವು ಗಂಗಾಜಲಕ್ಕೆ ಸಮಾನವಾಗಿದೆ.
ಗೋಮಯವನ್ನು ಒಣಗಿಸಿ ತಟ್ಟಿ ಅಗ್ನಿಗೆ ಅರ್ಪಿಸಿದಾಗ ವಿಭೂತಿಯಾಗುತ್ತದೆ. ಇವುಗಳೆಲ್ಲವೂ ಪರಮಪವಿತ್ರ ಮಾತ್ರವಲ್ಲದೆ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಶುದ್ಧೀಕರಣ ಮಾಡುತ್ತವೆ.
ಇದನ್ನೂ ಓದಿ: ಯಾದಗಿರಿಯಲ್ಲಿ ನಾಯಿ ಮರಿಗಳಿಗೆ ಹಾಲುಣಿಸುವ ಗೋಮಾತೆ.. ಅಪರೂಪದ ಬಾಂಧವ್ಯ
ಸಕಲ ದೇವತೆಗಳು ಗೋವಿನಲ್ಲಿ ವಾಸ
ಇನ್ನು ಹಿಂದೂ ಪುರಾಣದ ಪ್ರಕಾರ ಮುಕ್ಕೋಟಿ ದೇವತೆಗಳು ಗೋವಿನಲ್ಲಿ ವಾಸ ಮಾಡುತ್ತಾರೆ. ಹೀಗಾಗಿಯೇ ಗೋವುಗಳಿಗೆ ನೀವು ಎಷ್ಟು ಗೌರವವನ್ನು ಕೊಡುತ್ತಿರೋ ಅಷ್ಟೇ ಗೌರವಗಳು ನಿಮಗೆ ಸಮಾಜದಲ್ಲಿ ಸಿಗುತ್ತದೆ, ಇದರ ಜೊತೆಗೆ ಪೂರ್ವ ಜನ್ಮದ ಪಾಪ ಕರ್ಮಗಳು ಕೂಡ ಕಳೆಯುತ್ತದೆ ಎಂದು ಹೇಳಲಾಗುತ್ತದೆ.
ವಿಶೇಷವಾಗಿ ಗೋವಿಗೆ ರಕ್ಷಣೆಯನ್ನು ನೀಡುವುದು, ಗೋವಿನ ಸೇವೆಯನ್ನು ಮಾಡುವುದು, ಗೋವಿಗೆ ಹುಲ್ಲು ಆಹಾರವನ್ನು ನೀಡುವುದು, ಗೋವಿನ ಕುತ್ತಿಗೆ ಮತ್ತು ಮೈ ಸವರುವುದು, ಗೋವಿನ ಪೂಜೆಯನ್ನು ಮಾಡುವುದು ಗೋವಿಗೆ ಪ್ರದಕ್ಷಿಣೆಯನ್ನು ಹಾಕುವುದನ್ನುಮಾಡುವುದರಿಂದ ಮಹಾಲಕ್ಷ್ಮಿದೇವಿ ಆಕರ್ಷಣೆ ನಿಮ್ಮತ್ತ ಸೆಳೆಯುತ್ತದೆ.
ಇದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ, ಹಾಗೂ ಹಣಕಾಸಿನ ಅನುಕೂಲತೆಗಳು ಸುಖ-ಸಂಪತ್ತು ಪ್ರಾಪ್ತಿಯಾಗುತ್ತದೆ, ಅಷ್ಟೇ ಅಲ್ಲದೆ ಶನಿ ದೋಷ ಪಿತೃದೋಷ ಅನಾರೋಗ್ಯದ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಗೋವು ಐಶ್ವರ್ಯ ಮತ್ತು ಮೋಕ್ಷಕ್ಕೆ ಪ್ರತೀಕ. ಗೋವನ್ನು ಸವರುವುದರಿಂದ ಎಲ್ಲಾ ಪಾಪ ಕರ್ಮದಿಂದ ಮುಕ್ತಿ ಸಿಗುತ್ತದೆ ಎಂದು ಸ್ಕಂದ ಪುರಾಣದಲ್ಲಿ ತಿಳಿಸಲಾಗಿದೆ.ಇನ್ನು ಗೋವುಗಳ ಪೂಜೆಯನ್ನು ಮಾಡುವುದರಿಂದ ಗೋವುಗಳಿಗೆ ಆಹಾರ ಪದಾರ್ಥಗಳನ್ನು ಕ್ರಮೇಣವಾಗಿ ನೀಡುವುದರಿಂದ ಸಂತಾನ ಫಲ ಪ್ರಾಪ್ತಿಯಾಗುತ್ತದೆ ಎಂದು ಸಹ ಹೇಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ