• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Tirupati Govinda: ಗೋವಿಂದ ನಾಮಸ್ಮರಣೆಯ ಅರ್ಥ ಗೊತ್ತಾ? ಗೋವಿಂದಾ.. ಗೋವಿಂದ.. ಅನ್ನೋ ಮುನ್ನ ಈ ಕಥೆ ಕೇಳಿ

Tirupati Govinda: ಗೋವಿಂದ ನಾಮಸ್ಮರಣೆಯ ಅರ್ಥ ಗೊತ್ತಾ? ಗೋವಿಂದಾ.. ಗೋವಿಂದ.. ಅನ್ನೋ ಮುನ್ನ ಈ ಕಥೆ ಕೇಳಿ

ಶ್ರೀ ವೆಂಕಟೇಶ್ವರ

ಶ್ರೀ ವೆಂಕಟೇಶ್ವರ

ಬೃಂಗಿಯು ಗೋವು- ವಿಂದಾ (ವಿಂದಾ ಅಂದರೆ ಸಂಸ್ಕೃತದಲ್ಲಿ ಸಗಣಿ ಎಂದು ಅರ್ಥ)ದಿಂದ ಬರುತ್ತಿರುವಂತಹ ಸುಗಂಧ ಪರಿಮಳ ಎಂದು ಹರ-ಹರಿ ಶ್ರೀ ವಿಷ್ಣುವಿಗೆ ಹೇಳುತ್ತಾರೆ.

  • Share this:

ಶಿವನು(Lord Shiva) ಅಭಿಷೇಕಪ್ರಿಯ, ವಿಷ್ಣು(Lord Venkateshwara)ಕೂಡ ಅಲಂಕಾರ ಪ್ರಿಯನೇ. ಒಮ್ಮೆ ಶಿವನು ಮತ್ತು ವಿಷ್ಣು ಚರ್ಚಿಸುತ್ತಿದ್ದರಂತೆ. ಆಗ ವಿಷ್ಣು ಶಿವನನ್ನ ಕೇಳುತ್ತಾರಂತೆ, ಪರಮೇಶ್ವರ ಅತಲ, ಸುತಲ, ಪಾತಾಳ, ಬ್ರಹ್ಮಾಂಡ, ದೇವಲೋಕ, ಇಂದ್ರಲೋಕ (Indraloka) ಎಲ್ಲಾನು ನೋಡಿದ್ದೇನೆ. ಆದರೆ ನೀವು ಇರುವಂತಹ ಕೈಲಾಸವನ್ನು ನಾನು ನೋಡಿಲ್ಲ ಒಮ್ಮೆ ನೋಡಬೇಕು ಎಂಬ ಆಸೆ ಇದೆ ಎಂದು ಕೇಳುತ್ತಾರೆ. ಪರಶಿವನು ಅದರಲ್ಲೇನಿದೆ ನಾಳೆಯೇ ಬಂದು ಕೈಲಾಸ(Kailasa)ವನ್ನು ನೋಡಬಹುದು ಎಂದು ಆಹ್ವಾನಿಸುತ್ತಾರೆ. ಆಗ ಪರಮಶಿವನು ಕೈಲಾಸಕ್ಕೆ ಬಂದು ಬೃಂಗಿ( ಕೇದಾರಪೀಠದ ಗೋತ್ರ ಪುರುಷ ಬೃಂಗಿ) ಯನ್ನು ಕರೆದು ನೋಡಪ್ಪ ನಾಳೆ ವಿಷ್ಣುವು ಕೈಲಾಸಕ್ಕೆ ಬರುತ್ತಾರೆ. ಆದುದರಿಂದ ಕೈಲಾಸವನ್ನು ಸ್ವಚ್ಛವಾಗಿ ಇಡಬೇಕಾದ ಕಾರ್ಯ ನಿನ್ನದು ಎಂದು ಹೇಳುತ್ತಾರೆ.


ಆಗ ಬೃಂಗಿಯು ಕೈಲಾಸವನ್ನು ಸ್ವಚ್ಛ ಮಾಡುವುದು ಹೇಗೆ. ಎಲ್ಲೆಲ್ಲಿ ನೋಡಿದರು ಬುದ್ಧಿಗಳು, ಬೆಟ್ಟಗುಡ್ಡಗಳು ಇದನ್ನು ಹೇಗೆ ಸ್ವಚ್ಛ ಮಾಡುವುದು ಎಂದು ದಿಗ್ಭ್ರಾಂತಿಗೆ ಒಳಗಾಗುತ್ತಾರೆ. ಇದು ನನ್ನ ಕೈಯಲ್ಲಿ ಸಾಧ್ಯವಾಗದ ಕೆಲಸವೆಂದು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ.


"ಆಗ ಗೋಮಾತೆ ಕಾಮಧೇನು ಸಗಣಿಯನ್ನು" ಹಾಕಿ ಹೋಗುವುದನ್ನು ಕಾಣುತ್ತಾರೆ. ಇದನ್ನು ನೋಡಿದ ಅವರಿಗೆ ಒಂದು ಆಲೋಚನೆ ಬರುತ್ತದೆ. ಕೈಲಾಸದಲ್ಲಿ ಇರುವಂತಹ ಹೆಣ್ಣು ಮಕ್ಕಳನ್ನು ಕರೆದು, ಸಗಣಿಯನ್ನು ಶೇಖರಿಸಿ ಅದರಿಂದ ಕೈಲಾಸವನ್ನು ಸಾರಿಸಿ, ಗುಡಿಸಿ ರಂಗೋಲಿ ಇಂದ ಅಲಂಕರಿಸಿ, ಹೆಬ್ಬಾಗಿಲಿನಲ್ಲಿ ತಳಿರು ತೋರಣದಿಂದ ಸಿಂಗಾರಗೊಳಿಸುತ್ತಾರೆ.


ಅಲಂಕಾರ ಮಾಡಿಕೊಂಡು ಬಂದ ವಿಷ್ಣು


ಆಗ ಮರುದಿನ ವೈಕುಂಠ ವಾಸಿಯಾದ ವಿಷ್ಣುವು ಕೈಲಾಸಕ್ಕೆ ಬರುವಂತಹ ವೇಳೆಯಲ್ಲಿ, ಅಷ್ಟೈಶ್ವರ್ಯವನ್ನು ಅಲಂಕಾರ ಮಾಡಿಕೊಂಡು, ಸುಗಂಧ ದ್ರವ್ಯಗಳಿಂದ. ಶಂಕು,ಚಕ್ರ ಗದ, ಪುಷ್ಪ, ಹಸ್ತಗಳಿಂದ ವಿರಾಜಿಸುತ್ತ ಗರುಡ ರೂಢನಾಗಿ ಕೈಲಾಸಕ್ಕೆ ಬರುತ್ತಾರೆ.


ಇದನ್ನೂ ಓದಿ: Tirumala: ತಿರುಪತಿ ತಿಮ್ಮಪ್ಪನ ದರ್ಶನಕ್ಕಿರುವ ಮೆಟ್ಟಿಲು ದಾರಿ ಬಂದ್​; ಟಿಟಿಡಿ ಸೂಚನೆ


ಪರಶಿವನು ಮತ್ತು ಆತನ ಸಂಗಡಿಗರು ಎಲ್ಲರೂ ಬಂದು ವಿಷ್ಣುವನ್ನು ಭವ್ಯ ದಿಂದ ಸ್ವಾಗತಿಸುವಾಗ ವಿಷ್ಣುವು ಕೇಳುತ್ತಾರಂತೆ ಎಲ್ಲಿಂದ ಬರುತ್ತಿದೆ ಈ ವಾಸನೆ ಇಷ್ಟೊಂದು ಸುಗಂಧವಾದ ಪರಿಮಳ ಎಂದು ತನ್ನನ್ನು ತಾನೇ ಮರೆತು ಆ ಪರಿಮಳಕ್ಕೆ ಮನಸೋತು ನಿಂತಿರುತ್ತಾರೆ.


ಪರಿಮಳವನ್ನು ಹುಡುಕುವ ಕೆಲಸ


ಆಗ ಪರಶಿವನು ಬೃಂಗಿಯನ್ನು ಕರೆದು ಎಲ್ಲಿಂದ ಬರುತ್ತಿದೆ ಈ ಪರಿಮಳ ಹೇಗೆ ಸಾಧ್ಯವಾಯ್ತು ಇದೆಲ್ಲಾ ಅಂತ ಕೇಳುತ್ತಾರೆ. ಬೃಂಗಿಯು ಗೋವು- ವಿಂದಾ (ವಿಂದಾ ಅಂದರೆ ಸಂಸ್ಕೃತದಲ್ಲಿ ಸಗಣಿ ಎಂದು ಅರ್ಥ)ದಿಂದ ಬರುತ್ತಿರುವಂತಹ ಸುಗಂಧ ಪರಿಮಳ ಎಂದು ಹರ-ಹರಿ ಶ್ರೀ ವಿಷ್ಣುವಿಗೆ ಹೇಳುತ್ತಾರೆ.


ಇದನ್ನೂ ಓದಿ: Tirumala Brahmotsavam 2020: ತಿರುಪತಿ ತಿರುಮಲದಲ್ಲಿ ಅದ್ದೂರಿ ಬ್ರಹ್ಮೋತ್ಸವ; ದೃಶ್ಯ ನೋಡಿ ಕಣ್ತುಂಬಿಕೊಳ್ಳಿ


ಅಲ್ಲಿ ನೆರೆದಿದ್ದ ಜನಗಳು ಜೋರು ಧ್ವನಿಯಲ್ಲಿ ಗೋವು+ವಿಂದಾ ಸೇರಿಸಿ ಗೋವಿಂದಾ- ಗೋವಿಂದಾ- ಗೋವಿಂದ ಎಂದು ಕರೆಯುತ್ತಾರೆ. ವೈಕುಂಠ ಪತಿ ಆದ ಶ್ರೀಮಾನ್ ನಾರಾಯಣನು ಸಂತೋಷಭರಿತನಾಗಿ ಇದೇ ವೈಕುಂಠ, ಇದೇ ಕೈಲಾಸ ಎಂದು ಅಲ್ಲಿದ್ದ ಜನಗಳಿಗೆ ಆಶೀರ್ವಾದ ಮಾಡುತ್ತಾರೆ.


ಅದಕ್ಕೇ ಗೋವಿಂದಾ....ಗೋವಿಂದ


ಇದನ್ನು ಕಂಡ ಪರಶಿವನು ಇನ್ನು ಮುಂದೆ ಕಲಿಯುಗದಲ್ಲಿ ನಿನ್ನನ್ನು ಗೋವಿಂದ - ಗೋವಿಂದ ಎಂದು ಎಲ್ಲರು ಕರೆಯುತ್ತಾರೆ. ಗೋವಿಂದ ಗೋವಿಂದ ಎಂದು ನಾಮ ಸ್ಮರಣೆ ಮಾಡಿದ ಭಕ್ತರಿಗೆ ಮುಕ್ತಿ ಸಿಗಲಿ ಎಂದು ಹೇಳುತ್ತಾರೆ.


ಕೈಲಾಸಕ್ಕೆ ಬಂದಂತ ವಿಷ್ಣುವಿಗೆ ಪರಶಿವನೆ ಗೋವಿಂದ ಎಂದು ನಾಮಕರಣ ಮಾಡಿದರು. ಹೀಗಾಗಿ ತಿರುಪತಿ ತಿಮ್ಮಪ್ಪನ ಪಾದಕ್ಕೆ ಗೋವಿಂದ ಗೋವಿಂದ ಎಂದು ಜಗತ್ತು ಹಾಗೂ ದೇವಾನುದೇವತೆಗಳು ಕೊಂಡಾಡುತ್ತಿದ್ದಾರೆ. ಇದು ತಿರುಪತಿ ತಿಮ್ಮಪ್ಪನಿಗೆ ಗೋವಿಂದ ನಾಮ ಹೇಗೆ ಬಂತು ಅನ್ನೊದರ ಹಿಂದಿನ ಕಥೆಯಾಗಿದೆ. ಈ ಕತೆ ತಿಳಿಯದೆ ಇದ್ದರೂ ಭಕ್ತರು ಭಕ್ತಿಯಿಂದಲೇ ಗೋವಿಂದ ನಾಮಸ್ಮರಣೆ ಮಾಡುತ್ತಾರೆ.

Published by:Soumya KN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು