ಇಂದಿನಿಂದ ಅಂದರೆ ಡಿಸೆಂಬರ್ 16ರಿಂದ ಪವಿತ್ರ ಧನುರ್ಮಾಸ (Dhanuramasa) ಆರಂಭವಾಗುತ್ತದೆ. ಇಂದಿನಿಂದ ಸೂರ್ಯ (Sun) ಧನು ರಾಶಿ ಪ್ರವೇಶಿಸುತ್ತಾನೆ. ಇದೇ ಕಾರಣಕ್ಕೆ ಈ ದಿನವನ್ನು ಧನು ಸಂಕ್ರಾಂತಿ ಎಂದು ಕರೆಯಲಾಗುವುದು. ಈ ಧನುರ್ಮಾಸ ಒಂದು ತಿಂಗಳ ಕಾಲ ಇರಲಿದೆ. ಪವಿತ್ರ ಮಾಸ ಎಂದು ಈ ಸಮಯವನ್ನು ಕರೆಯಲಾದರೂ ಶುಭ ಸಮಾರಂಭಗಳನ್ನು (Auspicious Work) ಈ ಸಮಯದಲ್ಲಿ ಮಾಡಬಾರದು ಎಂಬ ನಿಯಮವಿದೆ. ಜನವರಿ 14ರವರೆಗೆ ಈ ಮಾಸ ಇರಲಿದ್ದು, ಈ ಸಂದರ್ಭದಲ್ಲಿ ಕೆಲವು ಮಂಗಳ ಕಾರ್ಯ ಮಾಡುವುದು ನಿಷಿದ್ಧವಾಗಿದೆ.
ಶುಭ ಸಮಾರಂಭಕ್ಕೆ ತಡೆ
ಇನ್ನು ಧನುರ್ಮಾಸ ಪವಿತ್ರ ಮಾಸ ಎಂದು ಪರಿಗಣಿಸಲಾಗಿದ್ದರೂ ಶುಭ ಕಾರ್ಯಗಳಿಗೆ ಈ ತಿಂಗಳು ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಇದಕ್ಕೆ ಕಾರಣ ಸೂರ್ಯನ ಚಲನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಸೂರ್ಯನ ಚಲನೆ ನಿಧಾನವಾಗಿರುವುದಲ್ಲದೇ, ಗುರುವಿನ ಮೇಲೆ ಪರಿಣಾಮ ಕಡಿಮೆ ಇರುತ್ತದೆ. ಈ ಸಮಯದಲ್ಲಿ ದೇವರ ಪೂಜೆಗಳ ಹೊರತಾಗಿ ಮಂಗಳ ಕಾರ್ಯಗಳಿಗೆ ನಿಷೇಧ ಹೇರಲಾಗಿದೆ. ಈ ಸೂರ್ಯನ ಚಲನೆ ಮಕರ ಸಂಕ್ರಾಂತಿಗೆ ಅಂದರೆ, ದ್ವಾದಶಿಯ ಬಳಿಕ ಜನವರಿ 14ರ ಬಳಿಕ ಯಥಾವತ್ತಾಗಲಿದೆ. ಮಕರ ಸಂಕ್ರಾಂತಿ ಸಮಯದಲ್ಲಿ ಸೂರ್ಯನ ದಿಕ್ಕು ಬದಲಾಗಲಿದೆ.
ಇದನ್ನು ಓದಿ: ಕಾರ್ ವಾಸ್ತು ಬಗ್ಗೆ ಕೂಡ ಇರಲಿ ಗಮನ; ವಾಹನದಲ್ಲಿ ಈ ವಸ್ತುಗಳಿದ್ದರೆ ಶುಭ
ಯಾವ ಕಾರ್ಯಗಳಿಗೆ ನಿಷಿದ್ಧ
ಮದುವೆ, ನಿಶ್ಚಿತಾರ್ಥ, ವಧು- ವರ ಅನ್ವೇಷಣೆಯಂತಹ ಶುಭ ಕಾರ್ಯವನ್ನು ಈ ಮಾಸದಲ್ಲಿ ಮಾಡಬಾರದು
ಹೊಸ ಮನೆ ಕಟ್ಟುವುದು, ಗೃಹ ಖರೀದಿ ಕೂಡ ಮಾಡಬಾರದು. ಈ ಸಮಯದಲ್ಲಿ ಗೃಹ ಪ್ರವೇಶ ಮಾಡಿದರೆ ಅಲ್ಲಿ ಸುಖ ಶಾಂತಿ ಅಷ್ಟಾಗಿ ನೆಲೆಸುವುದಿಲ್ಲ ಎಂಬ ನಂಬಿಕೆ ಇದೆ
ಹೊಸ ಉದ್ಯೋಗ ಅಥವಾ ಉದ್ಯಮಗಳ ಆರಂಭ ಮಾಡಿದರೆ, ಹಣಕಾಸಿನ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.
ಇಷ್ಟೇ ಅಲ್ಲದೇ, ದೇವರಿಗೆ ಮುಡಿ ನೀಡುವುದು. ವಿಶೇಷ ಪೂಜೆ- ಪುನಸ್ಕಾರ ಮಾಡವುದು ಈ ಮಾಸದಲ್ಲಿ ಶುಭವಲ್ಲ
ಯಾಕೆ ಮಂಗಳ ಕಾರ್ಯಕ್ಕೆ ಈ ಮಾಸದಲ್ಲಿ ತಡೆ
ಧನು ರಾಶಿಯ ಅಧಿಪತಿ ಗುರು. ಗುರು ಗ್ರಹವು ತನ್ನದೇ ಆದ ರಾಶಿಚಕ್ರದಲ್ಲಿ ಪ್ರವೇಶಿಸುವುದು ವ್ಯಕ್ತಿಗೆ ಒಳ್ಳೆಯದಲ್ಲ. ಇದು ಸಂಭವಿಸಿದಾಗ ಸೂರ್ಯನು ದುರ್ಬಲನಾಗುತ್ತಾನೆ. ಸೂರ್ಯನ ಸ್ವಭಾವವು ಈ ಮಾಸದಲ್ಲಿ ವಿರೂಪಗೊಂಡಿರುತ್ತದೆ. ಇದೇ ಕಾರಣಕ್ಕೆ ಶುಭ ಕಾರ್ಯ ಮಾಡಬಾರದು.
ಇದನ್ನು ಓದಿ: ಹರಿದ್ವಾರಕ್ಕಿಂತಲೂ ವಿಭಿನ್ನ ವಾರಣಾಸಿಯ ಗಂಗಾ ಆರತಿ; ಪೌರಣಿಕ ಹಿನ್ನಲೆ ಇಲ್ಲಿದೆ
ಸೂರ್ಯನ ಚಲನೆ ನಿಧಾನವಾದ ಪೌರಣಿಕ ಮಾಹಿತಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಳು ಕುದುರೆಗಳ ರಥದಲ್ಲಿ ವೇಗವಾಗಿ ಸಾಗುವ ಸೂರ್ಯದೇವ ವರ್ಷದ ಪ್ರದಕ್ಷಿಣೆ ವೇಳೆಯಲ್ಲಿ ಯಾವುದೇ ಸಮಯದಲ್ಲಿ ನಿಲ್ಲುವುದಿಲ್ಲ. ಸತತ ವೇಗವಾಗಿ ಚಲಿಸುವ ಸೂರ್ಯನ ಈ ಕುದುರೆಗಳು ಈ ಮಾಸದಲ್ಲಿ ದಣಿಯುತ್ತವೆ. ವಿಶ್ರಾಂತಿ ಇಲ್ಲದೇ ಕಷ್ಟಪಡುತ್ತಿದ್ದ ಕುದುರೆಗಳನ್ನು ಸೂರ್ಯದೇವ ಕೊಳದ ಬಳಿ ನೀರು ಕುಡಿಯಲು ಕೊಂಡೊಯ್ಯುತ್ತಾನೆ. ಈ ವೇಳೆ ತನ್ನ ರಥ ನಿಂತರೆ ಆಪತ್ತು ಎಂಬುದನ್ನು ಅರಿತಿದ್ದ ಸೂರ್ಯ ದೇವ ತಕ್ಷಣಕ್ಕೆ ಕೊಳದ ಬಳಿ ತನ್ನ ಕುದುರೆ ಬಿಟ್ಟು, ಅಲ್ಲಿಯೇ ನೀರು ಕುಡಿಯುತ್ತಿದ್ದ ಕತ್ತೆಗಳನ್ನು ತನ್ನ ರಥಕ್ಕೆ ಕಟ್ಟುತ್ತಾನೆ. ಈ ವೇಳೆ ಭಾರವಾದ ರಥವನ್ನು ಕತ್ತೆಗಳು ನಿಧಾನವಾಗಿ ಎಳೆಯುತ್ತವೆ. ಹೀಗೆ ಕತ್ತೆಗಳ ನಿಧಾನ ಚಲನೆ ಮೂಲಕ ಒಂದು ತಿಂಗಳು ರಥವನ್ನು ಕತ್ತೆಗಳು ಎಳೆದ ಬಳಿಕ ಕುದುರೆಗಳನ್ನು ತನ್ನ ರಥಕ್ಕೆ ಕಟ್ಟುತ್ತಾನೆ. ಇದೇ ಕಾರಣಕ್ಕೆ ಈ ಮಾಸದಲ್ಲಿ ಸೂರ್ಯನ ಚಲನೆ ನಿಧಾನವಾಗುತ್ತದೆ ಎಂಬ ನಂಬಿಕೆ ಇದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ