ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ದಿಕ್ಕು ಬೇರೆ ಬೇರೆ ದೇವತೆಗಳ ಆಧೀನದಲ್ಲಿರುತ್ತದೆ. ಪ್ರತಿ ದಿಕ್ಕಿನ ಚಿಹ್ನೆಗಳು, ಗ್ರಹಗಳು, ಅಂಶಗಳು ಮತ್ತು ವಿವಿಧ ಬಣ್ಣಗಳನ್ನು ಸಹ ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ನಾವು ವಾಸ್ತುವನ್ನು ಗಮನಿಸಿದೇ ಮನೆಯನ್ನು ಖರೀದಿ ಮಾಡುವುದು ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುತ್ತದೆ. ಹಾಗಾಗಿ ಯಾವಾಗಲೂ ಮನೆಕಟ್ಟುವಾಗ ಮತ್ತು ಖರೀದಿ ಮಾಡುವಾಗ ವಾಸ್ತು ನೋಡುವುದು ಮುಖ್ಯ.
ಹೊಸ ಮನೆಯನ್ನು ಖರೀದಿಸುವಾಗ ಜನರು ಎಲ್ಲಾ ರೀತಿಯ ಅಂಶಗಳನ್ನು ಗಮನಿಸುತ್ತಾರೆ. ಭೂಮಿ, ವಿಸ್ತೀರ್ಣ, ಹಣ ಹೀಗೆ ಇದರ ಜೊತೆಗೆ ಮನೆಯ ವಾಸ್ತು ವಿಚಾರವಾಗಿ ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಮುಖ್ಯ ವಿಷಯವೆಂದರೆ ಮನೆಯ ದಿಕ್ಕು.
ಸಾಮಾನ್ಯವಾಗಿ ಪ್ರತಿಯೊಬ್ಬರು ಮನೆಯು ಪೂರ್ವ ದಿಕ್ಕಿಗೆ ಇರಬೇಕು ಎಂದು ಬಯಸುತ್ತಾರೆ, ಹಾಗೆಯೇ ದಕ್ಷಿಣ ದಿಕ್ಕಿಗೆ ಇರಬಾರದು ಎನ್ನುವ ನಂಬಿಕೆ ಇದೆ. ದಕ್ಷಿಣ ದಿಕ್ಕಿನ ಮನೆಯನ್ನು ಖರೀದಿಸಲು ಜನರು ಹಿಂದೇಟು ಹಾಕಲು ಶತಮಾನಗಳ ಹಳೆಯ ತಪ್ಪು ಕಲ್ಪನೆಗಳು ಕಾರಣವಾಗಿವೆ ಎನ್ನಬಹುದು. ಆಧರೂ ಸಹ ಕೆಲವರಿಗೆ ದಕ್ಷಿಣಾಭಿಮುಖವಾಗಿ ಇರುವ ಮನೆ ಒಳ್ಳೆಯದಲ್ಲ.
ಇದನ್ನೂ ಓದಿ: ಮನೆಯ ಬಾಗಿಲ ಎದುರಿಗೆ ಈ ವಸ್ತುಗಳನ್ನು ಇಟ್ರೆ ಲಕ್ಷ್ಮೀ ಕೃಪೆ ಇರುತ್ತಂತೆ
ಇನ್ನು ವಾಸ್ತು ಶಾಸ್ತ್ರದ ಪ್ರಕಾರ, ಯಮ ದಕ್ಷಿಣ ದಿಕ್ಕಿನ ಅಧಿಪತಿ ಮತ್ತು ಈ ದಿಕ್ಕಿನ ಗ್ರಹ ಮಂಗಳ, ಕೆಲವರಿಗೆ ಈ ಮಂಗಳಗ್ರಹ ಒಳ್ಳೆಯದಲ್ಲ. ಇದರಿಂದ ದಕ್ಷಿಣ ಮುಖವಾಗಿ ಬಾಗಿಲು ಇದ್ದರೆ ಮನೆಯವರಿಗೆ ಕೆಲವು ಆರ್ಥಿಕ ಮತ್ತು ಆರೋಗ್ಯದ ಸಮಸ್ಯೆಗಳು ನಿರಂತರವಾಗಿ ಕಾಡುತ್ತದೆ.
ವಾಸ್ತು ಪ್ರಕಾರ ಮನೆ ಹೇಗಿರಬೇಕು?
ಹಾಗೆಯೇ, ಲಕ್ಷ್ಮಿಯು ಬಾಗಿಲಿನ ಮೂಲಕ ಪ್ರವೇಶಿಸುವುದರಿಂದ ವಾಸ್ತು ಶಾಸ್ತ್ರದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಬಾಗಿಲು ವಾಸ್ತುಶಾಸ್ತ್ರದ ಪ್ರಕಾರ ಇದ್ದರೆ, ಅದು ಅನೇಕ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಮನೆಯ ಮುಖ್ಯ ಬಾಗಿಲು ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಇದ್ದರೆ, ಧನಾತ್ಮಕ ಶಕ್ತಿ ಅಂದರೆ ಸಂತೋಷ ಮತ್ತು ಸಮೃದ್ಧಿ (ಲಕ್ಷ್ಮಿ) ಮನೆಗೆ ಬರುತ್ತದೆ. ನಮ್ಮ ಮನೆಯಲ್ಲಿ ಆರೋಗ್ಯ, ಸಂತೋಷ, ಯಶಸ್ಸು ಮತ್ತು ಅದೃಷ್ಟ ಎಲ್ಲವೂ ವೃದ್ಧಿಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಮುಖ್ಯ ಬಾಗಿಲು ವಸ್ತುವಿನ ನಿಯಮಗಳಿಗೆ ವಿರುದ್ಧವಾಗಿದ್ದರೆ, ಅದು ಕೆಟ್ಟ ಶಕ್ತಿಯನ್ನು ಆಹ್ವಾನಿಸುತ್ತದೆ ಈ ದಕ್ಷಿಣ ದ್ವಾರದ ಮೂಲಕ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಮನೆಯಲ್ಲಿ ಹಣ ಉಳಿಯುವುದಿಲ್ಲ, ನಿರಂತರ ಆರೋಗ್ಯ ಸಮಸ್ಯೆ, ಜಗಳ, ವಾದ-ವಿವಾದಗಳು, ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಆಗಾಗ ಒಡೆಯುವುದು ಹೀಗೆ ಅನೇಕ ರೀತಿಯಲ್ಲಿ ನಮಗೆ ಇದು ತೊಂದರೆ ಮಾಡುತ್ತದೆ.
ಇದನ್ನೂ ಓದಿ: ಮನೆಯ ಈ ಸ್ಥಳದಲ್ಲಿ ಡ್ರೀಮ್ ಕ್ಯಾಚರ್ ಹಾಕಿ, ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತೆ
ದಕ್ಷಿಣಾಭಿಮುಖವಾಗಿ ಮನೆ ಇದ್ದಾಗ ಕೆಲ ಟಿಪ್ಸ್ ಫಾಲೋ ಮಾಡುವುದು ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ದಕ್ಷಿಣಾಭಿಮುಖವಾಗಿರುವ ಮನೆಯ ಮುಖ್ಯ ಬಾಗಿಲು ಅಥವಾ ಪ್ರವೇಶದ್ವಾರವನ್ನು ದಕ್ಷಿಣಾಭಿಮುಖ ಗೋಡೆ ಅಥವಾ ಪ್ರದೇಶದ ಮಧ್ಯದಲ್ಲಿ ಇಡಬೇಕು. ಮನೆಯ ಶಕ್ತಿಗಳು ಒಂದಕ್ಕೊಂದು ಹೊಂದಿಕೆಯಾಗುವಂತೆ ನೋಡಿಕೊಳ್ಳಿ. ದಕ್ಷಿಣ ದಿಕ್ಕಿನ ಮನೆಗೆ ವಾಸ್ತು ಪ್ರಕಾರ ಮನೆಯ ಮಧ್ಯದ ಎಡಭಾಗದಲ್ಲಿ ಬಾಗಿಲು ಇದ್ದರೆ ಉತ್ತಮ ಎಂದು ಹೇಳಲಾಗುತ್ತದೆ.
(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನ್ಯೂಸ್ 18 ಕನ್ನಡ ಇದನ್ನು ಖಾತರಿಪಡಿಸುವುದಿಲ್ಲ.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ