13th Floor: ಹೋಟೆಲ್‌ಗಳಲ್ಲಿ 13ನೇ ಮಹಡಿ ಇರುವುದಿಲ್ಲ; ಇದಕ್ಕೆ ಕಾರಣ ಗೊತ್ತಾ!

ಬಹುತೇಕ ಮಂದಿ 13ನೇ ತಾರೀಖು ಬರುವ ಶುಕ್ರವಾರದಂದು ಹೊರಗೆ ಹೋಗುವುದು ಶುಭವಲ್ಲ ಎಂದು ನಂಬಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹುಮಹಡಿ (Multi Storey Hotel)   ಹೋಟೆಲ್​ ಆಗಿದ್ದರೂ ನೀವು ತಂಗಿರುವ ಹೋಟೆಲ್‌ನಲ್ಲಿ 13ನೇ ಮಹಡಿ (13th floor) ಏಕಿಲ್ಲ ಎಂದು ಯಾವಾಗಲಾದರೂ ಯೋಚಿಸಿದ್ದೀರಾ..? ಇದಕ್ಕೆ ಕಾರಣ 13ನೇ ಸಂಖ್ಯೆಯನ್ನು ಆಧರಿಸಿದ ಮೂಢನಂಬಿಕೆಯಾಗಿದೆ (Superstition). ಅಲ್ಲದೆ ಟ್ರಿಸ್ಕೈಡೆಕಾಫೋಬಿಯಾ (Triskaidekaphobia) ಅಸ್ವಸ್ಥತೆಯ ಕಾರಣದಿಂದಾಗಿ ಕೂಡ 13 ನೇ ಸಂಖ್ಯೆಯನ್ನು (Number 13) ಅಪಶಕುನ ಎಂದು ಪರಿಗಣಿಸಲಾಗುತ್ತದೆ. ಕೇವಲ 13ನೇ ಸಂಖ್ಯೆಯೊಂದು ಮಾತ್ರವೇ ಅಪಶಕುನ ಅಲ್ಲ. ಬಹುತೇಕ ಮಂದಿ 13ನೇ ತಾರೀಖು ಬರುವ ಶುಕ್ರವಾರದಂದು ಹೊರಗೆ ಹೋಗುವುದು ಶುಭವಲ್ಲ ಎಂದು ನಂಬಿದ್ದಾರೆ. ಹೀಗೆ ಹೊರಗೆ ಹೋದಲ್ಲಿ ಜನರು ತೀವ್ರವಾದ ಆತಂಕದಿಂದ ಬಳಲುತ್ತಾರೆ. ಜೊತೆಗೆ ಅವರು ಕೆಟ್ಟ ಶಕ್ತಿಗಳ ಧ್ವನಿ ಕೇಳಿಬರುತ್ತದೆಂಬ ಭಯ ಕೂಡ ಇದೆ.

13ನೇ ಸಂಖ್ಯೆಯ ಭಯ ಟ್ರಿಸ್ಕೈಡೆಕಾಫೋಬಿಯಾ:

ಟ್ರಿಸ್ಕೈಡೆಕಾಫೋಬಿಯಾ (ಹದಿಮೂರನೆಯ ಸಂಖ್ಯೆಯ ಬಗ್ಗೆ ವಿಪರೀತ ಮೂಢನಂಬಿಕೆ) ಎಂಬುದು 13ರ ಸಂಖ್ಯೆ ಆಧರಿಸಿರುವ ಒಂದು ರೀತಿಯ ಭಯ ಎಂದೂ ಹೇಳಬಹುದು. ಇದನ್ನು ಒಂದು ಮಾನಸಿಕ ಅಸ್ವಸ್ಥತೆ ಎಂದೂ ಕರೆಯಬಹುದು. ಈ ರೀತಿಯ ಮಾನಸಿಕ ಅಸ್ವಸ್ಥತೆ ಹೊಂದಿರುವ ಜನರು ತೀವ್ರ ಆತಂಕದ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ವಾಕರಿಕೆ, ತಲೆತಿರುಗುವಿಕೆ, ಉಸಿರಾಟದಲ್ಲಿ ಪ್ರಯಾಸ, ವೇಗವಾದ ಹೃದಯ ಬಡಿತ, ಬೆವರುವುದು ಹಾಗೂ ಹೆದರಿಕೆಯ ಭಾವನೆಗಳನ್ನು ಪ್ರದರ್ಶಿಸುತ್ತಾರೆ. ಹೋಟೆಲ್‌ಗಳಲ್ಲಿ 13ನೇ ಮಹಡಿಯನ್ನು ತ್ಯಜಿಸುವುದು ಈ ರೀತಿಯ ಅಸ್ವಸ್ಥತೆಯಿಂದ ಬಳಲುವವರಿಗೆ ಸಹಕಾರಿಯಾಗಿದೆ. 13ನೇ ಮಹಡಿಯ ಎಲಿವೇಟರ್‌ಗಳಲ್ಲಿ ಇರುವಾಗ ಇಲ್ಲವೇ ಅಂತಹ ಮಹಡಿಯಲ್ಲಿ ಕೊಠಡಿ ಹೊಂದುವುದರಿಂದ ಉಂಟಾಗುವ ಅಸ್ವಸ್ಥತೆಯಿಂದ ಕಾಪಾಡುತ್ತದೆ.

ಮೂಢನಂಬಿಕೆ ಮತ್ತು 13:

13ನೇ ಸಂಖ್ಯೆಯ ಭಯವು ಹಮ್ಮುರಾಬಿಯ ಕೋಡ್‌ಗಿಂತಲೂ ಹಿಂದಿನದು. ಕೋಡ್ ಬರೆಯುವವರು ಪಟ್ಟಿಯಲ್ಲಿ 13ನೇ ಕಾನೂನನ್ನು ಬಿಟ್ಟುಬಿಟ್ಟಿರುತ್ತಾರೆ. ಹಾಗಾಗಿ ಪಟ್ಟಿಯು ಈ ಸಂಖ್ಯೆಯನ್ನು ಹೊಂದಿಲ್ಲ. ಇನ್ನು ಕೆಲವೊಂದು ಧರ್ಮಗಳಲ್ಲಿ 13ನೇ ಸಂಖ್ಯೆಯನ್ನು ಕೆಟ್ಟದ್ದು ಎಂದು ಭಾವಿಸುತ್ತಾರೆ. ಲೋಕಿಯು 13ನೇ ನಾರ್ಸ್ ದೇವರು ಎಂದು ನಂಬುತ್ತಾರೆ. ಕೊನೆಯ ಭೋಜನಕ್ಕೆ ಕೊನೆಯ 13ನೆಯವನಾಗಿ ಜೂದಾಸ್ ಹಾಜರಾಗಿದ್ದನು ಎಂಬ ನಂಬಿಕೆ ಕೂಡ ಇದೆ. 17ನೇ ಶತಮಾನದವರೆಗೆ ಮೂಢನಂಬಿಕೆಯನ್ನು ಏಕೆ ಪಾಲಿಸಲಾಗುತ್ತಿದೆ ಎಂಬುದು ವ್ಯಕ್ತವಾಗಿಲ್ಲ.

ಇದನ್ನು ಓದಿ: ಆಗ್ನೇಯ ಮೂಲೆಯಲ್ಲಿ ಅಡುಗೆ ಮನೆ ನಿರ್ಮಿಸಿದ ಮಾತ್ರಕ್ಕೆ ಶುಭವಲ್ಲ; ಈ ಅಂಶಗಳ ಬಗ್ಗೆಯೂ ಇರಲಿ ಗಮನ!

ಎಲಿವೇಟರ್‌ಗಳಲ್ಲಿ ಕಾಣೆಯಾಗಿರುವ ಬಟನ್‌ಗಳು:

ಎಲಿವೇಟರ್‌ಗಳಲ್ಲಿ 13ನೇ ಮಹಡಿಯನ್ನು ಕೈಬಿಟ್ಟಿರುವ ಸ್ಪಷ್ಟ ಮನವರಿಕೆ ನಿಮಗೆ ಉಂಟಾಗುತ್ತದೆ. ಮೆಟ್ಟಿಲುಗಳಲ್ಲಿ ಕೂಡ ನೀವು ಇದನ್ನು ಗಮನಿಸಬಹುದು. ಕೆಲವು ಹೋಟೆಲ್‌ಗಳು ಈ ಮಹಡಿಯನ್ನು ಕೊಂಚ ವಿಭಿನ್ನವಾಗಿ ಹೆಸರಿಸುತ್ತಿವೆ. Otis ಎಲವೇಟರ್‌ಗಳ ಪ್ರಕಾರ 85%ನಷ್ಟು ಎಲಿವೇಟರ್‌ಗಳು 13ನೇ ಸಂಖ್ಯೆಯನ್ನು ಬಿಟ್ಟುಬಿಡುತ್ತವೆ ಎಂದಾಗಿದೆ.

ಇದನ್ನು ಓದಿ: ಈ ವಸ್ತುಗಳು ನಿಮ್ಮ ಪರ್ಸ್​ನಲ್ಲಿದ್ದರೆ, ಮೊದಲು ತೆಗಿಯಿರಿ

ಈ ವಿಷಯದ ಹಿಂದಿರುವ ಐತಿಹಾಸಿಕ ಮಹತ್ವವೇನು?

ಎಲ್ಲಾ ಹೋಟೆಲ್‌ಗಳಲ್ಲಿ 13ನೇ ಮಹಡಿಯನ್ನು ಬಿಟ್ಟುಬಿಡುವುದು ತುಲನಾತ್ಮಕವಾಗಿ ಹೊಸದಾದ ಅಂಶವಾಗಿದೆ. 1885ರವರೆಗೆ ಗಗನಚುಂಬಿ ಕಟ್ಟಡಗಳು ಇದ್ದಿರಲಿಲ್ಲ. ಆ ಸಮಯದಲ್ಲೂ ಮೊದಲ ಗಗನಚುಂಬಿ ಕಟ್ಟಡ ಹೋಮ್ ಇನ್ಶೂರೆನ್ಸ್ ಬಿಲ್ಡಿಂಗ್ ಕೇವಲ 12 ಮಹಡಿಗಳನ್ನು ಮಾತ್ರ ಹೊಂದಿತ್ತು. ಸೂಕ್ತವಲ್ಲದ ನೆರಳುಗಳನ್ನು ಪ್ರದರ್ಶಿಸುತ್ತವೆ ಎಂಬ ಕಾರಣದಿಂದ 13ನೇ ಮಹಡಿ ಹಾಗೂ ಅದಕ್ಕೂ ಎತ್ತರದ ಕಟ್ಟಡಗಳನ್ನು ಬಿಟ್ಟುಬಿಡುವ ಸಂಪ್ರದಾಯ ಆರಂಭಗೊಂಡಿತು ಎಂಬುದಾಗಿ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.
First published: