Tulasi: ರಾಕ್ಷಸ ಕುಲದಲ್ಲಿ ಹುಟ್ಟಿದ ವೃಂದಾ ತುಳಸಿಯಾದ ಕಥೆ ಇದು

ರಾಕ್ಷಸ ಕುಲದಲ್ಲಿ ಜನಿಸಿದ ಈಕೆ ಬಾಲ್ಯದಿಂದಲೂ ವಿಷ್ಣುವಿನ ಭಕ್ತೆ. ಅವಳು ಬೆಳೆದಾಗ, ರಾಕ್ಷಸ ಕುಲದಲ್ಲಿಯೇ ರಾಕ್ಷಸ ರಾಜ ಜಲಂಧರನನ್ನು ಮದುವೆಯಾದಳು

ಕಾರ್ತಿಕ ಮಾಸ

ಕಾರ್ತಿಕ ಮಾಸ

  • Share this:
    ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು  ವಿಷ್ಣು (Vishnu) ಮತ್ತು  ತುಳಸಿಯ ಶಾಲಿಗ್ರಾಮ(Shaligram) ರೂಪವನ್ನು ವಿವಾಹವಾಗುತ್ತದೆ. ಅನೇಕ ಜನರು ದ್ವಾದಶಿಯಂದು ತುಳಸಿ ವಿವಾಹವನ್ನೂ(Tulasi Vivah) ಮಾಡುತ್ತಾರೆ. ತುಳಸಿ ವಿಷ್ಣುವಿಗೆ ಬಹಳ ಪ್ರಿಯವಿಷ್ಣುವು ತುಳಸಿ ಇಲ್ಲದೆ ಭೋಗವನ್ನು ಸ್ವೀಕರಿಸುವುದಿಲ್ಲ. ತುಳಸಿ ತನ್ನ ಹಿಂದಿನ ಜನ್ಮದಲ್ಲಿ ರಾಕ್ಷಸ ಕುಲದಲ್ಲಿ ಜನಿಸಿದ್ದಳು. ರಾಕ್ಷಸ ಕುಲದಲ್ಲಿ ಹುಟ್ಟಿದ ನಂತರವೂ ವಿಷ್ಣುವಿಗೆ ವೃಂದಾ ತುಳಸಿಯಾಗು ಹೇಗೆ ಪ್ರಿಯವಾದಳು. 

    ರಾಕ್ಷಸ ಕುಲದಲ್ಲಿ ಹುಟ್ಟಿದ್ದ ವೃಂದಾ

    ತುಳಸಿ (ಸಸ್ಯ) ಅವಳ ಹಿಂದಿನ ಜನ್ಮದಲ್ಲಿ ವೃಂದಾ ಎಂಬ ಹೆಸರಿನಿಂದ ಪರಿಚಿತಳಾಗಿದ್ದಳು ರಾಕ್ಷಸ ಕುಲದಲ್ಲಿ ಜನಿಸಿದ ಈಕೆ ಬಾಲ್ಯದಿಂದಲೂ ವಿಷ್ಣುವಿನ ಭಕ್ತೆ. ಅವಳು ಬೆಳೆದಾಗ, ರಾಕ್ಷಸ ಕುಲದಲ್ಲಿಯೇ ರಾಕ್ಷಸ ರಾಜ ಜಲಂಧರನನ್ನು ಮದುವೆಯಾದಳು
    ಸಮುದ್ರದಿಂದ ಜನಿಸಿದ ಜಲಂಧರ ಎಂಬ ರಾಕ್ಷಸನ ಕೈ ಹಿಡಿದ ವೃಂದಾ ಬಹಳ ಧರ್ಮನಿಷ್ಠೆಯುಳ್ಳವಳಾಗಿದ್ದಳು, ಯಾವಾಗಲೂ ತನ್ನ ಪತಿಗೆ ಸೇವೆ ಸಲ್ಲಿಸುತ್ತಿದ್ದಳು. ಒಮ್ಮೆ ದೇವತೆಗಳಿಗೂ ರಾಕ್ಷಸರಿಗೂ ಯುದ್ಧವಾದಾಗ ಜಲಂಧರನು ಯುದ್ಧಕ್ಕೆ ಹೊರಟಾಗ ವೃಂದಾ ಹೇಳಿದಳು. ಸ್ವಾಮೀ ಯುದ್ಧಕ್ಕೆ ಹೊರಟಿರುವ ನಿಮಗೆ ಯುದ್ಧದಲ್ಲಿ ವಿಜಯಕ್ಕಾಗಿ ಪೂಜೆಯಲ್ಲಿ ಕುಳಿತು ವಿಧಿ ವಿಧಾನಗಳನ್ನು ಮಾಡುತ್ತೇನೆ. ನೀವು ಹಿಂದಿರುಗುವವರೆಗೂ ನಾನು ನನ್ನ ಸಂಕಲ್ಪವನ್ನು ಬಿಡುವುದಿಲ್ಲ ಎಂದಳು

    ಪತಿ ಜಲಂಧರನ ಗೆಲುವಿಗಾಗಿ ಸಂಕಲ್ಪ
    ಜಲಂಧರನು ಯುದ್ಧಕ್ಕೆ ಹೋದಾಕ್ಷಣ ವೃಂದಾ ಉಪವಾಸದ ಪ್ರತಿಜ್ಞೆಯನ್ನು ತೆಗೆದುಕೊಂಡು ಪೂಜೆಯಲ್ಲಿ ಕುಳಿತಳು. ಆಕೆಯ ಉಪವಾಸದ ಪ್ರಭಾವದಿಂದ ದೇವತೆಗಳೂ ಕೂಡ ಜಲಂಧರನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಕಡೆಗೆ ಎಲ್ಲ ದೇವರು ವಿಷ್ಣುವಿಗೆ ಈ ಕುರಿತು ತಿಳಿಸಿ ಮನವರಿಕೆ ಮಾಡಿದರು.

    ಈ ವೇಳೆ ತಿಳಿಸಿದ ವಿಷ್ಣು, ವೃಂದಾ ನನ್ನ ಪರಮ ಭಕ್ತೆ, ನಾನು ಅವಳನ್ನು ಮೋಸ ಮಾಡಲಾರೆ. ಆಕೆ ಬೇಡಿಕೆ ಈಡೇರಿಸುವುದು ನನ್ನ ಧರ್ಮ. ಇದರ ಹೊರತು ಬೇರೆ ಉಪಾಯ ಮಾಡಿ ಸಹಾಯ ಮಾಡುವೆ ಎಂದರು. ಇದಾದ ಮೇಲೆ ವಿಷ್ಣುವು ಜಲಂಧರನ ರೂಪವನ್ನು ತಳೆದು ವೃಂದಾದ ಅರಮನೆಯನ್ನು ತಲುಪಿದನು.

    ಇದನ್ನು ಓದಿ: Tulasi Vivah: ತುಳಸಿ ಪೂಜೆಯ ವೇಳೆ ಈ ಮಂತ್ರ ಜಪಿಸಿದರೆ ಕಷ್ಟಗಳು ದೂರ

    ವಿಷ್ಣುವಿಗೆ ಶಾಪವಿದ್ದ ವೃಂದಾ
    ವೃಂದಾ ತನ್ನ ಗಂಡನನ್ನು ನೋಡಿದ ಕೂಡಲೇ ಪೂಜೆಯಿಂದ ಎದ್ದು ಅವನ ಪಾದಗಳನ್ನು ಮುಟ್ಟಿದಳು. ಇಲ್ಲಿ ವೃಂದಾಳ ಸಂಕಲ್ಪ ಭಗ್ನವಾಯಿತು, ಯುದ್ಧದಲ್ಲಿ ದೇವತೆಗಳು ಜಲಂಧರನನ್ನು ಕೊಂದು ಅವನ ತಲೆಯನ್ನು ತುಂಡರಿಸಿದರು. ಜಲಂಧರನ ಕತ್ತರಿಸಿದ ತಲೆಯು ಅರಮನೆಯಲ್ಲಿ ಬಿದ್ದಾಗ, ವೃಂದಾ ಜಲಂಧರನ ರೂಪವನ್ನು ಪಡೆದ ಭಗವಂತನನ್ನು ನೋಡಿ ಆಶ್ಚರ್ಯಗೊಂಡಳು

    ಜಲಂಧರನ ರೂಪ ಕಳಚಿ ವಿಷ್ಣುವು ತನ್ನ ರೂಪದಲ್ಲಿ ಬಂದರೂ ಆಕೆಯ ಮುಂದೆ ಏನನ್ನೂ ಮಾತನಾಡಲು ಸಾಧ್ಯವಾಗಲಿಲ್ಲ. ವೃಂದಾ ಕೋಪಗೊಂಡಳು. ವಿಷ್ಣು ಕಲ್ಲಾಗಲಿ ಎಂದು ಭಗವಂತನನ್ನು ಶಪಿಸಿದಳು. ಇದರಿಂದಾಗಿ ಭಗವಂತನು ತಕ್ಷಣವೇ ಕಲ್ಲಾಗುತ್ತಾನೆ, ಈ ವೇಳೆ ದೇವತೆಗಳ ಪ್ರಾರ್ಥನೆಯ ನಂತರ, ವೃಂದಾ ತನ್ನ ಶಾಪವನ್ನು ಹಿಂತೆಗೆದುಕೊಂಡಳು.

    ಇದನ್ನು ಓದಿ: ತುಳಸಿ ವಿವಾಹದ ದಿನವೇ ಇದೇ ಮತ್ತೊಂದು ಶುಭ ಮುಹೂರ್ತ; ಏನಿದರ ಫಲ

    ತುಳಸಿಯಾದ ವೃಂದಾ
    ನಂತರ ಆಕೆ ಪತಿಯ ರುಂಡು ಪಡೆದ ಸತಿಯಾದಳು. ಆಕೆಯ ಚಿತಾಭಸ್ಮದಿಂದ ಸಸ್ಯ ಹೊರಹೊಮ್ಮಿದಾಗ, ವಿಷ್ಣುವು ಆ ಸಸ್ಯಕ್ಕೆ ತುಳಸಿ ಎಂದು ಹೆಸರಿಸಿದನು. ಈ ವೇಳೆ ವಿಷ್ಣು ಶಾಲಿಗ್ರಾಮ ಎಂಬ ಹೆಸರಿನಲ್ಲಿ ತುಳಸಿಯ ಜೊತೆಗೆ ಪೂಜಿಸಲ್ಪಡುವ ಕಲ್ಲಿನ ರೂಪದಲ್ಲಿ ನಾನು ಸಹ ವಾಸಿಸುತ್ತೇನೆ ಎಂದು ಹೇಳಿದನು.ಅಷ್ಟೇ ಅಲ್ಲ, ತುಳಸಿಯ ಆಸ್ವಾದನೆ ಇಲ್ಲದೆ ನಾನು ಯಾವುದೇ ಶುಭ ಕಾರ್ಯದಲ್ಲಿ ಸ್ವೀಕರಿಸುವುದಿಲ್ಲ ಎಂದರು.

    ಅಂದಿನಿಂದ ತುಳಸಿಯನ್ನು ತಪ್ಪದೇ ವಿಷ್ಣುವಿನ ಪೂಜೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಕಾರ್ತಿಕ ಮಾಸದಲ್ಲಿ ತುಳಸಿಯು ಶಾಲಿಗ್ರಾಮದೊಂದಿಗೆ ತುಳಸಿ ವಿವಾಹವಾಗುತ್ತಾಳೆ. ಅಲ್ಲದೆ, ದೇವ್​ ಉತ್ತಾನಿ ಏಕಾದಶಿಯ ದಿನದಂದು ಇದನ್ನು ತುಳಸಿ ವಿವಾಹ ಎಂದು ಆಚರಿಸಲಾಗುತ್ತದೆ.

    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: