Mythology: ಕೃಷ್ಣನಿಗೆ ಪ್ರಿಯವಾದ ಕೊಳಲು ಕೊಟ್ಟಿದ್ದು ರಾಧ ಅಲ್ಲ, ಮತ್ಯಾರು ಗೊತ್ತಾ?

ತನ್ನ ಕೊಳಲಿನ ಮಾಧುರ್ಯದ ಮೂಲಕವೇ ಎಲ್ಲರನ್ನು ಸೆಳೆಯುವ ಕೃಷ್ಣನಿಗೆ ತನ್ನ ಕೊಳಲು ಕಂಡರೆ ಅಕ್ಕರೆ ಹೆಚ್ಚು.

ಕೃಷ್ಣನ ಕೊಳಲು

ಕೃಷ್ಣನ ಕೊಳಲು

  • Share this:
    ಹಿಂದೂ ಧರ್ಮದಲ್ಲಿ ಅನೇಕರ ದೇವತೆಗಳನ್ನು ತಮ್ಮದೇ ಆದ ವಿಶಿಷ್ಟ ಶಕ್ತಿ ಹೊಂದುವುದರ ಜೊತೆಗೆ ಮಹತ್ವವನ್ನು ಹೊಂದಿದ್ದಾರೆ. ಇನ್ನು ಅನೇಕ ದೇವತೆಗಳು ತಮ್ಮದೇ ಆದ ಸಂಗೀತ ವಾದ್ಯವನ್ನು ಹೊಂದಿರುವುದು ಕಾಣಬಹುದು. ಶಿವನ ಕೈಯಲ್ಲಿ ಡಮರುಗವಿದ್ದರೆ, ಸರಸ್ವತಿ ಕೈಯಲ್ಲಿ ವೀಣೆ ಇದೆ. ಇನ್ನು ಎಲ್ಲರಿಗೂ ಪ್ರಿಯವಾದ ಕೃಷ್ಣನ ಕೈಯಲ್ಲಿ ಕೊಳಲಿದೆ. ತನ್ನ ಕೊಳಲಿನ (Flute) ಮಾಧುರ್ಯದ ಮೂಲಕವೇ ಎಲ್ಲರನ್ನು ಸೆಳೆಯುವ ಕೃಷ್ಣನಿಗೆ (Krishna) ತನ್ನ ಕೊಳಲು ಕಂಡರೆ ಅಕ್ಕರೆ ಹೆಚ್ಚು. ಸದಾ ತನ್ನ ಬಳಿಯೇ ಇಟ್ಟುಕೊಳ್ಳು ಈ ಕೊಳಲನ್ನು ಕೃಷ್ಣನಿಗೆ ಯಾರು ಕೊಟ್ಟರು ಮತ್ತು ಅವನು ಅವನಿಗೆ ಏಕೆ ಪ್ರಿಯ ಎಂದು ಗೊತ್ತಾ?

    ಧರ್ಮ ರಕ್ಷಣೆಗಾಗಿ ಕೃಷ್ಣನ ಜನ್ಮ ತಾಳಿದ ವಿಷ್ಣು
    ಭೂಮಿ ಮೇಲೆ ಅಧರ್ಮ ಜನಿಸಿದಾಗ ವಿಷ್ಣು ವಿವಿಧ ಅವತಾರ ಎತ್ತಿ ಜನಿಸಿದ ಎಂದು ಪುರಾಣಗಳು ತಿಳಿಸುತ್ತದೆ. ಅದೇ ರೀತಿ ವಿಷ್ಣು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನ ಅವತಾರದಲ್ಲಿ ಭೂಮಿಯ ಮೇಲೆ ಜನಿಸಿದ. ಹೀಗೆ ಧರ್ಮ ರಕ್ಷಣೆಗೆ ಜನಿಸಿದ ವಿಷ್ಣು ಸ್ವರೂಪಿ ಕೃಷ್ಣ ಭೇಟಿ ಮಾಡಲು ಎಲ್ಲಾ ದೇವತೆಗಳು ತಮ್ಮ ರೂಪವನ್ನು ಬದಲಾಯಿಸು ಬರುತ್ತಿದ್ದರು. ಹೀಗೆ ಒಂದು ದಿನ ಶಿವ ಕೂಡ ಶ್ರೀ ಕೃಷ್ಣನನ್ನು ಭೇಟಿಯಾಗಲು ನಿರ್ಧರಿಸಿದ. ವಿಷ್ಣು ಮತ್ತು ಶಿವನ ಸ್ನೇಹ ಹೆಚ್ಚು ಗಾಢವಾಗಿದ್ದ ಹಿನ್ನಲೆ ಕೃಷ್ಣ ಸ್ವರೂಪಿ ವಿಷ್ಣುವಿನ ಭೇಟಿ ವೇಳೆ ವಿಶೇಷ ಉಡುಗೊರೆ ನೀಡಲು ಈಶ್ವರ ನಿರ್ಧರಿಸಿದ.

    ಶಿವ ಕೊಟ್ಟ ಉಡುಗೊರೆಯೇ ಈ ಕೊಳಲು

    ಈ ವೇಳೆ ಕೃಷ್ಣ ಸದಾ ಜೊತೆಯಲ್ಲಿ ಇಟ್ಟುಕೊಳ್ಳಬಹುದಾದ ಪ್ರಿಯವಾದ ಉಡುಗೊರೆ ನೀಡಬೇಕು ಎಂದು ಶಿವ ನಿರ್ಧರಿಸಿದಾಗ ಹೊಳೆದಿದ್ದೆ ಈ ಕೊಳಲು. ಕೊಳಲಿನ ಮೂಲಕ ಸುಶ್ರಾವ್ಯ ನಾದ ಮಾತ್ರವಲ್ಲದೇ ಅದು ಧರ್ಮ ರಕ್ಷಣೆಯ ಪ್ರತೀಕವಾಗಿ ಇರಬೇಕು ಎಂದು ಶಿವ ನಿರ್ಧರಿಸಿದರಂತೆ. ಅಂತಹ ಕೊಳಲು ಹೇಗೆ ಮಾಡುವುದು ಎಂದು ಕೊಂಡಾಗ ಶಿವನು ತನ್ನ ಬಳಿ ಋಷಿ ದಧೀಚಿಯ ಮಹಾಶಕ್ತಿಯ ಅಸ್ಥಿಗಳನ್ನು ಇಟ್ಟುಕೊಂಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.

    ಇದನ್ನು ಓದಿ: Chanakya Niti: ಜೀವನದ ಯಶಸ್ಸಿಗೆ ಕತ್ತೆಯ ಈ ಪಾಠ ನೆನಪಿನಲ್ಲಿಡಬೇಕಂತೆ

    ಋಷಿ ದಧೀಚಿ ಮೂಳೆಯಿಂದ ನಿರ್ಮಿತವಾದ ಕೊಳಲು
    ಋಷಿ ದಧೀಚಿ ಧರ್ಮದ ಸಲುವಾಗಿ ತನ್ನ ದೇಹವನ್ನು ತ್ಯಾಗ ಮಾಡಿದ ಮತ್ತು ತನ್ನ ಮಹಾಶಕ್ತಿಯ ದೇಹದ ಎಲ್ಲಾ ಮೂಳೆಗಳನ್ನು ದಾನ ಮಾಡಿದ ಎಂದು ಹೇಳಲಾಗುತ್ತದೆ. ಈ ಮೂಳೆಗಳಿಂದ ವಿಶ್ವಕರ್ಮನು ಮೂರು ಬಿಲ್ಲುಗಳನ್ನು ಮಾಡಿದನು, ಮೊದಲ ಪಿನಾಕ, ಎರಡನೆಯ ಗಾಂಡೀವ ಮತ್ತು ಮೂರನೆಯ ಶಾರಂಗ.

    ಇದನ್ನು ಓದಿ: ಕೈಯಲ್ಲಿನ ಈ ರೇಖೆಯ ಪರಿಣಾಮವಾಗಿ ವಿದೇಶ ಪ್ರವಾಸದ ಭಾಗ್ಯ ಅಂತೆ!

    ಭಗವಾನ್ ಶಿವನು ಆ ಮೂಳೆಗಳನ್ನು ಪುಡಿಮಾಡಿ ಸುಂದರವಾದ ಕೊಳಲನ್ನು ಮಾಡಿದನು. ಶ್ರೀ ಕೃಷ್ಣನನ್ನು ಭೇಟಿಯಾಗಲು ಭೂಮಿಗೆ ಬಂದಾಗ, ಆ ಕೊಳಲನ್ನು ಶ್ರೀ ಕೃಷ್ಣನಿಗೆ ಉಡುಗೊರೆಯಾಗಿ ನೀಡಿ, ಆಶೀರ್ವದಿಸಿದರು. ಅಂದಿನಿಂದ ಶ್ರೀಕೃಷ್ಣನು ಯಾವಾಗಲೂ ಆ ಕೊಳಲನ್ನು ತನ್ನ ಬಳಿ ಇಟ್ಟುಕೊಳ್ಳುತ್ತಾನೆ. ಈ ಕೊಳಲನ್ನು ಶಿವನು ಅವನಿಗೆ ಕೊಟ್ಟನು, ಆದ್ದರಿಂದ ಅದು ಅವನಿಗೆ ಪ್ರಿಯವಾಯಿತು.

    ಮೂರು ಲೋಕಗಳನ್ನು ಮಾರ್ದನಿಸುತ್ತಿದ್ದ ನಾದ

    ಕೃಷ್ಣನು ತನ್ನ ಕೊಳಲನ್ನು ನುಡಿಸಿದಾಗ, ಶಬ್ದವು ಬ್ರಹ್ಮ, ಭ ಶಿವ ಮತ್ತು ಮೂರು ಲೋಕಗಳಲ್ಲಿರುವ ಎಲ್ಲಾ ಚಲಿಸಬಲ್ಲ ಮತ್ತು ಚಲನರಹಿತ ಘಟಕಗಳನ್ನು ಮಂತ್ರಮುಗ್ಧಗೊಳಿಸುತ್ತಿತ್ತಂತೆ. ಅಲ್ಲದೇ ಕೃಷಣ ತನ್ನ ಕೊಳಲು ನುಡಿಸುವ ಶಬ್ದವು ತನ್ನ ಸುತ್ತಲೂ ಸೇರಲು ಭಕ್ತರಿಗೆ ಅವರ ಕರೆಯಾಗಿತು. ಅವರ ಕೊಳಲಿನ ಮಧುರವಾದ ಸಂಗೀತದ ಧ್ವನಿಯು ವೃಂದಾವನದ ಪ್ರತಿಯೊಬ್ಬ ನಿವಾಸಿಗೆ ತಕ್ಷಣವೇ ಎಲ್ಲವನ್ನೂ ಬಿಟ್ಟು ಅವನ ಬಳಿಗೆ ಓಡಿ ಬರುತ್ತಿದ್ದರು. ಇದು ವೃಂದಾವನದ ಎಲ್ಲಾ ನಿವಾಸಿಗಳನ್ನು ದೈವಿಕ ಆನಂದದಲ್ಲಿ ನೀಡುತ್ತಿತ್ತಂತೆ.

    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: