Astrology: ಈ ರಾಶಿಗಳ ಜನರು ಹೆಚ್ಚು ಸೋಮಾರಿಗಳಂತೆ.. ಯಾವುವು ಗೊತ್ತಾ ಈ ರಾಶಿಗಳು?

Laziest Zodiac Sign : ಈ ರಾಶಿಯವರು ಸೋಮಾರಿಗಳಾದರೂ ಹೆಚ್ಚು ಕ್ರಿಯಾಶೀಲತೆ ಇವರಲ್ಲಿ ಇರುತ್ತದೆ. ಇವರು ಅನಿವಾರ್ಯ ಪರಿಸ್ಥಿತಿ ಎದುರಾದಾಗ ಮಾತ್ರ ಕೆಲಸ ಮಾಡಲು  ಸಿದ್ಧರಾಗುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನುಷ್ಯನ ಸ್ವಭಾವ ಬಹಳ ವಿಭಿನ್ನ, ಯಾವ ವ್ಯಕ್ತಿಗಳ ಸ್ವಭಾವವೂ ಒಂದೇ ತರಹ ಇರುವುದಿಲ್ಲ. ಕೆಲವರು ಹೆಚ್ಚು ಕೊಪ ಮಾಡಿಕೊಂಡರೆ ಕೆಲವರು ಶಾಂತ ಸ್ವಭಾವ. ಕೆಲವರು ತುಂಬಾ ಚಟುವಟಿಗೆಗಳನ್ನು ಮಾಡಲು ಇಷ್ಟಪಟ್ಟರೆ, ಇನ್ನು ಕೆಲವರು ಆಲಸಿಗಳು ಅಂದರೆ ಹೆಚ್ಚು ಸೋಮಾರಿಗಳಾಗಿರುತ್ತಾರೆ. ಇನ್ನು ರಾಶಿಗಳ ಅನುಸಾರವಾಗಿ ಜನರ ಸ್ಭಾಭಾವ ಮತ್ತು ಗುಣಗಳು ಬದಲಾಗುತ್ತದೆ. ಕೆಲವು ರಾಶಿಯವರು ಅಧಿಕ ಶ್ರಮ ವಹಿಸಿ ದುಡಿಯುತ್ತಾರೆ. ಅದೇ ಕೆಲವು ರಾಶಿಯವರು ಯಾವುದೇ ಪರಿಶ್ರಮವಿಲ್ಲದೆ ಜೀವನ ನಡೆಸಲು ಬಯಸುತ್ತಾರೆ. ಕೆಲವು ರಾಶಿಯ ಜನರು ಹೆಚ್ಚು ಸೋಮಾರಿಗಳಾಗಿರುತ್ತಾರೆ, ಹಾಗಾದ್ರೆ ಯಾವ ರಾಶಿಯವರು ಹೆಚ್ಚು ಸೋಮಾರಿಗಳು ಎಂಬುದು ಇಲ್ಲಿದೆ.

ವೃಷಭ ರಾಶಿ

ವೃಷಭ ರಾಶಿಯವರು ವಿಚಿತ್ರ ಸ್ವಭಾವದವರು, ಅವರು ಕೆಲಸ ಮಾಡಬೇಕು ಎಂದು ಬಯಸುತ್ತಾರೆ. ಆದರೆ ಅವರಿಗೆ ಹೆಚ್ಚು ಶ್ರಮ ಹಾಕಲು ಇಷ್ಟವಿರುವುದಿಲ್ಲ. ಜೀವನದಲ್ಲಿ ಮುಂದೆ ಸಾಗಬೆಕು ಎಂಬ ಹಂಬಲವಿರುತ್ತದೆ, ಆದರೆ ಕಷ್ಟಪಟ್ಟು ದುಡಿಯುವುದು ಸಾಧ್ಯವಿಲ್ಲ.  ಯಾವುದೇ ಶ್ರಮ ಅಥವಾ ಕಷ್ಟವಿಲ್ಲದೆ ರಾಜನಂತೆ ಬದುಕ ಬೇಕು ಎನ್ನುವ ಆಸೆ ಇವರಿಗೆ ಇರುತ್ತದೆ. ಎಲ್ಲವನ್ನು ಸುಲಭವಾಗಿ ಪಡೆದುಕೊಳ್ಳಲು ಬಯಸುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯವರು ಹೆಸರಿಗೆ ತಕ್ಕಂತೆ ಸಿಂಹದಂತೆ ಘರ್ಜಿಸುತ್ತಾರೆ, ಆದರೆ ಅವರು ಯಾವಾಗಲೂ ಸೋಮಾರಿಯಾಗಿರುತ್ತಾರೆ. ಇನ್ನು ಇವರಿಗೆ ಗೌರವ ಸಿಗಬೇಕು ಮತ್ತು ಜನರು ತಮ್ಮನ್ನೆ ಹೊಗಳಬೇಕು ಎಂಬ ಬಯಕೆ ಇರುತ್ತದೆ. ಅಲ್ಲದೇ ಇವರು ಸೋಮಾರಿಗಳಾದರೂ ಹೆಚ್ಚು ಕ್ರಿಯಾಶೀಲತೆ ಇವರಲ್ಲಿ ಇರುತ್ತದೆ. ಇವರು ಅನಿವಾರ್ಯ ಪರಿಸ್ಥಿತಿ ಎದುರಾದಾಗ ಮಾತ್ರ ಕೆಲಸ ಮಾಡಲು  ಸಿದ್ಧರಾಗುತ್ತಾರೆ. ಯಾವುದೇ ಕಾರಣಕ್ಕೂ ಹೆಚ್ಚು ಶ್ರಮ ವಹಿಸುವುದು ಇವರಿಗೆ ಇಷ್ಟವಿಲ್ಲ. ಇವರು ಹೆಚ್ಚು ಸಮಯ ವ್ಯರ್ಥ ಮಾಡುತ್ತಾರೆ.

ಇದನ್ನು ಓದಿ: ನಿಮ್ಮ ಉಗುರಿನ ಅಂದ ಹೆಚ್ಚಿಸಲು ಇಲ್ಲಿದೆ ಸೂಪರ್ ಐಡಿಯಾ

ಧನು ರಾಶಿ

ಈ ರಾಶಿಯವರು ಇನ್ನು ವಿಭಿನ್ನ. ಶ್ರಮ ಹಾಕಿ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಪ್ರಯಾಣ ಮಾಡಲು ಯಾವಾಗಲೂ ಸಿದ್ದರಿರುತ್ತಾರೆ. ಅವರಲ್ಲಿ ಒಂದು ನಂಬಿಕೆ ಇರುತ್ತದೆ ಹೆಚ್ಚು ಶ್ರಮ, ಹಾಕಿ ಕೆಲಸ ಮಾಡಿದರೆ ಮಾತ್ರ ಕೆಲಸ ಪೂರ್ಣವಾಗುತ್ತದೆ ಎಂಬುದನ್ನ ನಂಬುವುದಿಲ್ಲ. ಅವರು ಅವರಿಗೆ ಯಾವ ಕೆಲಸ ಬೇಕೋ ಅದನ್ನು ಮಾತ್ರ ಮಾಡುತ್ತಾರೆ.  ಶ್ರಮವಿಲ್ಲದೆ ಸಾಧನೆ ಮಾಡಲು ಅವರು ದಾರಿಯನ್ನು ಹುಡುಕುತ್ತಾರೆ. ನೀವು ಈ ರಾಶಿಯವರನ್ನು ಗಮನಿಸಿ, ಅವರಿಗೆ ಕೆಲಸವಾಗಬೇಕು ಎಂದಲ್ಲಿ, ಎಷ್ಟು ಶ್ರಮ ಬೇಕಾದರು ಹಾಕುತ್ತಾರೆ, ಆದರೆ ಬೇರೆ ಕೆಲಸ ಮಾಡುವಾಗ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಕುಂಭ ರಾಶಿ

ಕುಂಭ ರಾಶಿಯವರು ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ಆದರೆ ಆ ಕನಸು ನನಸಾಗಿಸಲು ಶ್ರಮ ಹಾಕಲು ಸಿದ್ಧರಿರುವುದಿಲ್ಲ. ಎಷ್ಟು ಸುಲಭವಾಗಿ ಕೆಲಸವಾಗುತ್ತದೆ ಎಂಬ ದಾರಿಯನ್ನು ಹುಡುಕುತ್ತಾರೆ. ಎಲ್ಲವೂ ಸುಲಭ ಹಾಗೂ ಸರಳವಾಗಿ ಆಗಬೇಕು ಎಂದು ಬಯಸುತ್ತಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: