• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Vastu Tips: ಗಿಡ-ಮರಗಳನ್ನು ನೆಡುವಾಗ ಈ ವಾಸ್ತು ಸಲಹೆ ಪಾಲಿಸಿದ್ರೆ, ನಿಮ್ಮ ಮನೆ ತುಂಬಾ ಹಣವೇ ತುಂಬಿರುತ್ತೆ

Vastu Tips: ಗಿಡ-ಮರಗಳನ್ನು ನೆಡುವಾಗ ಈ ವಾಸ್ತು ಸಲಹೆ ಪಾಲಿಸಿದ್ರೆ, ನಿಮ್ಮ ಮನೆ ತುಂಬಾ ಹಣವೇ ತುಂಬಿರುತ್ತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮ್ಮ ಮನೆಯ ಮುಖ್ಯದ್ವಾರ ಪಶ್ಚಿಮಕ್ಕಿದ್ದು ಅದರ ಎದುರಿಗೇನೇ ಗಿಡ ಇದ್ದರೆ ಖಂಡಿತ ಕತ್ತರಿಸಬೇಡಿ. ಅಥವಾ ಬೇಕಿದ್ದರೆ ನೀವು ಅದೇ ದಿಕ್ಕಿನಲ್ಲಿ ಗಿಡವನ್ನುನಿರ್ಭಯವಾಗಿ ನೇಡಬಹುದು. ಇದರಿಂದ ಯಾವುದೇ ದೋಷ ಬರುವುದಿಲ್ಲ.

  • Share this:

ವಾಸ್ತುಶಾಸ್ತ್ರವು ಭಾರತೀಯರಲ್ಲಿ (Indians) ತನ್ನದೆ ಆದ ಮಹತ್ವವನ್ನು ಹೊಂದಿದೆ. ಇದರಲ್ಲಿ ವಿಶ್ವಾಸ ಇರಿಸುವವರು ಇದನ್ನು ವೈಜ್ಞಾನಿಕ ತಳಹದಿಯಲ್ಲೂ ವಿಶ್ಲೇಷಿಸುತ್ತಾರೆ. ಒಟ್ಟಿನಲ್ಲಿ ವಾಸ್ತುಶಾಸ್ತ್ರ (Vastu) ಎಂಬುದು ಸಾಕಷ್ಟು ಜನರು ನಂಬುವ ಒಂದು ವಿದ್ಯೆಯಾಗಿದೆ. ಅಷ್ಟಕ್ಕೂ ವಾಸ್ತು ಎಂಬುದು ಕೇವಲ ಮನೆಯ (Home) ಒಳಗಡೆ ಮಾತ್ರವಲ್ಲದೆ ಅದರ ಹೊರಗೂ ಸಂಬಂಧಿಸಿದೆ. ಉದಾಹರಣೆಗೆ ಯಾವ ರೀತಿಯ ಮರಗಿಡಗಳನ್ನು ಮನೆಯ ಯಾವ ಯಾವ ಭಾಗಗಳಲ್ಲಿ ಹೇಗೆ ನೆಡಬೇಕು, ಯಾವುದನ್ನು ನೆಡಬಾರದು ಇತ್ಯಾದಿ ಅಂಶಗಳನ್ನೂ ಸಹ ವಾಸ್ತುಶಾಸ್ತ್ರ ನಮಗೆ ತಿಳಿಸುತ್ತದೆ.


ಈ ಎಲ್ಲ ಅಂಶಗಳನ್ನು ಪಾಲಿಸಿದಾಗ ಮನೆಯ ಒಳಗೂ, ಹೊರಗೂ ಸದಾ ಧನಾತ್ಮಕತೆಯ ವಾತಾವರಣ ಉಂಟಾಗಿ ಮನೆಯಲ್ಲಿ ಹಣ ಹೆಚ್ಚಿ ಜನರಲ್ಲಿ ಸದಾ ನೆಮ್ಮದಿ, ಸಂತಸ ಮನೆ ಮಾಡುತ್ತದೆ ಎಂದು ವಾಸ್ತು ಪರಿಣಿತರು ಅಭಿಪ್ರಾಯ ಪಡುತ್ತಾರೆ.


ಗಿಡ ನೆಡುವ ಮೂಲಕ ಧನಾತ್ಮಕತೆ


ಗಿಡ ನೆಡುವ ಬಗ್ಗೆ ವಾಸ್ತು ಎಂದಾಗ ಒಂದು ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಈ ಮೂಲಕ ನಾವು ದೈವಿಕ ಶಕ್ತಿಗಳಿಗೆ ಹೆಚ್ಚಿನ ಬೆಂಬಲ ವಾತಾವರಣ ನಿರ್ಮಿಸದಂತೆ ಎನ್ನುತ್ತಾರೆ ತಜ್ಞರು.


ಆದಷ್ಟು ಪವಿತ್ರ ಎನ್ನಲಾಗುವ ತೆಂಗು, ಬಾಳೆ, ಅಡಿಕೆ ಇತ್ಯಾದಿ ಗಿಡಗಳನ್ನು ಮನೆಯ ಸುತ್ತಮುತ್ತಲೂ ನೆಡಬಹುದಾಗಿದೆ. ಇದರಿಂದ ಸಾಕಷ್ಟು ಧನಾತ್ಮಕ ಶಕ್ತಿಯ ಸಂಚಯವಾಗುತ್ತದೆ ಎನ್ನಲಾಗಿದೆ.


ಇದನ್ನೂ ಓದಿ: Parking Vastu: ಈ ದಿಕ್ಕಿಗೆ ನಿಮ್ಮ ಕಾರನ್ನು ಪಾರ್ಕ್ ಮಾಡಿದ್ರೆ ಆಕ್ಸಿಡೆಂಟ್​ ಆಗೋದೇ ಇಲ್ವಂತೆ, ಟ್ರೈ ಮಾಡಿ ವರ್ಕ್ ಆಗಬಹುದು!


ಸರ್ವವ್ಯಾಪಿಯಾದ ಭಗವಂತನು ತಾನು ಸೃಷ್ಟಿಸಿದ ಪ್ರಕೃತಿ ಅದರಲ್ಲೂ ವಿಶೇಷವಾಗಿ ಗಿಡ-ಮರಗಳನ್ನು ತುಂಬಾ ಪ್ರೀತಿಸುತ್ತಾನೆ. ಹಾಗಾಗಿ ಯಾವುದೇ ಮನುಷ್ಯ ಗಿಡಮರಗಳಿಗೆ ಗೌರವ ನೀಡುತ್ತ ಅದರ ಉತ್ತಮ ಆರೈಕೆ ಮಾಡುವನೋ ಅವನು ಭಗವಂತನ ಸಹಾಯಕನಾದಂತೆ ಎಂಬ ನಂಬಿಕೆಯಿದ್ದು ಈ ಮೂಲಕ ಆ ಮನುಷ್ಯ ಎಲ್ಲ ರೀತಿಯ ಸುಖ-ಸಂಪತ್ತನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.


ಮನೆಯೊಂದರ ಸುತ್ತಮುತ್ತಲಿನಲ್ಲಿ ಗಿಡ-ಮರಗಳು ಸೋಂಪಾಗಿ ಬೆಳೆದಿದ್ದಾಗ ಆ ಸ್ಥಳ ಹಾಗೂ ಮನೆ ಪ್ರಕೃತಿಯಲ್ಲಿ ಅಡಕವಾಗಿರುವ ಎಲ್ಲ ಧನಾತ್ಮಕ ಶಕ್ತಿಯನ್ನು ತನ್ನೆಡೆಗೆ ಸೆಳೆಯುತ್ತದೆ. ಅಲ್ಲದೆ, ಭೂಮಿಯು ಸದಾ ತಂಪಾಗಿದ್ದು ಅಹ್ಲಾದಕರ ಅನುಭವ ನೀಡುತ್ತದೆ.


ಕೆಲ ಅಜ್ಞಾನಿ ವಾಸ್ತು ಸಲಹೆಗಾರರು ಮನೆಯ ಮೇಲೆ ಗಿಡದ ನೆರಳು ಬೀಳಕೂಡದು ಎಂದು ಹೇಳುತ್ತಾರೆ. ಹಾಗಾಗಿ ಎಷ್ಟೋ ಜನರು ಸಮೃದ್ಧವಾಗಿ ಬೆಳೆದ ಮನೆಯ ಆವರಣದಲ್ಲಿರುವ ಗಿಡ ಮರಗಳನ್ನು ವಾಸ್ತು ಹೆಸರಿನಲ್ಲಿ ಕಡಿದು ಬಿಡುತ್ತಾರೆ. ಇದು ಖಂಡಿತ ಸಲ್ಲದು ಎಂಬುದು ನೈಜ ವಾಸ್ತು ತಜ್ಞರ ಅಭಿಪ್ರಾಯವಾಗಿದೆ.


ಗಿಡಗಳನ್ನು ಎಲ್ಲಿ ನೆಡಬೇಕು?


ವಾಸ್ತುವಿನಡಿಯಲ್ಲಿ ಸಾಮಾನ್ಯ ನಿಯಮ ಎಂದರೆ ಪೂರ್ವ ಹಾಗೂ ಉತ್ತರದ ಸ್ಥಳಗಳು ಪಶ್ಚಿಮ ಹಾಗೂ ದಕ್ಷಿಣಕ್ಕಿಂತ ಹೆಚ್ಚು ದೊಡ್ಡದಾಗಿರಬೇಕು ಎಂದಾಗಿದೆ. ಈ ಅಂಶವನ್ನು ಗಮನಿಸಿದಾಗ ದೊಡ್ಡದಾದ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದು ಉಪಯುಕ್ತವಾಗಿದೆ. ಆದರೆ, ಈ ವಿಷಯದಲ್ಲೂ ಕೆಲ ಪಂಡಿತರು ಈ ದಿಕ್ಕುಗಳಲ್ಲಿ ನೆಡಬಾರದು ಎನ್ನುತ್ತಾರೆ.


ಇದು ನಿಜಕ್ಕೂ ಅಸಂಗತ. ಒಂದು ವೇಳೆ ನಿಮ್ಮ ಮನೆಯ ಪಶ್ಚಿಮ ಹಾಗೂ ದಕ್ಷಿಣದಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೆಯೆ ಇದ್ದರೆ? ಹಾಗಾಗಿ ಈ ನಿಟ್ಟಿನಲ್ಲಿ ಯೋಚಿಸಿದಾಗ ಹೆಚ್ಚು ಸ್ಥಳಾವಕಾಶವಿರುವ ಸ್ಥಳ ಆಯ್ಕೆ ಬುದ್ಧಿವಂತಿಕೆ ಎನಿಸುತ್ತದೆ.


ಮತ್ಸ್ಯ ಪುರಾಣದಲ್ಲಿ
ಒಂದು ಮರ ಒಂದು ಕೊಳಕ್ಕೆ ಸಮ ಎಂದು ಹೇಳಲಾಗಿದೆ

ಮನೆಯ ದಕ್ಷಿಣ ಹಾಗೂ ಪಶ್ಚಿಮದಲ್ಲಿ ಗಿಡಗಳು


ಉತ್ತರ ಹಾಗೂ ಪೂರ್ವಕ್ಕೆ ಗಿಡಗಳನ್ನು ನೆಡಬಾರದು ಎಂದು ಕೆಲವರು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಗೊಂದಲಕ್ಕೊಳಗಾದರೆ ನಿಮ್ಮ ಮನೆಯ ಉತ್ತರ ಹಾಗೂ ಪೂರ್ವದಲ್ಲಿ ಸಾಕಷ್ಟು ಜಾಗವನ್ನು ಬಿಟ್ಟಿದ್ದರೂ ನೀವು ಅಲ್ಲಿ ಗಿಡಗಳನ್ನು ನೆಡದೆ ದಕ್ಷಿಣ ಹಾಗೂ ಪೂರ್ವಕ್ಕೆ ಚಿಕ್ಕದಾಗಿ ಬೆಳೆಯುವ ಗಿಡಗಳನ್ನು ಸಾಲು ಸಾಲಾಗಿ ಬೆಳೆಯಬಹುದು. ನೆನಪಿಡಿ ಗಿಡಗಳು ದೈವಿಕ ಶಕ್ತಿಗಳನ್ನು ಆಕರ್ಷಿಸುವ ಆಯಾಮಗಳಾಗಿವೆ.


ಉತ್ತರ ಹಾಗೂ ಪೂರ್ವದ ಮಧ್ಯದಲ್ಲಿರುವ ಗಿಡಗಳನ್ನು ಕಡಿಯಬೇಕೆ?


ಖಂಡಿತ ಇಲ್ಲ. ದಕ್ಶಿಣ ಹಾಗೂ ಪಶ್ಚಿಮದಲ್ಲಿ ನೀವು ಗಿಡ ನೆಟ್ಟರೆ ಸಾಕು, ಇದು ಉತ್ತರ ಹಾಗೂ ಪೂರ್ವದ ಮಧ್ಯದಲ್ಲಿರುವ ಗಿಡಗಳನ್ನು ಉಳಿಸುವಂತಿರುತ್ತದೆ. ಅಂದರೆ ಅಷ್ಟಕ್ಕೂ ನಿಮಗೆ ಉತ್ತರ ಹಾಗೂ ಪೂರ್ವದ ಮಧ್ಯದಲ್ಲಿ ಗಿಡಗಳು ಇರಬಾರದೆಂಬ ನಿಯಮ ಘಾಸಿ ಮಾಡುತ್ತಿದ್ದರೆ ಇದರಿಂದಾಗಬಹುದಾದ ಅಡ್ಡ ಪರಿಣಾಮಗಳನ್ನು ದಕ್ಷಿಣ ಹಾಗೂ ಪಶ್ಚಿಮದಲ್ಲಿರುವ ಗಿಡಗಳು ನಾಶಮಾಡುತ್ತವೆ ಎಂದಾಗಿದೆ.


ದಕ್ಷಿಣದಲ್ಲಿ ಗಿಡ ನೆಡುವಿಕೆ


ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಗಿಡ ನೆಡುವ ಆಯ್ಕೆ ಸಾಕಷ್ಟು ಬುದ್ಧಿವಂತಿಕೆಯಿಂದ ಕೂಡಿದೆ. ಹೀಗೆ ಮಾಡುವ ಜನರು ಹೆಚ್ಚುವರಿಯಾಗಿ ಪ್ರಯೋಜನಗಳನ್ನು ಪಡೆಯುತ್ತಾರೆ. ಉತ್ತಮ ಆರೋಗ್ಯ, ಸಮೃದ್ಧ ಆರ್ಥಿಕ ಸ್ಥಿತಿ, ಅವರ ಪಾಲಾಗುತ್ತದೆ.


ಉತ್ತರದಲ್ಲಿ ಗಿಡ ನೆಡುವಿಕೆ


ಗಿಡಗಳನ್ನು ಎಲ್ಲಿ ಬೇಕಾದರೂ ನೆಡಬಹುದಾಗಿದ್ದರೂ ಮುಖ್ಯದ್ವಾರದ ಎದುರಿನಲ್ಲಿ ಅದರಲ್ಲೂ ಉತ್ತರಕ್ಕೆ ನೆಡಬಾರದು ಎಂದು ಹೇಳಲಾಗುತ್ತದೆ. ಇದನ್ನು ಸರಿ ಹೊಂದಿಸಲು ನಿಮ್ಮ ಮನೆಯ ಮುಖ್ಯ ದ್ವಾರ ಉತ್ತರಕ್ಕಿದ್ದು ಅಲ್ಲಿ ದೊಡ್ಡದಾದ ಗಿಡವೊಂದಿದ್ದರೆ, ಗಿಡ ಕಡಿಯುವ ಬದಲು ಮುಖ್ಯದ್ವಾರವನ್ನು ಈಶಾನ್ಯಕ್ಕೆ ಸ್ಥಾಪಿಸಲು ಯೋಚಿಸಿ. ಇದರಿಂದ ಯಾವ ಅನಾನುಕೂಲ ಉಂಟಾಗದು. ಮನೆಯ ಈಶಾನ್ಯಕ್ಕಿರುವ ದೊಡ್ಡ ಗಿಡಮರಗಳು ಅದೆಷ್ಟೋ ಕುಟುಂಬಗಳಿಗೆ ಅದೃಷ್ಟ ತಂದುಕೊಟ್ಟಿರುವುದನ್ನು ಗಮನಿಸಬಹುದಾಗಿದೆ.


ಪೂರ್ವದಲ್ಲಿ ಗಿಡ ನೆಡುವಿಕೆ


ನಿಮ್ಮ ಮನೆಯ ಮುಖ್ಯದ್ವಾರ ಪೂರ್ವಕ್ಕಿದ್ದು ಅದರ ಎದುರಿಗೇನೇ ಗಿಡವನ್ನು ನೆಡದಿರಿ. ಆದರೆ ಅದರ ಬದಲಾಗಿ ಆಗ್ನೇಯ ದಿಕ್ಕಿನಲ್ಲಿ ನೀವು ಗಿಡಗಳನ್ನು ನೆಡಬಹುದಾಗಿದೆ. ಈಶಾನ್ಯ ಭಾಗವನ್ನು ಸದಾ ಮುಕ್ತವಾಗಿರಿಸಲು ಶಿಫಾರಸ್ಸು ಮಾಡಲಾಗಿದೆ.


ಪಶ್ಚಿಮದಲ್ಲಿ ಗಿಡ ನೆಡುವಿಕೆ


ನಿಮ್ಮ ಮನೆಯ ಮುಖ್ಯದ್ವಾರ ಪಶ್ಚಿಮಕ್ಕಿದ್ದು ಅದರ ಎದುರಿಗೇನೇ ಗಿಡ ಇದ್ದರೆ ಖಂಡಿತ ಕತ್ತರಿಸಬೇಡಿ. ಅಥವಾ ಬೇಕಿದ್ದರೆ ನೀವು ಅದೇ ದಿಕ್ಕಿನಲ್ಲಿ ಗಿಡವನ್ನುನಿರ್ಭಯವಾಗಿ ನೇಡಬಹುದು. ಇದರಿಂದ ಯಾವುದೇ ದೋಷ ಬರುವುದಿಲ್ಲ.


ಯಾವ ದಿಕ್ಕಿನಲ್ಲಿ ಯಾವುದು ಉತ್ತಮ


ನೆನಪಿಡಿ ದೊಡ್ಡ ಗಿಡಮರಗಳು, ಬಳ್ಳಿಗಳು ಹಾಗೂ ಸಸ್ಯಗಳು ಇವು ಮೂರು ಭಿನ್ನವಾಗಿವೆ.


* ದೊಡ್ಡ ಗಿಡಮರಗಳನ್ನು ಆಗ್ನೇಯ ದಿಕ್ಕಿಗೆ ನೆಡಬಹುದು
* ಅತಿ ದೊಡ್ಡ ಮರವಿದ್ದರೆ ದಕ್ಷಿಣ ದಿಕ್ಕಿಗೆ ನೆಡಬಹುದು
* ಚಿಕ್ಕ ಗಿಡಗಳು, ಸಸ್ಯಗಳನ್ನು ಈಶಾನ್ಯ ದಿಕ್ಕಿನಲ್ಲಿ ನೆಡಬಹುದು
* ಹುಲ್ಲು/ ಶ್ರಬ್ ಗಳನ್ನು ಉತ್ತರ ದಿಕ್ಕಿನಲ್ಲಿನೆಡಬಹುದು
* ಕಾರ್ಪೆಟ್ ಪ್ಲ್ಯಾಂಟ್, ಗ್ರಾಸ್ ಗಳನ್ನು ಪೂರ್ವದಲ್ಲಿ ನೆಡಬಹುದು

First published: