• Home
  • »
  • News
  • »
  • astrology
  • »
  • Rashi Prediction: ಯಾವ ರಾಶಿಯವರು ತುಂಬಾ ತಿನ್ನುತ್ತಾರೆ? ಇವರು ಆರೊಗ್ಯದ ಕಡೆ ಗಮನ ಕೊಡಲೇ ಬೇಕು

Rashi Prediction: ಯಾವ ರಾಶಿಯವರು ತುಂಬಾ ತಿನ್ನುತ್ತಾರೆ? ಇವರು ಆರೊಗ್ಯದ ಕಡೆ ಗಮನ ಕೊಡಲೇ ಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Foodie People: ಯಾವೆಲ್ಲಾ ರಾಶಿಯವರು ಎಂದಿಗೂ ಬೇಡವಾದ ಆಹಾರವನ್ನು ಸೇವಿಸುತ್ತಲೇ ಇರುತ್ತಾರೆ ಮತ್ತು ಇವರು ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವುದಿಲ್ಲ. ಮೂಡನಂಬಿಕೆಗಳನ್ನು ನಂಬದೇ ರಾಶಿಯ ಆಧಾರಿತವಗಿ ಒಂದಷ್ಟು ಅಂಶಗಳನ್ನು ಫಾಲೋ ಮಾಡಿ.

  • Share this:

ಕೆಲವರು ಯಾವ ಸಮಯದಲ್ಲಿ ಏನು ಕೊಟ್ಟರೂ ತಿನ್ನುವವರಿರುತ್ತಾರೆ. ಅದು ಸಸ್ಯಹಾರಿ (Veg) ಅಥವಾ ಮಾಂಸಹಾರಿ (Non - Veg) ಆಗಿದ್ರೂ ಕೂಡ ತಿನ್ನುವುದೇ ಒಂದು ಅಚ್ಚುಮೆಚ್ಚಿನ ಹವ್ಯಾಸ (Hobby) ಆಗಿರುತ್ತದೆ. ಅವರು ತಮ್ಮ ಕೆಲಸದ ಸ್ಥಳದಲ್ಲಿ ಆಗಲೀ ಅಥವಾ ಮನೆಯಲ್ಲಿ ಆಗಲಿ ಒಟ್ಟಾರೆ ತಿನ್ನುತ್ತಲೇ ಇರುತ್ತಾರೆ.  ನಿಮಗೆ ಈಗಾಗಲೇ ತಿಳಿದಿರುವ ಹಾಗೆ ಇವರನ್ನು ಫುಡ್ಡೀ (Foodie) ಅಂತಾರೆ. ಜೊತೆಗೆ ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಂದರ್ಭ ಬರುತ್ತದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ತಿಳಿದಿದ್ದರೂ ಸೇವಿಸುತ್ತಾರೆ. ಹಾಗಾದರೆ ಯಾವ ರಾಶಿಯವರೆಲ್ಲಾ ಈ ರೀತಿಯಾಗಿ ಆಹಾರವನ್ನು ಸೇವನೆಮಾಡುತ್ತಾರೆ ಮತ್ತು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂಬುದು ತಿಳಿಯೋಣ.


ಮೇಷ ರಾಶಿ


ಮಂಗಳ ಗ್ರಹದಿಂದ ಆಳಲ್ಪಡುವ ಮೇಷ ರಾಶಿಯವರು ಹೆಚ್ಚಿನ ಉದ್ವೇಗವನ್ನು ಹೊಂದಿರುತ್ತಾರೆ ಮತ್ತು ಅವರು ಸಾಮಾನ್ಯವಾಗಿ ತಲೆನೋವು ಮತ್ತು ಮೈಗ್ರೇನ್‌ನಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಈ ಜನರು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುತ್ತಾರೆ ಅವರು ಬೇಗನೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ರಾಶಿಚಕ್ರ ಚಿಹ್ನೆಯನ್ನು ಹೊಂದಿರುವ ಜನರು ಆರೋಗ್ಯದ ಮೇಲೆ ಗಮನ ಹರಿಸುವುದು ಕಡಿಮೆ. ನೀವು ಇನ್ನು ಮುಂದೆ ಊಟವಾದ ನಂತರ ಹುಳಿ ಹಣ್ಣುಗಳನ್ನು ಸೇವಿಸಿದರೆ ಅನಾರೋಗ್ಯದಿಂದ ತಪ್ಪಿಸಬಹುದು.


ಇದನ್ನೂ ಓದಿ: ಆಫೀಸ್​ನಲ್ಲಿ ಯಾರ್​ ಏನೇ ಅಂದ್ರು ತಲೆ ಕೆಡಿಸಿಕೊಳ್ಳಬೇಡಿ, ಇಂದು ಈ ರಾಶಿಯವರದ್ದೇ ಜಯ!


ತುಲಾ ರಾಶಿ


ತುಲಾ ರಾಶಿಯವರು ಕಾಳಜಿವುಳ್ಳ ಜನರು ಮತ್ತು ಅವರನ್ನು ಪೋಷಕರು ಎಂದು ಸುತ್ತ ಮುತ್ತ ಇರುವವರು ಕರೆಯಲಾಗುತ್ತದೆ. ಈ ಜೀವಿಗಳು ತಮ್ಮ ಸ್ನೇಹಿತರು ಮತ್ತು ಕುಟುಂಬದ ಸಮಸ್ಯೆಗಳ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಮಾಡುವವರಿವರು ತಮ್ಮ ಬಗ್ಗೆ ತಾವು ಕಾಳಜಿಯನ್ನು ವಹಿಸುವುದಿಲ್ಲ. ತುಲಾ ರಾಶಿಯ ಜನರು ಯಾವಾಗಲೂ ಇತರರಿಗೆ ಸಹಾಯ ಮಾಡಲು ತುದಿಗಾಲಲ್ಲಿ ಇರುತ್ತಾರೆ ಆದರೆ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ, ಇದು ಅವರನ್ನು ಕೊನೆಗೆ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಾರೆ.


These 3 zodiac signs will do anything for the happiness of the lover
ವೃಷಭ ರಾಶಿ


ವೃಷಭ ರಾಶಿಯ ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ತನ್ನ ಪಾಡಿಗೆ ತಾನು ಆಹಾರ ಸೇವನೆಯನ್ನು ಮಾಡುತ್ತಾ ಇರುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದ್ದಾ ಎಂಬುದು ಯೋಚಿಸುವುದಿಲ್ಲ. ಅವರು ತಮ್ಮ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಸಹ ನಿರ್ಲಕ್ಷಿಸುತ್ತಾರೆ, ಅದು ಮತ್ತಷ್ಟು ಹೆಚ್ಚಾಗುತ್ತದೆ. ಅವರ ಗುರಿಗಳು ಮತ್ತು ವೃತ್ತಿಜೀವನವು ಸರ್ವ ಆಗಿರುತ್ತದೆ ಮತ್ತು ಕೆಲಸವನ್ನು ಪೂರೈಸುವ ಸಲುವಾಗಿ ಅವರು ತಮ್ಮ ನೆಗಡಿ ಮತ್ತು ಜ್ವರವನ್ನು ನಿರ್ಲಕ್ಷಿಸುತ್ತಾರೆ. ಇನ್ನು ಮುಂದೆ ಈ ರೀತಿಯಾಗಿ ಮಾಡಬೇಡಿ. ಮುಂದೆ ಇನ್ನು ದೊಡ್ಡದಾದ ಅನಾರೋಗ್ಯವನ್ನು ಎದುರಿಸಬೇಕಾಗುತ್ತದೆ.


ಇದನ್ನೂ ಓದಿ: ಕಾಂತಾರ ಕ್ಲೈಮ್ಯಾಕ್ಸ್​ ಗೆಲ್ಲಿಸಿದ್ದೇ ಗುಳಿಗ ದೈವ! ಇದರ ಅಸಲಿ ಕಹಾನಿ ಇಲ್ಲಿದೆ ನೋಡಿ


ಸಿಂಹ ರಾಶಿ


ಸಿಂಹ ರಾಶಿಯ ಜನರು ಹಳಸಿದ ಆಹಾರಗಳನ್ನು ತಿನ್ನುತ್ತಾರೆ. ಈ ರಾಶಿಚಕ್ರ ಚಿಹ್ನೆಯನ್ನು ಹೊಂದಿರುವ ಜನರು ತುಂಬಾ ಆಹಾರಪ್ರೇಮಿಗಳು ಮತ್ತು ರುಚಿಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕೊಬ್ಬಿನಂಶವಿರುವ ಆಹಾರ ಪದಾರ್ಥಗಳ ಸೇವನೆಯಿಂದ ಅವರು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಾರೆ. ಇದಲ್ಲದೆ, ಅವರು ಆರೋಗ್ಯದ ತೊಂದರೆಗಳಿಗೆ ಸಿಲುಕಿದ ನಂತರ, ಅನಾರೋಗ್ಯಕ್ಕೆ ತುತ್ತಾದ ನಂತರದಲ್ಲಿ ಅವರ ಆರೋಗ್ಯದ ಕಡೆ ಗಮನ ಹರಿಸುತ್ತಾರೆ.


ಇವಿಷ್ಟು ರಾಶಿಚಕ್ರವನ್ನು ಹೊಂದಿರುವ ಜನರು ದಯವಿಟ್ಟು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸಲೇಬೇಕು. ನೀವು ಮಲಗುವ ಮುನ್ನ ಪೂರ್ವ ಭಾಗಕ್ಕೆ ತಿರುಗಿ ನೀರು ಕುಡಿದು ಮಲಗಬೇಕು.

First published: