Chinese zodiac: ಚೈನೀಸ್ ರಾಶಿ ಪ್ರಕಾರ ನಿಮಗೆ ಈ ಹರಳುಗಳು ಲಕ್ಕಿಯಂತೆ

ಚೈನೀಸ್​ ಭವಿಷ್ಯ

ಚೈನೀಸ್​ ಭವಿಷ್ಯ

Lucky Stone: ಚೈನೀಸ್ ಪ್ರಾಣಿ ರಾಶಿಚಿಹ್ನೆ ಅಥವಾ ಶೆಂಗ್ಕ್ಸಿಯಾವೊ 12 ವರ್ಷಗಳ ಪುನರಾವರ್ತಿತ ಚಕ್ರವಾಗಿದೆ. ಶೆಂಗ್ಕ್ಸಿಯಾವೊ ಎಂದು ಕರೆಯಲ್ಪಡುವ ಚೈನೀಸ್ ರಾಶಿಚಕ್ರವು ಹನ್ನೆರಡು ವರ್ಷಗಳ ಚಕ್ರವನ್ನು ಆಧರಿಸಿದೆ, ಪ್ರತಿ ವರ್ಷ ಆ ಚಕ್ರದಲ್ಲಿ ಪ್ರಾಣಿಗಳ ಚಿಹ್ನೆಗೆ ಸಂಬಂಧಿಸಿದೆ.

  • Trending Desk
  • 4-MIN READ
  • Last Updated :
  • Share this:

ಸುಮಾರು ಜನರಿಗೆ ಈ ಚೀನೀ ರಾಶಿಚಕ್ರದ (Zodiac Sign) ಬಗ್ಗೆ ತಿಳಿದಿರುತ್ತದೆ. 2,000 ವರ್ಷಗಳಿಂದ ಚೀನೀ (Chinese) ಸಂಸ್ಕೃತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಚೀನೀ ರಾಶಿಚಕ್ರವು ಹನ್ನೆರಡು ಚೀನೀ ಚಿಹ್ನೆಗಳು ಮತ್ತು ಐದು ರಾಶಿಚಕ್ರಗಳನ್ನು ಒಳಗೊಂಡಿದೆ. ನಮ್ಮ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ನಾವು ಹುಟ್ಟಿದ ನಕ್ಷತ್ರ ಮತ್ತು ದಿನ ಅನುಸಾರ ನಮ್ಮ ರಾಶಿಯನ್ನು ಹೇಗೆ ಹೇಳುತ್ತೇವೆಯೋ ಅಲ್ಲೂ ಸಹ ರಾಶಿ ಚಿಹ್ನೆಗಳು ಇವೆ. ಈ ಪ್ರತಿಯೊಂದೂ ರಾಶಿ ಚಿಹ್ನೆ ಒಬ್ಬರ ವ್ಯಕ್ತಿತ್ವ, ವೃತ್ತಿ, ಅದೃಷ್ಟ (Lucky) ಮತ್ತು ಹೆಚ್ಚಿನವುಗಳನ್ನು ತಿಳಿಯಲು ಸಹಾಯ ಮಾಡುತ್ತದೆ.


ಏನಿದು ಚೈನೀಸ್‌ ಪ್ರಾಣಿ ರಾಶಿಚಿಹ್ನೆ?
ಚೈನೀಸ್ ಪ್ರಾಣಿ ರಾಶಿಚಿಹ್ನೆ ಅಥವಾ ಶೆಂಗ್ಕ್ಸಿಯಾವೊ 12 ವರ್ಷಗಳ ಪುನರಾವರ್ತಿತ ಚಕ್ರವಾಗಿದೆ. ಶೆಂಗ್ಕ್ಸಿಯಾವೊ ಎಂದು ಕರೆಯಲ್ಪಡುವ ಚೈನೀಸ್ ರಾಶಿಚಕ್ರವು ಹನ್ನೆರಡು ವರ್ಷಗಳ ಚಕ್ರವನ್ನು ಆಧರಿಸಿದೆ, ಪ್ರತಿ ವರ್ಷ ಆ ಚಕ್ರದಲ್ಲಿ ಪ್ರಾಣಿಗಳ ಚಿಹ್ನೆಗೆ ಸಂಬಂಧಿಸಿದೆ. ಈ ಚಿಹ್ನೆಗಳು ಇಲಿ, ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಕೋಳಿ ಹುಂಜ, ನಾಯಿ ಮತ್ತು ಹಂದಿಯನ್ನು ಒಳಗೊಂಡಿವೆ. ಚೀನೀ ಚಂದ್ರನ ಕ್ಯಾಲೆಂಡರ್ ಪ್ರಕಾರ ಇದನ್ನು ಲೆಕ್ಕಹಾಕಲಾಗುತ್ತದೆ. .
ಸಾಮಾನ್ಯವಾಗಿ ಒಂದು ಕಲ್ಲಿನ, ಹರಳಿನ ಉಂಗುರ, ಒಡವೆ ಧರಿಸಬೇಕಾದರೆ ನಾವು ನಮ್ಮ ರಾಶಿಚಕ್ರದ ಅನುಗಣವಾಗಿ ಅದನ್ನು ತೊಡುತ್ತೇವೆ. ಇದು ನಮ್ಮ ಒಳಿತಿಗೂ ಕಾರಣವಾಗಿದೆ. ಹಾಗೆಯೇ ಚೈನೀಸ್ ರಾಶಿಚಕ್ರ ಚಿಹ್ನೆಗೆ ಅನುಗುಣವಾಗಿ ಕೆಲ ಅದೃಷ್ಟ ಕಲ್ಲುಗಳಿವೆ. ಇದನ್ನು ಸಹ ರಾಶಿಗೆ ತಕ್ಕಂತೆ ಧರಿಸಬೇಕು.


ಹಾಗಾದರೆ ನಾವಿಲ್ಲಿ ಚೈನೀಸ್ ರಾಶಿಚಕ್ರದ ಪ್ರಾಣಿಗೆ ಅನುಗುಣವಾದ ಅದೃಷ್ಟದ ಕಲ್ಲು ಯಾವುವು ಎಂದು ತಿಳಿಯೋಣ.


ಡ್ರ್ಯಾಗನ್ - ಹುಟ್ಟಿದ ವರ್ಷಗಳು: 1928, 1940, 1952, 1964, 1976, 1988, 2000, 2012 ( ಈ ವರ್ಷ ಹುಟ್ಟಿದವರು ಈ ರಾಶಿಗೆ ಬರುತ್ತಾರೆ)
ಅದೃಷ್ಟದ ಕಲ್ಲು: ಅಮೆಥಿಸ್ಟ್


ಚಂದ್ರನ ಕ್ಯಾಲೆಂಡರ್ನ ಐದನೇ ಚಿಹ್ನೆ ಇದಾಗಿದ್ದು, ಡ್ರ್ಯಾಗನ್ ಚೀನೀ ಪುರಾಣಗಳಲ್ಲಿ ಶಕ್ತಿ ಮತ್ತು ಅಧಿಕಾರವನ್ನು ಪ್ರತಿನಿಧಿಸುವ ಅತ್ಯಂತ ಮಹತ್ವದ ಪೌರಾಣಿಕ ಜೀವಿಯಾಗಿದೆ. ಡ್ರ್ಯಾಗನ್ ರಾಶಿಚಕ್ರದವರು ಯಾವಾಗಲ್‌ ಪಾಸಿಟಿವ್‌ ಆಗಿರುವ ವ್ಯಕ್ತಿಗಳು ಮತ್ತು ಕುಟುಂಬ-ಸ್ನೇಹಿತರಿಗೆ ಹೆಚ್ಚು ಸಮಯ ನೀಡುತ್ತಾರೆ. ಇವರಿಗೆ ಅದೃಷ್ಟದ ಕಲ್ಲು ಅಮೆಥಿಸ್ಟ್. ಈ ಕಲ್ಲು ಈ ರಾಶಿಯವರಿಗರ ಋಣಾತ್ಮಕ ಶಕ್ತಿಗಳನ್ನು ದೂರವಿಡುವ ಮತ್ತು ದೈವಿಕತೆಗೆ ಹತ್ತಿರ ತರುವ ರಕ್ಷಣಾತ್ಮಕ ಬೇಲಿಯಾಗಿ ಕೆಲಸ ಮಾಡುತ್ತದೆ. ಹಾಗೆಯೇ ಆತಂಕ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಮತ್ತು ಜೀರ್ಣಕಾರಿ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಚರ್ಮದ ನೋಟವನ್ನು ಹೆಚ್ಚಿಸುತ್ತದೆ.




* ಹಾವು
ಹುಟ್ಟಿದ ವರ್ಷಗಳು: 1917, 1929, 1941, 1953, 1965, 1977, 1989, 2001, 2013
ಅದೃಷ್ಟದ ಕಲ್ಲು: ಓಪಲ್
ಹಾವನ್ನು ಚೀನೀ ಸಂಸ್ಕೃತಿಯಲ್ಲಿ ಬುದ್ಧಿವಂತ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಈ ಚೈನೀಸ್ ರಾಶಿಚಕ್ರಕ್ಕೆ ಸಂಬಂಧಿಸಿದ ಜನರು ಸ್ನೇಹಿ ಜೀವಿಗಳಾದರೂ ಸಹ ಅಪರಿಚಿತರ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ. ಇವರ ದೊಡ್ಡ ನ್ಯೂನ್ಯತೆ ಎಂದರೆ ಇವರು ಸೋಮಾರಿತನ ಮತ್ತು ಸ್ಪಷ್ಟ ಗುರಿ ಇಲ್ಲದೇ ಇರುವುವರು. ಹೀಗಾಗಿ ಹಾವು ರಾಶಿಚಕ್ರದವರು ಓಪಲ್ ಕಲ್ಲು ಧರಿಸಿದ್ದಲ್ಲಿ ಯಾವುದೇ ಕೆಲಸದಲ್ಲಾದರೂ ಸ್ಪಷ್ಟತೆ ಕಂಡುಕೊಳ್ಳುತ್ತಾರೆ. ಓಪಲ್ ಕಣ್ಣಿನ ಕಾಯಿಲೆಗಳನ್ನು ಸಹ ಗುಣಪಡಿಸಲು ಹೆಸರುವಾಸಿಯಾಗಿದೆ.


* ಕುದುರೆ
ಹುಟ್ಟಿದ ವರ್ಷಗಳು: 1918, 1930, 1942, 1954, 1966, 1978, 1990, 2002, 2014
ಅದೃಷ್ಟದ ಕಲ್ಲು: ನೀಲಮಣಿ
ಕುದುರೆ ರಾಶಿಚಕ್ರದವರು ಯಾವಾಗಲೂ ಖುಷಿ ಮತ್ತು ಉತ್ಸಾಹದಿಂದ ಇರುವ ಸ್ವಭಾವದವರು. ತಮ್ಮ ಭಾವನೆಗಳನ್ನು ಮರೆಮಾಚದೇ ಎಲ್ಲವನ್ನೂ ಹೇಳಿಕೊಳ್ಳುವ ಇವರು ಶಾಂತ ಸ್ವಭಾವದವರೂ ಕೂಡ ಹೌದು. ಇನ್ನೂ ಕುದುರೆ ರಾಶಿಚಕ್ರದವರಿಗೆ ನೀಲಮಣಿ ಅದೃಷ್ಟ ಕಲ್ಲಾಗಿದೆ. ಇದು ಈ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಪ್ರೀತಿ ಮತ್ತು ಅದೃಷ್ಟದ ಕಲ್ಲು ಎಂದೂ ಸಹ ಇದನ್ನು ಕರೆಯುತ್ತಾರೆ.


* ಮೇಕೆ
ಹುಟ್ಟಿದ ವರ್ಷಗಳು: 1919, 1931, 1943, 1955, 1967, 1979, 1991, 2003, 2015
ಅದೃಷ್ಟದ ಕಲ್ಲು: ಪಚ್ಚೆ
ಈ ರಾಶಿಚಕ್ರದ ಅವರು ಪ್ರಾಮಾಣಿಕರು, ಉತ್ತಮ ನಡತೆ ಮತ್ತು ಸಭ್ಯರು. ಆದರೆ ಅವರಿಗೆ ಅವರದ್ದೇ ಆದ ದೃಢವಾದ ನಿಲುವಿಲ್ಲ. ಹೀಗಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪಚ್ಚೆಯನ್ನು ಇವರು ಧರಿಸುವುದು ಉತ್ತಮ. ಪಚ್ಚೆಯು ಸಂಪತ್ತನ್ನು ಉತ್ತೇಜಿಸುತ್ತದೆ, ಮಾನಸಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಒಟ್ಟಾರೆ ಮೇಕೆ ರಾಶಿಚಕ್ರದ ಪ್ರಾಣಿಗೆ ಪಚ್ಚೆ ಹೇಳಿಮಾಡಿಸಿದ ಕಲ್ಲು


* ಕೋತಿ
ಹುಟ್ಟಿದ ವರ್ಷಗಳು: 1920, 1932, 1944, 1956, 1968, 1980, 1992, 2004, 2016
ಅದೃಷ್ಟದ ಕಲ್ಲು: ಪೆರಿಡಾಟ್
ಮಂಗ ಶಕ್ತಿ, ಬುದ್ಧಿ ಮತ್ತು ನಮ್ಯತೆಯನ್ನು ಪ್ರತಿನಿಧಿಸುವ ಪ್ರಾಣಿ. ಈ ರಾಶಿಚಕ್ರದವರು ಸಾಹಸ ಉತ್ಸಾಹಿಗಳೂ ಆಗಿದ್ದು, ಸ್ವಲ್ಪ ಅಹಂಕಶರದ ವ್ಯಕ್ತಿಗಳೂ ಕೂಡ ಹೌದು. ರಾಶಿಚಕ್ರದಲ್ಲಿ ಮಂಗವನ್ನು ಹೊಂದಿರುವವರು ಹಸಿರು-ಬಣ್ಣದ ಪೆರಿಡಾಟ್ ಕಲ್ಲು ಧರಿಸುವುದು ಉತ್ತಮ. ಇದು ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸುವ ಮೂಲಕ ನೆಮ್ಮದಿಯನ್ನು ನೀಡುತ್ತದೆ. ಪೆರಿಡಾಟ್ ಕಲ್ಲು ಋಣಾತ್ಮಕ ಶಕ್ತಿಗಳನ್ನ ತಡೆದು, ಉತ್ತಮ ಆರೋಗ್ಯ ಮತ್ತು ಅದೃಷ್ಟವನ್ನು ತರುತ್ತದೆ.


* ಕೋಳಿ ಹುಂಜ
ಹುಟ್ಟಿದ ವರ್ಷಗಳು: 1921, 1933, 1945, 1957, 1969, 1981, 1993, 2005, 2017
ಅದೃಷ್ಟದ ಕಲ್ಲು: ಸಿಟ್ರಿನ್
ಕೋಳಿ ಹುಂಜದ ರಾಶಿಚಕ್ರದವರು ಸ್ವತಂತ್ರ ಮತ್ತು ಕಷ್ಟಪಟ್ಟು ಕೆಲಸ ಮಾಡುವಂತವರು. ಇವರು ಕಷ್ಟದ ಪರಿಸ್ಥಿತಿಗಳಿಗೆ ಹೆದರದೇ ಅದನ್ನು ಪರಿಹರಿಸುವತ್ತ ಕೆಲಸ ಮಾಡುತ್ತಾರೆ. ಈ ರಾಶಿಯವರಿಗೆ ಸಿಟ್ರಿನ್ ಕಲ್ಲು ಉತ್ತಮವಾಗಿದೆ. ಏಕೆಂದರೆ ಇದು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ. 'ಸಂಪತ್ತಿನ ಕಲ್ಲು' ಎಂದೂ ಕರೆಯಲ್ಪಡುವ ಸಿಟ್ರಿನ್ ರಾಶಿಯಲ್ಲಿ ಕೋಳಿ ಹುಂಜ ಇರುವವರಿಗೆ ಅದೃಷ್ಟವನ್ನು ತರುತ್ತದೆ..


* ನಾಯಿ
ಹುಟ್ಟಿದ ವರ್ಷಗಳು: 1922, 1934, 1946, 1958, 1970, 1982, 1994, 2006, 2018
ಅದೃಷ್ಟದ ಕಲ್ಲು: ವಜ್ರ
ನಾಯಿಯ ಚಿಹ್ನೆಯ ಮೊದಲ ಮತ್ತು ಅಗ್ರಗಣ್ಯ ಲಕ್ಷಣವೆಂದರೆ ನಿಷ್ಠೆ. ಈ ವ್ಯಕ್ತಿಗಳು ಸ್ವಭಾವದಲ್ಲಿ ಧೈರ್ಯಶಾಲಿ ಮತ್ತು ಸ್ನೇಹಜೀವಿಗಳು. ಹಾಗೆಯೇ ಇವರು ತಮ್ಮ ತೀಕ್ಷ್ಣವಾದ ಟೀಕೆ ಮತ್ತು ಮುಚ್ಚು ಮರೆ ಮಾಡದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರಿಗೆ ವಜ್ರ ಸೂಕ್ತವಾಗಿದೆ. ವಜ್ರವು ಅವರ ಜೀವನದಲ್ಲಿ ಸಂಪತ್ತು, ಖ್ಯಾತಿ, ಸಮೃದ್ಧಿ ಮತ್ತು ಪ್ರೀತಿಯನ್ನು ತರುತ್ತದೆ.


ಇದನ್ನೂ ಓದಿ: ನೀವು ಈ ಅಭ್ಯಾಸ ಬಿಡಲಿಲ್ಲ ಅಂದ್ರೆ ಶನಿ ನಿಮ್ಮ ಬೆನ್ನು ಬಿಡಲ್ಲ


* ಹಂದಿ
ಹುಟ್ಟಿದ ವರ್ಷಗಳು: 1935, 1947, 1959, 1971, 1983, 1995, 2007, 2019
ಅದೃಷ್ಟದ ಕಲ್ಲು: ಮಾಣಿಕ್ಯ


ಹಂದಿಯು 12 ವರ್ಷಗಳ ಚೀನೀ ರಾಶಿಚಕ್ರದ ಅಂತ್ಯವನ್ನು ಸೂಚಿಸುತ್ತದೆ. ಇವರು ಕರುಣಾಮಯಿಯಾಗಿದ್ದು, ಸ್ನೇಹ ಜೀವಿಗಳೂ ಹೌದು. ಇವರು ಜಗಳಗಳ ನಂತರ ಯಾವುದೇ ದ್ವೇಷವನ್ನು ಇಟ್ಟುಕೊಳ್ಳುವುದಿಲ್ಲ. ಈ ರಾಶಿಗೆ ಮಾಣಿಕ್ಯ ಅದೃಷ್ಟ ತರುತ್ತದೆ.


* ಇಲಿ
ಹುಟ್ಟಿದ ವರ್ಷಗಳು: 1924, 1936, 1948, 1960, 1972, 1984, 1996, 2008, 2020
ಅದೃಷ್ಟದ ಕಲ್ಲು: ಗಾರ್ನೆಟ್
ಇಲಿ ವರ್ಷದಲ್ಲಿ ಜನಿಸಿದ ಜನರು ಬುದ್ಧಿವಂತರು ಮತ್ತು ಯಾವುದೇ ಕೆಲಸವಾದರೂ ಮುಂದೆ ಇರುತ್ತಾರೆ. ಅವರ ಅದೃಷ್ಟದ ಕಲ್ಲು ಗಾರ್ನೆಟ್. ಇದು ಶಕ್ತಿ ಮತ್ತು ಹೃದಯದ ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ ಜೊತೆಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪೋಷಿಸುತ್ತದೆ. ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸಲು ಬಯಸುವವರಿಗೆ ಇದು ಉತ್ತಮ ಕಲ್ಲಾಗಿದೆ.


* ಎತ್ತು
ಹುಟ್ಟಿದ ವರ್ಷಗಳು: 1913, 1925, 1937, 1949, 1961, 1973, 1985, 1997, 2009, 2021
ಅದೃಷ್ಟದ ಕಲ್ಲು: ಅಕ್ವಾಮರೀನ್, ಟೂರ್‌ಮ್ಯಾಲಿನ್, ಸಿಟ್ರಿನ್
ಎತ್ತು ರಾಶಿಯವರು ದೃಢನಿಶ್ಚಯ, ಕಷ್ಟಪಟ್ಟು ದುಡಿಯುವವರು ಮತ್ತು ತಾಳ್ಮೆ ಸ್ವಭಾವದವರು. ಇವರಿಗೆ ಅಕ್ವಾಮರೀನ್ ಕಲ್ಲು ಸಹಕಾರಿಯಾಗಿದೆ. ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಮನಸ್ಸಿನ ಶಾಂತಿಯನ್ನು ಹೆಚ್ಚಿಸುತ್ತದೆ. ಟೂರ್‌ಮ್ಯಾಲಿನ್ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ನರಮಂಡಲದ ಆರೋಗ್ಯ ಹೆಚ್ಚಿಸಿದೆರೆ, ಸಿಟ್ರಿನ್ ಅದೃಷ್ಟವನ್ನು ತರಲು ಮತ್ತು ಆರ್ಥಿಕ ಮತ್ತು ವ್ಯವಹಾರದ ಅಂಶಗಳಲ್ಲಿ ಏಳಿಗೆಗೆ ಸಹಾಯ ಮಾಡಲು ಅತ್ಯಂತ ಸಹಾಯಕವಾಗಿದೆ.


* ಹುಲಿ
ಹುಟ್ಟಿದ ವರ್ಷಗಳು: 1926, 1938, 1950, 1962, 1974, 1986, 1998, 2010, 2022
ಅದೃಷ್ಟದ ಕಲ್ಲು: ನೀಲಮಣಿ, ಜೇಡ್
ಹೆಸರೇ ಸೂಚಿಸುವಂತೆ ಹುಲಿ ರಾಶಿಯವರು ಸಾಹಸಿಗಳು, ಶಕ್ತಿಶಾಲಿ ಮತ್ತು ಧೈರ್ಯಶಾಲಿಯಾಗಳು. ಇವರಿಗೆ ನೀಲಮಣಿ ಮತ್ತು ಜೇಡ್‌ ಉತ್ತಮ ಕಲ್ಲುಗಳು.
ನೀಲಮಣಿ ಕಲ್ಲು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳು, ಉದ್ವೇಗಗಳನ್ನು ಕಡಿಮೆ ಮಾಡುತ್ತದೆ. ಜೇಡ್ ಕಲ್ಲು ಸಹ ಅದೃಷ್ಟವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ: ಜಯ ಏಕಾದಶಿಯಂದು ತಪ್ಪದೇ ಈ ಕೆಲಸ ಮಾಡಿ, ಇಷ್ಟಾರ್ಥ ಸಿದ್ಧಿ ಗ್ಯಾರಂಟಿ


* ಮೊಲ
ಹುಟ್ಟಿದ ವರ್ಷಗಳು – 1927, 1939, 1951, 1963, 1975, 1987, 1999, 2011, 2023
ಅದೃಷ್ಟದ ಕಲ್ಲು - ಮುತ್ತು, ಚಂದ್ರನ ಕಲ್ಲು
ಮೊಲದ ರಾಶಿಯವರು ಜವಾಬ್ದಾರಿಯುತ ಮತ್ತು ಪ್ರಾಮಾಣಿಕರಾಗಿದ್ದಾರೆ. ಅವರು ತಮ್ಮ ಸ್ನೇಹಿತರಿಗೆ ಮತ್ತು ಕುಟುಂಗಬಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಹೆಚ್ಚಿನ ಇವರಿಗೆ ಮೂನ್ ಸ್ಟೋನ್ ಹೆಚ್ಚು ಹೊಂದುವ ಕಲ್ಲಾಗಿದೆ. ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸ್ಮರಣೆಯನ್ನು ತೀಕ್ಷ್ಣಗೊಳಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯ ಪ್ರಯೋಜನಗಳಲ್ಲಿ ಜೀರ್ಣಕಾರಿ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳನ್ನು ಬಲಪಡಿಸುವುದು ಈ ಚಂದ್ರ ಕಲ್ಲು.

Published by:Sandhya M
First published: