• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Vastu Tips: ಪೂಜಾ ಕೊಠಡಿಯಲ್ಲಿ ದೇವರ ವಿಗ್ರಹಗಳು ಯಾವ ದಿಕ್ಕಿನಲ್ಲಿದ್ದರೆ ಸೂಕ್ತ? ಇಲ್ಲಿದೆ ಟಿಪ್ಸ್

Vastu Tips: ಪೂಜಾ ಕೊಠಡಿಯಲ್ಲಿ ದೇವರ ವಿಗ್ರಹಗಳು ಯಾವ ದಿಕ್ಕಿನಲ್ಲಿದ್ದರೆ ಸೂಕ್ತ? ಇಲ್ಲಿದೆ ಟಿಪ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೇವರ ಮನೆ ಹೇಗಿರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹಲವು ಸಲಹೆಗಳಿವೆ. ಇಲ್ಲಿ ನಮಗೆ ವಾಸ್ತು ಸಲಹೆಗಾರ ಆಚಾರ್ಯ ಪ್ರಕಾಶ್‌ ಇಂದು ದೇವರ ಮನೆಯ ಯಾವ ದಿಕ್ಕಿನಲ್ಲಿ ವಿಗ್ರಹಗಳು ಇರಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಹಾಗಿದ್ದರೆ ಅವರು ಹೇಳಿರುವ ವಾಸ್ತುಗಳ ಬಗ್ಗೆ ಇಲ್ಲಿ ತಿಳಿಯಿರಿ.

 • Share this:

  ಮನೆ (Home) ಎಂದರೆ ಅಲ್ಲಿ ನಮ್ಮನ್ನು ಕಾಯುವ ಶಕ್ತಿ, ನಂಬಿಕೆಯಾಗಿರುವ ದೇವರಿಗೂ ಒಂದು ಪ್ರತ್ಯೇಕವಾದ ಪೂಜಾ ಕೊಠಡಿ (Pooja Room) ಇರಲೇಬೇಕು. ಕೆಲವರು ಈ ಸ್ಥಳವಕಾಶದ ಕೊರತೆ ಇಂದಾಗಿ ದೇವರಿಗೆ ಮೀಸಲಿಡುವ ಪೂಜೆ ಕೊಠಡಿಯನ್ನು ಮರೆತು ಬಿಡುತ್ತಾರೆ.ಆದರೆ ದೇವರಿಗೆ ಪೂಜೆ ಮಾಡಲು ಹಾಗೂ ಮನೆಯಲ್ಲಿ ಸದಾ ದೈವ ಶಕ್ತಿ ನೆಲೆಸಿರಬೇಕು ಎಂದರೆ ದೇವರಿಗೆ ಪ್ರತಿನಿತ್ಯ ಪೂಜೆ ಸಲ್ಲಸಿಬೇಕು. ಹೀಗಾಗಿ ಮನೆಯಲ್ಲಿ ತಪ್ಪದೇ ವಿಶೇಷವಾದ ಪೂಜಾ ಕೋಣೆ ಅಥವಾ ಕೊಠಡಿಯನ್ನು ನಿರ್ಮಿಸಬೇಕು. ಪ್ರತಿದಿನ ಪೂಜೆ ಮಾಡುವುದರಿಂದ ಮನೆ-ಮನಸ್ಸಿಗೆ ಎರಡಕ್ಕೂ ಒಂದು ರೀತಿಯ ಪಾಸಿಟಿವ್‌ ವೈಬ್ಸ್‌ (Possitive Vibes) ಬರುತ್ತದೆ ಎನ್ನಬಹುದು. ಈ ಧನಾತ್ಮಕ ಶಕ್ತಿ ನಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಚೈತನ್ಯಗೊಳಿಸುತ್ತದೆ. ನಮ್ಮ ಕೆಲಸದ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತ ಅದರಿಂದ ನಾವು ಪ್ರಗತಿ, ಸಮೃದ್ಧಿ ಮತ್ತು ಶಾಂತಿಯನ್ನು ಕಂಡುಕೊಳ್ಳಬಹುದು.


  ದೇವರ ಮನೆ ಹೇಗಿರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹಲವು ಸಲಹೆಗಳಿವೆ. ಇಲ್ಲಿ ನಮಗೆ ವಾಸ್ತು ಸಲಹೆಗಾರ ಆಚಾರ್ಯ ಪ್ರಕಾಶ್‌ ಇಂದು ದೇವರ ಮನೆಯ ಯಾವ ದಿಕ್ಕಿನಲ್ಲಿ ವಿಗ್ರಹಗಳು ಇರಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಹಾಗಿದ್ದರೆ ಅವರು ಹೇಳಿರುವ ವಾಸ್ತುಗಳ ಬಗ್ಗೆ ಇಲ್ಲಿ ತಿಳಿಯಿರಿ.


  ದೇವರ ಮನೆಯಲ್ಲಿ ಯಾವ ದಿಕ್ಕಿನಲ್ಲಿ ವಿಗ್ರಹಗಳಿರಬೇಕು?


  ಮನೆಯಲ್ಲಿನ ದೇವರ ಕೊಠಡಿಯಲ್ಲಿ ದೇವರ ವಿಗ್ರಹಗಳನ್ನು ಪೂಜಾ ಮನೆಯ ಪೂರ್ವ ಅಥವಾ ಉತ್ತರ ಭಾಗದಲ್ಲಿ ಯಾವುದೇ ದೇವರ ಮತ್ತು ದೇವತೆಯ ವಿಗ್ರಹ ಮತ್ತು ಫೋಟೋವನ್ನು ಇಡುವುದು ಸೂಕ್ತವೆಂದು ಆಚಾರ್ಯರು ಸಲಹೆ ನೀಡಿದ್ದಾರೆ.


  ಹಾಗೆಯೇ ವಿಗ್ರಹಗಳು ಎಂದಿಗೂ ಪರಸ್ಪರ ಮುಖ ಮಾಡಿದಂತೆ ಇಡಬಾರದು ಎಂದು ಅವರು ತಿಳಿಸಿದ್ದಾರೆ. ಅಂದರೆ ದೇವರ ಫೋಟೋ ಅಥವಾ ವಿಗ್ರಹಗಳು ಪರಸ್ಪರ ಎದುರಾಗದಂತೆ ಇರಿಸಬೇಕು.


  ಇದನ್ನೂ ಓದಿ: ಈ ರಾಶಿಯವರು ಹುಡುಗಿಯರ ವಿಚಾರಕ್ಕೆ ಹೋಗ್ಬೇಡಿ, ಸಮಸ್ಯೆ ಇರೋದೇ ಅಲ್ಲಿ ಬಾಸ್​!


  ದೇವರ ಮೂರ್ತಿಗಳು ಹಾಳಾಗಿದ್ದರೆ ಅದನ್ನು ಇರಿಸಬೇಡಿ


  ಹಾಗೆಯೇ ದೇವರ ಮನೆಯಲ್ಲಿ ಮೂರ್ತಿಯ ಸವಕಳಿ ಅಥವಾ ಮೂರ್ತಿಯಲ್ಲಿ ಯಾವುದಾದರೂ ಬಿರುಕು, ಮುರುಕುಗಳು ಇದ್ದರೆ ಅದು ಪೂಜೆಗೆ ಯೋಗ್ಯವಾಗಿರುವುದಿಲ್ಲ. ಅಂತಹ ಮೂರ್ತಿಯ ಪೂಜೆ ಮಾಡಿದರೆ ಮನೆಗೆ ದುರಾದೃಷ್ಟ ಬರುತ್ತದೆ.


  ಹೀಗಾಗಿ ಅಂತಹ ಫೋಟೋ, ವಿಗ್ರಹಗಳನ್ನು ಬದಲಾಯಿಸಿ. ಜೊತೆಗೆ ದೇವರ ಪೂಜೆ ಕೊಠಡಿಯಲ್ಲಿ ಯಾವುದೇ ರೀತಿಯ ಹಾಳಾದ ಅಥವಾ ಹಾನಿಯಾವ ವಸ್ತುಗಳನ್ನು ಇರಿಸಬೇಡಿ. ಜೊತೆಗೆ ನಿಮ್ಮ ವಿಗ್ರಹಗಳು ಮತ್ತು ಗೋಡೆಯ ನಡುವೆ ಒಂದೂವರೆ ಇಂಚು ಇರಬೇಕೆಂದು ಹೇಳಲಾಗುತ್ತದೆ.


  ಸಾಂಕೇತಿಕ ಚಿತ್ರ


  ದೇವರ ಪೂಜಾ ಕೊಠಡಿಗೆ ಸಂಬಂಧಿಸಿದ ಇತರೆ ವಾಸ್ತು ಸಲಹೆಗಳು


  ದೇವರ ಕೊಠಡಿ ಮನೆಯ ಯಾವ ದಿಕ್ಕಿನಲ್ಲಿರಬೇಕು?
  ಮನೆಯಲ್ಲಿ ಪೂಜಾ ಕೊಠಡಿ ಅಥವಾ ಕೋಣೆಯನ್ನು ದೇವ ಮೂಲೆಯಲ್ಲಿ ಮಾಡಬೇಕು. ಅದು ಉತ್ತರ ಮತ್ತು ಪೂರ್ವದ ನಡುವೆ ಬರುವ ಸ್ಥಳವಾಗಿರುತ್ತದೆ. ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಪೂಜೆಯ ಮನೆಯನ್ನು ಎಂದಿಗೂ ನಿರ್ಮಿಸಬಾರದು ಎನ್ನುತ್ತಾರೆ ವಾಸ್ತು ಸಲಹೆಗಾರರು.


  ಕಿತ್ತಳೆ, ಹಳದಿ ಮತ್ತು ಬಿಳಿ ಬಣ್ಣ ಪೂಜಾ ಕೊಠಡಿಗೆ ಸೂಕ್ತ ಬಣ್ಣ
  ಪೂಜಾ ಕೊಠಡಿ ಜೊತೆಗೆ ಅದಕ್ಕೆ ಹಾಕುವ ಬಣ್ಣ ಕೂಡ ಮುಖ್ಯವಾಗಿದೆ. ನಿಮ್ಮ ಮನೆಯ ಪೂಜೆಯ ರೂಮ್‌ಗೆ ಕಿತ್ತಳೆ, ಹಳದಿ ಮತ್ತು ಬಿಳಿ ಬಣ್ಣ ಬಳಿಯುವುದು ಸೂಕ್ತ. ಜಾಗದ ಪಾವಿತ್ರ್ಯತೆಯನ್ನು ಹೆಚ್ಚಿಸಲು ನಿಮ್ಮ ಮಂದಿರದಲ್ಲಿ ಸೂಕ್ಷ್ಮವಾದ ಮತ್ತು ಹಿತವಾದ ಬಣ್ಣಗಳನ್ನು ಬಳಸಲು ತಜ್ಞರು ಸಲಹೆ ನೀಡುತ್ತಾರೆ.
  ದೇವರ ಮನೆಯಲ್ಲಿ ಸತ್ತವರ ಫೋಟೋ ಇಡಬೇಡಿ


  ಭಾರತೀಯ ಮನೆಗಳಲ್ಲಿನ ಪೂಜಾ ಕೋಣೆಯಲ್ಲಿ ಮೃತರ ಫೋಟೋವನ್ನು ಸಾಮಾನ್ಯವಾಗಿ ಇಡಲಾಗುತ್ತದೆ. ಆದರೆ ಇದು ಪೂಜಾ ಕೊಠಡಿಯ ವಾಸ್ತು ನಿಯಮಕ್ಕೆ ವಿರುದ್ಧವಾಗಿದೆ ಎನ್ನುತ್ತಾರೆ ತಜ್ಞರು. ಹೀಗಾಗಿ ನೀವು ಪೂಜಾ ಕೋಣೆಯಲ್ಲಿ ನಿಮ್ಮ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಬಹುದಾದರೂ, ಈ ಜಾಗದಲ್ಲಿ ಅವರ ಚಿತ್ರಗಳನ್ನು ಇಡುವುದನ್ನು ತಪ್ಪಿಸಬೇಕು.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು