• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Vastu Tips: ವಾಸ್ತು ಪ್ರಕಾರ ಮೃತ ವ್ಯಕ್ತಿಗಳ ಅಥವಾ ಹಿರಿಯರ ಫೋಟೋಗಳನ್ನು ಎಲ್ಲಿ ಇರಿಸಬೇಕು? ಇದರ ಕಾರಣವೇನು?

Vastu Tips: ವಾಸ್ತು ಪ್ರಕಾರ ಮೃತ ವ್ಯಕ್ತಿಗಳ ಅಥವಾ ಹಿರಿಯರ ಫೋಟೋಗಳನ್ನು ಎಲ್ಲಿ ಇರಿಸಬೇಕು? ಇದರ ಕಾರಣವೇನು?

ವಾಸ್ತು ಟಿಪ್ಸ್​

ವಾಸ್ತು ಟಿಪ್ಸ್​

ಕುಟುಂಬದಲ್ಲಿ ಯಾರಾದರೂ ಮೃತರಾದಲ್ಲಿ ಅವರ ನೆನಪಿಗಾಗಿ ಆ ವ್ಯಕ್ತಿಗಳ ಫೋಟೋವನ್ನು ಮನೆಯಲ್ಲಿ ಇರಿಸುತ್ತೇವೆ.

  • Trending Desk
  • 2-MIN READ
  • Last Updated :
  • Share this:

ವಾಸ್ತುಶಾಸ್ತ್ರವು (Vastu Tips) ಅನಾದಿ ಕಾಲದಿಂದಲೂ ತನ್ನದೇ ಆದ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪೂಜಾ ಕೊಠಡಿ, ಮಲಗುವ ಕೋಣೆ, ಅಡುಗೆ ಮನೆ, ಬಚ್ಚಲು ಮನೆ ಹೀಗೆ ಪ್ರತಿಯೊಂದಕ್ಕೂ ವಾಸ್ತುವಿನ ಸಲಹೆ ಅತಿಮುಖ್ಯವಾಗಿರುತ್ತದೆ. ಹೊಸದಾಗಿ ಮನೆಯನ್ನು ಕಟ್ಟಿಸುವವರು ವಾಸ್ತು ಸಲಹೆಯನ್ನು ಅನುಸರಿಸಿಯೇ ಮನೆ ನಿರ್ಮಾಣ ಮಾಡುತ್ತಾರೆ. ಮೃತರ ಫೋಟೋ ಇರಿಸಲು ವಾಸ್ತು ಸಲಹೆಗಳು. ಕುಟುಂಬದಲ್ಲಿ (Family) ಯಾರಾದರೂ ಮೃತರಾದಲ್ಲಿ ಅವರ ನೆನಪಿಗಾಗಿ ಆ ವ್ಯಕ್ತಿಗಳ ಫೋಟೋವನ್ನು ಮನೆಯಲ್ಲಿ ಇರಿಸುತ್ತೇವೆ. ಆದರೆ ಮೃತ ವ್ಯಕ್ತಿಗಳ ಫೋಟೋವನ್ನು (Photo) ಇಂತಹ ಸ್ಥಳದಲ್ಲಿ ಇರಿಸಬೇಕು ಹಾಗೂ ಎಲ್ಲಿಟ್ಟರೆ ಶುಭ ಎಂಬುದನ್ನು ವಾಸ್ತು ಸೂಚಿಸುತ್ತದೆ. ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂಬುದು ವಾಸ್ತು ಸಲಹೆಯಾಗಿದೆ.


ಮೃತರಾದವರು ದೈಹಿಕವಾಗಿ ನಮ್ಮಿಂದ ಬೇರ್ಪಟ್ಟು ಸ್ವರ್ಗಸ್ಥರಾಗುತ್ತಾರೆ ಎಂಬ ನಂಬಿಕೆ ಇದೆ. ಆದರೆ ನಮ್ಮ ಸ್ಮರಣೆಗಳಲ್ಲಿ ಅವರು ಜೀವಂತರಾಗಿರುತ್ತಾರೆ ಎಂಬ ವಿಶ್ವಾಸದಿಂದಲೇ ಅವರ ಫೋಟೋಗಳನ್ನು ಮನೆಯಲ್ಲಿ ಇರಿಸಲಾಗುತ್ತದೆ.


ನೀವು ಆ ವ್ಯಕ್ತಿಯೊಂದಿಗೆ ಕಳೆದ ಸುಂದರ ಕ್ಷಣಗಳನ್ನು ನೆನಪು ಮಾಡಿಕೊಳ್ಳಲು ಈ ಫೋಟೋ ಒಂದು ಜ್ಞಾಪಕಾರ್ಥವಾಗಿರುತ್ತದೆ. ಹೀಗೆ ಮೃತರಾದವರ ಆಶೀರ್ವಾದ ನಿಮ್ಮ ಮೇಲೆ ಹಾಗೂ ಮನೆಯ ಮೇಲೆ ಇರುತ್ತದೆ ಎಂಬುದು ನಂಬಿಕೆಯಾಗಿದೆ. ಅವರ ಧನಾತ್ಮಕತೆ ನಿಮ್ಮ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಸಂಗತಿಯಾಗಿದೆ. ಹಾಗಾಗಿ ಹಿರಿಯರು, ಪೂರ್ವಜರ ಫೋಟೋವನ್ನು ಸರಿಯಾದ ಸ್ಥಳದಲ್ಲಿ ಇರಿಸುವುದು ಮುಖ್ಯವಾಗಿರುತ್ತದೆ.


ಹಿರಿಯರ ಪೂರ್ವಜರ ಫೋಟೋವನ್ನು ಎಲ್ಲಿ ಇರಿಸಬೇಕು


ವಾಸ್ತುವಿನ ನಿಯಮಗಳಿಗೆ ಅನುಸಾರವಾಗಿ ದಕ್ಷಿಣ ದಿಕ್ಕು ಪೂರ್ವಜರೊಂದಿಗೆ ಹಾಗೂ ಕುಟುಂಬದಲ್ಲಿ ಮೃತರಾದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುತ್ತದೆ ಎಂದಾಗಿದೆ.


ಹಾಗಾಗಿ ಹಿರಿಯರು ಅಂತೆಯೇ ಮೃತರಾದವರ ಫೋಟೋಗಳನ್ನು ಇರಿಸಲು ದಕ್ಷಿಣ ದಿಕ್ಕು ಪ್ರಶಸ್ತವಾದುದು. ಈ ದಿಕ್ಕಲ್ಲದೆ ಮತ್ಯಾವ ದಿಕ್ಕಿನಲ್ಲೂ ಹಿರಿಯರ ಮೃತರಾದವರ ಫೋಟೋಗಳನ್ನು ಇರಿಸಬಾರದು ಎಂದು ವಾಸ್ತು ಸಲಹೆ ನೀಡುತ್ತದೆ.


ಇದನ್ನೂ ಓದಿ: ನಾಲ್ಕು ರಾಶಿಯವರಿಗೆ ಬರಲಿದೆ ರಾಜಯೋಗ; ನಿಮ್ಮನ್ನು ಹುಡುಕಿ ಬರಲಿದೆ ಚಿನ್ನ, ಹಣ


ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಫೋಟೋಗಳನ್ನಿರಿಸಬಾರದು ಎಂದು ವಾಸ್ತು ಸೂಚಿಸುತ್ತದೆ. ದಕ್ಷಿಣ ದಿಕ್ಕಲ್ಲದೆ ನೈಋತ್ಯ ದಿಕ್ಕಿನಲ್ಲಿ ಮೃತರಾದವರ ಫೋಟೋಗಳನ್ನು ಇರಿಸಬಹುದಾಗಿದೆ.


ಮೃತರಾದವರ ಫೋಟೋಗಳನ್ನಿರಿಸಲು ಮುಖ್ಯ ವಾಸ್ತು ಸಲಹೆಗಳು


ಮನೆಯ ಮಧ್ಯಭಾಗದಲ್ಲಿ ಮೃತರಾದವರ ಫೋಟೋಗಳನ್ನು ಇರಿಸಬಾರದು. ನಿಮ್ಮಿಂದ ಬೇರ್ಪಟ್ಟ ಪ್ರೀತಿಪಾತ್ರರ ಫೋಟೋಗಳನ್ನು ಮನೆಯ ಮಧ್ಯಭಾಗದಲ್ಲಿ ಇರಿಸುವುದು ಸೂಕ್ತವಲ್ಲ ಎಂದು ವಾಸ್ತು ತಿಳಿಸಿದೆ.


ಇನ್ನು ಮನೆಯನ್ನು ಪ್ರವೇಶಿಸುವ ಹಾಗೂ ಮನೆಯಿಂದ ಹೊರಹೋಗುವ ಭಾಗದಲ್ಲಿ ಕೂಡ ಫೋಟೋಗಳನ್ನು ಇರಿಸಬಾರದು.


ಮೃತರಾದವರ ಫೋಟೋಗಳನ್ನು ಕುಟುಂಬಸ್ಥರ ಮಲಗುವ ಕೋಣೆಯಲ್ಲಿ ಕೂಡ ಇರಿಸಬಾರದು. ಅದರಲ್ಲೂ ಮೃತ ವ್ಯಕ್ತಿ ಮನೆಯ ಸದಸ್ಯರಿಗಿಂತ ಹಿರಿಯರಾದಲ್ಲಿ ಮಲಗುವ ಕೋಣೆಯಲ್ಲಿ ಫೋಟೋವನ್ನು ಇರಿಸಬಾರದು ಎಂದು ವಾಸ್ತು ತಿಳಿಸಿದೆ.


ಮೃತ ವ್ಯಕ್ತಿಗಳ ಅನೇಕ ಫೋಟೋಗಳನ್ನು ಕೂಡ ಮನೆಯಲ್ಲಿ ಇರಿಸಬಾರದು ಎಂದು ವಾಸ್ತು ತಿಳಿಸುತ್ತದೆ. ಸರಿಯಾದ ಸ್ಥಳದಲ್ಲಿ ಒಂದೇ ಫೋಟೋವನ್ನು ಇರಿಸಬೇಕು.


ಮೃತ ವ್ಯಕ್ತಿಗಳ ಫೋಟೋಗಳನ್ನು ಪೂಜಾಕೊಠಡಿಯಲ್ಲಿ ಇರಿಸುವುದು


ವಾಸ್ತುವಿನ ನಿಯಮಗಳಿಗೆ ಅನುಸಾರವಾಗಿ ಮೃತ ವ್ಯಕ್ತಿಗಳ ಫೋಟೋಗಳನ್ನು ಪೂಜಾ ಕೊಠಡಿಯಲ್ಲಿ ಇರಿಸಬಹುದಾಗಿದೆ. ಆದರೆ ಪೂಜಾ ಕೊಠಡಿಯಲ್ಲಿ ಇರಿಸುವ ಸಮಯದಲ್ಲಿ ದೇವರ ಇಲ್ಲವೇ ದೇವರ ವಿಗ್ರಹಗಳೊಂದಿಗೆ ಇರಿಸಬಾರದು. ಗುರುವಿನ ಫೋಟೋವನ್ನು ಕೂಡ ದೇವರ ಫೋಟೋ ಅಥವಾ ವಿಗ್ರಹದ ಸಮೀಪ ಇರಿಸಬಾರದು.


ಮೃತರಾದವರ ಫೋಟೋಗಳನ್ನು ಕಚೇರಿಯಲ್ಲಿ ಇರಿಸುವುದು


ವಾಸ್ತುವಿನ ಸಲಹೆಯ ಪ್ರಕಾರ ನಿಮ್ಮ ಮೃತರಾದ ಹಿರಿಯರ, ಪ್ರೀತಿಪಾತ್ರರ ಫೋಟೋವನ್ನು ಕಚೇರಿಯಲ್ಲಿ ಇರಿಸಬಹುದಾಗಿದೆ. ಆದರೆ ಈ ಫೋಟೋವನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು ಅಂತೆಯೇ ಸಿಗರೇಟಿನ ಪ್ಯಾಕೆಟ್, ಆಶ್‌ಟ್ರೇ ಮೊದಲಾದವನ್ನು ಫೋಟೋದ ಪಕ್ಕದಲ್ಲಿ ಇರಿಸಬಾರದು.




ಹಿಂಭಾಗ ಹಾಗೂ ಮುಂಭಾಗದಿಂದಲೂ ಫೋಟೋವನ್ನು ಸ್ವಚ್ಛಗೊಳಿಸಬೇಕು. ಫೋಟೋದಲ್ಲಿ ಧೂಳು ಕುಳಿತುಕೊಂಡಿದ್ದರೆ ಅದು ಋಣಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಎಂದು ವಾಸ್ತು ತಿಳಿಸುತ್ತದೆ.

First published: